ಈರುಳ್ಳಿ ಕಣ್ಣೀರು! ಕೆಜಿಗೆ 96ಕ್ಕೆ ಏರಿಕೆ
Team Udayavani, Nov 25, 2019, 5:15 AM IST
ಮಂಗಳೂರು: ಕರಾವಳಿಯ ಮಾರುಕಟ್ಟೆಯಲ್ಲಿ ಐದು ದಿನಗಳಿಂದ ಈರುಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ.ಈರುಳ್ಳಿ (ಹಳೆಯ) ಕೆಜಿಗೆ 80 ರೂ. ಇದ್ದುದು ಪ್ರಸ್ತುತ 90ರಿಂದ 96 ರೂ.ಗೇರಿದೆ. ಹೊಸತು ಈರುಳ್ಳಿ 60 ರೂ. ಇದ್ದುದು 80 ರೂ.ಗಳಿಗೆ ಮತ್ತು ಸಣ್ಣ ಈರುಳ್ಳಿ 40 ರೂ.ಗಳಿಂದ 50 ರೂ.ಗಳಿಗೆ ಏರಿಕೆಯಾಗಿದೆ.
ಉಡುಪಿ ಭಾಗದಲ್ಲಿಯೂ ದೊಡ್ಡ ಗಾತ್ರದ ನೀರುಳ್ಳಿಯ ಸಗಟು ಬೆಲೆ 75ರಿಂದ 80 ರೂ.ಗಳಲ್ಲಿದೆ. ರಖಂ ಆದರೆ ದೊಡ್ಡವಕ್ಕೆ 96ರಿಂದ 100 ರೂ., ಮಧ್ಯಮ ಗಾತ್ರದವಕ್ಕೆ 90 ರೂ. ಮತ್ತು ಸಣ್ಣ ಈರುಳ್ಳಿಗೆ 50 ರೂ. ಆಸುಪಾಸಿನಲ್ಲಿದೆ.
ಈ ರೀತಿಯಾಗಿ ಈರುಳ್ಳಿ ಬೆಲೆ ಏರಿಕೆಯಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎಂದು ಮಂಗಳೂರಿನ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರಿಗೆ ಹೆಚ್ಚಾಗಿ ಪಂಜಾಬ್, ಪುಣೆ ಮತ್ತು ಶಿವಮೊಗ್ಗ ಭಾಗದಿಂದ ಈರುಳ್ಳಿ ಪೂರೈಕೆಯಾಗುತ್ತದೆ. ಅಲ್ಲೆಲ್ಲ ವಿಪರೀತ ಮಳೆಯಾದ ಹಿನ್ನೆಲೆಯಲ್ಲಿ ಈರುಳ್ಳಿ ಕೊರತೆ ಉಂಟಾಗಿ ಬೆಲೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈರುಳ್ಳಿ ಮಾತ್ರವಲ್ಲದೆ ನುಗ್ಗೆಕಾಯಿಗೂ ಭಾರೀ ಬೆಲೆಯೇರಿಕೆ ಕಂಡುಬಂದಿದೆ. ಪುತ್ತೂರು, ಕಡಬ ಭಾಗದಲ್ಲಿ ಕೆಜಿಗೆ 260 ರೂ.ವರೆಗೆ ನುಗ್ಗೆ ಮಾರಾಟವಾಗುತ್ತಿದ್ದು, ಪೂರೈಕೆಯ ಕೊರತೆಯೂ ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ