ನಾಯಿ, ಮಾಲೀಕರು ಒಂದಾಗಲು ಸಹಾಯ ಮಾಡಿದ ಬಿಯರ್ ಟಿನ್
Team Udayavani, Feb 6, 2020, 7:56 AM IST
ಪ್ರೀತಿಯಿಂದ ಸಾಕಿರುವ ನಾಯಿ ಕಳೆದುಹೋದರೆ ಆಗುವ ದುಃಖ ಶ್ವಾನಪ್ರಿಯರಿಗೆ ಮಾತ್ರ ತಿಳಿದಿರುತ್ತದೆ. ಮೂರು ವರ್ಷಗಳ ಹಿಂದೆ ತನ್ನ ಪ್ರೀತಿಯ ನಾಯಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ಮಿನ್ನಿಸೋಟ ಮಹಿಳೆಗೆ ಆಕೆಯ ನಾಯಿಯನ್ನು ಹುಡುಕಲು ಫ್ಲೋರಿಡಾ ಬಿಯರ್ ತಯಾರಿಕಾ ಸಂಸ್ಥೆಯೊಂದು ತನಗರಿವಿಲ್ಲದೆಯೇ ನೆರವಾಗಿದೆ.
ಬಿಯರ್ ತಯಾರಿಕಾ ಸಂಸ್ಥೆ ಆಶ್ರಯ ತಾಣಗಳಲ್ಲಿರುವ ನಾಯಿಗಳ ಮುಖಗಳ ಚಿತ್ರಗಳನ್ನು ಬಿಯರ್ ಟಿನ್ಗಳ ಮೇಲೆ ಪ್ರಕಟಿಸಲು ಆರಂಭಿಸಿತು. ಮೋನಿಕಾ ಮ್ಯಾಥಿಸ್ ಈ ಕಂಪೆನಿಯ 4 ಟಿನ್ ಬಿಯರ್ ಕೊಂಡಿದ್ದರು. ಆ ಟಿನ್ಗಳಲ್ಲಿ ಅಚ್ಚಾಗಿದ್ದ ನಾಯಿಯ ಫೋಟೊ ಅವರ ನಾಯಿ ಹೆಜೆಲ್ ಮುಖಕ್ಕೆ ಹೋಲುತ್ತಿತ್ತು. ಕಡೆಗೆ ಬಿಯರ್ ಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ನಾಯಿಯನ್ನು ಮರಳಿ ಪಡೆದರು.