ಒಂದು ವರ್ಷದಲ್ಲಿ ಏಕತಾ ಪ್ರತಿಮೆಗೆ ಭೇಟಿ ನೀಡಿದ ಪ್ರವಾಸಿಗರೆಷ್ಟು ಗೊತ್ತಾ?
Team Udayavani, Oct 27, 2019, 12:58 PM IST
ಹೊಸದಿಲ್ಲಿ: ವಿಶ್ವದ ಅತೀ ದೊಡ್ಡ ಪ್ರತಿಮೆಯಾದ ಗುಜರಾತ್ ನ ಏಕತಾ ಪ್ರತಿಮೆಯ ಉದ್ಘಾಟನೆಯಾಗಿ ಒಂದು ವರ್ಷವಾಗುತ್ತಿದೆ. ಈ ಒಂದು ವರ್ಷದಲ್ಲಿ ಈ ಬೃಹತ್ ಪ್ರತಿಮೆ ನೋಡಲು ಭೇಟಿ ನೀಡಿದ ಪ್ರವಾಸಿಗರೆಷ್ಟು ಗೊತ್ತಾ? ಪ್ರಧಾನಿ ಮೋದಿ ಈ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಇಂದು ಮನ್ ಕಿ ಬಾತ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಏಕತಾ ಪ್ರತಿಮೆ ದೇಶದ ಹೆಮ್ಮೆ. ಅಮೇರಿಕಾದ ಲಿಬರ್ಟಿ ಪ್ರತಿಮೆಗಿಂತ ಎತ್ತರವಾಗಿರುವ ಈ ವಲ್ಲಭಾ ಭಾಯ್ ಪಟೇಲ್ ಪ್ರತಿಮೆಗೆ ಒಂದು ವರ್ಷದಲ್ಲಿ 26 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದರು.