ಬಿಗ್ ಬಿ ಕೈಗೆ ಮುದ್ರೆ ; ಟಿ-3473 ನಂಬರ್
Team Udayavani, Mar 19, 2020, 1:36 AM IST
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೈಗೆ ಪ್ರತ್ಯೇಕವಾಗಿ ಇರುವ ಬಗ್ಗೆ ಮುದ್ರೆ ಹಾಕಲಾಗಿದೆ. ಜತೆಗೆ ಅವರಿಗೆ ಟಿ-3473 ಎಂಬ ನಂಬರ್ ಕೊಡಲಾಗಿದೆ. ಮತದಾನದ ವೇಳೆ ಬೆರಳಿಗೆ ಗುರುತು ಹಾಕುವ ಅಳಿಸಲಾಗದ ಶಾಯಿ ಮೂಲದ ಮುದ್ರೆ ಹಾಕಲಾಗಿದೆ.
ಈ ಬಗ್ಗೆ ಅವರೇ ಬುಧವಾರ ಟ್ವೀಟ್ ಮಾಡಿ, ಕೈಗೆ ಹಾಕಲಾಗಿರುವ ಮುದ್ರೆಯ ಫೋಟೋ ಅಪ್ಲೋಡ್ ಮಾಡಿದ್ದಾರೆ. ಮುಂಬಯಿನಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವಂತೆಯೇ, ಬಾಲಿವುಡ್ ನಟ ಮನೆಯಲ್ಲಿ ಪ್ರತ್ಯೇಕವಾಗಿರಲು ನಿರ್ಧರಿಸಿದ್ದಾರೆ.
T 3473 – Stamping started on hands with voter ink, in Mumbai .. keep safe , be cautious , remain isolated if detected .. pic.twitter.com/t71b5ehZ2H
— Amitabh Bachchan (@SrBachchan) March 17, 2020