ಕ್ವಾರಂಟೈನ್‌ಗೆ ನಕಾರ: ಕೆಲವರು ವಾಪಸ್‌


Team Udayavani, May 15, 2020, 5:47 AM IST

kanunu krama

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲಿನಲ್ಲಿ ಆಗಮಿಸಿದ ಸುಮಾರು 800 ಮಂದಿ ಪ್ರಯಾಣಿಕರ ಪೈಕಿ ಸುಮಾರು 150 ಮಂದಿ ಕ್ವಾರಂಟೈನ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲೇ ಕೆಲಹೊತ್ತು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು. ದೆಹಲಿಯಿಂದ ಬೆಂಗಳೂರಿಗೆ 1,068 ಮಂದಿ ಆಸನಗಳನ್ನು ಕಾಯ್ದಿರಿಸಿದ್ದರು.

ಆದರೆ, ಈ ಪೈಕಿ 800 ಮಂದಿ ಬೆಂಗಳೂರಿಗೆ ಬಂದಿದ್ದು, ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಪ್ರತಿಯೊಬ್ಬರ ವೈದ್ಯಕೀಯ ತಪಾಸಣೆ ನಡೆಸಿ 550 ಮಂದಿ ಸ್ವಯಂಪ್ರೇರಿತವಾಗಿ ಕ್ವಾರಂಟೈನ್‌ಗೆ ಹೋಗಲು ನಿರ್ಧರಿಸಿ ಸರ್ಕಾರಿ ಬಸ್‌ ಹತ್ತಿದ್ದರು. ಆದರೆ, ಸುಮಾರು 150 ಮಂದಿ ಪ್ರಯಾಣಿಕರು ಯಾವುದೇ ಕಾರಣಕ್ಕೂ  ಕ್ವಾರಂಟೈನ್‌ಗೆ ಹೋಗುವುದಿಲ್ಲ ಎಂದು ಪಟ್ಟುಹಿಡಿದು ಸ್ಥಳದಲ್ಲೇ ಪ್ರತಿಭಟನೆ ನಡೆಸಿ, ಬಿಬಿಎಂಪಿ, ಆರೋಗ್ಯಾಧಿಕಾರಿಗಳು, ಆರ್‌ ಪಿಎಫ್‌ ಅಧಿಕಾರಿಗಳ ಜತೆ ವಾಗ್ವಾದಕ್ಕೀಳಿದರು. ಕೆಲ ಮಹಿಳೆಯರು, ಕ್ವಾರಂಟೈನ್‌ ಮಾಡಿದರೆ ಮಕ್ಕಳ  ಪಾಲನೆಗೆ ತೊಂದರೆ ಆಗುತ್ತದೆ. ಜೀವನ ಕಷ್ಟವಾಗುತ್ತದೆ ಎಂದೆಲ್ಲ ಜಗಳ ಆರಂಭಿಸಿದರು.

ಇದರಿಂದ ಕೆಲಹೊತ್ತು ಗೊಂದಲದ ವಾತಾವರಣ ಉಂಟಾಯಿತು. ರೈಲ್ವೆ ವಿಭಾಗದ ಐಜಿಪಿ ರೂಪಾ ಡಿ. ಮೌದ್ಗಿಲ್‌, ಸ್ಥಳಕ್ಕಾಗಮಿಸಿ ಮನವೊಲಿಸಲು ಯತ್ನಿಸಿ  ದಾಗ ಪ್ರಾರಂಭದಲ್ಲಿ ಕೆಲವರು ಒಪ್ಪಿಕೊಳ್ಳಲಿಲ್ಲ. ಇನ್ನು ಕೆಲವರು ಕ್ವಾರಂಟೈನ್‌ ಗೆ ಒಳಗಾದರೆ ಏನೇಲ್ಲ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಗೋಳಾಡಿದರು. ಮತ್ತಷ್ಟು ಮಂದಿ ಕ್ವಾರಂಟೈನ್‌ ಬದಲು ತಮಗೆ  ತಮ್ಮ ಊರುಗಳಿಗೆ ವಾಪಸ್‌ ಕಳುಹಿಸಿಕೊಡಿ ಎಂದು ಮನವಿ ಮಾಡಿದರು. 150 ಮಂದಿ ಪ್ರತಿಭಟನಾಕಾರರನ್ನು ಪ್ರತ್ಯೇಕವಾಗಿ ಮನವೊಲಿಕೆ ಯತ್ನದಲ್ಲಿ ರೂಪಾ ಮೌದ್ಗಿಲ್‌ ಯಶಸ್ವಿಯಾಗಿದ್ದು, ಈ ಪೈಕಿ 105 ಕ್ವಾರಂಟೈನ್‌ ಗೆ  ತೆರಳಿದರು.

 19 ಮಂದಿ ವಾಪಸ್‌: ಪ್ರಯಾಣಿಕರ ಪೈಕಿ 19 ಮಂದಿ ಕ್ವಾರಂಟೈನ್‌ ಗೆ ಒಪ್ಪದ್ದರಿಂದ ಅವರನ್ನು ಅವರ ಖರ್ಚಿ  ನಲ್ಲೇ ಊರುಗಳಿಗೆ ವಾಪಸ್‌ ತೆರಳಲು ಮುಂದಾದರು. ಈ ಕುರಿತು ರೈಲ್ವೆ ವಿಭಾಗದ ಮುಖ್ಯಸ್ಥರ ಜತೆ ಚರ್ಚಿಸಿದಾಗ ಅವರು  ಇಲಾಖೆಯ ಸೂಚನೆಯಂತೆ ಇಂತಿಷ್ಟೇ ಬೋಗಿಗಳ ಅಳವಡಿಕೆ ಆದೇಶಿಸಲಾಗಿದೆ. ಹೆಚ್ಚುವರಿ ಬೇಕಾದಲ್ಲಿ ಪತ್ರಮುಖೇನ ಕೋರಿ ಸಲ್ಲಿಸುವಂತೆ ಸೂಚಿಸಿದರು.

ಹೀಗಾಗಿ ಸ್ಥಳದಲ್ಲೇ ತಮ್ಮ ಹೆಸರಿ ನಲ್ಲಿ ಪತ್ರ ಬರೆದು ಅಧಿಕಾರಿಗಳಿಗೆ ನೀಡಲಾಯಿತು. ಬಳಿಕ 19 ಮಂದಿ ಪ್ರಯಾಣಿಕರನ್ನು ರಾಜಧಾನಿ ಎಕÕ…ಪ್ರಸ್‌ ರೈಲಿನಲ್ಲಿ ಅವರ ಇಚ್ಚೆಯಂತೆ ಊರುಗಳಿಗೆ ಕಳುಹಿಸಲಾಗಿದೆ. ಈ ಪೈಕಿ ಕೆಲವರು ದೆಹಲಿ, ಸಿಕಂದ್ರ ಬಾದ್‌ -ಹೈದ್ರಾಬಾದ್‌, ಧರ್ಮಾವರಂ ಪ್ರಯಾಣಿಕರು ಇದ್ದಾರೆ. ಕಾನೂನು ಪ್ರಕಾರವೇ ಎಲ್ಲರನ್ನು ವಾಪಸ್‌ ಕಳುಹಿಸಲಾಗಿದೆ ಎಂದು ರೈಲ್ವೆ ವಿಭಾಗದ ಐಜಿಪಿ ರೂಪಾ ಮೌದ್ಗಿಲ್‌ “ಉದಯವಾಣಿ’ಗೆ ಹೇಳಿದರು.

ಕ್ವಾರಂಟೈನ್‌ ಕೇಂದ್ರ ಸ್ಥಾಪನೆಗೆ ವಿರೋಧ: ನಾಗರಬಾವಿಯ ರಾಮಕೃಷ್ಣ ಬಡಾವಣೆಯ ಸಾಮಾಜಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯವನ್ನು ಕ್ವಾರಂಟೈನ್‌ ಕೇಂದ್ರವಾಗಿ ಪರಿವರ್ತನೆ ಮಾಡುವುದಕ್ಕೆ ಬಡಾವಣೆಯ ಜನ ವಿರೋಧ  ವ್ಯಕ್ತಪಡಿಸಿದ್ದು, ಗುರುವಾರ ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ ಕೊರೊನಾ ಸೋಂಕು ದೃಢಪಟ್ಟವರು ಅಥವಾ ಕ್ವಾರಂಟೈನ್‌ನಲ್ಲಿ ಆಗಲಿ ಯಾರು ಇಲ್ಲ. ಇದು ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದು, ಇಲ್ಲಿ ಕ್ವಾರಂಟೈನ್‌ ಕೇಂದ್ರ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಜನ ಪಟ್ಟುಹಿಡಿದರು.

ಈ ವೇಳೆ ಸ್ಥಳಕ್ಕೆ ಬಂದ ಜ್ಞಾನ ಭಾರತಿ ನಗರ ಪೊಲೀಸರು ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್‌ ಮಾಡುವ ಬಗ್ಗೆ ಇನ್ನು ಅಂತಿಮ ತೀರ್ಮಾನ  ತೆಗೆದುಕೊಂಡಿಲ್ಲ. ಇಲ್ಲಿ ಕ್ವಾರಂಟೈನ್‌ ಮಾಡಲು ಮುಂದಾದರೆ ಬೇರೆ ಕಡೆ ಸ್ಥಳಾಂತರ ಮಾಡುತ್ತೇವೆ ಎಂದು ಸಾರ್ವಜನಿಕರ ಮನವೊಲಿಸಿದರು. ಹೊರ ರಾಜ್ಯದಿಂದ ಬರುವವರನ್ನು ನಗರದಲ್ಲಿ 14ದಿನಗಳ ಕಾಲ ಕ್ವಾರಂಟೈನ್‌ ಮಾಡಲು  ಸಮುದಾಯ ಭವನ, ಹಾಸ್ಟೆಲ್‌ ಮತ್ತು ಪೇಯಿಂಗ್‌ ಗೆಸ್ಟ್‌ (ಪಿಜಿ) ಗಳನ್ನು ಹುಡುಕಿ ಇಲ್ಲಿ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತ ಮತ್ತು ಬಿಬಿಎಂಪಿ ಸಿದಟಛಿತೆ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ವಿರೋಧಿಸಿದರೆ ಕಾನೂನು ಕ್ರಮ: ನಗರಕ್ಕೆ ಹೊರ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕು. ಇದಕ್ಕೆ ವಿರೋಧಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಎಚ್ಚರಿಸಿದ್ದಾರೆ. ಗುರುವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ದವರಲ್ಲಿ ಬಹುತೇಕರು ರಾಜ್ಯ ಸರ್ಕಾರದ ನಿರ್ದೇ ಶನದಂತೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಆದರೆ, ಕೆಲವರು ಮನೆಗೆ ಕಳುಹಿಸಿ, ಕ್ವಾರಂಟೈನ್‌ ಮಾಹಿತಿ ನೀಡಿಲ್ಲ ಎಂದು ದೂರಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆಯನ್ನೂ ಮಾಡಿದ್ದಾರೆ. ಮನೆಗೆ ಹೋಗುವ ಆಸೆಯಿಂದ ಸಮಾಜದ ಹಿತ ಮರೆತು ವರ್ತಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಟಾಪ್ ನ್ಯೂಸ್

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.