ಸೀಮಿತ ವಿದೇಶಿಗರಿಗೆ ಮಾತ್ರ ಭಾರತ ಭೇಟಿಗೆ ಅನುಮತಿ
Team Udayavani, Jun 14, 2020, 5:50 AM IST
ಹೊಸದಿಲ್ಲಿ : ಕೋವಿಡ್-19 ಹಿನ್ನೆಲೆಯಲ್ಲಿ ವಿದೇಶಿಯರು ಭಾರತಕ್ಕೆ ಆಗಮಿಸುವುದಕ್ಕೆ ನಿರ್ಬಂಧ ವಿಧಿಸಿದ್ದ ಕೇಂದ್ರ ಸರಕಾರ, ಈಗ ಕೆಲವು ವರ್ಗದ ವಿದೇಶಿಯರಿಗೆ ಭಾರತಕ್ಕೆ ಆಗಮಿಸುವುದಕ್ಕೆ ಅನುಮತಿ ನೀಡಿದೆ.
ವಿದೇಶದಲ್ಲಿರುವ ಅಪ್ರಾಪ್ತ ಮಕ್ಕಳ ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕ ಅಥವಾ ಸಾಗರೋತ್ತರ ಭಾರತೀಯ ರಾಗಿದ್ದರೆ, ಭಾರತದ ವ್ಯಕ್ತಿಯನ್ನು ಮದುವೆ ಯಾದ ವಿದೇಶಿಯರು, ಭಾರತದ ಪಾಸ್ಪೋರ್ಟ್ ಹೊಂದಿರುವ ಅಥವಾ ಸಾಗರೋತ್ತರ ಭಾರತೀಯರಾಗಿರುವ ಅಪ್ರಾಪ್ತ ಮಕ್ಕಳ ವಿದೇಶಿ ಪೋಷಕರು ಸಿಂಗಲ್ ಪೇರೆಂಟ್ ಆಗಿದ್ದರೆ ಅಂತವರಿಗೆ ಭಾರತಕ್ಕೆ ಆಗಮಿಸಲು ಅನುಮತಿ ನೀಡಲಾಗಿದೆ. ಅದೇ ರೀತಿ, ವಿದೇಶದ ವಿದ್ಯಾರ್ಥಿಯಾಗಿದ್ದು ಅವರ ಪೋಷಕರಲ್ಲಿ ಒಬ್ಬರಾದರೂ ಭಾರತೀಯರಾಗಿದ್ದರೆ ಅಥವಾ ಸಾಗರೋತ್ತರ ಭಾರತೀಯ ಕಾರ್ಡ್ (ಒಸಿಐ) ಹೊಂದಿದ್ದರೆ ಅಂತವರಿಗೆ ಭಾರತಕ್ಕೆ ಆಗಮಿಸಲು ಅವಕಾಶವಿದೆ.
ಇನ್ನು, ವಿದೇಶಿ ರಾಜತಾಂತ್ರಿಕರ ಅವಲಂಬಿತ ಕುಟುಂಬ ಸದಸ್ಯರಿಗೂ ಭಾರತಕ್ಕೆ ಆಗಮಿಸಲು ಅವಕಾಶ ನೀಡ ಲಾಗಿದೆ. ಹಾಗೆಯೇ, ವಿದೇಶಿ ರಾಜತಾಂತ್ರಿಕ ಕಾರ್ಯಾಚರಣೆಗಳು, ರಾಯಭಾರ ಕಚೇರಿಗಳು ಅಥವಾ ಭಾರತದಲ್ಲಿ ಮಾನ್ಯತೆ ಪಡೆದ ಅಂತಾರಾಷ್ಟ್ರಿಯ ಸಂಸ್ಥೆಗಳ ಅಧಿಕೃತ ಸೇವಾ ಪಾಸ್ಪೋರ್ಟ್ ಹೊಂದಿರುವ ಸೇವಾ ಸಿಬ್ಬಂದಿಗಳು ಈಗ ಭಾರತಕ್ಕೆ ಬರಬಹುದು.
ಭಾರತಕ್ಕೆ ಬರಲು ಇಚ್ಛಿಸುವ ಈ ವರ್ಗದ ವಿದೇಶಿಯರು ಭಾರತೀಯ ರಾಯಭಾರ ಕಚೇರಿಯಿಂದ ಹೊಸ ವೀಸಾ ಪಡೆದುಕೊಳ್ಳಬೇಕು. ವಿದೇಶದಲ್ಲಿರುವ ಭಾರತೀಯ ರಾಯ ಭಾರ ಕಚೇರಿ ನೀಡುವ ಸೂಕ್ತ ವರ್ಗದ ದೀರ್ಘಾವಧಿಯ ಬಹುಪ್ರವೇಶ ವೀಸಾವನ್ನು ಹೊಂದಿರುವ ವಿದೇಶಿ ಪ್ರಜೆಗಳು ವೀಸಾವನ್ನು ಭಾರತೀಯ ರಾಜ ತಾಂತ್ರಿಕ ಕೇಂದ್ರಗಳಿಂದ ಮರು ಮೌಲ್ಯ ಮಾಪನ ಮಾಡಿಸಿಕೊಂಡು ಬರ ಬೇಕಾಗು ತ್ತದೆ. ಇವರ ಬಳಿ ಈಗಾಗಲೇ ಎಲೆಕ್ಟ್ರಾನಿಕ್ ವೀಸಾಗಳಿದ್ದರೆ, ಅದರ ಮೂಲಕ ಬರಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
MUST WATCH
ಹೊಸ ಸೇರ್ಪಡೆ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!