ಮಂಗಳೂರು ನಗರವನ್ನು ನಂ. 1 ಸ್ಥಾನಕ್ಕೇರಿಸಲು ವಾರ ಕಾಲ ಅವಕಾಶ

ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

Team Udayavani, Feb 23, 2020, 5:59 AM IST

ram-28

ಮಹಾನಗರ: ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆ ಮೂಲಕ ಮಂಗಳೂರು ನಗರವನ್ನು ನಂ. 1 ಸ್ಥಾನಕ್ಕೇರಿಸಲು ನಾಗರಿಕರಿಗೆ ಇನ್ನು ಒಂದು ವಾರಗಳ ಕಾಲಾವಕಾಶವಿದೆ. ನಮ್ಮ ನಗರವನ್ನು ಆಯ್ಕೆ ಮಾಡಲು ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬಹುದಾಗಿದೆ.

ದೇಶದ ಸ್ಮಾರ್ಟ್‌ಸಿಟಿ ಮಿಷನ್‌ ನಗರಗಳು ಪ್ರಮುಖ ಮೂಲ ಸೌಕರ್ಯ ಒದಗಿಸುವ, ನಾಗರಿಕರಿಗೆ ಯೋಗ್ಯವಾದ ಸುಲಲಿತ ಜೀವನಮಟ್ಟ ನೀಡುವ ಸ್ವಚ್ಛ ಮತ್ತು ಸುಸ್ಥಿರ ಪರಿಸರ ಹಾಗೂ ಉತ್ತಮ ಪರಿಹಾರಗಳಿಗೆ ಸಂಬಂಧಿಸಿದಂತೆ ನಗರವನ್ನು ಉತ್ತೇಜಿಸುವ ದೃಷ್ಟಿಯಿಂದ ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯನ್ನು ನಡೆಸುತ್ತಿದೆ.

ಸಮೀಕ್ಷೆಯು ಆನ್‌ಲೈನ್‌ ಮೂಲಕ ನಡೆಯುತ್ತಿದ್ದು, ಫೆ. 1ರಿಂದ ಆರಂಭ ವಾಗಿದ್ದು, ಫೆ. 29ರ ವರೆಗೆ ಇರುತ್ತದೆ. ನಗರದ ಕುಡಿಯುವ ನೀರು, ರಸ್ತೆ, ಶಿಕ್ಷಣ, ಸಾರಿಗೆ ವ್ಯವಸ್ಥೆ, ಒಳಚರಂಡಿ ಸಹಿತ ಒಟ್ಟಾರೆ ಮೂಲ ಸೌಕ ರ್ಯಗಳ ಬಗ್ಗೆ 22 ಪ್ರಶ್ನೆಗಳನ್ನು ಕೇಳಲಾಗಿದೆ. ಪ್ರಶ್ನೆಗಳ ಕೆಳಗೆ ಆಯ್ಕೆಗಳನ್ನು ಕೊಡಲಾಗಿದ್ದು, ಜನರು ಧನಾತ್ಮಕ, ಋಣಾತ್ಮಕ ವಾಗಿದ್ದಲ್ಲಿ ಹಾಗೆಯೇ ಉತ್ತರ ತಿಳಿಸಲು ಅವಕಾಶವಿದೆ.

ಜನರ ಪಾಲ್ಗೊಳ್ಳುವಿಕೆಯ ಮೂಲಕ ನಗರದ ಸಮಸ್ಯೆ ಅಥವಾ ಅಭಿವೃದ್ಧಿಯಾಗ ಬೇಕಿರುವ ಕ್ಷೇತ್ರಗಳ ಬಗ್ಗೆ ಸರಕಾರಕ್ಕೆ ತಿಳಿಸಲು ಸಾಧ್ಯವಿದೆ. ಉತ್ತಮ ಅಂಶಗಳ ಬಗ್ಗೆಯೂ ಜನರ ಪಾಲ್ಗೊಳ್ಳುವಿಕೆಯೇ ನಿರ್ಧರಿಸುವುದರಿಂದ ಮುಂದಿನ ಒಂದು ವಾರ ಕಾಲ ಜನ ಹೆಚ್ಚಿನ ಆಸಕ್ತಿಯೊಂದಿಗೆ ಪಾಲ್ಗೊಂಡು ನಮ್ಮ ನಗರವನ್ನು ಆಯ್ಕೆ ಮಾಡಬಹುದು. ಸಾರ್ವಜನಿಕರು https://e0l2019.org/CitizenFeedback ಲಿಂಕ್‌ ಓಪನ್‌ ಮಾಡಿ ತಮ್ಮ ಅಭಿಪ್ರಾಯ ತಿಳಿಸಬಹುದು.

ಪಾಲ್ಗೊಳ್ಳುವಿಕೆಯಲ್ಲಿ ವರೆಗೆ 3ನೇ ಸ್ಥಾನ
ಸಮೀಕ್ಷೆಯ ಇಲ್ಲಿವರೆಗಿನ ಪಾಲ್ಗೊಳ್ಳುವಿಕೆಯ ಶೇಕಡಾವಾರು ಪ್ರಮಾಣದಲ್ಲಿ ಮಂಗಳೂರು 3ನೇ ಸ್ಥಾನದಲ್ಲಿದ್ದು, ತುಮಕೂರು ಮೊದಲ ಸ್ಥಾನ ದಲ್ಲಿದೆ. ಆದರೆ ನಿಗದಿತ ಗುರಿ ಮೀರಲಾಗಿದೆ. ಮಂಗಳೂರಿ ನಲ್ಲಿ 5,172ರಷ್ಟು ಮಂದಿ ಪಾಲ್ಗೊಳ್ಳುವ ಗುರಿ ಇಟ್ಟು ಕೊಳ್ಳಲಾಗಿತ್ತಾದರೂ 6,246 ಮಂದಿ ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಗುರಿ ಮೀರಿ ಸಾಧನೆಯಾಗಿದೆ. ಆದರೆ ಜನರ ಪಾಲ್ಗೊಳ್ಳುವಿಕೆಯ ಶೇಕಡಾವಾರು ಪ್ರಮಾಣದಲ್ಲಿ ಮಂಗಳೂರಿನಲ್ಲಿ ಶೇ. 121 ಪ್ರಮಾಣ ಆಗುವುದರೊಂದಿಗೆ 3ನೇ ಸ್ಥಾನದಲ್ಲಿದೆ. ಶೇ. 133ರಷ್ಟು ಜನರು ಪಾಲ್ಗೊಳ್ಳುವಿಕೆಯೊಂದಿಗೆ ತುಮಕೂರು ಮೊದಲ ಸ್ಥಾನದಲ್ಲಿದ್ದರೆ, ಶೇ. 129ರಷ್ಟು ಜನರ ಪಾಲ್ಗೊಳ್ಳುವಿಕೆಯೊಂದಿಗೆ ದಾವಣಗೆರೆ ಎರಡನೇ ಸ್ಥಾನದಲ್ಲಿದೆ. ಫೆ. 29ರೊಳಗೆ ನಾಗರಿಕರ ಪಾಲ್ಗೊಳ್ಳುವಿಕೆಯಲ್ಲಿ ಈ ಎರಡೂ ನಗರಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಕಾಯ್ದುಕೊಳ್ಳುವ ಸವಾಲು ಮಂಗಳೂರಿಗಿದೆ. ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಗುರಿ ಮೀರಿ ಸಾಧನೆ
ಸಮೀಕ್ಷೆಯಲ್ಲಿ ನಗರದ ಒಟ್ಟು ಜನಸಂಖ್ಯೆಯ ಶೇ. 1ರಷ್ಟು ಜನ ಪಾಲ್ಗೊಳ್ಳಲೇಬೇಕೆಂಬ ನಿಯಮವಿದೆ. ಅದಕ್ಕಾಗಿ ಪ್ರತಿ ನಗರಗಳಿಗೆ ಒಟ್ಟು ಜನಸಂಖ್ಯೆಯ ಶೇ. 1ರಷ್ಟು ಜನರ ಗುರಿ ನಿಗದಿಪಡಿಸಲಾಗಿದೆ. ಮಂಗಳೂರಿನಲ್ಲಿ ಒಟ್ಟು 5.20 ಲಕ್ಷ ಜನಸಂಖ್ಯೆಯಿದ್ದು, ಈ ಪೈಕಿ ಶೇ. 1 ಅಂದರೆ 5,172 ಮಂದಿಯನ್ನು ಒಳಗೊಳ್ಳುವ ಗುರಿ ನಿಗದಿಪಡಿಸಲಾಗಿದೆ. ಪ್ರಸ್ತುತ ನಿಗದಿತ ಗುರಿ ಮೀರಿ ಸಾಧನೆಯಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ
ಸಮೀಕ್ಷೆಗೆ ಗುರಿ ನಿಗದಿಪಡಿಸಿರುವುದು ಗುರಿ ಸಾಧನೆಯಾಗಬೇಕೆಂಬ ದೃಷ್ಟಿಯಿಂದ. ಆದರೆ ಜನರ ಪಾಲ್ಗೊಳ್ಳುವಿಕೆ ಗುರಿ ಮೀರಿ ಸಾಧನೆಯಾಗುವುದರೊಂದಿಗೆ ನಂ. 1 ಸ್ಥಾನಕ್ಕೇರಬೇಕು. ಇದರಿಂದ ಭವಿಷ್ಯದಲ್ಲಿ ನಗರದ ಆದ್ಯತೆಗಳನ್ನು ಸರಕಾರಕ್ಕೆ ತಿಳಿಸಲು ಸುಲಭವಾಗುತ್ತದೆ. ಮುಂದಿನ ಒಂದು ವಾರ ಕಾಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು.
 - ಮೊಹಮ್ಮದ್‌ ನಝೀರ್‌, ನಿರ್ದೇಶಕ, ಸ್ಮಾರ್ಟ್‌ ಸಿಟಿ ಯೋಜನೆ ಮಂಗಳೂರು

ಟಾಪ್ ನ್ಯೂಸ್

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

congress-workers

ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!

Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!

Temperature Increase: ಮೊಟ್ಟೆ ದರ ಇಳಿಕೆ

Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

congress-workers

ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.