ಸಾಧನೆಗೆ ಬಡತನ ಎಂದಿಗೂ ತಡೆಯಾಗಲೇ ಇಲ್ಲ…

Team Udayavani, Dec 22, 2019, 6:10 AM IST

sadanege-badatana

ರಾಮಾನುಜನ್‌ ಅವರಿಗೆ ಯಾರಾದರೂ ಗಣಿತದ ಯಾವುದಾದರೂ ಶಾಖೆಗಳ ಕೆಲವು ಅಂಶಗಳನ್ನು ಹೇಳಿದರೆ ಸಾಕು, ಅದನ್ನೆಲ್ಲ ಸಂಪೂರ್ಣವಾಗಿ ಗ್ರಹಿಸಿ ಮತ್ತೂಂದಿಷ್ಟು ಹೊಸದನ್ನು ಅದಕ್ಕೆ ಸೇರಿಸುತ್ತಿದ್ದರು.

ಗಣಿತ ಪ್ರಪಂಚದಲ್ಲಿ ಜಗತ್ತನ್ನೇ ಬೆರಗಾಗಿಸಿದ್ದ, ಭಾರತ ಕಂಡ ಸರ್ವಶ್ರೇಷ್ಠ ಗಣಿತಜ್ಞ ರಾಮಾನುಜನ್‌ ಅವರು ಅತ್ಯಂತ ಬಡ ಕುಟುಂಬದಲ್ಲಿ 1887ರ ಡಿಸೆಂಬರ್‌ 22ರಂದು ತಮಿಳುನಾಡಿನ ಈರೋಡ್‌ನ‌ಲ್ಲಿ ಜನಿಸಿದರು.

ಮನೆಯಲ್ಲಿ ಕಡು ಬಡತನವಿದ್ದುದರಿಂದ ಸರಿಯಾಗಿ ಊಟವೂ ದೊರೆಯುತ್ತಿರಲಿಲ್ಲ. ಇವರ ತಂದೆಯವರು ಬಟ್ಟೆಯ ಅಂಗಡಿಯಲ್ಲಿ ಲೆಕ್ಕ ಬರೆದು ಸಂಪಾದಿಸುತ್ತಿದ್ದ ಅಲ್ಪ ಹಣ ದಲ್ಲೇ ಜೀವನ ನಡೆಸಬೇಕಾಗಿತ್ತು.

ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ತಮ್ಮ ಛಲವನ್ನು ಬಿಡದೇ ಮುನ್ನುಗ್ಗುತ್ತಿದ್ದ ಅವರ ಗುಣ ಮಾತ್ರ ಇಂದಿನ ಯುವಕರಿಗೆ ಆದರ್ಶಪ್ರಾಯವಾಗಿದೆ. ರಾಮಾನುಜನ್‌ ಅವರ ಗಣಿತ ಸಾಮರ್ಥ್ಯ ಎಷ್ಟಿತ್ತೆಂದರೆ ತಮಗೆ ಯಾರಾದರೂ ಗಣಿತದ ಯಾವುದಾದರೂ ಶಾಖೆಗಳ ಕೆಲವು ಅಂಶಗಳನ್ನು ಹೇಳಿದರೆ ಸಾಕು, ಅದನ್ನೆÇÉಾ ಸಂಪೂರ್ಣವಾಗಿ ಗ್ರಹಿಸಿ ಮತ್ತೂಂದಿಷ್ಟು ಹೊಸದನ್ನು ಅದಕ್ಕೆ ಸೇರಿಸುತ್ತಿದ್ದರು.

1903ರಲ್ಲಿ “ಸಿನಾಪ್ಸಿಸ್‌ ಆಫ್ ಪ್ಯೂರ್‌ ಮ್ಯಾಥಮ್ಯಾಟಿಕ್ಸ್‌ ‘ ಎಂಬ ಪುಸ್ತಕ ಪಡೆದು, ಅದರಲ್ಲಿನ ಪ್ರಮೇಯಗಳಿಗೆ ಸಾಧನೆಗಳನ್ನು ಸ್ವಂತವಾಗಿ ಸಂಶೋಧಿಸಿಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಂಡರು. ಇವರ ಗಣಿತದಲ್ಲಿನ ಕುತೂಹಲ, ಹೊಸ ಅನ್ವೇಷಣೆಗಳನ್ನು ಗುರುತಿಸಿದ ನಾರಾಯಣ ಅಯ್ಯರ್‌ ಎಂಬುವವರು ರಾಮಾನುಜನ್‌ ಅವರೊಡನೆ ಚರ್ಚಿಸಿ, ಕೇಂಬ್ರಿಜ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಹಾರ್ಡಿಯವರಿಗೆ ಪತ್ರ ಬರೆಯುವಂತೆ ಹೇಳಿದರು. ಇದಕ್ಕೆ ಒಪ್ಪಿಕೊಂಡ ರಾಮಾನುಜನ್‌ ವಿಶ್ವವಿದ್ಯಾಲಯದ ಶಿಕ್ಷಣದ ಹಿನ್ನೆಲೆ ತಮಗಿಲ್ಲವೆಂದೂ, ಅಪಸರಣ ಶ್ರೇಣಿಗಳ ಕ್ಷೇತ್ರದಲ್ಲಿ ವಿಶೇಷವಾದ ಸಂಶೋಧನೆ ಮಾಡಿರುವುದಾಗಿ, ಸುಮಾರು 120 ಫ‌ಲಿತಾಂಶಗಳನ್ನು, ಪ್ರಮೇಯಗಳನ್ನು ಕಳುಹಿಸಿರುವುದಾಗಿ ತಿಳಿಸಿದ್ದರು. ಆ ಪತ್ರಗಳೊಂದಿಗೆ ಅಡಕವಾಗಿರುವ ಪ್ರಮೇಯಗಳನ್ನು ವೀಕ್ಷಣೆ ಮಾಡಿ, ತಮ್ಮ ಅಮೂಲ್ಯವಾದ ಸಲಹೆಗಳನ್ನು ಕೊಡಬೇಕೆಂದು ವಿನಂತಿಸಿದ್ದರು. ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಶುದ್ಧ ಗಣಿತದಲ್ಲಿ ಮಹಾನ್‌ ಖ್ಯಾತಿಯನ್ನು ಗಳಿಸಿದ್ದ ಪ್ರೊ.ಹಾರ್ಡಿಯವರು ರಾಮಾನುಜನ್‌ರ ಪತ್ರದಲ್ಲಿದ್ದ ಪ್ರಮೇಯ ಹಾಗೂ ಸೂತ್ರಗಳ ಪಟ್ಟಿಯನ್ನು ನೋಡಿ ತೀವ್ರ ಆಶ್ಚರ್ಯಚಕಿತರಾದರು.

ಇಂತಹ ಗಣಿತ ಸೂತ್ರಗಳನ್ನು ತಾನು ಹಿಂದೆಂದೂ ನೋಡಿಯೇ ಇರಲಿಲ್ಲವೆಂದು ತಿಳಿಸುತ್ತಾ, ಇಂತಹ ಅದ್ಭುತವಾದ ಸೂತ್ರಗಳನ್ನು ರಚಿಸಿರುವ ವ್ಯಕ್ತಿ ಪ್ರಥಮ ದರ್ಜೆಯ ಗಣಿತಜ್ಞನೇ ಆಗಿರಬೇಕೆಂಬ ನಿರ್ಣಯಕ್ಕೆ ಬಂದರು.

ಹಾರ್ಡಿಯಂತಹ ಮಹಾನ್‌ ಗಣಿತಜ್ಞನೇ ಆ ಸೂತ್ರ, ಪ್ರಮೇಯಗಳನ್ನು ಇಷ್ಟೊಂದು ಮೆಚ್ಚಿಕೊಂಡು ಪ್ರಶಂಸಿರುವುದನ್ನು ನೋಡಿದಾಗ ರಾಮಾನುಜನ್‌ರಲ್ಲಿದ್ದ ಗಣಿತದ ಪ್ರತಿಭೆ ಎಷ್ಟೊಂದು ಆಳವಾಗಿತ್ತೆಂಬುದನ್ನು ತೋರಿಸುತ್ತದೆ. ನಂತರ ಹಾರ್ಡಿಯವರು ರಾಮಾನುಜನ್‌ರಿಗೆ ಮರು ಉತ್ತರ ಬರೆದು, ಎಚ್‌.ಎಲ…. ನೆವಿಲ್‌ ಎನ್ನುವವರು ಉಪನ್ಯಾಸ ನೀಡಲು ಮದರಾಸಿಗೆ ಬಂದಿದ್ದು ಅವರನ್ನು ಭೆಟ್ಟಿಯಾಗಬೇಕೆಂದೂ,ಅವರಿಂದ ಅತ್ಯುತ್ತಮ ಸಲಹೆ ದೊರೆಯು ವುದಾಗಿಯೂ ತಿಳಿಸಿದರು. ಆ ಪ್ರಕಾರ ರಾಮಾನುಜನ್‌ ಅವರು ನೆವಿಲ್‌ರನ್ನು ಭೇಟಿಯಾಗಿ ಹಲವಾರು ಗಣಿತದ ವಿಷಯಗಳನ್ನು ಚರ್ಚಿಸಿದರು.

ರಾಮಾನುಜನ್‌ರ ಗಣಿತದ ವಿದ್ವತ್ತನ್ನು ಪರೀಕ್ಷಿಸಿದ ಅವರು ಹಾರ್ಡಿಯವರ ಆದೇಶದ ಮೇರೆಗೆ ಉನ್ನತ ಅಧ್ಯಯನಕ್ಕಾಗಿ ಇಂಗ್ಲೆಂಡಿಗೆ ಬರುವಂತೆ ಆಹ್ವಾನ ನೀಡಿದರು. ಮೊದ ಮೊದಲು ನಿರಾಕರಿಸಿದರೂ ನಂತರ ಒಪ್ಪಿಕೊಂಡು ಇಂಗ್ಲೆಂಡಿಗೆ ತೆರಳಿದರು ರಾಮಾ ನು ಜ ನ್‌. ನಂತರ  ಕೇಂಬ್ರಿಜ್‌ಗೆ ತೆರಳಿ ಹಾರ್ಡಿಯವರನ್ನು ಭೇಟಿಯಾದರು. ಹೀಗೆ ಹಾರ್ಡಿಯವರ ನಿರಂತರ ಮಾರ್ಗದರ್ಶನದಲ್ಲಿ ಮುಂದುವರೆದು 1917ರಲ್ಲಿ ರಾಮಾನುಜನ್‌ರಿಗೆ ಅವರು ಕೆಲಸ ಮಾಡುತ್ತಿದ್ದ ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಗೌರವ ಸಿಕ್ಕಿತು. 1928ರಲ್ಲಿ ಫೆಲೋ ಆಫ್ ದ ರಾಯಲ್‌ ಸೊಸೈಟಿ (ಎಫ್.ಆರ್‌.ಎಸ್‌) ಗೌರವ ಸಿಕ್ಕಿತು.

ಸಾಧನೆಯ ಹಾದಿಯಲ್ಲಿ ಚಲಿಸುತ್ತಿದ್ದ ಈ ಮಹಾನ್‌ ಗಣಿತಜ್ಞನಿಗೆ ಬರಸಿಡಿಲಿನಂತೆ ಬಂದೆರಗಿತು ಕ್ಷಯರೋಗ. ಈ ಆಘಾತದಿಂದ ಹೊರಬರಲು ಸಾಧ್ಯವಾಗದೇ ಕೊನೆಗೆ ಮರಳಿ ಭಾರತದತ್ತ ಪ್ರಯಾಣ ಬೆಳೆಸಿದರು. 1920 ಏಪ್ರಿಲ್‌ 26 ರಂದು ತಮ್ಮ 32ನೇ ವಯಸ್ಸಿನಲ್ಲಿ ತೀರಿಕೊಂಡರು.

ಗಣಿತವು ರೂಢಿಗತ ಹಾಗೂ ಸಂಕೀರ್ಣ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಬದಲಾಗಿ ಆವಿಷ್ಕಾರ ಹಾಗೂ ಸೃಜನಶೀಲತೆಯ ವಿಷಯವಾಗಿ ಹೊರಹೊಮ್ಮಬೇಕಾ ಗಿದೆ. ಒಂದು ಸಮಸ್ಯೆಗೆ ಕೇವಲ ಪರಿಹಾರ ತಿಳಿಯುವುದಕ್ಕಿಂತ ಆ ಸಮಸ್ಯೆಯನ್ನು ಪರಿಹರಿಸಲು ಅಳವಡಿಸುವ ವಿಧಾನಗಳ ತಾರ್ಕಿಕ ಆಲೋಚನೆಗಳು ತುಂಬಾ ಮಹತ್ವದ್ದು. ಇದು ಕಲಿಯುವವನಲ್ಲಿ ತಾರ್ಕಿಕವಾಗಿ ಆಲೋಚಿ ಸುವುದನ್ನು ಬೆಳೆಸಿದರೆ, ಅವರನ್ನು ತಮ್ಮದೇ ಆದ ವಿಧಾನದಲ್ಲಿ ಪರಿಹಾರವನ್ನು ಕಂಡುಹಿಡಿಯಲು ಸಮರ್ಥರನ್ನಾಗಿಸುವುದಲ್ಲದೇ ಅವರನ್ನು ಸುಮ್ಮನೆ ಕೇಳುವವರನ್ನಾಗಿಸದೇ ಕ್ರಿಯಾಶೀಲ ಭಾಗಿಗಗಳನ್ನಾಗಿ ಸುತ್ತದೆ. ಗಣಿತದ ತತ್ವಗಳನ್ನು ನಿತ್ಯ ಜೀವನಕ್ಕೆ ಅನ್ವಯಿಸಿಕೊಂಡು ಕಲಿಯುವುದರಿಂದ ಗಣಿತವನ್ನು ಸುಲಭವಾಗಿ ಹಾಗೂ ಬಹಳ ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಕಲಿಯಬಹುದು.

– ರಾಜು ಭೂಶೆಟ್ಟಿ, ಹುಬ್ಬಳ್ಳಿ

ಟಾಪ್ ನ್ಯೂಸ್

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.