ಸಂಪನ್ಮೂಲ ಕ್ರೋಢೀಕರಣ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ

ವಾಹನಗಳ ಮಾರಾಟ ಕುಸಿತದಿಂದ 460.20 ಕೋಟಿ ರೂ. ರಾಜಸ್ವ ಸಂಗ್ರಹ ಕೊರತೆ

Team Udayavani, Jan 6, 2020, 5:53 PM IST

BSY-Parisheelane-6-1

ಬೆಂಗಳೂರು: ರಾಜ್ಯದಲ್ಲಿ ವಾಹನಗಳ ಮಾರಾಟ ಕುಸಿದಿರುವುದರಿಂದ 460.20 ಕೋಟಿ ರೂ. ರಾಜಸ್ವ ಸಂಗ್ರಹದಲ್ಲಿ ಕೊರತೆ ಉಂಟಾಗಿದೆ. ಹೀಗಾಗಿ, ಮುಂದಿನ ಮೂರು ತಿಂಗಳಲ್ಲಿ ನಿರೀಕ್ಷಿತ ತೆರಿಗೆ ಸಂಗ್ರಹ ಗುರಿ ತಲುಪುವಂತೆ ವಾಣಿಜ್ಯ, ಆಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಇಲಾಖೆಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.

ಜತೆಗೆ, ಶಿಕ್ಷಣ, ಆರೋಗ್ಯ, ಸಾರಿಗೆ, ಇಂಧನ ಸೇರಿದಂತೆ ಸಾರ್ವಜನಿಕ ಸೇವಾ ಇಲಾಖೆಗಳೆಗಳು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಅನಗತ್ಯ ವೆಚ್ಚ ಕಡಿತ ಮಾಡಿ ತೆರಿಗೆ ವಂಚನೆಗೆ ಕಡಿವಾಣ ಹಾಕಬೇಕು ಎಂದು ನಿರ್ದೇಶನ ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ನಾಲ್ಕೂ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂದಿನ ಮೂರು ತಿಂಗಳಲ್ಲಿ ತೆರಿಗೆ ಸಂಗ್ರಹ ಗುರಿ ತಲುಪಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ 76,046 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇದ್ದು, ಡಿಸೆಂಬರ್‌ 19 ರ ಅಂತ್ಯದ ವರೆಗೆ 55,984 ಕೋಟಿ ರೂ. ತೆರಿಗೆ ಸಂಗ್ರಹವಾಗಿ ಶೇ.73ರಷ್ಟು ಸಾಧನೆಯಾಗಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಇಲ್ಲಿವರೆಗೆ ರಾಜ್ಯ 61,245 ಕೋಟಿ ರೂ. ಸಂಗ್ರಹಿದ್ದು ರಾಷ್ಟ್ರದಲ್ಲಿ ಎರಡನೇ ಸ್ಥಾನ ಪಡೆದಿದೆ. ರಾಜ್ಯದ ಜಿಎಸ್‌ಟಿ ಬೆಳವಣಿಗೆ ಶೇ.14.2 ರಷ್ಟು ಇದೆ.
ದೊಡ್ಡ ಪ್ರಮಾಣದಲ್ಲಿ ಬಸ್‌ಗಳಲ್ಲಿ ಸರಕು ಸಾಗಣೆ ಮಾಡುವ ಮೂಲಕ ಮತ್ತು ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಮತ್ತಿತರ ವಾಣಿಜ್ಯ ಚಟುವಟಿಕೆಗಳಿಗೆ ಜಿಎಸ್‌ಟಿ ತೆರಿಗೆ ವಂಚನೆ ನಡೆಯುತ್ತಿರುವ ಕುರಿತು ಸಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ತಡವಾಗಿ ಜಿಎಸ್‌ಟಿ ರಿಟರ್ನ್ಸ್ ಫೈಲ್‌ ಮಾಡುವ ಮತ್ತು ರಿಟರ್ನ್ಸ್ ಫೈಲ್‌ ಮಾಡದೇ ಇರುವವರ ವ್ಯಾಪಾರ ಸ್ಥಳಗಳಿಗೆ ಭೇಟಿ ನೀಡಿ 551.44 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಇ-ವೇ ತಪಾಸಣೆಯಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದ್ದು ಸಂಚಾರಿ ಜಾಗೃತಿ ದಳಗಳ ಮೂಲಕ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ. 2020 ಏಪ್ರಿಲ್‌ 1 ರಿಂದ ಜಿಎಸ್‌ಟಿ ರಿಟರ್ನ್ಸ್ ನಮೂನೆ ಜಾರಿಗೆ ಬರಲಿದೆ. ಹೊಸ ನಮೂನೆಯಲ್ಲಿ ತೆರಿಗೆದಾರರಲ್ಲಿ ಜನಪ್ರಿಯಗೊಳಿಸಲು ಕ್ರಮ ವಹಿಸಲಾಗುತ್ತಿದೆ. ನಮೂನೆ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ಸಾರಿಗೆ ಇಲಾಖೆಯಲ್ಲಿ ಒಟ್ಟು 7100 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಿದ್ದೇವೆ. ಸಾರಿಗೆ ಇಲಾಖೆಯಿಂದ 6601.96 ಕೋಟಿ ರೂ. ಹಾಗೂ ಸಾರಿಗೆ ಸಂಸ್ಥೆಗಳಿಂದ 498.04 ಕೋಟಿ ರೂ. ಆದಾಯದ ಗುರಿ ಹೊಂದಲಾಗಿದೆ.

ಈವರೆಗೆ 4864.80 ರಾಜಸ್ವ ಸಂಗ್ರಹ ಆಗಿದ್ದು ಶೇ.68.51 ಗುರಿ ಸಾಧಿಸಲಾಗಿದೆ. ವಾಹನಗಳ ಮಾರಾಟ ಕುಸಿದಿರುವುದರಿಂದ ಸುಮಾರು 460.20 ಕೋಟಿ ರೂ. ಕೊರತೆ ಆಗಿದೆ. ಈ ಇಲಾಖೆಯಲ್ಲಿ ವರ್ಷಾಂತ್ಯಕ್ಕೆ ಸುಮಾರು 300 ಕೋಟಿ ರೂ. ಕೊರತೆಯಾಗುವ ಸಾಧ್ಯತೆಯಿದೆ.ಇದನ್ನು ಬೇರೆ ಮೂಲಗಳಿಂದ ಸರಿದೂಗಿಸಲು ಪ್ರಯತ್ನಿಸಲಾಗುವುದು.

ಮೋಟಾರು ವಾಹನ ಕಾಯ್ದೆ ಉಲ್ಲಂಘಟನೆ ಪ್ರಕರಣಗಳು ಹಾಗೂ ತೆರಿಗೆ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಅಬಕಾರಿ ಇಲಾಖೆಯಲ್ಲಿ ಈ ವರ್ಷ 20,950 ಕೋಟಿ ರೂ. ರಾಜಸ್ವ ಸಂಗ್ರಹದ ವಾರ್ಷಿಕ ಗುರಿ ನಿಗದಿಯಾಗಿದೆ. ಈವರೆಗೆ 16,187.95 ಕೋಟಿ ರೂ. ರಾಜಸ್ವ ಸಂಗ್ರಹ ಆಗಿದ್ದು ಶೇ.77.23 ರಷ್ಟು ಗುರಿ ಸಾಧನೆಯಾಗಿದೆ.

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 1165.33 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು ಬೆಳವಣಿಗೆ ದರ ಶೇ.7.76 ರಷ್ಟಿದೆ. ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೇ ಗುರಿ ಸಾಧನೆ ಆಗಿದೆ ಎಂದು ಹೇಳಿದರು.

ಆಬಕಾರಿ ಇಲಾಖೆಯ 39 ಸೇವೆಗಳು ‘ಸಕಾಲ’ ಯೋಜನೆ ವ್ಯಾಪ್ತಿಗೆ ತರಲಾಗಿದ್ದು 25 ಸೇವೆಗಳು ಆನ್‌ ಲೈನ್‌ನಲ್ಲಿ ಒದಗಿಸಲಾಗುತ್ತದೆ. ಚಿಲ್ಲರೆ ಮದ್ಯ ಮಾರಾಟ ಲೈಸೆನ್ಸ್‌ಗಳು ಹಾಗೂ ಮದ್ಯ ಉತ್ಪಾದನಾ ಘಟಕಗಳ ಲೈಸನ್ಸ್‌ಗಳನ್ನು ಆನ್‌ ಲೈನ್‌ ಮೂಲಕ ನವೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 11,828 ಕೋಟಿ ರೂ. ರಾಜಸ್ವಾದ ಸಂಗ್ರಹ ವಾರ್ಷಿಕ ಗುರಿ ಹೊಂದಿದ್ದು ಈವರೆಗೆ 8297.65 ಕೋಟಿ ರೂ.ಸಂಗ್ರಹ ಆಗಿದ್ದು ಕಳೆದ ವರ್ಷಕ್ಕಿಂದ 410.75 ಕೋಟಿ. ರೂ. ಹೆಚ್ಚಳವಾಗಿದೆ ಎಂದು ವಿವರಿಸಿದರು.
ಅಲ್ಲದೆ ಅಕ್ರಮ ಮಾರಾಟ, ತೆರಿಗೆ ವಂಚನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ, ತೆರಿಗೆ ವಂಚನೆ ಬಗ್ಗೆ ಗಮನಕೊಟ್ಟು ನಿರೀಕ್ಷೆ ಮೀರಿದ ತೆರಿಗೆ ಸಂಗ್ರಹ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ತಾಕೀತು
ಸಂಪನ್ಮೂಲ ಸಂಗ್ರಹ ಕಡಿಮೆಯಾದರೆ ಅಭಿವೃದ್ಧಿ ಯೋಜನೆಗಳ ಅನುಷ್ಟಾನ ಕಷ್ಟವಾಗುತ್ತದೆ. ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೋರಿ ಇಲಾಖೆಗಳು ಬೇಡಿಕೆ ಸಲ್ಲಿಸಿವೆ. ಹೀಗಾಗಿ, ತೆರಿಗೆ ಸಂಗ್ರಹ ಗುರಿ ಮುಂದಿನ ವರ್ಷಕ್ಕೆ ಹೆಚ್ಚು ನಿಗದಿಮಾಡಬೇಕು.

ಈ ವರ್ಷದ ಗುರಿ ತಲುಪಿದರೆ ಮಾತ್ರ ಮತ್ತಷ್ಟು ಗುರಿ ನಿಗದಿ ಮಾಡಲು ಸಾಧ್ಯ. ಹೀಗಾಗಿ, ಅಧಿಕಾರಿಗಳು ಮುಂದಿನ ಮೂರು ತಿಂಗಳು ಸಂಪನ್ಮೂಲ ಕ್ರೂಢೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಟಾಪ್ ನ್ಯೂಸ್

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

6-uv-fusion

Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

5-uv-fusion

Summer Holidays: ರಜಾದಿನ ಹೀಗಿರಲಿ

ಶಿವರಾಮೇಗೌಡ

Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ

4-uv-fusion

Cricket: ವಿಶ್ವ ಕ್ರಿಕೆಟನ್ನಾಳಿದ ದೈತ್ಯ: ವೆಸ್ಟ್‌ ಇಂಡೀಸ್‌

Sindhanur; ಒಂದೇ ದಿನ ‌ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು

Sindhanur; ಒಂದೇ ದಿನ ‌ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿವರಾಮೇಗೌಡ

Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್‌ಗೆ ಕಳುಹಿಸಿ: B.Y. ರಾಘವೇಂದ್ರ

ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್‌ಗೆ ಕಳುಹಿಸಿ: B.Y. ರಾಘವೇಂದ್ರ

Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ

Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

6-uv-fusion

Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Belagavi; ಹೊಳಿಹೊಸೂರ ಗ್ರಾಮದಲ್ಲಿ ಪೊಲೀಸ್ ದಾಳಿ; ನಾಲ್ಕು ಲಕ್ಷ ರೂ ಬೆಲೆ ಮದ್ಯ ವಶಕ್ಕೆ

Belagavi; ಹೊಳಿಹೊಸೂರ ಗ್ರಾಮದಲ್ಲಿ ಪೊಲೀಸ್ ದಾಳಿ; ನಾಲ್ಕು ಲಕ್ಷ ರೂ ಬೆಲೆ ಮದ್ಯ ವಶಕ್ಕೆ

5-uv-fusion

Summer Holidays: ರಜಾದಿನ ಹೀಗಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.