ಸಾಮಾನ್ಯರಿಗೂ 3 ವರ್ಷದ ಮಟ್ಟಿಗೆ ಸೈನಿಕರಾಗುವ ಅವಕಾಶ
Team Udayavani, May 13, 2020, 7:40 PM IST
ಸಾಂದರ್ಭಿಕ ಚಿತ್ರ.
ನವದೆಹಲಿ: ಭಾರತೀಯ ಸೇನೆಯು, ಸಾಮಾನ್ಯ ನಾಗರಿಕನಿಗೂ “ಪ್ರವಾಸದ ಕರ್ತವ್ಯ’ (ಟೂರ್ ಆಫ್ ಡ್ಯೂಟಿ ) ಹೆಸರಿನಲ್ಲಿ 3 ವರ್ಷದ ಮಟ್ಟಿಗೆ ಸೈನಿಕರಾಗುವ ಅವಕಾಶವನ್ನು ಕಲ್ಪಿಸುತ್ತಿದೆ.
ಈ ಯೋಜನೆ ಇನ್ನೂ ಚರ್ಚೆಯ ಹಂತದಲ್ಲಿದ್ದು, ದೇಶಸೇವೆ ಮಾಡಲು ಉತ್ಸುಕರಾಗಿರುವ ನಾಗರಿಕರಿಗೆ ಸೇನೆ ಬಾಗಿಲು ತೆರೆಯಲಿದೆ. ಸೇನೆಯು ಅತ್ಯುತ್ತಮ ಪ್ರತಿಭೆಗಳನ್ನು ಸೆಳೆಯಲು ಮುಂದಾಗಿದ್ದು, ಕಿರು ಸೇವಾ ಆಯೋಗವನ್ನು ರಚಿಸಿದೆ. ಅದರಂತೆ, ನಾಗರಿಕರಲ್ಲಿ ಅರ್ಹರು ಗರಿಷ್ಠ 10 ವರ್ಷಗಳವರೆಗೂ ಸೇವೆ ಸಲ್ಲಿಸಬಹುದಾಗಿದೆ. ಭಾರತೀಯ ಸೇನೆಯಲ್ಲಿ ಶೇ.14ರಷ್ಟು ಕೇಡರ್ ಅಧಿಕಾರಿಗಳ ಕೊರತೆ ಇದ್ದು, ಅವುಗಳ ಭರ್ತಿಗೂ ಚಿಂತಿಸಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ