ಕೋವಿಡ್‌ ಆರೈಕೆ ಕೇಂದ್ರ ಸ್ಥಳಾಂತರ

Team Udayavani, Jun 28, 2020, 6:00 AM IST

kovid-stalantara

ಬೆಂಗಳೂರು: ನಗರದಲ್ಲಿ ಸೋಂಕಿತರ ಆರೈಕೆ ಕೇಂದ್ರವಾಗಿ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ 308 ಹಾಸಿಗೆ ವ್ಯವಸ್ಥೆಯ ಸಿದ್ಧತೆ ಏಕಾಏಕಿ ಕೋರಮಂಗಲದ ನ್ಯಾಷನಲ್‌ ಗೇಮ್ಸ್‌ ವಿಲೇಜಿಗೆ ಸ್ಥಳಾಂತರ ಮಾಡಲಾಗಿದೆ. ಕೋವಿಡ್‌ 19 ಸೋಂಕಿನ ಲಕ್ಷಣಗಳಿಲ್ಲದ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಕಂಠೀರವ ಒಳಾಂಗಣದಲ್ಲಿ ಸಿದ್ಧತೆ ಪ್ರಾರಂಭಿಸಿತ್ತು.

ಆದರೆ, ರಾಜಕಾರಣಿಯೊಬ್ಬರ ಒತ್ತಡಕ್ಕೆ ಮಣಿದು ದಿಢೀರ್‌ ಆರೈಕೆ ಕೇಂದ್ರ ಬದಲಾಯಿಸಿರುವ ಆರೋಪ ಕೇಳಿ  ಬಂದಿದೆ. ಸೋಂಕಿತರ ಸಂಖ್ಯೆ ನಗರದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕೋವಿಡ್‌ 19 ಸೋಂಕಿತರಿಗೆ ಹಾಸಿಗೆ ಕೊರತೆ ಸೃಷ್ಟಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಪಾಲಿಕೆ ಬಯಲು  ಆಸ್ಪತ್ರೆಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದೇ ನಿಟ್ಟಿನಲ್ಲಿ ಕಂಠೀವರ ಒಳಾಂಗಣ ಸ್ಟೇಡಿಯಂನಲ್ಲಿ ಶನಿವಾರ ಬೆಳಗ್ಗೆ ಕೋವಿಡ್‌ 19 ಆರೈಕೆ ಕೇಂದ್ರಕ್ಕೆ ಬೇಕಾದ ಹಾಸಿಗೆ ಸೇರಿದಂತೆ ಮತ್ತಿತರ ವ್ಯವಸ್ಥೆಯನ್ನು ಬಿಬಿಎಂಪಿ ಪ್ರಾರಂಭಿಸಿತ್ತು.  ಆದರೆ, ಕೆಲವೇ ಗಂಟೆಗಳಲ್ಲಿ ಕಂಠೀರವ ಸ್ಟೇಡಿಯಂ ನಿಂದ ಕೋವಿಡ್‌ 19 ಆರೈಕೆ ಕೇಂದ್ರವನ್ನು ಕೋರಮಂಗಲದ ನ್ಯಾಷನಲ್‌ ಗೇಮ್ಸ್‌ ವಿಲೇಜ್‌ಗೆ ಸ್ಥಳಾಂತರ ಮಾಡಲಾಗಿದೆ. ಪಾಲಿಕೆಯ ಏಕಾಏಕಿ ನಿರ್ಣಯದ ಹಿಂದೆ ರಾಜಕೀಯ  ಹಿತಾಸಕ್ತಿ ಕೆಲಸ ಮಾಡಿದೆ ಎಂಬ ದೂರುಗಳು ಕೇಳಿಬಂದಿವೆ.

ವಿಧಾನ ಪರಿಷತ್ತು ಸದಸ್ಯ ಕೆ. ಗೋಂವಿಂದ ರಾಜ್‌ ಪ್ರತಿಕ್ರಿಯಿಸಿ, ಕಳೆದ ವಾರ ಆರೋಗ್ಯ ಇಲಾಖೆ ಆಯುಕ್ತರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ನಗರದ ವಿವಿಧ  ಕ್ರೀಡಾಂ ಗಣಗಳನ್ನು ಮೊದಲ ಹಂತದಲ್ಲಿ ಆರೈಕೆ ಕೇಂದ್ರವನ್ನಾಗಿ ಬಳಸಿಕೊಳ್ಳಿ. ಇದಾದ ಮೇಲೆ ಅಗತ್ಯ ಬಿದ್ದಲ್ಲಿ ಕಂಠೀರವ ಕ್ರೀಡಾಂಗಣ ಬಳಸಿ ಕೊಳ್ಳುವಂತೆ ಮನವಿ ಮಾಡಿದ್ದೆ. ಆರೈಕೆ ಕೇಂದ್ರ ಬೇರೆ ಕಡೆ ಸ್ಥಳಾಂತರ ಮಾಡುವುದಕ್ಕೆ  ಯಾವುದೇ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದರು.

ಕಂಠೀರವ ಸ್ಟೇಡಿಯಂನಲ್ಲಿ ಕೋವಿಡ್‌ 19 ಆರೈಕೆ ಕೇಂದ್ರ ಮಾಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದೆವು. ಶನಿವಾರ ಮಧ್ಯಾಹ್ನ ಆರೈಕೆ ಕೇಂದ್ರವನ್ನು ಕೋರಮಂಗಲಕ್ಕೆ ಸ್ಥಳಾಂತರ ಮಾಡುವಂತೆ ನಿರ್ದೇಶನ ಬಂದ ಹಿನ್ನೆಲೆಯಲ್ಲಿ ಆರೈಕೆ  ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ.
-ಪಲ್ಲವಿ , ಬಿಬಿಎಂಪಿ ಜಂಟಿ ಆಯುಕ್ತೆ, ಪೂರ್ವ ವಲಯ

ಟಾಪ್ ನ್ಯೂಸ್

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Malpe: ತೊಟ್ಟಂ ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

Malpe: ತೊಟ್ಟಂ ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

1-weq-ewq

Gujarat ; ದಟ್ಟಾರಣ್ಯದಲ್ಲಿ ಒಬ್ಬ ಮತದಾರನಿಗಾಗಿ ಮತಗಟ್ಟೆ ಸ್ಥಾಪನೆ!

ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್‌ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!

ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್‌ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!

1–dsdasdsad

Sirsi; ಕಾಗೇರಿ ರಿಲಾಕ್ಸ್ ಮೂಡ್: ಪಕ್ಷಿಗಳಿಗೆ ಆಹಾರ, ತೋಟ ಸುತ್ತಾಟ!

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqe-wewq

Cryptocurrency ವೆಬ್‌ಸೈಟ್ ಹ್ಯಾಕ್: ಕೊನೆಗೂ ಆರೋಪಿ ಶ್ರೀಕಿ ಬಂಧನ

Manipal Hospitals; ಟ್ರಾನ್ಸ್‌ಪ್ಲಾಂಟ್ನಿಂದ ಬದುಕುಳಿದವರಿಗೆ ಕ್ರಿಕೆಟ್‌ ಪಂದ್ಯದ ಉಲ್ಲಾಸ

Manipal Hospitals; ಟ್ರಾನ್ಸ್‌ಪ್ಲಾಂಟ್ನಿಂದ ಬದುಕುಳಿದವರಿಗೆ ಕ್ರಿಕೆಟ್‌ ಪಂದ್ಯದ ಉಲ್ಲಾಸ

18

950 ಕೋಟಿ ರೂಪಾಯಿ ವೈದ್ಯ ಸೀಟು ಹಂಚಿಕೆ ಅಕ್ರಮ: ಬಿಜೆಪಿ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

15

Bengaluru: ಅಪಘಾತ ಗಲಾಟೆ: ಕಪಾಳಮೋಕ್ಷಕ್ಕೆ ವ್ಯಕ್ತಿ  ಬಲಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Malpe: ತೊಟ್ಟಂ ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

Malpe: ತೊಟ್ಟಂ ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

1-weq-ewq

Gujarat ; ದಟ್ಟಾರಣ್ಯದಲ್ಲಿ ಒಬ್ಬ ಮತದಾರನಿಗಾಗಿ ಮತಗಟ್ಟೆ ಸ್ಥಾಪನೆ!

ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್‌ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!

ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್‌ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!

1–dsdasdsad

Sirsi; ಕಾಗೇರಿ ರಿಲಾಕ್ಸ್ ಮೂಡ್: ಪಕ್ಷಿಗಳಿಗೆ ಆಹಾರ, ತೋಟ ಸುತ್ತಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.