ದುಬಾೖಯಿಂದ ಇಂದು ಎರಡನೇ ವಿಮಾನ

35 ಗರ್ಭಿಣಿಯರ ಸಹಿತ 173 ಮಂದಿ ಮಂಗಳೂರಿಗೆ ಆಗಮನ

Team Udayavani, May 18, 2020, 6:45 AM IST

ದುಬಾೖಯಿಂದ ಇಂದು ಎರಡನೇ ವಿಮಾನ

ಮಂಗಳೂರು: ಕೇಂದ್ರ ಸರಕಾರದ “ವಂದೇ ಭಾರತ’ ಕಾರ್ಯಾಚರಣೆಯಂತೆ ದುಬಾೖಯಿಂದ ಎರಡನೇ ವಿಮಾನ ಮೇ 18ರಂದು ಸಂಜೆ 6.30ಕ್ಕೆ ಮಂಗಳೂರಿಗೆ ಆಗಮಿಸಲಿದೆ.

ಲಾಕ್‌ಡೌನ್‌ನಿಂದಾಗಿ ದುಬಾೖಯಲ್ಲಿ ಸಿಲುಕಿ ಕೊಂಡಿರುವ 35 ಗರ್ಭಿಣಿಯರ ಸಹಿತ 173 ಮಂದಿ ಪ್ರಯಾಣಿಕರನ್ನು ಈ ವಿಮಾನ ಕರೆತರಲಿದೆ.

ಮೇ 12ರಂದು ದುಬಾೖಯಿಂದ ಮಂಗಳೂರಿಗೆ 177 ಪ್ರಯಾಣಿಕರಿರುವ ಮೊದಲ ವಿಮಾನ ಆಗಮಿಸಿತ್ತು. ಮಂಗಳೂರಿನಿಂದ ಸೋಮ ವಾರ ಬೆಳಗ್ಗೆ ದುಬಾೖಗೆ ತೆರಳುವ ಏರ್‌ ಇಂಡಿಯಾ ವಿಮಾನವು ಅಪರಾಹ್ನ 3ರ ಸುಮಾರಿಗೆ 95 ಪುರುಷರು ಹಾಗೂ 78 ಮಹಿಳಾ ಪ್ರಯಾಣಿಕರೊಂದಿಗೆ ಹೊರಡಲಿದೆ.

ಪೂರ್ವ ತಯಾರಿ
ಮೇ 12ರಂದು ದುಬಾೖಯಿಂದ ಆಗ ಮಿಸಿದ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಶನಿವಾರ ಖುದ್ದು ನಿಲ್ದಾಣಕ್ಕೆ ತೆರಳಿ ಸೋಮವಾರ ಆಗಮಿಸುವ ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜತೆಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ರವಿವಾರ ಸಂಜೆ ಮಂಗಳೂರಿನಲ್ಲಿ ಜಿಲ್ಲಾಡಳಿತದ ಜತೆಗೆ ಸಭೆ ನಡೆಸಿ ಎಲ್ಲ ಸಿದ್ಧತೆ ನಡೆಸುವಂತೆ ಸೂಚಿಸಿದ್ದಾರೆ.

ಪ್ರಯಾಣಿಕರ ಪೈಕಿ ದ.ಕ. ಜಿಲ್ಲೆಯವರಿಗೆ ಮಂಗಳೂರಿನಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದ್ದು, ಉಡುಪಿ ಹಾಗೂ ಇತರ ಜಿಲ್ಲೆಗಳ ಪ್ರಯಾಣಿಕರಿಗೆ ಆಯಾಯ ಜಿಲ್ಲೆಗಳಲ್ಲಿ ಕ್ವಾರಂಟೈನ್‌ ಮಾಡಲು ಆಯಾ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಲಿದೆ.

10 ಹೊಟೇಲ್‌ ನಿಗದಿ
ಹಣ ಪಾವತಿಸುವ ಷರತ್ತಿಗೊಳಪಟ್ಟು ಹೊಟೇಲುಗಳಲ್ಲಿ ಕ್ವಾರಂಟೈನ್‌ ಆಗಲು ಒಪ್ಪಿಗೆ ಪತ್ರ (ಅಂಡರ್‌ಟೇಕಿಂಗ್‌) ನೀಡಿರುವವರಿಗಾಗಿ ನಗರದಲ್ಲಿ 10 ಹೊಟೇಲ್ ‌ಗಳನ್ನು ಜಿಲ್ಲಾಡಳಿತ ಕಾದಿರಿಸಿದೆ. ದಿನಕ್ಕೆ ಕನಿಷ್ಠ 1,000 ರೂ.ಗಳಿಂದ ಗರಿಷ್ಠ 5,400 ರೂ. ವರೆಗಿನ ಬಾಡಿಗೆ ಇರುವ ಕೊಠಡಿಗಳು ಇರಲಿವೆ. ಅವುಗಳಿಗೆ ನೋಡೆಲ್‌ ಅಧಿಕಾರಿ ಗಳನ್ನು ನಿಯೋಜಿಸಲಾಗಿದೆ. ಹೊಟೇಲ್‌ ವಾಸ್ತವ್ಯಕ್ಕೆ ಒಪ್ಪಿಗೆ ಇಲ್ಲದವರನ್ನು ಸರಕಾರಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ಗೆ ಅವಕಾಶ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಆನ್‌ಲೈನ್‌ ಬುಕ್ಕಿಂಗ್‌, ಊಟೋಪಚಾರ
ಪ್ರಯಾಣಿಕರ ವಿವರಗಳನ್ನು ಮೊದಲೇ ಪಡೆದಿರುವ ಜಿಲ್ಲಾಡಳಿತ ಆನ್‌ಲೈನ್‌ ಮೂಲಕ ಹೊಟೇಲ್‌ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿದೆ. ಹಿಂದಿನ ಸಲದಂತೆ ಪ್ರಯಾಣಿಕರು ನಿಲ್ದಾಣದಲ್ಲಿ ಕಾಯಬೇಕಾದ ಪ್ರಮೇಯ ಕಡಿಮೆ. ವಿಮಾನ ಬಂದ ತತ್‌ಕ್ಷಣ ಎಲ್ಲ ಪ್ರಯಾಣಿಕರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ತಪಾಸಣೆಯ ಬಳಿಕ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಕಲ್ಪಿಸಲಾಗಿದೆ. ಏರ್‌ಪೋರ್ಟ್‌, ಏರ್‌ಲೈನ್ಸ್‌ ಹಾಗೂ ಭದ್ರತಾ ಪಡೆಯವರ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.

2 ಮಾದರಿ ಕ್ವಾರಂಟೈನ್‌
ಪ್ರಯಾಣಿಕರನ್ನು “ಎ’ ಮತ್ತು “ಬಿ’ ಎಂದು 2 ವಿಭಾಗ ಮಾಡಲಾಗಿದೆ. ಕೆಮ್ಮು, ಜ್ವರ, ನೆಗಡಿ ಇರುವವರು “ಎ’ ವಿಭಾಗದವರಾಗಿದ್ದು (ಇತರ ಜಿಲ್ಲೆಯವರು ಸೇರಿದಂತೆ) ಅವರನ್ನು ವೆನ್ಲಾಕ್‌ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆಯೊಂದಿಗೆ 14 ದಿನಗಳ ಕ್ವಾರಂಟೈನ್‌ ಮಾಡಲಾಗುತ್ತದೆ. ಯಾವುದೇ ರೋಗ ಲಕ್ಷಣ ಇಲ್ಲದವರು “ಬಿ’ ವಿಭಾಗದವರಾಗಿದ್ದು ಅಂಥವರನ್ನು ಆಯಾಯ ಜಿಲ್ಲೆಗೆ ಜಿಲ್ಲಾಡಳಿತದ ವತಿಯಿಂದಲೇ ಕಳುಹಿಸಿ 14 ದಿನಗಳ ಕ್ವಾರಂಟೈನ್‌ ಮಾಡಲಾಗುತ್ತದೆ.

ಲಗೇಜ್‌ಗೆ ಪ್ರತ್ಯೇಕ ತಂಡ?
ವಿದೇಶದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಹಾಗೂ ವ್ಯವಸ್ಥೆಗಳ ಪರಿಶೀಲನೆಗಾಗಿ ನಿಲ್ದಾಣದಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್‌ ಮಾಡಲಾಗಿದೆ. ಸಾರ್ವಜನಿಕರು/ಪ್ರಯಾಣಿಕರ ಕುಟುಂಬಸ್ಥ ರಿಗೆ ನಿಲ್ದಾಣಕ್ಕಾಗಲೀ ಕ್ವಾರಂಟೈನ್‌ ಕೇಂದ್ರಗಳಿ ಗಾಗಲೀ ಬರಲು ಅವಕಾಶ ಇಲ್ಲ. ಲಗೇಜ್‌ಗಳನ್ನು ಕೊಂಡೊಯ್ಯಲು ಜಿಲ್ಲಾಡ ಳಿತದ ವತಿಯಿಂದ ಕೆಲವರನ್ನು ಆರೋಗ್ಯ ಸುರಕ್ಷಾ ಕವಚದೊಂದಿಗೆ ನೇಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕ್ವಾರಂಟೈನ್‌ ಕೇಂದ್ರಗಳಿಗೆ ಕರೆದೊಯ್ಯಲು ಬಸ್‌ ವ್ಯವಸ್ಥೆ ಮಾಡಲಾಗಿದೆ.

ದುಬಾೖಯಿಂದ ಸೋಮವಾರ ವಿಮಾನ ಆಗಮಿಸಲಿದೆ. ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರ ವಿವರಗಳನ್ನು ಈಗಾಗಲೇ ಪಡೆದುಕೊಂಡಿದ್ದೇವೆ. ಕ್ವಾರಂಟೈನ್‌ಗೆ ಆನ್‌ಲೈನ್‌ ಬುಕ್ಕಿಂಗ್‌ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ವಿಮಾನ ನಿಲ್ದಾಣದಲ್ಲಿ ಮಾಡಲಾಗಿದೆ.
– ಸಿಂಧೂ ಬಿ. ರೂಪೇಶ್‌, ಜಿಲ್ಲಾಧಿಕಾರಿ, ದ.ಕ.

ಟಾಪ್ ನ್ಯೂಸ್

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.