ನಾನೊಬ್ಬನೇ ಏಕಾಂಗಿಯಾಗಿ ತೀರ್ಪುಗಳನ್ನು ಬರೆದಿದ್ದೀನಾ?


Team Udayavani, Mar 22, 2020, 6:30 AM IST

ನಾನೊಬ್ಬನೇ ಏಕಾಂಗಿಯಾಗಿ ತೀರ್ಪುಗಳನ್ನು ಬರೆದಿದ್ದೀನಾ?

ನಿವೃತ್ತ ನ್ಯಾಯಮೂರ್ತಿ, ಜ. ರಂಜನ್‌ ಗೊಗೋಯ್‌ ಅವರು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಪ್ರತಿಪಕ್ಷಗಳು ಹಾಗೂ ಸಮಾಜದ ಅನೇಕ ವಲಯಗಳಿಂದ ಟೀಕೆಗಳು ವ್ಯಕ್ತವಾಗಿವೆ. ದೇಶದ ಇತರೆ ಹೆಸರಾಂತ ನ್ಯಾಯಮೂರ್ತಿಗಳೂ ಇದನ್ನು ಪ್ರಶ್ನಿಸಿದ್ದಾರೆ. ಆದರೆ ತಾವು ರಾಜ್ಯಸಭಾ ಸದಸ್ಯರಾಗುವುದು ಅದ್ಹೇಗೆ ನ್ಯಾಯಾಂಗ ಸ್ವಾತಂತ್ರ್ಯದೊಂದಿಗೆ ಮಾಡಿಕೊಂಡ ರಾಜಿಯಾಗುತ್ತದೆ ಎಂದು ಮರುಪ್ರಶ್ನೆ ಹಾಕುತ್ತಾರೆ ಗೊಗೋಯ್‌. ತಾವು ನೀಡಿದ ತೀರ್ಪುಗಳಿಗೂ, ರಾಜ್ಯಸಭಾ ಸದಸ್ಯತ್ವಕ್ಕೂ ಸಂಬಂಧವಿಲ್ಲ, ತೀರ್ಪು ಬರೆದದ್ದು ತಾವೊಬ್ಬರೇ ಅಲ್ಲ ಎಂದು ಹೇಳುವ ಅವರು, ಮುಂದಿನ ದಿನಗಳಲ್ಲಿ ಸಚಿವನಾಗುವುದು ಖಂಡಿತ ತಮ್ಮ ಗುರಿಯಲ್ಲ ಎಂದೂ “ಇಂಡಿಯಾ ಟುಡೆ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ…

ಇದೆಲ್ಲ ಏಕವ್ಯಕ್ತಿ ಪ್ರದರ್ಶನವಾಗಿತ್ತಾ? ಹಾಗಿದ್ದರೆ, ನನ್ನೊಡನೆ ಪೀಠದಲ್ಲಿದ್ದ ಇತರೆ ನ್ಯಾಯಮೂರ್ತಿಗಳು ಚರ್ಚೆಯಲ್ಲಿ ಪಾಲ್ಗೊಂಡಿರಲಿಲ್ಲ ಎನ್ನುತ್ತೀರಾ? ಅಯೋಧ್ಯೆ ತೀರ್ಪಿನಲ್ಲಿ ಇನ್ನೂ ನಾಲ್ಕು ನ್ಯಾಯಮೂರ್ತಿಗಳಿದ್ದರು, ಹಾಗಿದ್ದರೆ ಅವರೇನು ಮಾಡುತ್ತಿದ್ದರು? ರಾಜ್ಯಸಭೆಯ ಸದಸ್ಯತ್ವವು ಈ ತೀರ್ಪುಗಳಿಂದಾಗಿ ದೊರಕಿದ ಪ್ರತಿಫ‌ಲ ಎಂದರೆ ಇದಕ್ಕೆ, ಅವರೆಲ್ಲರೂ ಜವಾಬ್ದಾರರು ಎಂದಂತಾಗುತ್ತದೆ. ಹಾಗಿದ್ದರೆ, ಅವರೂ ತಮ್ಮ ನಿವೃತ್ತಿ ನಂತರದ ಲಾಭಗಳನ್ನು ಖಾತ್ರಿಪಡೆಸಿಕೊಂಡಿದ್ದಾರೆ ಎನ್ನುತ್ತಿದ್ದೀರಾ? ಸ್ವಲ್ಪ ತರ್ಕಬದ್ಧವಾಗಿ ಯೋಚಿಸಿ.

ಭಾರತದ ನಿವೃತ್ತ ನ್ಯಾಯಮೂರ್ತಿ, ಜಸ್ಟಿಸ್‌ ರಂಜನ್‌ ಗೊಗೋಯ್‌ ಅವರೇ…ನಮ್ಮೊಂದಿಗೆ ಮಾತನಾಡಲು ಒಪ್ಪಿಕೊಂಡದ್ದಕ್ಕೆ ಧನ್ಯವಾದ..
-ನೀವು ನನ್ನನ್ನು “ಮಿಸ್ಟರ್‌’ ರಂಜನ್‌ ಗೊಗೋಯ್‌ ಎಂದು ಕರೆಯಬೇಕೆಂದು ನಾನು ಬಯಸುತ್ತೇನೆ. ರಾಜ್ಯಸಭೆಗೆ ನಾನು ಪ್ರಮಾಣ ವಚನ ಸ್ವೀಕರಿಸಿದ್ದು, “ಶ್ರೀ’ ರಂಜನ್‌ ಗೊಗೋಯ್‌ ಎಂದೇ ಹೊರತು, “ಜಸ್ಟಿಸ್‌’ ರಂಜನ್‌ ಗೊಗೋಯ್‌ ಎಂದಲ್ಲ.

ನೀವು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿ ಪಡೆದು ನಾಲ್ಕೇ ತಿಂಗಳಾಗಿತ್ತು. ಇಷ್ಟು ಬೇಗನೇ ರಾಜ್ಯಸಭೆಯ ಸದಸ್ಯರಾಗಬೇಕಿತ್ತೇ?
-ನಿಮ್ಮ ಪ್ರಶ್ನೆಯಲ್ಲಿ ಎರಡು ಸಂಗತಿಗಳು ಕಾಣಿಸುತ್ತಿವೆ. ಒಂದು, ಏಕೆ ನಾನು ರಾಜ್ಯಸಭೆಯ ಸದಸ್ಯನಾದೆ ಎನ್ನುವುದು, ಎರಡನೆಯದು, ಕೂಲಿಂಗ್‌ ಪೀರಿಯಡ್‌(ಒಂದಿಷ್ಟು ಬಿಡುವು) ಇರಬೇಕಿತ್ತೇ ಎನ್ನುವುದು. ಏಕೆ ನಾನು ಈ ಹುದ್ದೆಯನ್ನು ಸ್ವೀಕರಿಸಿದೆ ಎನ್ನುವ ನಿಮ್ಮ ಪ್ರಶ್ನೆಗೆ ನನ್ನ ಉತ್ತರವಿಷ್ಟೆ: ವೈ ನಾಟ್‌? ಏಕೆ ಆಗಬಾರದು? ರಾಷ್ಟ್ರಪತಿಗಳು ಮತ್ತು ದೇಶ, ನನ್ನ ಸೇವೆಯನ್ನು ಬಯಸಿದಾಗ ಅದನ್ನು ನಿರಾಕರಿಸಬೇಕೇ?

ಆದರೆ ಸರ್‌, 2019ರ ಮಾರ್ಚ್‌ ತಿಂಗಳಲ್ಲಿ ಖುದ್ದು ನೀವೇ ಒಂದು ಮಾತು ಹೇಳಿದ್ದಿರಿ. “ನಿವೃತ್ತಿ ನಂತರದ ಉದ್ಯೋಗ ನೇಮಕಾತಿಯು, ಸ್ವತಂತ್ರ ನ್ಯಾಯಾಂಗದ ಮೇಲಾಗುವ ಗಾಯ’ ಎಂದು! ಈಗ ನೀವು ರಾಜ್ಯಸಭೆಗೆ ನೇಮಕವಾಗಿದ್ದನ್ನು ನೋಡಿ ನಿಮ್ಮ ಮಾಜಿ ಸಹೋದ್ಯೋಗಿ ಜಸ್ಟಿಸ್‌ ಲೋಕೂರ್‌ ಅವರು “ನ್ಯಾಯಾಂಗದ ಕೊನೆಯ ಭದ್ರಕೋಟೆ ಕುಸಿದುಬಿದ್ದಿದೆ’ ಎಂದಿದ್ದಾರೆ. ನೀವೇನಂತೀರಿ?
-ನೀವು ಈ ಪ್ರಶ್ನೆ ಕೇಳಿದ್ದು ಒಳ್ಳೆಯದಾಯಿತು. ಈಗ ನೀವೇ ಹೇಳಿ, ರಾಜ್ಯಸಭೆಯ ಸದಸ್ಯನಾಗುವುದು ಒಂದು ಜಾಬ್‌(ಉದ್ಯೋಗ) ಎಂದು ನೀವು ಭಾವಿಸುತ್ತೀರಾ? ಅಥವಾ ಅದನ್ನು ನಿವೃತ್ತಿ ನಂತರದ ಪುನರ್ವಸತಿ ಎಂದು ಭಾವಿಸಿದ್ದೀರಾ? ನಾನು ಅಂದು ಆ ರೀತಿ ಹೇಳಿದ್ದು, ನ್ಯಾಯಮಂಡಳಿಗಳಿಗೆ ಸಂಬಂಧಿಸಿದ ತೀರ್ಪೊಂದರ ಹಿನ್ನೆಲೆಯಲ್ಲಿ. ಅದು ಉದ್ಯೋಗವಲ್ಲವೇ?

ನೀವು ಪ್ರಮಾಣವಚನ ಸ್ವೀಕರಿಸುವ ವೇಳೆಯಲ್ಲಿ ಪ್ರತಿಪಕ್ಷಗಳ ಕೆಲ ನಾಯಕರು ಎದ್ದು ಹೊರನಡೆದರು. ಕೆಲವರು ಧಿಕ್ಕಾರವನ್ನೂ ಕೂಗಿದರು..ಇದಕ್ಕೆ ನಿಮ್ಮ ಪ್ರತಿಕ್ರಿಯೆಯೇನು?
-ಏನೂ ಪ್ರತಿಕ್ರಿಯೆ ಇಲ್ಲ. ಇದೆಲ್ಲ ನಿರೀಕ್ಷಿತವೇ ಆಗಿತ್ತು. ಪ್ರಮಾಣವಚನಕ್ಕೂ ಒಂದೆರಡು ದಿನಗಳ ಹಿಂದಿನಿಂದ ನಡೆದ ಘಟನಾವಳಿಗಳನ್ನೆಲ್ಲ ನೋಡಿದಾಗ, ಇವರೆಲ್ಲ ಖಂಡಿತ ವಾಕ್‌ಔಟ್‌ ಮಾಡುತ್ತಾರೆ ಎನ್ನುವುದು ನನಗೆ ಖಚಿತವಿತ್ತು. ಪ್ರತಿಪಕ್ಷಗಳೆಂದ ಮೇಲೆ ವಾಕ್‌ಔಟ್‌-ವಾಕಿನ್‌ಗಳು ಮಾಡುತ್ತಲೇ ಇರುತ್ತವೆ.

ಪ್ರತಿಪಕ್ಷಗಳೆಂದಷ್ಟೇ ಅಲ್ಲ, ಉಳಿದ ವಲಯಗಳಿಂದಲೂ ಒಂದು ವಿಚಾರಕ್ಕೆ ಟೀಕೆ ವ್ಯಕ್ತವಾಗುತ್ತಿದೆ. ನೀವು ನಿಮ್ಮ ಹಲವು ತೀರ್ಪುಗಳ ಮೂಲಕ ನರೇಂದ್ರ ಮೋದಿ ಸರ್ಕಾರಕ್ಕೆ ಮಾಡಿಕೊಟ್ಟ ಅನುಕೂಲಕ್ಕೆ ಪ್ರತಿಯಾಗಿ ಈ ಸ್ಥಾನ ದೊರಕಿದೆ ಎನ್ನುವ ಆರೋಪವಿದೆ. ಅಂದರೆ, ರಾಮಜನ್ಮಭೂಮಿ ತೀರ್ಪು, ರಫೇಲ್‌ ಪ್ರಕರಣದ ತೀರ್ಪು, ಆರ್ಟಿಕಲ್‌ 370 ಇತ್ಯಾದಿ…
-ಈ ಹೇಳಿಕೆಗಳೆಲ್ಲ ನ್ಯಾಯಾಂಗ ನಿಂದನೆಯ ವ್ಯಾಪಿಯಲ್ಲಿ ಬರುತ್ತವೇನೋ ಎಂದು ನಾನು ಯೋಚಿಸುತ್ತಿದ್ದೇನೆ. ಏಕೆಂದರೆ, ನಾನು ನಿಮಗೆ ಕೇಳುವುದಿಷ್ಟೆ…ನಾನೊಬ್ಬನೇ ಏಕಾಂಗಿಯಾಗಿ ಆ ತೀರ್ಪುಗಳನ್ನು ಬರೆದಿದ್ದೀನಾ? ಇದೆಲ್ಲ ಏಕವ್ಯಕ್ತಿ ಪ್ರದರ್ಶನವಾಗಿತ್ತಾ? ಹಾಗಿದ್ದರೆ, ನನ್ನೊಡನೆ ಪೀಠದಲ್ಲಿದ್ದ ಇತರೆ ನ್ಯಾಯಮೂರ್ತಿಗಳು ಚರ್ಚೆಯಲ್ಲಿ ಪಾಲ್ಗೊಂಡಿರಲಿಲ್ಲ ಎನ್ನುತ್ತೀರಾ? ಅಯೋಧ್ಯೆ ತೀರ್ಪಿನಲ್ಲಿ ಇನ್ನೂ ನಾಲ್ಕು ನ್ಯಾಯಮೂರ್ತಿಗಳಿದ್ದರು, ಹಾಗಿದ್ದರೆ ಅವರೇನು ಮಾಡುತ್ತಿದ್ದರು? ರಾಜ್ಯಸಭೆಯ ಸದಸ್ಯತ್ವವು ಈ ತೀರ್ಪುಗಳಿಂದಾಗಿ ದೊರಕಿದ ಪ್ರತಿಫ‌ಲ ಎಂದರೆ ಇದಕ್ಕೆ, ಅವರೆಲ್ಲರೂ ಜವಾಬ್ದಾರರು ಎಂದಂತಾಗುತ್ತದೆ. ಹಾಗಿದ್ದರೆ, ಅವರೂ ತಮ್ಮ ನಿವೃತ್ತಿ ನಂತರದ ಲಾಭಗಳನ್ನು ಖಾತ್ರಿಪಡೆಸಿಕೊಂಡಿದ್ದಾರೆ ಎನ್ನುತ್ತಿದ್ದೀರಾ? ಸ್ವಲ್ಪ ತರ್ಕಬದ್ಧವಾಗಿ ಯೋಚಿಸಿ. ಸರ್ಕಾರದ ವಿರುದ್ಧ ಒಂದು ಐದು ತೀರ್ಪುಗಳನ್ನು ನೀಡಿದರಷ್ಟೇ ಒಬ್ಬರು ರಾಜ್ಯಸಭೆಗೆ ನೇಮಕವಾಗಲು ಅರ್ಹರಾಗುತ್ತಾರೆ ಎಂದು ನೀವು ಹೇಳುತ್ತಿದ್ದೀರೇನು? ಅಥವಾ ತೀರ್ಪುಗಳನ್ನು ನೀಡಿ, ಅವು ಅಂತಿಮವಾಗಿ ಸರ್ಕಾರದ ಪರವಾಗಿ ತಿರುಗಿದರೆ, ಅವರು ರಾಜ್ಯಸಭೆಗೆ ಅನರ್ಹರಾಗಬೇಕೇನು? ಕಮಾನ್‌, ಇದು ಟಿuಜಿಛ ಟrಟ ಟಿuಟ ಆಗಿದ್ದರೆ ರಾಜ್ಯಸಭಾ ಸ್ಥಾನವೇ ಏಕೆ?

ಇದು ಅಂಥ ಲಾಭದಾಯಕ ಆಫ‌ರ್‌ ಅಲ್ಲ ಎಂದೂ ನೀವು ಒಪ್ಪಿಕೊಳ್ಳುತ್ತಿದ್ದೀರಿ. ಹಾಗಿದ್ದರೆ, ಶೀಘ್ರದಲ್ಲೇ ನಿಮಗೆ ಸಚಿವಸ್ಥಾನ ಸಿಗಬಹುದೇ?
-ನಾನು ಜ್ಯೋತಿಷಿ ಅಲ್ಲ. ಆದರೆ ಇಷ್ಟಂತೂ ಹೇಳಬಲ್ಲೇ- ನಾನು ಚಿಕ್ಕವಯಸ್ಸಿನಿಂದಲೇ ನನ್ನ ಕುಟುಂಬದಲ್ಲೇ ಸಚಿವರಾದವರನ್ನು ನೋಡಿದ್ದೇನೆ. ಖಂಡಿತ ನನಗೆ ಸಚಿವನಾಗಬೇಕು ಎನ್ನುವ ಗುರಿ ಇಲ್ಲ,

ಆಫ‌ರ್‌ ಬಂದರೆ ನಿರಾಕರಿಸುತ್ತೀರಾ?
-ಮೊದಲು ಬರಲಿ ಬಿಡಿ

ಬಂದರೆ, ನಿರಾಕರಿಸುವುದಿಲ್ಲ ಎಂದಾಯಿತು…
-ನಿರಾಕರಿಸುತ್ತೇನೆ ಎಂದು ಹೇಳುತ್ತಿದ್ದೇನಲ್ಲ. ಆ ಆಫ‌ರ್‌ ಬರುತ್ತದೆ ಎನ್ನುವುದನ್ನೇ ನಾನು ನಿರೀಕ್ಷಿಸುವುದಿಲ್ಲ.

ರಾಜ್ಯಸಭೆಗೆ ನೇಮಕವನ್ನು ಒಪ್ಪಿಕೊಳ್ಳುವ ಮೂಲಕ ನೀವು ನ್ಯಾಯಾಂಗ ಸ್ವಾತಂತ್ರ್ಯದ ಉದಾತ್ತ ತತ್ವಗಳು ಮತ್ತು ನಿಷ್ಪಕ್ಷಪಾತತೆಯೊಂದಿಗೆ ರಾಜಿ ಮಾಡಿಕೊಂಡಿದ್ದೀರಿ ಎಂದು ಜಸ್ಟಿಸ್‌ ಕುರಿಯನ್‌ ಜೋಸೆಫ್ ಅಭಿಪ್ರಾಯ ಪಟ್ಟಿದ್ದಾರೆ. ಏನನ್ನುತ್ತೀರಿ?
-ನಾನು ಆ ಹೇಳಿಕೆಯನ್ನು ಓದಿದ್ದೇನೆ. ಈ ವಿಚಾರದಲ್ಲಿ ಯೋಚಿಸಿದ್ದೇನೆ-ರಾಜ್ಯಸಭೆಯಲ್ಲಿ ಭಾಗವಹಿಸುವುದು ಅದ್ಹೇಗೆ ನ್ಯಾಯಾಂಗದ ಸ್ವಾತಂತ್ರ್ಯದ ಉದಾತ್ತ ತತ್ವಗಳೊಂದಿಗೆ ರಾಜಿ ಮಾಡಿಕೊಂಡಂತಾಗುತ್ತದೆ? ದಯವಿಟ್ಟೂ ನನಗೆ ನೀವು ವಿವರಿಸಿ.

ಹಾಗಲ್ಲ ಸರ್‌, ನೀವು ರಾಜ್ಯಸಭೆ ಸದಸ್ಯರಾಗಬಾರದು ಎಂದು ಯಾವ ಕಾನೂನೂ ನಿಷೇಧಿಸುವುದಿಲ್ಲ. ಆದರೆ ಈ ವಿಷಯದಲ್ಲಿ ಕೆಲವು ನೈತಿಕ ವಿಧಾನ ಎನ್ನುವುದಂತೂ ಇರುತ್ತದಲ್ಲ. ಸತ್ಯವೇನೆಂದರೆ, ನಿವೃತ್ತಿಯಾದ ನಾಲ್ಕೇ ತಿಂಗಳಿಗೇ ಈ ಸ್ಥಾನಕ್ಕೆ ಬಂದಿದ್ದೀರಿ. ನೀವು ಅತ್ಯಂತ ಬಲಿಷ್ಠ ಸ್ಥಾನದಲ್ಲಿ ಇದ್ದವರು. ಹೀಗಾಗಿ, ಈ ನೇಮಕಾತಿಯನ್ನು ಬೇರೆಯವರು, quid pro quo(ಪ್ರತಿಫ‌ಲ) ಎಂದೇ ತಪ್ಪಾಗಿ ಗ್ರಹಿಸಬಹುದಲ್ಲ?
-ನಿವೃತ್ತಿ ಪಡೆದ ನಾಲ್ಕು ತಿಂಗಳ ನಂತರ ನೇಮಕವಾಗುವುದು ಸರಿಯಲ್ಲ, ಆದರೆ 12 ತಿಂಗಳ ನಂತರ ನೇಮಕವಾದರೆ ಸ್ವೀಕಾರಾರ್ಹವೇ?!

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.