ಗ್ರಾಮೀಣ ರಸ್ತೆ ಅಭಿವೃದಿಗೆ ಆದ್ಯತೆ

Team Udayavani, Jan 27, 2020, 1:07 PM IST

bg-tdy-1

ಚಿಕ್ಕೋಡಿ: ತಾಲೂಕಿನ ಮುಗಳಿ, ಕರೋಶಿ ಹಾಗೂ ಕುಂಗಟೋಳ್ಳಿ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ 3 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಶನಿವಾರ ತಾಲೂಕಿನ ಮುಗಳಿ ಗ್ರಾಮದಿಂದ ಅಮ್ಮಣಗಿ ಕೂಡು ರಸ್ತೆ 1 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿ, ಮುಗಳಿ ಗ್ರಾಮದ ಈ ರಸ್ತೆ ದುರಸ್ತಿ ಮಾಡಬೇಕೆಂದು ಅನೇಕ ವರ್ಷಗಳಿಂದ ಬೇಡಿಕೆ ಇತ್ತು. ಆದರೆ ಈಗ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.

ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಇದರಿಂದ ರೈತರಿಗೆ ತುಂಬ ತೊಂದರೆಯಾಗುತ್ತಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ದಿನಮಾನದಲ್ಲಿ ಕರೋಶಿ, ನಾಗರಮುನ್ನೋಲಿ ಜಿ.ಪಂ ವ್ಯಾಪ್ತಿಯಲ್ಲಿ ಬರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಶೀಘ್ರ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿ, ಮುಗಳಿ ಗ್ರಾಮದ ಜನರಿಗೆ ತಮ್ಮ ಹೊಲ-ಗದ್ದೆಗಳಿಗೆ ಬರಲು ಬಹಳ ವರ್ಷಗಳಿಂದ ತೊಂದರೆಯಾಗುತ್ತಿದ್ದನ್ನು ಮನಗಂಡು ರಾಜು ಪಾಟೀಲ ಅವರ ನಿರ್ದೇಶನದ ಮೇರೆಗೆ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಈ ವೇಳೆ ಜಿಪಂ ಸದಸ್ಯೆ ಲಕ್ಷ್ಮೀ ಕುರಬರ, ಗ್ರಾಪಂ ಅಧ್ಯಕ್ಷ ಈರಗೌಡಾ ಪಾಟೀಲ, ನಿಂಗಪ್ಪ ಕುರುಬರ, ಪ್ರಕಾಶ ಪಾಟೀಲ, ಶಂಕರಗೌಡ ಪಾಟೀಲ, ಬಾಬುಗೌಡ ಪಾಟೀಲ, ಪ್ರಭಾಕರ ಕಳಸನ್ನವರ, ವಿಜಯ ಕೋಠಿವಾಲೆ, ಈರಪ್ಪಾ ಕೊಟಬಾಗಿ, ರಾಜು ಹರಗಾಪೂರೆ, ದಾನಲಿಂಗ ಪೋತದಾರ, ಇಂಜಿನಿಯರ್‌ ಎ.ಐ. ಕಾಕೋಳೆ ಇದ್ದರು.

ಟಾಪ್ ನ್ಯೂಸ್

Virat kohli spoke about his post-retirement life

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು

Monsoon: ನಿಗದಿತ ಸಮಯಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ

Monsoon: ನಿಗದಿತ ಸಮಯಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ

Anjali Ambigera case: ABVP protest in Hubli

Anjali Ambigera case: ಹುಬ್ಬಳ್ಳಿಯಲ್ಲಿ ಎಬಿವಿಪಿ ಪ್ರತಿಭಟನೆ

syed-kamal

Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು

Hoarding Collapse: ಅಪ್ಪಚ್ಚಿಯಾದ ಕಾರಿನಲ್ಲಿತ್ತು ನಿವೃತ್ತ ಅಧಿಕಾರಿ, ಪತ್ನಿಯ ಮೃತದೇಹ

Hoarding Collapse: ಅಪ್ಪಚ್ಚಿಯಾದ ಕಾರಿನಲ್ಲಿತ್ತು ನಿವೃತ್ತ ಅಧಿಕಾರಿ, ಪತ್ನಿಯ ಮೃತದೇಹ

ಅರ್ಜುನ ಸಮಾಧಿಗೆ ದರ್ಶನ್‌ ಫ್ಯಾನ್ಸ್‌ ಸಾಥ್‌

Actor Darshan; ಅರ್ಜುನ ಸಮಾಧಿಗೆ ದರ್ಶನ್‌ ಫ್ಯಾನ್ಸ್‌ ಸಾಥ್‌

ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಣಕ್ಕಿಳಿದಿದ್ದ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತ

ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಣಕ್ಕಿಳಿದಿದ್ದ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ: ಶೆಟ್ಟರ್

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ: ಶೆಟ್ಟರ್

Belagavi; ಬಿರು ಬೇಸಿಗೆಯಲ್ಲೂ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ

Belagavi; ಬಿರು ಬೇಸಿಗೆಯಲ್ಲೂ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ

ಸರಳತೆ-ಸಮಾನತೆಯ ಸಮಾಜ ನಿರ್ಮಿಸೋಣ: ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ

ಸರಳತೆ-ಸಮಾನತೆಯ ಸಮಾಜ ನಿರ್ಮಿಸೋಣ: ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ

ಕಣಬರ್ಗಿ ರಸ್ತೆ ಪೂರ್ಣ ಆಗೋದು ಯಾವಾಗ? ಸಾರ್ವಜನಿಕರ ಆಕ್ರೋಶ

ಕಣಬರ್ಗಿ ರಸ್ತೆ ಪೂರ್ಣ ಆಗೋದು ಯಾವಾಗ? ಸಾರ್ವಜನಿಕರ ಆಕ್ರೋಶ

1-wqewewqewq

Belgavi; ಭಾರೀ ಪ್ರಮಾಣದ ಅಕ್ರಮ ಮದ್ಯ ಜಪ್ತಿ:ಇಬ್ಬರ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Tumkur: ಕೆರೆ ಹೂಳು ತೆಗೆಯಲು ರೈತರಿಂದ ಮಾಹಿತಿ ಪತ್ರ ಕಡ್ಡಾಯ: ಪ್ರಭು ಜಿ

Tumkur: ಕೆರೆ ಹೂಳು ತೆಗೆಯಲು ರೈತರಿಂದ ಮಾಹಿತಿ ಪತ್ರ ಕಡ್ಡಾಯ: ಪ್ರಭು ಜಿ

5-bng-crime

Bengaluru Crime: ಮನೆ ಮಾಲಕಿಯ ಕೊಂದು ಚಿನ್ನ ದೋಚಿದಳು!

Virat kohli spoke about his post-retirement life

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು

Monsoon: ನಿಗದಿತ ಸಮಯಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ

Monsoon: ನಿಗದಿತ ಸಮಯಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ

Anjali case; ಕಾನೂನಿಗೆ ಬೆಲೆಯಿದೆ ಎಂದು ಸರ್ಕಾರ ತೋರಿಸಲಿ: ಮೂರುಸಾವಿರಮಠದ ಜಗದ್ಗುರು ಶ್ರೀ

Anjali case; ಕಾನೂನಿಗೆ ಬೆಲೆಯಿದೆ ಎಂದು ಸರ್ಕಾರ ತೋರಿಸಲಿ: ಮೂರುಸಾವಿರ ಮಠದ ಜಗದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.