ಓದುವ ಹವ್ಯಾಸ ಹೆಚ್ಚಿಸಲು ಜಿಲ್ಲಾಡಳಿತದಿಂದ “ಮನ್ವಂತರ’

Team Udayavani, Aug 4, 2020, 1:18 PM IST

ಓದುವ ಹವ್ಯಾಸ ಹೆಚ್ಚಿಸಲು ಜಿಲ್ಲಾಡಳಿತದಿಂದ “ಮನ್ವಂತರ’

ಕೊಪ್ಪಳ: ಕೋವಿಡ್‌ನಿಂದ ಬೇಸತ್ತಿರುವ ಜನತೆಗೆ ಓದುವ ಹವ್ಯಾಸ ರೂಢಿಸಲು ಜಿಲ್ಲಾಡಳಿತ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯರಿಗೆ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಿದೆ.

ನಿರ್ದಿಷ್ಟ ಪುಸ್ತಕಗಳ ಮಾಹಿತಿ ನೀಡಿ ಓದಲು ಸಮಯ ನೀಡಲಾಗುತ್ತದೆ. ಇದಾದ ಬಳಿಕ ಪುಸ್ತಕದ ಕುರಿತು ವಿಮರ್ಶೆ ಬರೆಯಬೇಕು. ಉತ್ತಮ ವಿಮರ್ಶೆಗೆ ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ ಬಹುಮಾನ 10 ಸಾವಿರ ನೀಡಲಾಗುತ್ತದೆ. ಎರಡು ವರ್ಗಕ್ಕೂ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ.

ಕೋವಿಡ್‌ ಸಂಕಷ್ಟದ ಸಮಯ ಹಾಗೂ ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಾಮಾನ್ಯರು ಓದುವ ಹವ್ಯಾಸ ಬೆಳೆಸಿಕೊಳ್ಳುವಂತಾಗಲಿ. ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಲು ಓದುಗರ ವೇದಿಕೆ ಸೃಷ್ಟಿ ಮಾಡುವುದು. ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ಮೂಲಕ ಜಗತ್ತಿನ ತಿಳಿವಳಿಕೆ ಮತ್ತು ಮನುಷ್ಯರ ಸಂಬಂಧಗಳ ಬಗ್ಗೆ ಒಳನೋಟವನ್ನು ಕಲಿಸುವುದು. ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವುದು ಸೇರಿದಂತೆ ಮೊದಲಾದ ಉದ್ದೇಶಗಳು ಈ ಮನ್ವಂತರದಲ್ಲಿ ಅಡಗಿದೆ.

18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಹಾಗೂ 18 ವರ್ಷ ಮೇಲ್ಪಟ್ಟವರನ್ನು ಸಾಮಾನ್ಯ ವರ್ಗ ಎಂದು ಗುರುತಿಸಲಾಗುತ್ತದೆ. ಉಳಿದಂತೆ ಯಾವುದೇ ಷರತ್ತುಗಳಿಲ್ಲವಾದ್ದರಿಂದ ಯಾರಾದರೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆ. 10ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಆ. 25ರೊಳಗಾಗಿ ವಿಮರ್ಶೆ ಕಳುಹಿಸಿಕೊಡಬೇಕು. ಆ. 25ರಿಂದ ಸೆ. 10ರ ವರೆಗೂ ತಾಲೂಕು ಮಟ್ಟದ ಮೌಲ್ಯಮಾಪನ, ಜಿಲ್ಲಾಮಟ್ಟದ ಮೌಲ್ಯಮಾಪನ, ಕೊನೆಯಲ್ಲಿ ಆಯ್ದ 20 ವಿಮರ್ಶಕರ ಸಂದರ್ಶನ ನಡೆಯುತ್ತದೆ. ಖುದ್ದು ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಅವರೇ ಸಂದರ್ಶನ ನಡೆಸುತ್ತಾರೆ. ಇದಕ್ಕಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊದಿಗೆ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದೆ.

ವಿದ್ಯಾರ್ಥಿಗಳ ವಿಭಾಗದಲ್ಲಿ: ಚೋಮನದುಡಿ – ಡಾ| ಕೆ. ಶಿವರಾಮ ಕಾರಂತ, ಮಹಾಶ್ವೇತ – ಸುಧಾ ಮೂರ್ತಿ, ಸ್ವಾಮಿ ಮತ್ತು ಸ್ನೇಹಿತರು-ಆರ್‌. ಕೆ. ನಾರಾಯಣ್‌, ಮೆಲಹು(ಇಂಗ್ಲಿಷ್‌) ಅಮೀಶ್‌ ತ್ರಿಪಾಠಿ, ದಿ ವೈಟ್‌ ಟೈಗರ್‌ (ಇಂಗ್ಲಿಷ್‌) ಅರವಿಂದ ಅಡಿಗ ಅವರ ಪುಸ್ತಕಗಳಿವೆ.

ಸಾಮಾನ್ಯರ ವಿಭಾಗದಲ್ಲಿ: ಬೆಟ್ಟದ ಜೀವ-ಡಾ| ಕೆ. ಶಿವರಾಮ ಕಾರಂತ, ವಂಶವೃಕ್ಷ-ಎಸ್‌.ಎಲ್‌. ಭೈರಪ್ಪ, ಆಡಾಡತ ಆಯುಷ್‌- ಗಿರೀಶ್‌ ಕಾರ್ನಾಡ್‌, ಬಾರ್ನ್ ಎ ಕ್ರೆ„ಮ್‌ – ಟ್ರೈವರ್‌ ನೋಹ, ಶೂ ಡಾಗ್‌ – ಫಿಲ್‌ ನೈಟ್‌ ಈ ಪುಸ್ತಕಗಳಿಗೆ ವಿಮರ್ಶೆ ಬರೆಯಬಹುದಾಗಿದೆ.

ನೋಂದಾಯಿಸಿಕೊಳ್ಳುವುದು ಹೇಗೆ?: ತಮ್ಮ ಹೆಸರು, ವಿದ್ಯಾರ್ಹತೆ, ಮೊಬೈಲ್‌ ಸಂಖ್ಯೆಯ ಜೊತೆಗೆ ವಿವರಗಳೊಂದಿಗೆ 8792011835 ಸಂಖ್ಯೆಗೆ ನೋಂದಣಿ ಮಾಡಿಕೊಳ್ಳಬೇಕು. ಬರವಣೆಗೆಯನ್ನು ಟೈಪ್‌ ಮಾಡಿ ಅಥವಾ ಪಿಡಿಎಫ್‌ ಮಾಡಿ, ಇದೇ ಸಂಖ್ಯೆಗೆ ಕಳುಹಿಸಿಕೊಡಬೇಕು.

ಜನರು ಕೋವಿಡ್‌ ವಿಷಯ ಕೇಳಿ ಕೇಳಿ ಬೇಸತ್ತಿದ್ದಾರೆ. ಅದರಿಂದ ಹೊರ ಬರಲು ಹಾಗೂ ಅವರಲ್ಲಿ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಲು ಜಿಲ್ಲಾಡಳಿತದಿಂದಲೇ ಮನ್ವಂತರ ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯರಿಗೆ ವೇದಿಕೆ ಕಲ್ಪಿಸಿ ಪುಸ್ತಕಗಳಿಗೆ ವಿಮರ್ಶೆ ಬರೆಯುವ ಅವಕಾಶ ಕಲ್ಪಿಸಲಾಗುತ್ತಿದ್ದು, ಅದಕ್ಕೆ ಸೂಕ್ತ ಬಹುಮಾನವೂ ಇದೆ.  –ವಿಕಾಸ್‌ ಕಿಶೋರ್‌, ಜಿಲ್ಲಾಧಿಕಾರಿ

ಟಾಪ್ ನ್ಯೂಸ್

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

ಕುಷ್ಟಗಿ: ಪ್ರಜಾಪ್ರಭುತ್ವ ಉಳಿವಿಗೆ ಮತ, ಪರಿಸರಕ್ಕಾಗಿ ಮರ

ಕುಷ್ಟಗಿ: ಪ್ರಜಾಪ್ರಭುತ್ವ ಉಳಿವಿಗೆ ಮತ, ಪರಿಸರಕ್ಕಾಗಿ ಮರ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

7-

ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಪ್ರಜ್ವಲ್‌ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ

ಪ್ರಜ್ವಲ್‌ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.