ಗೋವಿಂದ ಭಟ್ಟರು, ಶಿಶುನಾಳ ಶರೀಫ‌ರೆಂಬ ಸಮಾನತೆಯ ಹರಿಕಾರರು 


Team Udayavani, Jul 5, 2020, 6:30 AM IST

ಗೋವಿಂದ ಭಟ್ಟರು, ಶಿಶುನಾಳ ಶರೀಫ‌ರೆಂಬ ಸಮಾನತೆಯ ಹರಿಕಾರರು 

ಮಡದಿ, ಮಗು, ತಾಯಿ-ತಂದೆ ಇಹಲೋಕ ತ್ಯಜಿಸಿದಾಗ ಶರೀಫ‌ರಿಗೆ ತಮ್ಮವರು ಎಂದು ಉಳಿದವರು ಗುರು ಗೋವಿಂದ ಭಟ್ಟರೊಬ್ಬರೆ. ಗೋವಿಂದ ಭಟ್ಟರು ಮತ್ತು ಶಿಶು ನಾಳ ಶರೀಫ‌ ರು ಜಾತಿ, ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠವೆಂದು ಸಾರಿದರು.

19ನೇ ಶತಮಾನ, ಒಂದು ಅತ್ಯಂತ ಮಹತ್ವದ ಕಾಲ. ರಾಜಕೀಯ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ, ಕ್ರಾಂತಿಕಾರಿ ಬದಲಾವಣೆಗಳು ಮೂಡಿಬಂದವು. ಈ ಶತಮಾನವನ್ನು, “”ಬದಲಾವಣೆಯ ಶತಮಾನ”ವೆಂದು ಹೇಳಬಹುದು.

ಈ ಅಪರೂಪದ ಬದಲಾವಣೆಗೆ ನಮ್ಮ ದೇಶದಲ್ಲಿ, ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಉದಯಿಸಿದ ಮಹಾಪುರುಷರು, ದಾರ್ಶನಿಕರು ಮೂಲ ಪ್ರೇರಕರಾಗಿದ್ದಾರೆ. ಗರಗದ ಮಡಿವಾಳಪ್ಪ, ಹುಬ್ಬಳ್ಳಿಯ ಸಿದ್ದಾರೂಢರು, ನವಲಗುಂದದ ನಾಗ­ಲಿಂಗ­ಸ್ವಾಮಿ, ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು, ಗುರ‌್ಲಹೊಸೂರಿನ ಚಿದಂಬರ ದೀಕ್ಷಿತರು, ಅಗಡಿಯ ಶೇಷಾ­ಚಲರು, ಗುಡಿಗೇರಿಯ ಸಂಗಮೇಶ್ವರ ಸ್ವಾಮಿಗಳು, ಹುಲಗೂರಿನ ಚೆನ್ನವೀರ ಸ್ವಾಮಿ­ಗಳು, ಅಂಕಲಗಿಯ ಅಡಿವಿಸ್ವಾಮಿ, ಅವರಾದಿ ಫ‌ಲಹಾರಸ್ವಾಮಿಗಳು, ಗದುಗಿನ ಶಿವಾನಂದ ಸ್ವಾಮಿಗಳು, ವಿಶ್ವಕರ್ಮ ಮತೀಯ ಪ್ರಭುಸ್ವಾಮಿ­ಗಳು ಹಾಗೆಯೇ ಕಳಸದ ಗುರುಗೋವಿಂದ ಭಟ್ಟರು ಮತ್ತು ಸಂತ ಶಿಶುನಾಳ ಶರೀಫ‌ರು, ಜನಮಾನಸದಲ್ಲಿ ಬೆರೆತಿದ್ದಾರೆ. ಇವರೆಲ್ಲರೂ ಒಬ್ಬರನ್ನೊಬ್ಬರು ಮೀರಿಸುವ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದವರು. ಇವರೆಲ್ಲರೂ ಒಂದೇ ಕಾಲದಲ್ಲಿ ಇದ್ದವರು ಎಂದರೆ, ಒಂದು ವಿಸ್ಮಯವೇ ಸರಿ.

ಧರ್ಮ, ಕುಲ-ಗೋತ್ರಗಳ ಬದಿಗೊತ್ತಿ, ಸಹೋದರತ್ವವನ್ನು ಹಿಡಿದು, ಮತೀಯ ಸೌಹಾರ್ದತೆ ತೋರಿಸಿದ ದಾರ್ಶನಿಕರು- ಕಳಸದ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫ‌ರು. ಇವರಿಬ್ಬರದು ಅಪರೂಪದ ಗುರು-ಶಿಷ್ಯ ಜೋಡಿ. ಇಬ್ಬರೂ ಬೇರೆ ಬೇರೆ ಧರ್ಮದಿಂದ ಬಂದಿದ್ದರೂ, ತಮ್ಮದೇ ಧರ್ಮವನ್ನು ದಿನನಿತ್ಯ ಜೀವನದಲ್ಲಿ ಆಚರಿಸಿದರೂ, ಇನ್ನೊಬ್ಬರ ಧರ್ಮವನ್ನು ಕಡೆಗಣಿಸದೆ, ಗೌರವದಿಂದ ಕಾಣುತ್ತಿದ್ದರು. ಇಬ್ಬರೂ ಮತಾಂತರ ಹೊಂದದೆ, ಬ್ರಾಹ್ಮಣರಾದ, ಗೋವಿಂದ ಭಟ್ಟರು ಬ್ರಾಹ್ಮಣರಾಗಿಯೇ ದೇಹ ಬಿಟ್ಟರೇ, ಶರೀಫ‌ರು ಮುಸಲ್ಮಾನರಾಗಿಯೇ ದೇಹ ತೊರೆದರು. ಉತ್ತರ ಕರ್ನಾಟಕದ ಶಿಗ್ಗಾಂವಿ ತಾಲೂಕಿನ, ಶಿಶುನಾಳ ಗ್ರಾಮದ, ದೇವಕಾರ ಮನೆತನದ ಇಮಾಮ್‌ ಹಜರತ್‌ ಸಾಹೇಬ್‌ ಹಾಗೂ ಹಜೂjಮಾ ದಂಪತಿಗೆ, ಜುಲೈ 3, 1819ರಲ್ಲಿ ಜನಿಸಿದ ಮಹಮ್ಮದ್‌ ಶರೀಫ‌ರು, 70 ವರ್ಷಗಳ ಪರಿಪೂರ್ಣ ಆಧ್ಯಾತ್ಮಿಕ ಜೀವನ ನಡೆಸಿ, ಜುಲೈ 3, 1889ರಲ್ಲಿ ದೇಹ ಬಿಟ್ಟ ಮಹಾನ್‌ ಸಂತ.

ಶರೀಫ‌ರು ಶಿಶುನಾಳದಲ್ಲಿ ಬೆಳೆಯುತ್ತಿರುವಾಗಲೇ ವೇದ, ಶಾಸ್ತ್ರ, ರಾಮಾಯಣ, ಮಹಾಭಾರತ, ದೇವಿಪುರಾಣ, ಪ್ರಭುಲಿಂಗ- ಲೀಲೆಯ ಪುಟಗಳ ತಿರುವಿಹಾಕಿ, ಅವುಗಳ ಅಂತರಂಗವನ್ನು ಅರಗಿಸಿಕೊಂಡರು. ಹಾಗೆಯೇ ಕುರಾನಿನ ಅಧ್ಯಯನ ಮಾಡಿ ಕುರಾನ-ಪುರಾಣ; ನಮಾಜ- ನಮನ; ಫ‌ಕೀರ-ಜಂಗಮ; ಮಸೀದಿ-ಮಂದಿರ, ಎಲ್ಲವೂ ಒಂದೇ, ಭಗವಂತನ ದರ್ಶನಕ್ಕೆ ನಾವು ಹಾಕಿಕೊಂಡ ವಿವಿಧ ಹಾದಿಗಳು ಎಂಬ ಮರ್ಮವನ್ನು ಅರಿತು­ಕೊಂಡು, ಆಧ್ಯಾತ್ಮದ ಹಸಿವನ್ನು ನೀಗಿಸಲು ಗುರುವನ್ನು ಅರಸುತ್ತಿದ್ದರು.

ಧಾರವಾಡದ ಕಳಸ ಗ್ರಾಮದ ಜೋಶಿ ಮನೆತನದ ಸ್ಮಾರ್ತ ಬ್ರಾಹ್ಮಣರಾದ ಗೋವಿಂದಭಟ್ಟರು, ಸುತ್ತಲಿನ 14 ಹಳ್ಳಿಗಳಿಗೆ ಜೋಯಿಸರಾಗಿದ್ದು, ಗುಡಿಗೇರಿಯ ಕಲ್ಮೇಶ ದೇವರ ಗುಡಿಯಲ್ಲಿ (ಅಂದಿನ ಗುಡಿಪುರ) ಪೂಜೆ ಮಾಡುತ್ತಿದ್ದರು. ಮಹಾನ್‌ ತಪಸ್ವಿಯಾದ ಇವರು, ವಾಕ್‌ಸಿದ್ಧಿ ಗಳಿಸಿದ್ದರು. ಕಾಲಜ್ಞಾನ ತಿಳಿದಿದ್ದ ಗೋವಿಂದಭಟ್ಟರು ಕುಳಿತಲ್ಲೆಯೇ-“”ಶರೀಫ‌ ಬೇಗ ಬಾರೋ, ಎಷ್ಟು ಕಾಯುವುದೋ ನಿನಗಾಗಿ?” ಎಂದು ಕನವರಿಸುತ್ತಿದ್ದರಂತೆ. ಬಾದಾಮಿಯ ಬನಶಂಕರಿದೇವಿಯೊಂದಿಗೆ ಮಾತನಾ­ಡುವ ಇಚ್ಛಾಶಕ್ತಿ ಹೊಂದಿದ್ದ ಗೋವಿಂದಭಟ್ಟರಂತಹ ಗುರುಗಳು, ಶರೀಫ‌ರಿಗೆ ಸಿಕ್ಕಿದ್ದು, ಒಂದರ್ಥ ದಲ್ಲಿ ಶ್ರೀರಾಮಕೃಷ್ಣ ಪರಮಹಂಸರಿಗೆ, ಸ್ವಾಮಿ ವಿವೇಕಾನಂದರು ಸಿಕ್ಕಂತೆ. ಇವರಿಬ್ಬರ ಮೊದಲ ಭೇಟಿಯು ಶಿಶುನಾಳದಲ್ಲಿ ಆದಾಗ, ಗೋವಿಂದಭಟ್ಟರು ಶರೀಫ‌ನಿಗೆ, “”ನಿನ್ನಪ್ಪ ಯಾರು?” ಎಂಬ ಪ್ರಶ್ನೆ ಕೇಳಿದೊಡನೆ ಅದಕ್ಕೆ ಉತ್ತರವಾಗಿ ತಟ್ಟನೆ “”ನಿಮ್ಮಪ್ಪನೇ…ನಮ್ಮಪ್ಪ” ಎಂದ‌ರು ಶರೀ ಫ‌ ರು. ಗೋವಿಂದ ಭಟ್ಟರು ಸುಪ್ರಸನ್ನರಾಗಿ ಶರೀಫ‌ನೇ ನನಗೆ ಯೋಗ್ಯ ಶಿಷ್ಯ ಎಂದು ಮನಗಂಡು ತಮ್ಮ ಶಿಷ್ಯನನ್ನಾಗಿ ಆತ್ಮಾನಂದದಿಂದ ಸ್ವೀಕರಿಸಿದರು.

ಬ್ರಾಹ್ಮಣರಾದ ಗೋವಿಂದಭಟ್ಟರು ಮಹಮ್ಮದೀಯನಾದ ಶರೀಫ‌­ನನ್ನು ಶಿಷ್ಯನನ್ನಾಗಿ ಮಾಡಿಕೊಂಡು, ಸದಾ ಜತೆಗೆ ಅಲೆದಾಡು­ವುದನ್ನು, ಸ್ವಜಾತಿ ಬಾಂಧ ವರು ಒಪ್ಪದೆ, ಗೋವಿಂದಭಟ್ಟರನ್ನು ಜಾತಿಯಿಂದ ಬಹಿಷ್ಕಾರ ಹಾಕುವುದಾಗಿ, ಬೆದರಿಕೆ ಹಾಕಿದರೂ ಅದಕ್ಕೆ ಸೊಪ್ಪುಹಾಕದೆ, ವೇದ, ಉಪನಿಷತ್ತು, ವೈದಿಕ ಧರ್ಮದ ಸಾರವನ್ನು ಶರೀಫ‌ರಿಗೆ, ಜನಿವಾರ ಹಾಕಿ ತಿಳಿಸಿಕೊಟ್ಟಾಗ, ಶರೀಫ‌ರೂ ಸಹ ಆತ್ಮಾನಂದದಿಂದ “”ಹಾಕಿದ ಜನಿವಾರವ, ಸದ್ಗುರು ನಾಥ, ಹಾಕಿದ ಜನಿವಾರವ, ಹಾಕಿದ ಜನಿವಾರ, ನೂಕಿದ ಭವಭಾರ ಬೇಕೆನುತಲಿ ಬ್ರಹ್ಮಜ್ಞಾನ ಉತ್ಛರಿಸಲೆಂದು” ಹಾಡಿದರು. ಶರೀಫ‌ರು, ವೈದಿಕ ಧರ್ಮಕ್ಕೆ ಸೇರಿದ ಗೋವಿಂದಭಟ್ಟರನ್ನು ಗುರುವೆಂದು ಸ್ವೀಕರಿಸಿ, ಗುರು ಉಪದೇಶವನ್ನು ಪಡೆದುಕೊಂಡು, ಅವರೊಂದಿಗೆ ಇರುವು ದನ್ನು ಮುಸಲ್ಮಾನರೂ ಒಪ್ಪಲಿಲ್ಲ. ಶರೀಫ‌ರೂ ಸಹ ಗುರುಗಳಂತೆಯೇ ಎರಡೂ ಸಮುದಾಯ­ದವರು ಕೊಟ್ಟ ಕಷ್ಟಗ­ಳನ್ನು ಮೆಟ್ಟಿ, ಜಾತಿ, ಧರ್ಮಗಳಿಗಿಂತ ಮಾನವ ಧರ್ಮವೇ ಶ್ರೇಷ್ಠವೆಂದು ತಿಳಿಸಿ ಅನೇಕತೆಯಲ್ಲಿ ಏಕತೆಯನ್ನು ಸಾರಿದರು.

ಶರೀಫ‌ರ ತಂದೆ-ತಾಯಿ,ಮಗ ಹೀಗೆ ಅಲೆದಾಡುತ್ತಿರುವುದಕ್ಕೆ, ಮದುವೆಯೇ ಸರಿಯಾದ ಮದ್ದೆಂದು ತಿಳಿದು, ಕುಂದಗೋಳದ ನಾಯಕ ಮನೆತನಕ್ಕೆ ಸೇರಿದ ಫಾತಿಮಾಳೊಂದಿಗೆ ವಿವಾಹ ನೆರವೇರಿಸಿದರು. ಈ ಮದುವೆಗೆ ಗುರು ಗೋವಿಂದ ಭಟ್ಟರು ಹಸಿರು ನಿಶಾನೆ ನೀಡಿದ್ದರು. ಶರೀಫ‌ರ ಬಾಳಿನಲ್ಲಿ ಫಾತಿಮಾ ಬೆಳಕಾಗಿ ಬಂದಳು. ಶರೀಫ‌ರೂ ಹೆಂಡತಿಯೊಂದಿಗೆ ಗೌರವ, ಪ್ರೀತಿಯಿಂದ ನಡೆದುಕೊಂಡು, ಸ್ತ್ರೀಯ ಹಲವು ಮುಖಗಳನ್ನು ಅವಳಲ್ಲಿ ಕಂಡು, “ನನ್ನ ಹೇಣ್ತೆ, ನೀ ನನ್ನ ಹೇಣ್ತೆ… ನನಗೆ ತಕ್ಕವಳೆನಿಸಿದೆ ನನ್ನ ಹೇಣ್ತೆ’ ಎಂದು ಹೇಳಿ ಕೊಂಡಿದ್ದಾರೆ. ಇವರ ದಾಂಪತ್ಯದ ಬಾಳಿನಲ್ಲಿ ಲತ್ತೂಮಾ ಎಂಬ ಹೆಣ್ಣುಕೂಸು ಬೆಳದಿಂಗಳಂತೆ ಜನಿ¾ಸಿತು. ಆದರೆ, ಕೆಲವೇ ದಿನಗಳಲ್ಲಿ ಮುದ್ದಿನ ಮಗಳು ಲತ್ತೂಮಾ ಖಾಯಿಲೆ ಯಿಂದ ತೀರಿಕೊಂಡಳು. ಮಗಳ ಅಗಲಿಕೆಯ ನೋವಿಂದ ಶರೀಫ‌ರು ಮಾತೃಭಾಷೆ ಉರ್ದುವಿನಲ್ಲಿ “ದುಃಖ ಮೇ ಪಡಾ ಮನ್‌, ಸುಖ ನಹೀ ಮಾಯಾ, ಟಕತಿ ಮರನಾ ರಖವಾಲಾರೇ’ ಎಂಬ ತತ್ವ ಪದವ ಅಲ್ಲಿಯೇ ನುಡಿದರು. ಮಗಳ ಸಾವಿನ ದುಃಖ ತಡೆಯಲಾರದೆ, ಫಾತಿಮಾ ತವರು ಮನೆಯಲ್ಲಿ ಕೊನೆಯುಸಿರೆಳೆದಳು. ಮಾವ, ಅಂತ್ಯಕ್ರಿಯೆಗೆ ಬರಬೇಕೆಂದು ಹೇಳಿ ಕಳುಹಿಸಿದಾಗ “ಮೋಹದ ಹೆಂಡತಿ ತೀರಿದ ಬಳಿಕ, ಮಾವನ ಮನೆಯ ಹಂಗ್ಯಾಕೋ’ ಎಂದು, ಪ್ರಪಂಚದ ಹಂಗನ್ನು ತೊರೆದರು, ಕೆಲಕಾಲದಲ್ಲೇ ತಾಯಿ-ತಂದೆಯೂ ಇಹಲೋಕ ತ್ಯಜಿಸಿದಾಗ, ಶರೀಫ‌ರಿಗೆ ತಮ್ಮವರು ಎಂದುಳಿದವರು ಗೋವಿಂದ ಭಟ್ಟರೊಬ್ಬರೆ.

ಮುಂದೆ, ಗುರು ಶಿಷ್ಯರಿಬ್ಬರೂ ಒಬ್ಬರನ್ನೊಬ್ಬರು ಬಿಡದೆ, ಅವಿಭಜಿತ ಧಾರ ವಾಡ, ಬಳ್ಳಾರಿ, ಚಿತ್ರದುರ್ಗ, ಉ.ಕನ್ನಡ ಹಾಗೂ ಬೆಳಗಾವಿ ಪ್ರದೇಶಗಳಲ್ಲಿನ ಗುಡಿಗಳ ದರ್ಶನ ಮಾಡಿ, ನಂತರ ಶಿಶುನಾಳ- ಕಳಸದ ಸುತ್ತಮುತ್ತಲಿನ ಗ್ರಾಮಗಳ, ಅಲ್ಲಿಯ ಗ್ರಾಮದೇವತೆಗಳ ಹಾಗೂ ಇತರ ಗುಡಿಗಳ ದರ್ಶನ ಮಾಡುತ್ತಿದ್ದರು. ಆಧ್ಯಾತ್ಮದ ಗುಂಗಿನಲ್ಲಿ ಯಾವಾಗಲೂ ಇದ್ದು, ದಿನನಿತ್ಯ ನಡೆಯುವ ಘಟನೆಗಳನ್ನು ತತ್ವಪದಗಳಲ್ಲಿ ವಿವರಿಸಿ ಅದಕ್ಕೆ ಆಧ್ಯಾತ್ಮಿಕ ಹಿನ್ನೆಲೆ ನೀಡುತ್ತಿದ್ದರು. ಪ್ರಕೃತಿ, ಪಶು-ಪಕ್ಷಿ ಹಾಗೂ ದಿನ ನಿತ್ಯ ಜೀವನದಲ್ಲಿ ನಡೆಯುವ ಸಾಮಾನ್ಯ ಘಟನೆಗಳು ತತ್ವಪದಗಳ ರೂಪವಾಗಿ ಜನಸಾಮಾನ್ಯರ ಹೃದಯ ವನ್ನು ನೇರವಾಗಿ ತಟ್ಟುತ್ತಿದ್ದವು. “”ಕೋಡಗನ ಕೋಳಿ ನುಂಗಿತ್ತಾ”, “”ಬಿದ್ದಿಯಬ್ಬೆ ಮುದುಕಿ”, “”ಹಾವು ತುಳಿದೇನೆ”, “”ಗುಡಿಯ ನೋಡಿರಣ್ಣ”, “”ತರವಲ್ಲ ತಗೀ ನಿನ್ನ ತಂಬೂರಿ”, “”ಏನ್‌ ಕೊಡ ಏನ್‌ ಕೊಡವಾ”, “”ಸೋರುತಿಹುದು ಮನೆಯ ಮಾಳಿಗಿ”, “”ಕುಂಬಾರಕೀ ಈಕಿ ಕುಂಬಾರಕಿ”, “”ಗುಡು ಗುಡಿಯ ಸೇದಿ ನೋಡೋ” ಮುಂತಾದ ತತ್ವಪದಗಳು ಇಂದಿಗೂ ಜನಸಾಮಾನ್ಯರ ಬಾಯಲ್ಲಿ ನಲಿಯುತ್ತಿವೆ.

ಗುರು ಗೋವಿಂದಭಟ್ಟರು ತಮ್ಮೊಳಗಿನ ಆಧ್ಯಾತ್ಮ ಹಾಗೂ ಜ್ಞಾನಶಕ್ತಿಯನ್ನು ಶರೀಫ‌ರಿಗೆ ಧಾರೆಯೆರೆಯುತ್ತಾರೆ. ಗುರುಗಳಿಂದ ಕಾಲಜ್ಞಾನ ತಿಳಿದ ಶರೀಫ‌ರು, ಮುಂದೆ ಒದಗಲಿರುವ ಆಪತ್ತುಗಳನ್ನು ಮೊದಲೇ ಗ್ರಹಿಸಿ, ಎಲ್ಲರನ್ನೂ ಎಚ್ಚರಿ ಸಿದರು. ಪ್ಲೇಗ್‌ ಬರುವ ಮುನ್ಸೂಚನೆಯನ್ನು ನೀಡಿ, ಪ್ಲೇಗಿನ ಲಕ್ಷಣ, ಹರಡುವಿಕೆ,ಅದರಿಂದ ಸಂಭವಿಸಬಹುದಾದ ಮಾರಣಹೋಮದ ಬಗ್ಗೆ ಭವಿಷ್ಯ ನುಡಿದು-“”ಜಗಪತಿ ಪ್ರಜೆಗಳೆಲ್ಲಾ ಅಪ್ಪಣೆ ಇತ್ತನು, ತಗಲಬಾರದು ರೋಗ ಒಬ್ಬನಿಗೆ, ಅಗಲಿಸಿ, ಊರ ಬಿಡಿಸಿ, ಹೊರಗೆ ಹಾಕಿಸಿ, ಮಿಗಿಲಾದ “ಕ್ವಾರಂಟು ‘ ಕಟ್ಟಿಸುವ”-ಎಂಬ ಸಾಲು, ಈಗಿನವರನ್ನು ಆಶ್ವರ್ಯಚಕಿತರನ್ನಾಗಿಸಿದೆ.

ಪ್ಲೇಗ್‌ ಸಮಯದಲ್ಲಿ ಬರೆದಂತಹದ್ದಾದರೂ, ಇದು ಈಗಿನ ಕ್ವಾರಂಟೈನು ಸಮಯಕ್ಕೂ ಅನ್ವಯವಾಗುತ್ತಿರುವುದು ಕಂಡಾಗ, ಅವರ ಕಾಲಜ್ಞಾನದ ಆಳ ತಿಳಿಯುತ್ತದೆ. ಮುಂದೆ ಅದೇ ಪದ್ಯದಲ್ಲಿ ಹೇಳಿದ ಹಾಗೆ ಈ ಎಲ್ಲಾ ದುಃಖ ದುಮ್ಮಾನಗಳ ಕಾರಣವನ್ನು ವಿವರಿಸುತ್ತಾ,
“”ಗುರುಹಿರಿಯನ್ನೆಲ್ಲಾ ಜರಿಯುವ ಅಜ್ಞಾನದಿ, ಪರದ್ರವ್ಯ, ಪರಸ್ತ್ರೀಯ ಕದ್ದೊಯ್ಯುತಾ, ಸರಿ ನಮಗಾರೆಂದು, ದುರುಳರು ಗರ್ವದಿ ಮೆರೆದಾಡುತ್ತಿರುವರು ಲೋಕದಲಿ”. “”ಯಾಕೇ ಈ ಪರಿ ಕಷ್ಟ ನರರಿಗೆ ಆಗುವುದು, ಕಾಕುಜನ ಪಾಪ ಹೆಚ್ಚುತಿದೆ, ಲೋಕನಾಥನು, ಭೂಮಿಗ್ಯಾಕೆ ಭಾರವು ಎಂದೂ, ತಾ ಕಳುಹಿದ ಮೃತ್ಯು ದೇವತೆಯಾ” ಎಂಬ ಸಾಲುಗಳು ಇಂದಿನ ಕೊರೊನಾಕ್ಕೂ ಅನ್ವಯಿಸುತ್ತಿದೆ. ಈ ಮಾರಿಯಿಂದ ಪಾರಾಗುವ ಮಾರ್ಗವನ್ನು ಸಹ ಶರೀಫ‌ರು ತಿಳಿಸುತ್ತಾ, “”ತಾತ ಗುರುಗೋವಿಂದನನು ಮೊರೆ ಹೊಕ್ಕರೆ ಆತನೇ ರಕ್ಷಿಪ ಕರುಣದಲಿ” ಎಂದು ಹೇಳಿ, “”ಗುರು-ದೇವರಿಗೆ ಶರಣಾಗಬೇಕೆಂದು” ಸ್ಟಷ್ಟವಾಗಿ ತಿಳಿಸಿದ್ದಾರೆ.

ಮುಂದೆ, ತಮ್ಮ ಗುರುಗಳಾದ ಗೋವಿಂದ ಭಟ್ಟರಂತೆ, ಶರೀಫ‌ರು ಕೂಡ 70 ವರ್ಷ ಜೀವಿಸಿ, ದೇಹ ತ್ಯಾಗ ಮಾಡಿದರು. ಆ ದಿನವೇ ಅವರ 70ನೇ ಹುಟ್ಟಿದ ದಿನವೂ ಆಗಿತ್ತು. ಶರೀಫ‌ರು ದೇಹ ಬಿಡುತ್ತಿದ್ದಂತೆ, ಅವರ ಅಂತ್ಯಕ್ರಿಯೆಯನ್ನು ಮುಸಲ್ಮಾನ ಪದ್ಧತಿಯಂತೆ ಮಾಡುವುದೋ ಅಥವಾ ಹಿಂದೂ ಪದ್ಧತಿಯಂತೆ ಮಾಡುವುದೋ ಎಂಬ ಚರ್ಚೆ ಪ್ರಾರಂಭವಾದಾಗ, ಹಿಂದೂ ಹಾಗೂ ಮುಸಲ್ಮಾ­ನ‌ರು, ಇದನ್ನು ಸಮಸ್ಯೆಯಾಗಿ ಬೆಳೆಸದೆ, ಪರಸ್ಪರ ಒಪ್ಪಿ , ಒಂದು ಕಡೆ ಕುರಾನ್‌ ಪಠಣ, ಇನ್ನೊಂದು ಕಡೆ ಮಂತ್ರ ಪಠಣ ಮಾಡಿ ಅಂತ್ಯಕ್ರಿಯೆ ನಡೆಸಿ ದರು. ಮಹಮದೀಯ ಬಂಧುಗಳು ಹೃದಯ ತುಂಬಿ, “”ಶರೀಫ‌ ನಾನಾ ಕಿ ದೋಸ್ತರಾ” ಎಂದು ಘೊಷಿಸಿದರೆ, ಹಿಂದುಗಳು “”ಶರೀಫ‌ ಶಿವಯೋಗಿ ಮಹಾರಾಜ್‌ ಕಿ ಜೈ”ಎಂದು ಘೋಷಿಸಿದರು. ಮುಸಲ್ಮಾನರಿಂದ “”ಅಲ್ಲಾ ಹೋ ಅಕ್ಬರ್ ”ಎಂದು ಘೋಷಣೆ ಮೊಳಗಿಸಿದರೆ. ಹಿಂದೂಗಳಿಂದ “”ಹರ ಹರ ಮಹದೇವ” ಎಂಬ ಘೋಷಣೆ ಕೇಳಿ ಬರುತ್ತಿತು. ಹೀಗೆ ಶರೀಫ‌ರ ಅಂತ್ಯ ಕ್ರಿಯೆಯು, ಸರ್ವಜನ ಸಮ್ಮುಖದಲ್ಲಿ, ಅವರ ಇಚ್ಛೆಯ ಮೇರೆಗೆ, ತಂದೆ ತಾಯಿ ಸಮಾಧಿಯ ಮಗ್ಗುಲಲ್ಲೇ ನೆರವೇರಿಸಲಾಯಿತು. ಹೀಗೆ ಮತೀಯ ಸೌಹಾರ್ದತೆ ಹಾಗೂ ಭಾವೈಕ್ಯತೆಗೆ ಶರೀಫ‌ರು ಬೀರಿದ ಪ್ರಭಾವ, ಅವರ ಅಂತ್ಯಕ್ರಿಯೆಯಲ್ಲೂ ಕಾಣಬಹುದು.

(ಶಿಶುನಾಳ ಶರೀಫ‌ರ ದ್ವಿಶತಮಾನೋತ್ಸವ, ಗುರು ಗೋವಿಂದ ಭಟ್ಟರ ಆರಾಧನೆ, ಗುರುಪೂರ್ಣಿಮೆ ನಿಮಿತ್ತ, ಗುರು ಗೋವಿಂದ ಭಟ್ಟರ ವಂಶದವ ರಾದ ನಾಡೋಜ ಡಾ| ಮಹೇಶ್‌ ಜೋಶಿ ಬರೆದಿರುವ ಲೇಖನವಿದು)

ಟಾಪ್ ನ್ಯೂಸ್

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.