ಇದು ಇಯರ್‌ ಎಂಡ್ ಸುಗ್ಗಿ‌


Team Udayavani, Dec 18, 2019, 3:07 AM IST

idu-year

ಸಾಮಾನ್ಯವಾಗಿ ವರ್ಷಾಂತ್ಯದಲ್ಲಿ ಕಾರುಗಳ ಖರೀದಿಗೆ ಯಾರೂ ಮುಂದಾಗುವುದಿಲ್ಲ. ಹೊಸ ಮಾಡೆಲ್‌ ಬರಲಿ ಎಂದು ಕಾಯುವವರೇ ಹೆಚ್ಚು. ಆದರೆ, ಈ ವರ್ಷ ಬಹುತೇಕ ಕಂಪನಿ ಗಳು ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿರು ವುದರಿಂದ ಮಾರುಕಟ್ಟೆಯ ಗ್ರಾಫ್ ಮೇಲಕ್ಕೇರಿದೆ. ಯಾವ ಯಾವ ಕಾರುಗಳಿಗೆ ಆಫ‌ರ್‌ಗಳು ಏನಿವೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು: ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಡಿಸೆಂಬರ್‌ ತಿಂಗಳು ಸುಗ್ಗಿಯ ಕಾಲ ಇದ್ದಂತೆ. ಹಳೇ ಕಾರು ಎಕ್ಸ್‌ಚೇಂಜ್‌ ಆಫ‌ರ್‌ ಜತೆಗೆ ಹೊಸ ಕಾರುಗಳ ಖರೀದಿ ಮೇಲೆ ನಗದು ಡಿಸ್ಕೌಂಟ್‌ ಮತ್ತು ಇನ್ನಿತರ ಹಲವು ಸೌಲಭ್ಯ ಗಳನ್ನು ಪಡೆಯಬಹುದಾಗಿದೆ.

ಮಾರುತಿ ಸುಜುಕಿ, ಹ್ಯುಂಡೈ, ಹೋಂಡಾ, ಮಹೇಂದ್ರ, ನಿಸಾನ್‌, ಇಸುಜಿ ಸಹಿತವಾಗಿ ಬಹುತೇಕ ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಗಳು 2019ರ ಡಿಸೆಂಬರ್‌ ತಿಂಗಳ ಹಲವು ರೀತಿಯ ಆಫ‌ರ್‌ ಮತ್ತು ಡಿಸ್ಕೌಂಟ್‌ಗಳನ್ನು ಗ್ರಾಹಕ ರಿಗಾಗಿ ಘೋಷಿಸಿದೆ. ವಿವಿಧ ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಗಳು ನವೆಂಬರ್‌ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ 10 ಸಾವಿರದಿಂದ 1.77 ಲಕ್ಷದವರೆಗೂ ವಿವಿಧ ರೀತಿಯ ಪ್ರಮೋಷನಲ್‌ ಡಿಸ್ಕೌಂಟ್‌ ಘೋಷಣೆ ಮಾಡಿವೆ.

ನಗದು ಡಿಸ್ಕೌಂಟ್‌, ಹಳೇ ಕಾರು ಎಕ್ಸ್‌ಚೇಂಜ್‌ ಬೋನಸ್‌ ಮತ್ತು ಕಾರ್ಪೋರೆಟ್‌ ಡಿಸ್ಕೌಂಟ್‌ ಹೀಗೆ ವಿವಿಧ ಆಯಾಮಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಡಿಸೆಂಬರ್‌ ತಿಂಗಳ ಹೊಸ ಘೋಷಣೆಗಳನ್ನು ಪ್ರಕಟಿಸಿವೆ. ಕಾರುಗಳ ವೆರೈಟಿ ಮತ್ತು ಮಾಡೆಲ್‌ಗ‌ಳ ಆಧಾರದಲ್ಲಿ ಗ್ರಾಹಕರಿಗೆ ಡಿಸ್ಕೌಂಟ್‌ ನೀಡುತ್ತಿದ್ದಾರೆ. ಕೆಲವೊಂದು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ನವೆಂಬರ್‌ ತಿಂಗಳಲ್ಲಿ ಕಾರುಗಳ ಮೇಲೆ 50 ಸಾವಿರ ಡಿಸ್ಕೌಂಟ್‌ ನೀಡುತ್ತಿದ್ದುದ್ದನ್ನು ಡಿಸೆಂಬರ್‌ನಲ್ಲಿ 1 ಲಕ್ಷಕ್ಕೆ ಏರಿಸಿವೆ.

40 ಸಾವಿರ ಇರುವುದನ್ನು 95 ಸಾವಿರಕ್ಕೆ ಏರಿಸಿವೆ. ಹೀಗೆ ಎಲ್ಲ ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕಾಗಿ ಬೊಂಬಾಟ್‌ ಕೊಡುಗೆಗಳನ್ನು ಡಿಸೆಂಬರ್‌ನಲ್ಲಿ ಘೋಷಿಸಿವೆ. ಬಹುತೇಕ ಕಾರು ಸಂಸ್ಥೆಗಳ ಈಗ ಇರುವ ಆಫ‌ರ್‌ ಡಿಸೆಂಬರ್‌ 30 ಅಥವಾ 31ಕ್ಕೆ ಕೊನೆಗೊ ಳ್ಳಲಿದೆ. ಅಷ್ಟರೊಳಗೆ ಖರೀದಿ ಅಥವಾ ಮುಂಗಡ ಬುಕ್ಕಿಂಗ್‌ ಮಾಡಿಕೊಳ್ಳುವುದು ಒಳ್ಳೆಯದು ಎಂದು ಬೆಂಗಳೂರಿನ ಟಾಟಾ ಮೋಟರ್ ಡೀಲರ್‌ ಒಬ್ಬರು ಮಾಹಿತಿ ನೀಡಿದರು.

ಫೈನಾನ್ಸಿಂಗ್‌ ಸಹ ಇದೆ: ಬಹುತೇಕ ಎಲ್ಲ ಕಾರು ಉತ್ಪಾದನೆ ಮತ್ತು ಮಾರಾಟ ಸಂಸ್ಥೆಗಳು ಡಿಸೆಂಬರ್‌ ತಿಂಗಳ ಆಫ‌ರ್‌ ಪ್ರಕಟಿಸಿದ್ದು, ಗ್ರಾಹಕರು ತಮಗೆ ಬೇಕಿರುವ ಕಾರುಗಳ ಸಮೀಪದ ಶೋ ರೂಂ ಅಥವಾ ಡೀಲರ್‌ಗಳನ್ನು ಸಂಪರ್ಕಿಸಿ, ವಿಶೇಷ ಆಫ‌ರ್‌ಗಳ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೆ, ಕಾರು ಸಂಸ್ಥೆಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ. ಎಲ್ಲ ಆಫ‌ರ್‌ಗಳು ತನ್ನದೇ ಆದಂಥ ಸಂಸ್ಥೆಯ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಷರತ್ತುಗಳನ್ನು ಮತ್ತು ಆಫ‌ರ್‌ ಲಭ್ಯತೆಗಳನ್ನು ಕಾರು ಖರೀದಿಯ ಪೂರ್ವದಲ್ಲಿ ಸಮಗ್ರವಾಗಿ ತಿಳಿದುಕೊಂಡು ಖರೀದಿಸಬಹುದು. ಕೆಲವೊಂದು ಕಾರು ಸಂಸ್ಥೆಗಳೇ ಫೈನಾನ್ಸಿಂಗ್‌ ವ್ಯವಸ್ಥೆಯನ್ನು ಗ್ರಾಹಕರಿಗೆ ಮಾಡಿಕೊಡುತ್ತವೆ. ಬ್ಯಾಂಕ್‌ಗಳ ಮೂಲಕ ಕಾರು ಖರೀದಿಗೆ ಆಕರ್ಷಕ ಬಡ್ಡಿ ದರದಲ್ಲಿ ಕಾರು ಖರೀದಿಸಲು ಅವಕಾಶ ಇದೆ.

ಇಸುಜು ಎಂಯು-ಎಕ್ಸ್‌ಗೆ 8 ವರ್ಷ ಅಥವಾ 2 ಲಕ್ಷ ಕಿ.ಮೀ.ವಾರಂಟಿ: ಇಸುಜು ವಾಹನಗಳಿಗೆ 5 ವರ್ಷಗಳ ಕಾಂಪ್ರಹೆನ್ಸಿವ್‌ ವಾರಂಟಿ ಅಥವಾ 1.50 ಲಕ್ಷ ಕಿ.ಮೀ ವರೆಗಿನ ವಾರಂಟಿ ಅವಧಿಯನ್ನು ಇನ್ನೂ 3 ವರ್ಷಗಳು ಅಥವಾ 50,000 ಕಿ.ಮೀವರೆಗೆ ವಿಸ್ತರಿಸಿದೆ.(ಯಾವುದು ಮೊದಲೋ ಅದಕ್ಕೆ). ಈ ಹೊಸ ವಿಸ್ತರಿತ ಪ್ಯಾಕೇಜ್‌ನಲ್ಲಿ ಎಂಯು-ಎಕ್ಸ್‌ ಬಿಎಸ್‌4 ಮಾಡೆಲ್‌ಗ‌ಳನ್ನು ಖರೀದಿಸುವ ಗ್ರಾಹಕರಿಗೆ 8 ವರ್ಷಗಳು ಅಥವಾ 2 ಲಕ್ಷ ಕಿ.ಮೀವರೆಗೆ ಮತ್ತು ಫ್ರೀ ಪೀರಿಯಾಡಿಕ್‌ ಮೇಂಟೆನೆನ್ಸ್‌ನಲ್ಲಿ ಪಿಎಂಎಸ್‌ ಬಿಡಿಭಾಗಗಳು,

ಲ್ಯೂಬ್ರಿಕೆಂಟ್ಸ್‌ ಮತ್ತು ಸಂಬಂಧಿತ ಲೇಬರ್‌ ವೆಚ್ಚವು ಸೇರಿರುತ್ತದೆ. ಆದರೆ, ವೇರ್‌ ಟಿಯರ್‌ ಹಾಗೂ ಅಪಘಾತ ಹಾನಿಯ ರಿಪೇರಿಯನ್ನು ಒಳಗೊಂಡಿರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಈ ಆಫ‌ರ್‌ ತಕ್ಷಣದಿಂದ ಜಾರಿಗೆ ಬಂದಿದ್ದು, ಡಿಸೆಂಬರ್‌ 31 ರವರೆಗೆ ಜಾರಿಯಲ್ಲಿರುತ್ತದೆ. ಷರತ್ತು ಮತ್ತು ನಿಯಮಗಳು ಅನ್ವಯದೊಂದಿಗೆ ದೇಶದ ಎಲ್ಲ ಇಸುಜು ಡೀಲರ್‌ಶಿಪ್‌ಗ್ಳಲ್ಲಿ ಈ ಆಫ‌ರ್‌ ಲಭ್ಯವಿದೆ.

ನಿಸಾನ್‌ ಇಂಡಿಯಾದಿಂದ ರೆಡ್‌ ವೀಕೆಂಡ್ಸ್‌ ಆಚರಣೆ: ಗ್ರಾಹಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಿಸಾನ್‌ ಇಂಡಿಯಾ ರೆಡ್‌ ವೀಕೆಂಡ್ಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ನಿಸಾನ್‌ ಮತ್ತು ಡಟ್ಸನ್‌ ಮಾದರಿಯ ವಾಹನಗಳಿಗೆ ಆಕರ್ಷಕವಾದ ಆಫ‌ರ್‌ಗಳನ್ನು ಈ ರೆಡ್‌ ವೀಕೆಂಡ್ಸ್‌ ಅಡಿ ಗ್ರಾಹಕರಿಗೆ ನೀಡಲಿದೆ. ಡಿಸೆಂಬರ್‌ ತಿಂಗಳಲ್ಲಿ ಗ್ರಾಹಕರು ನಿಸಾನ್‌ ಡೀಲರ್‌ಶಿಪ್‌ಗ್ಳಿಗೆ ಭೇಟಿ ನೀಡಿ ಕುತೂಹಲಕಾರಿಯಾದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಆಕರ್ಷಕವಾದ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಈ ರೆಡ್‌ ವೀಕೆಂಡ್‌ ಸಂದರ್ಭದಲ್ಲಿ ನಿಸಾನ್‌ ಕಾರುಗಳನ್ನು ಖರೀದಿಸುವ ಗ್ರಾಹಕರು 1 ಕೋಟಿ ರೂ.ವರೆಗಿನ ಬಹುಮಾನಗಳನ್ನು ಗೆಲ್ಲಬಹುದು.

ರೆಡ್‌ ವೀಕೆಂಡ್ಸ್‌ನಲ್ಲಿ ಗ್ರಾಹಕರು ಕಾರುಗಳ ಖರೀದಿಯ ವೇಳೆ 1.15 ಲಕ್ಷ ರೂ.ವರೆಗೆ ಲಾಭ ಪಡೆಯಬಹುದಾಗಿದೆ. 40,000 ರೂ.ವರೆಗೆ ನಗದು ರಿಯಾಯ್ತಿ, 40,000 ರೂ.ವರೆಗಿನ ವಿನಿಮಯ ಬೋನಸ್‌ ಮತ್ತು 10,000 ರೂ.ವರೆಗೆ ಕಾರ್ಪೊರೇಟ್‌ ಡಿಸ್ಕೌಂಟ್‌ ಪಡೆಯಬಹುದು. ದ್ವಿಚಕ್ರ ವಾಹನ ಹೊಂದಿ ಕಾರನ್ನು ಖರೀದಿಸುವ ಮೂಲಕ ಅಪ್‌ಗ್ರೇಡ್‌ ಮಾಡಿಕೊಳ್ಳಲು ಬಯಸುವ ಗ್ರಾಹಕರು ಹೊಸ ಡಟ್ಸನ್‌ ರೆಡಿ-ಗೋ ಕಾರು ಖರೀದಿಯಲ್ಲಿ ತಮ್ಮ ದ್ವಿಚಕ್ರ ವಾಹನವನ್ನು ಆಕರ್ಷಕ ಬೆಲೆಯಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಈ ಆಫ‌ರ್‌ ಡಟ್ಸನ್‌ ಗೋ ಮತ್ತು ಡಟ್ಸನ್‌ ಗೋಪ್ಲಸ್‌ಗೆ ಅನ್ವಯವಾಗುತ್ತದೆ.

ನಿಸಾನ್‌ ತನ್ನ ಗ್ರಾಹಕರಿಗೆ ಅತ್ಯಂತ ಮೌಲ್ಯಯುತವಾದ ಸೇವೆಗಳನ್ನು ನೀಡುತ್ತಿದೆ. ರೆಡ್‌ ವೀಕೆಂಡ್ಸ್‌ ಎಂಬ ವಿನೂತನವಾದ ಆವಿಷ್ಕಾರಕ ಮಾರ್ಗದ ಮೂಲಕ ಹೊಸ ವರ್ಷಾಚರಣೆಯನ್ನು ಅತ್ಯಂತ ಆಕರ್ಷಕವಾಗಿ ಮಾಡುವಂತೆ ಮಾಡಲಿದೆ. ಈ ಮೂಲಕ ಶೇ.6.99 ರ ಬಡ್ಡಿ ದರದಲ್ಲಿ 36 ತಿಂಗಳವರೆಗೆ ಸುಲಭ ಹಣಕಾಸು ಸೌಲಭ್ಯವನ್ನೂ ಗ್ರಾಹಕರಿಗೆ ನೀಡಲಿದೆ ಎಂದು ನಿಸಾನ್‌ ಮೋಟರ್‌(ಭಾರತ) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ ಶ್ರೀವಾಸ್ತವ್‌ ಮಾಹಿತಿ ನೀಡಿದರು.

ಡಿಸೆಂಬರ್‌ ಆಫ‌ರ್‌ಗಳು
ಮಹೇಂದ್ರ ಆ್ಯಂಡ್‌ ಮಹೇಂದ್ರ: ಮಹೇಂದ್ರ ಸಂಸ್ಥೆಯ ಮರಾಝೋ ಕಾರುಗಳ ಮೇಲೆ 1.71 ಲಕ್ಷದವರೆಗೂ ಗ್ರಾಹಕರು ಲಾಭ ಪಡೆಯಬಹುದಾಗಿದೆ. ಎಕ್ಸ್‌ಯುವಿ300 ಮೇಲೆ 70 ಸಾವಿರದವರೆಗೆ, ಅಲ್ಟೊರಸ್‌ ಮೇಲೆ 4 ಲಕ್ಷದವರೆಗೆ, ಎಕ್ಸ್‌ಯುವಿ 500 ಮೇಲೆ 84 ಸಾವಿರದವರೆಗೆ, ಸ್ಕಾರ್ಪಿಯೋ ಮೇಲೆ 60 ಸಾವಿರದವರೆಗೆ, ಟಿಯುವಿ 300 ಮೇಲೆ 75 ಸಾವಿರದವರೆಗೆ ಹಾಗೂ ಬಲೆನೋ ಮೇಲೆ 47 ಸಾವಿರದವರೆಗೂ ಲಾಭವನ್ನು ಪಡೆಯಬಹುದಾಗಿದೆ ಎಂದು ಸಂಸ್ಥೆ ಘೋಷಣೆ ಮಾಡಿದೆ. ಈ ಆಫ‌ರ್‌ ಡಿಸೆಂಬರ್‌ 31ರವರೆಗೆ ಖರೀದಿಸುವ ಗ್ರಾಹಕರಿಗೆ ಮಾತ್ರ ಅನ್ವಯವಾಗುವುದು ಸೇರಿದಂತೆ ಕೆಲವೊಂದು ಷರತ್ತುಗಳನ್ನು ಇದು ಒಳಗೊಂಡಿದೆ ಎಂದು ಸಂಸ್ಥೆ ಖಚಿತಪಡಿಸಿದೆ.

ಹ್ಯುಂಡೈ: ಹ್ಯುಂಡೈ ಸಂಸ್ಥೆ ಕೂಡ ತನ್ನ ವಿವಿಧ ಮಾದರಿಯ ಕಾರುಗಳ ಮೇಲೆ ಗ್ರಾಹಕರಿಗೆ ಅತ್ಯಾಕರ್ಷಕವಾದ ಆಫ‌ರ್‌ಗಳನ್ನು ಘೋಷಿಸಿದೆ. ಅತಿ ಕಡಿಮೆ ಇಎಂಐ ಸೌಲಭ್ಯದ ಜತೆಗೆ ಸ್ಯಾಂಟ್ರೋ ಕಾರುಗಳ ಮೇಲೆ 50 ಸಾವಿರ, ಗ್ರ್ಯಾಂಡ್‌ ಐ10 ಕಾರುಗಳ ಮೇಲೆ 75 ಸಾವಿರ, ಗ್ರ್ಯಾಂಡ್‌ ಐ10 ನ್ಯೂ ಮೇಲೆ 20 ಸಾವಿರ, ಎಲೈಟ್‌ ಐ20 ಮೇಲೆ 65 ಸಾವಿರ, ಕ್ರೇಟಾ ಮೇಲೆ 95 ಸಾವಿರ, ವೆರ್ನಾ ಮೇಲೆ 65 ಸಾವಿರ, ಎಕ್ಸ್‌ಸೆಂಟ್‌ ಮೇಲೆ 95 ಸಾವಿರ ಮತ್ತು ಟಕ್ಸನ್‌ ಮೇಲೆ 2 ಲಕ್ಷದವರೆಗೂ ಗ್ರಾಹಕರು ಲಾಭ ಪಡೆಯಬಹುದಾದಗಿದೆ. ಇದರ ಜತೆಗೆ ಇನ್ನು ಅನೇಕ ರೀತಿಯ ಹೊಸ ಆಫ‌ರ್‌ಗಳನ್ನು ಗ್ರಾಹಕರಿಗೆ ಪರಿಚಯ ಮಾಡಿದೆ.

ಹೋಂಡಾ: ಹೋಂಡಾ ಸಂಸ್ಥೆ ತನ್ನ ವಿವಿಧ ಮಾದರಿಯ ಕಾರುಗಳ ಮೇಲೆ ಗ್ರಾಹಕರಿಗೆ ವಿಶೇಷ ರಿಯಾಯ್ತಿಯ ಜತೆಗೆ ಆಫ‌ರ್‌ಗಳನ್ನು ಈಗಾಗಲೇ ಘೋಷಿಸಿದೆ. ಹೊಂಡಾ-ಡಬ್ಲೂಆರ್‌-ವಿ, ಹೊಂಡಾ ಸಿಟಿ, ಹೊಂಡಾ ಬಿ.ಆರ್‌-ವಿ, ಎಲ್‌ ನ್ಯೂ ಹೊಂಡಾ ಸಿವಿಕ್‌, ಎಲ್‌ ನ್ಯೂ ಹೊಂಡಾ ಸಿಆರ್‌-ವಿ ಕಾರುಗಳ ಮೇಲೆ ನಗದು ಡಿಸ್ಕೌಂಟ್‌ ಜತೆಗೆ ಅತ್ಯುತ್ತಮ ಎಕ್ಸ್‌ಚೇಂಜ್‌ ಆಫ‌ರ್‌ಗಳನ್ನು ಘೋಷಣೆ ಮಾಡಿದೆ.

ಟಾಟಾ ಮೋಟರ್: ಟಾಟಾ ಮೋಟರ್ ಸಂಸ್ಥೆ ಕೂಡ ತನ್ನ ಗ್ರಾಹಕರಿಗಾಗಿ ಹೆಚ್ಚಿನ ಆಫ‌ರ್‌ಗಳನ್ನು ಘೋಷಣೆ ಮಾಡಿದೆ. ಟಾಟಾ ಟಿಯಾಗೋ ಕಾರುಗಳಿಗೆ 20 ಸಾವಿರದಿಂದ 30 ಸಾವಿರದವರೆಗೂ ನಗದು ಡಿಸ್ಕೌಂಟ್‌, 15 ಸಾವಿರದಿಂದ 22500 ರೂ ವರೆಗೆ ಎಕ್ಸ್‌ಚೇಂಜ್‌ ಬೋನಸ್‌ ಹಾಗೂ 75 ಸಾವಿರ ಕಾರ್ಪೋರೇಟ್‌ ಬೋನಸ್‌ ಘೋಷಿಸಿದೆ. ಟಾಟಾ ಟಿಗೊರ್‌ ಕಾರುಗಳ ಮೇಲೆ 30 ಸಾವಿರದಿಂದ 48 ಸಾವಿರದ ವರೆಗೆ ನಗದು ಡಿಸ್ಕೌಂಟ್‌, ಟಾಟಾ ನೆಕ್ಸಾನ್‌ ಕಾರುಗಳ ಮೇಲೆ 50 ಸಾವಿರದವರೆಗೂ ಡಿಸ್ಕೌಂಟ್‌, ಟಾಟಾ ಹೆಕ್ಸಾದ ಮೇಲೆ 1.1 ಲಕ್ಷದವರೆಗೂ ಡಿಸ್ಕೌಂಟ್‌ ಹೀಗೆ ಟಾಟಾ ಸಂಸ್ಥೆಯ ವಿವಿಧ ಮಾದರಿಯ ಕಾರುಗಳ ಮೇಲೆ ವಿಶೇಷ ರೀತಿಯ ಆಫ‌ರ್‌ಗಳನ್ನು ಘೋಷಣೆ ಮಾಡಿದೆ.

ಮಾರುತಿ ಸುಜುಕಿ: ಮಾರುತಿ ಸುಜುಕಿ ಸಂಸ್ಥೆಯು ಮಾರುತಿ ಆಲ್ಟೋ 800, ಆಲ್ಟೋ ಕೆ10, ಮಾರುತಿ ಇಕೋ, ವ್ಯಾಗನರ್‌, ಸೆಲೆರಿಯೋ, ಸ್ವಿಫ್ಟ್, ಸ್ವಿಫ್ಟ್ ಡಿಸೈರ್‌, ಬ್ರಿಜಾ ಮೊದಲಾದ ಕಾರುಗಳ ಮೇಲೆ 15 ಸಾವಿರದಿಂದ ಆರಂಭಗೊಂಡು 40 ಸಾವಿರದವರೆಗೂ ಡಿಸ್ಕೌಂಟ್‌ ಘೋಷಿಸಿದೆ. ಅಲ್ಲದೆ, ವಿಶೇಷ ಸೌಲಭ್ಯಗಳನ್ನು ಗ್ರಾಹಕರಿಗೆ ಇದರ ಜತೆಗೆ ನೀಡುತ್ತಿದೆ.

* ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

6-time Madhya Pradesh MLA Ramniwas Rawat quits Congress, joins BJP

Madhya Pradesh; ರಾಹುಲ್‌ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ!

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.