20 ವರ್ಷಗಳ ನಂತರ…

ದ್ವಾರಕೀಶ್‌ ಬ್ಯಾನರ್‌, ಶಿವಣ್ಣ ಹೀರೋ

Team Udayavani, Oct 4, 2019, 6:00 AM IST

c-35

“ಆಯುಷ್ಮಾನ್‌ಭವ’ ಒಂದೊಳ್ಳೆಯ ಜರ್ನಿ ಸ್ಟೋರಿ ಹೊಂದಿದೆ. ಮನುಷ್ಯನ ಬದುಕು ಎಷ್ಟು ಮುಖ್ಯವಾಗುತ್ತೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಇಲ್ಲಿ ಒಳ್ಳೆಯದು, ಇದೆ, ಕೆಟ್ಟದ್ದೂ ಇದೆ. ವಾಸು ಅವರು ಎಲ್ಲಾ ಪಾತ್ರಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ…

“ಸುಮಾರು ಇಪ್ಪತ್ತು ವರ್ಷಗಳಿಂದಲೂ ಶಿವರಾಜಕುಮಾರ್‌ ಅವರೊಂದಿಗೆ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಆಸೆ, ಈಗ ಈಡೇರಿದೆ…’

– ಹೀಗೆ ಹೇಳಿ ಹಾಗೊಂದು ಸ್ಮೈಲ್ ಹೊರಹಾಕಿದರು ನಿರ್ಮಾಪಕ ಯೋಗೀಶ್‌ ದ್ವಾರಕೀಶ್‌.
ಅವರು ಹೇಳಿದ್ದು, ತಮ್ಮ ನಿರ್ಮಾಣದ “ಆಯುಷ್ಮಾನ್‌ ಭವ’ ಚಿತ್ರದ ಬಗ್ಗೆ. ಈ ಚಿತ್ರ ಈಗ ಮುಗಿದಿದ್ದು, ರಾಜ್ಯೋತ್ಸವದಂದು ಬಿಡುಗಡೆಯಾಗುತ್ತಿದೆ. ಆ ಕುರಿತು ಹೇಳಲೆಂದೇ, ತಮ್ಮ ತಂಡದ ಜೊತೆ ಆಗಮಿಸಿದ್ದ ಯೋಗೀಶ್‌ ದ್ವಾರಕೀಶ್‌ ಹೇಳಿದ್ದಿಷ್ಟು;

“ನಮ್ಮ ಬ್ಯಾನರ್‌ನಲ್ಲಿ ಮೊದಲ ಚಿತ್ರ ನಿರ್ಮಾಣವಾಗಿದ್ದು “ಮೇಯರ್‌ ಮುತ್ತಣ್ಣ’. ಅದು 1969 ರಲ್ಲಿ. ದ್ವಾರಕೀಶ್‌ ಚಿತ್ರ ಬ್ಯಾನರ್‌ಗೆ 50 ವರ್ಷ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇಷ್ಟು ವರ್ಷಗಳಲ್ಲಿ 52 ಸಿನಿಮಾಗಳ ನಿರ್ಮಾಣ ಮಾಡಿದ್ದೇವೆ. ಮೊದಲ ಚಿತ್ರ ಡಾ.ರಾಜಕುಮಾರ್‌ ಅವರಿಗೆ ನಿರ್ಮಾಣ ಮಾಡಿದರೆ, 52ನೇ ಸಿನಿಮಾ ಅವರ ಪುತ್ರ ಶಿವರಾಜಕುಮಾರ್‌ ಅವರಿಗೆ ಮಾಡಿದ್ದೇವೆ. ಈ ಹಿಂದೆಯೇ ನಾವು ಶಿವರಾಜಕುಮಾರ್‌ ಜೊತೆಗೆ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆವು. ಕಳೆದ 20 ವರ್ಷಗಳಿಂದಲೂ ಅದು ಯಾಕೋ ಕೆಲ ಕಾರಣಗಳಿಂದ ಸಾಧ್ಯವೇ ಆಗಲಿಲ್ಲ. ಕೊನೆಗೆ ಶಿವರಾಜಕುಮಾರ್‌ ಅವರೇ, ಈ ಕಥೆ ಆಯ್ಕೆ ಮಾಡಿ, ಸಿನಿಮಾ ಮಾಡುವಂತೆ ಅವಕಾಶ ಕೊಟ್ಟಿದ್ದಕ್ಕೆ ಸಿನಿಮಾ ಆಗಿದೆ ಎಂದು ವಿವರಿಸಿದ ಯೋಗಿ, “ಪಿ. ವಾಸು ಅವರು 57 ದಿನಗಳ ಕಾಲ ಚಿತ್ರೀಕರಿಸಿದ್ದಾರೆ. ಇನ್ನು, ಗುರುಕಿರಣ್‌ ಅವರ 100ನೇ ಸಿನಿಮಾ ಎಂಬುದು ಮತ್ತೂಂದು ವಿಶೇಷ. ಮೊದಲ ಸಲ ರಚಿತಾ ಅವರು ಶಿವಣ್ಣ ಅವರ ಜೋಡಿಯಾಗಿ ನಟಿಸಿದ್ದಾರೆ. ಪಿ.ಕೆ.ಎಚ್‌.ದಾಸ್‌ ಕೂಡ ಮೊದಲ ಬಾರಿಗೆ ನಮ್ಮ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದಾರೆ. ಅದೇನೆ ಇರಲಿ, ಕಷ್ಟಕಾಲದಲ್ಲಿದ್ದಾಗ, ಶಿವಣ್ಣ ನಮ್ಮನ್ನು ಕರೆದು ಈ ಚಿತ್ರ ಮಾಡಲು ಅವಕಾಶ ಕೊಟ್ಟಿದ್ದಾರೆ’ ಎಂದು ನೆನಪಿಸಿಕೊಂಡರು ಯೋಗಿ.

ಶಿವರಾಜ ಕುಮಾರ್‌ ಅವರಿಗೆ ದ್ವಾರಕೀಶ್‌ ಫ್ಯಾಮಿಲಿ ಅಂದರೆ ಅದೊಂಥರಾ ಖುಷಿಯಂತೆ. “ದ್ವಾರಕೀಶ್‌ ಅಂಕಲ್‌ ಅಂದರೆ ಎಲ್ಲರಿಗೂ ಪ್ರೀತಿ. ಅವರು “ಮೇಯರ್‌ ಮುತ್ತಣ್ಣ’ ಮಾಡುವಾಗ ನನಗೆ 7 ವರ್ಷ. “ಆಯುಷ್ಮಾನ್‌ಭವ’ ಒಂದೊಳ್ಳೆಯ ಜರ್ನಿ ಸ್ಟೋರಿ ಹೊಂದಿದೆ. ಮನುಷ್ಯನ ಬದುಕು ಎಷ್ಟು ಮುಖ್ಯವಾಗುತ್ತೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಇಲ್ಲಿ ಒಳ್ಳೆಯದು, ಇದೆ, ಕೆಟ್ಟದ್ದೂ ಇದೆ. ವಾಸು ಅವರು ಎಲ್ಲಾ ಪಾತ್ರಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅನಂತ್‌ ನಾಗ್‌, ಸುಹಾಸಿನಿ, ರಚಿತಾ ರಾಮ್‌ ಹೀಗೆ ಪ್ರತಿಯೊಬ್ಬರ ಪಾತ್ರಗಳು ಗಮನಸೆಳೆಯುತ್ತವೆ. ಅದೇನೆ ಇರಲಿ, ಯೋಗಿ ಅಂತಹ ಮಗನನ್ನು ಪಡೆಯಲು ದ್ವಾರಕೀಶ್‌ ಪುಣ್ಯ ಮಾಡಿದ್ದಾರೆ. ಇನ್ನೂ ಒಂದೆರೆಡು ಕಥೆ ಕೇಳಿದ್ದೇನೆ. ಅದನ್ನೂ ಯೋಗಿ ಕೈಯಲ್ಲೇ ಮಾಡಿಸ್ತೀನಿ’ ಎಂದರು ಶಿವರಾಜಕುಮಾರ್‌.

ರಚಿತಾ ರಾಮ್‌ ಅವರಿಗಿಲ್ಲಿ ತಮ್ಮ ವಯಸ್ಸಿಗೆ ಮೀರಿದ ಪಾತ್ರ ಸಿಕ್ಕಿದೆಯಂತೆ. ಸಾಕಷ್ಟು ಕಲಿತಿದ್ದೇನೆ ಎಂದು ಹೇಳುವ ರಚಿತಾ, “ಶಿವಣ್ಣ ಅವರೊಂದಿಗೆ ಕೆಲಸ ಮಾಡಿದ್ದು ಮರೆಯದ ಅನುಭವ. ಅವರ ಎನರ್ಜಿ ನೋಡಿದರೆ, ಖುಷಿಯಾಗುತ್ತೆ. ನಾನಿಲ್ಲಿ ಏನೇ ಕೆಲಸ ಮಾಡಿದ್ದರೂ, ಆ ಕ್ರೆಡಿಟ್‌ ನಿರ್ದೇಶಕರಿಗೆ ಸಲ್ಲಬೇಕು’ ಎಂದರು ರಚಿತಾರಾಮ್‌.

ಗುರುಕಿರಣ್‌ ಅವರಿಗೆ ಇದು 100ನೇ ಚಿತ್ರ. ಅವರಿಲ್ಲಿ ಐದು ಹಾಡುಗಳ ಜೊತೆಗೆ ಐದು ತುಣುಕು ಹಾಡುಗಳನ್ನು ಕೊಟ್ಟಿದ್ದಾರಂತೆ. ಈ ಹಿಂದೆ ಶಿವರಾಜಕುಮಾರ್‌ ಅಭಿನಯದ “ಸತ್ಯ ಇನ್‌ ಲವ್‌’ ಗುರುಕಿರಣ್‌ ಅವರ 50ನೇ ಚಿತ್ರವಾಗಿತ್ತು. ಈಗ ಇದು 100ನೇ ಚಿತ್ರ. ಸಹಜವಾಗಿಯೇ ಗುರುಕಿರಣ್‌ಗೆ ಖುಷಿ ಇದೆ. “ಇದು ಪಕ್ಕಾ ಮ್ಯೂಸಿಕಲ್‌ ಸಿನಿಮಾ. ಮೊದಲು ಯೋಗಿ ಹೇಳಿದಾಗ, ಇಳೆಯರಾಜ ಅವರ ಬಳಿ ಮಾಡಿಸು. ಅವರು ಒಪ್ಪದಿದ್ದರೆ, ನಾನು ಮಾಡ್ತೀನಿ ಅಂದೆ. ಆದರೆ, “ಆಯುಷ್ಮಾನ್‌ಭವ’ ನನ್ನ ಪಾಲಾಯ್ತು. ನಿರೀಕ್ಷೆ ಸುಳ್ಳಾಗದ ಚಿತ್ರವಿದು’ ಎಂದರು ಗುರು. ದ್ವಾರಕೀಶ್‌, 50ನೇ ವರ್ಷದ ಸಂಭ್ರಮದ ಬಗ್ಗೆ, ಸಾಧು ಕೋಕಿಲ, ನಿಧಿ ಸುಬ್ಬಯ್ಯ, ಪಿಕೆಎಚ್‌ ದಾಸ್‌ ಸಿನಿಮಾ ಅನುಭವ ಹೇಳಿಕೊಂಡರು.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.