ಫ್ಯಾಮಿಲಿ ಪ್ಯಾಕೇಜ್‌ನಲ್ಲಿ ಸೃಜ ಮಜಾ

Team Udayavani, Oct 11, 2019, 5:00 AM IST

ಸೃಜನ್‌ ಲೋಕೇಶ್‌ ನಿರ್ಮಾಣದ ಜೊತೆಗೆ ನಾಯಕರಾಗಿ ನಟಿಸಿರುವ “ಎಲ್ಲಿದ್ದೇ ಇಲ್ಲಿ ತನಕ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌, ಹಾಡುಗಳು ಹಿಟ್‌ ಆಗಿರುವುದರಿಂದ ಚಿತ್ರ ಕೂಡಾ ಹಿಟ್‌ ಆಗುವ ವಿಶ್ವಾಸ ಚಿತ್ರತಂಡಕ್ಕಿದೆ. ಈ ಚಿತ್ರದಲ್ಲಿ ಸೃಜನ್‌ಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಉಳಿದಂತೆ ಗಿರಿಜಾ ಲೋಕೇಶ್‌, ತಾರಾ, ತಬಲ ನಾಣಿ ಸೇರಿದಂತೆ ಅನೇಕರು ನಟಿಸಿದ್ದಾರೆ.

ಈ ಚಿತ್ರವನ್ನು ತೇಜಸ್ವಿ ನಿರ್ದೇಶಿಸಿದ್ದಾರೆ. ಅವರ ಪ್ರಕಾರ, ಚಿತ್ರ ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತದೆ. ಜೊತೆಗೆ ತಮ್ಮದೇ ನಿರ್ಮಾಣ ಎಂಬ ಕಾರಣಕ್ಕೆ ಸೃಜನ್‌ ಯಾವುದಕ್ಕೂ ರಾಜಿಯಾಗುತ್ತಿರಲಿಲ್ಲ. ಕಥೆಗೆ ಏನು ಬೇಕೋ ಅದನ್ನು ನೀಡುವ ಮೂಲಕ ಒಂದು ಗುಣಮಟ್ಟದ ಸಿನಿಮಾ ಮಾಡಲಾಗಿದೆ. ಈ ಚಿತ್ರದ ನಂತರ ಚಿತ್ರದ ಶೀರ್ಷಿಕೆಯಂತೆ ಸೃಜನ್‌ರನ್ನು ಜನರು, “ಎಲ್ಲಿದ್ದೇ ಇಲ್ಲಿ ತನಕ’ ಎಂದು ಪ್ರಶ್ನಿಸುತ್ತಾರೆ ಎಂದು ಚಿತ್ರದ ಬಗ್ಗೆ ಮಾತನಾಡಿದರು.

ಚಿತ್ರದಲ್ಲಿ ನಟಿಸಿರುವ ಗಿರಿಜಾ ಲೋಕೇಶ್‌, ಚಿಕ್ಕವನಿದ್ದಾಗ ಸೃಜನ್‌ ನಮಗೆ ಸಾಕಷ್ಟು ಕಷ್ಟ ಕೊಟ್ಟಿದ್ದಾನೆ. ಶೂಟಿಂಗ್‌ ಹೋಗಲು ಬಿಡುತ್ತಿರಲಿಲ್ಲ. ಎಂಥ ಮಗು ಹುಟ್ಟಿತು ಎಂದು ಬೇಸರಿಸಿಕೊಂಡಿದ್ದೂ ಉಂಟು. ಇಂದು ಈ ಮಟ್ಟಕ್ಕೆ ಬೆಳೆದಿದ್ದಾನೆ ಎಂಬುದು ಖುಷಿಯ ವಿಚಾರ. ಕೊನೆ ತನಕ ಚಿತ್ರರಂಗದಲ್ಲೇ ಇರು ಎಂದಷ್ಟೇ ಅವನಿಗೆ ಹೇಳಬಲ್ಲೆ ಎನ್ನುತ್ತಾ ಚಿತ್ರಕ್ಕೆ ಶುಭ ಕೋರಿದರು. ನಟಿ ತಾರಾ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. “ನಾನು ಸಿನಿಮಾ ನೋಡಿದ್ದೇನೆ. ಚೆನ್ನಾಗಿ ಮೂಡಿಬಂದಿದೆ. ಸರಳ, ಸುಂದರ ಕಥೆ. ಇಡೀ ಫ್ಯಾಮಿಲಿ ಜೊತೆಯಾಗಿ ಕುಳಿತು ನೋಡಬಹುದಾದ ಸಿನಿಮಾ. ಸೃಜನ್‌ರಲ್ಲಿ ಸಾಕಷ್ಟು ಒಳ್ಳೆಯ ಗುಣಗಳು, ಭವಿಷ್ಯದ ಯೋಚನೆಗಳಿವೆ’ ಎನ್ನುತ್ತಾ ಚಿತ್ರಕ್ಕೆ ಶುಭ ಕೋರಿದರು. ನಾಯಕಿ ಹರಿಪ್ರಿಯಾಗೆ ಈ ಚಿತ್ರ ದೊಡ್ಡ ಹಿಟ್‌ ಆಗುವ ವಿಶ್ವಾಸವಿದೆ. ಅದಕ್ಕೆ ಕಾರಣ ಸೃಜನ್‌ ಅವರ ಶ್ರದ್ಧೆ, ಪ್ರಾಮಾಣಿಕತೆ. “ಸೃಜನ್‌ಗಿರುವ ಶ್ರದ್ಧೆ, ಪ್ರಾಮಾಣಿಕತೆಯಿಂದ ಈ ಸಿನಿಮಾಕ್ಕೆ ಒಳ್ಳೆಯದಾಗುತ್ತದೆ. ನನ್ನ ಪಾತ್ರ ಕೂಡಾ ಹೊಸತನದಿಂದ ಕೂಡಿದೆ’ ಎಂದರು. ಉಳಿದಂತೆ ಚಿತ್ರದಲ್ಲಿ ನಟಿಸಿದ ಹಿರಿಯ ನಟ ಎಂ.ಎಸ್‌ ಉಮೇಶ್‌, ತಬಲ ನಾಣಿ ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ವೇಣು ಅವರ ಛಾಯಾಗ್ರಹಣವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಶಸ್ವಿಯಾಗಿ ನೂರು ಚಿತ್ರಗಳಲ್ಲಿ ಅಭಿನಯಿಸಿ, ಶತಕದ ಸಂಭ್ರಮದಲ್ಲಿರುವ ನಟ ರಮೇಶ್‌ ಅರವಿಂದ್‌, ಈ ವಾರ 101ನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ....

  • ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ,...

  • ಈಗಂತೂ ಮೊಬೈಲ್‌ನದ್ದೇ ಸುದ್ದಿ. ಯಾರ ಕೈ ನೋಡಿದರೂ ಮೊಬೈಲ್‌ ಇದ್ದೇ ಇರುತ್ತೆ. ಅದರಲ್ಲೂ ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಟ್ವಿಟ್ಟರ್‌...ಹೀಗೆ ಒಂದಾ...

  • ಪ್ರೇಮ್‌ ನಿರ್ದೇಶನದ "ಏಕಲವ್ಯ' ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ದೊಡ್ಡ ಗ್ಯಾಪ್‌ನ ಬಳಿಕ ಲವ್‌ಸ್ಟೋರಿ ಮಾಡುತ್ತಿರುವ ಪ್ರೇಮ್‌, ಈ ಬಾರಿ ಸಖತ್‌ ಬೋಲ್ಡ್‌ ಕಥೆಯನ್ನೇ...

  • ಹಿರಿಯ ಸಾಹಿತಿ ಡಾ.ಬಿ.ಎಲ್‌.ವೇಣು ಅವರ ಐತಿಹಾಸಿಕ ಕಾದಂಬರಿ "ದಳವಾಯಿ ಮುದ್ದಣ' ಈಗ ದೃಶ್ಯರೂಪ ಪಡೆದುಕೊಂಡಿದೆ. "ದಳವಾಯಿ ಮುದ್ದಣ್ಣ' ಕಾದಂಬರಿ ಈಗ ಚಲನಚಿತ್ರಕ್ಕೆ...

ಹೊಸ ಸೇರ್ಪಡೆ