ನಾವೆಲ್ಲ ಭಾರತ ಮಾತೆಯ ಹೆಮ್ಮೆಯ ಮಕ್ಕಳು


Team Udayavani, Aug 15, 2020, 9:15 AM IST

bharat-mata-ki-jai

ಆಗಸ್ಟ್‌ ತಿಂಗಳು ಬಂದರೆ ನೆನಪಾಗುವುದೇ ಸ್ವಾತಂತ್ರ್ಯ ದಿನಾಚರಣೆ.

ತ್ಯಾಗ, ಬಲಿದಾನ, ಅಹಿಂಸೆಗೆ ನಿಜವಾದ ಅರ್ಥ ಸಿಕ್ಕ ದಿನ.

ಸ್ವಾತಂತ್ರ್ಯದ ಸವಿನೆನಪಿನಲ್ಲಿ ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಹೀಗೆ ಎಲ್ಲೆಲ್ಲೂ ತಿರಂಗ ಧ್ವಜ ಹಾರಾಡುತ್ತಿತ್ತು.

ಸ್ವಾತಂತ್ರ್ಯ ದಿನಾಚರಣೆ ಶಾಲೆಯಲ್ಲಿ ಆಚರಿಸುವ ಹಬ್ಬ ಎನ್ನುವ ಖುಷಿ.

ಅಂದು ಮುಂಜಾನೆ ಬೆಳಕು ಹರಿಯು ತ್ತಿದ್ದಂತೆ ಸಮವಸ್ತ್ರ ಧರಿಸಿ ಶಾಲೆಗೆ ಹೋಗಿ ಧ್ವಜಾರೋಹಣ ಮಾಡುವ ಕ್ಷಣದ ಸಂಭ್ರಮ ಇಂದಿಗೂ ಅವಿಸ್ಮರಣೀಯ.

ಶುಭ್ರ ಸಮವಸ್ತ್ರ ಧರಿಸಿದ ಸ್ಕೌಟ್ಸ್‌-ಗೈಡ್ಸ್‌, ಸೇವಾದಳ ಮುಂತಾದ ತಂಡಗಳು ಕ್ರೀಡಾಂಗಣದಲ್ಲಿ ಪರೇಡ್‌ ಮಾಡುವ ಸೊಬಗು ಅವರ್ಣನೀಯ. ಮೈಕ್‌ ಎದುರು ನಿಂತು, ಪೂಜ್ಯ ಗುರುಗಳೆ ಹಾಗೂ ನನ್ನ ಸಹಪಾಠಿಗಳೆ ಎಂದು ಭಾಷಣ ಪ್ರಾರಂಭಿಸಿ “ಭಾರತ್‌ ಮಾತಾಕೀ ಜೈ’ ಎಂದು ನಿಲ್ಲಿಸಿದಾಗ ನೆರೆದವರ ಚಪ್ಪಾಳೆಯ ಸ್ವರ ಕಿವಿ ತುಂಬಿ ಖುಷಿ ಇಮ್ಮಡಿಯಾಗುತ್ತಿತ್ತು.

ಎಳೆ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಭಗತ್‌ ಸಿಂಗ್‌, ಗಾಂಧೀಜಿಯವರ ಅಹಿಂಸಾ ನೀತಿಯ ಸತ್ಯಾಗ್ರಹಗಳು, ಸುಭಾಷ್‌ಚಂದ್ರ ಬೋಸ್‌ ಅವರ ಕ್ರಾಂತಿಯ ಕಥೆಗಳನ್ನು ಕೇಳುತ್ತಿದ್ದರೆ ಮೈನವಿರೇಳುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರ ನೆನಪಿಸುವ ಪ್ರಹಸನಗಳಿಂದ ದೇಶದ ಕುರಿತಾದ ಒಂದಷ್ಟು ಹೊಸ ಸಂಗತಿಗಳ ಕಲಿಕೆಯಾಗುತ್ತಿತ್ತು. ನಮ್ಮ ಹಿರಿಯರ ತ್ಯಾಗದ ಫ‌ಲವಾಗಿ ಇಂದು ನಾವು ನೆಮ್ಮದಿಯ ಜೀವನ ಸಾಗಿಸುವಂತಾಗಿದೆ ಎನ್ನುವುದು ಮನದಟ್ಟಾಗುವಂತೆ ಮಾಡುತ್ತಿತ್ತು.

ದೇಶಭಕ್ತಿ, ರಾಷ್ಟ್ರಗೀತೆಗಳಂತಹ ಹಾಡುಗಳು ಕೇಳುಗರ ಕಿವಿಯನ್ನು ಇಂಪಾಗಿಸಿದರೆ, ನೃತ್ಯ, ಛದ್ಮವೇಷಗಳಂತಹ ಮನೊರಂಜನ ಕಾರ್ಯಕ್ರಮ ಇಡೀ ದಿನ ಸಂಭ್ರಮಿಸುವಂತೆ ಮಾಡುತ್ತಿತ್ತು. “ಝಂಡಾ ಊಂಚಾ ರಹೇ ಹಮಾರಾ’ ಎಂದು ಹಾಡುತ್ತಿದ್ದರೆ ದೇಹದ ಕಣ ಕಣದಲ್ಲೂ ದೇಶಭಕ್ತಿ ದ್ವಿಗುಣಗೊಳ್ಳುತ್ತದೆ. ದೇಶದ ಸಂಕೇತವಾಗಿ ಬಾವುಟ ಆಕಾಶದೆತ್ತರಕ್ಕೆ ಏರಿ ಗಾಳಿಯಲ್ಲಿ ನರ್ತಿಸುವುದನ್ನು ನೋಡುವುದೇ ಒಂದು ಖುಷಿ.

ದಿನವಿಡೀ ಇಷ್ಟೆಲ್ಲ ಸಂಭ್ರಮಿಸಿ, ಕುಣಿದಾಡಿದರೂ ಕೊನೆಯದಾಗಿ ವಂದೇ ಮಾತರಂ, ಭಾರತ್‌ಮಾತಾಕೀ ಜೈ, ಜೈ ಜವಾನ್‌ ಜೈಕಿಸಾನ್‌ ಘೋಷಣೆಗಳೊಂದಿಗೆ ಸಿಹಿ ತಿನಿಸನ್ನು ಚಪ್ಪರಿಸಿದ ಕ್ಷಣ ಮರೆಯುವಂತಿಲ್ಲ. ಒಟ್ಟಿನಲ್ಲಿ ಜಾತಿ, ಧರ್ಮ ಭೇದಗಳನ್ನು ಮರೆತು ನಾವೆಲ್ಲ ಭಾರತೀಯರು, ನಾವೆಲ್ಲರೂ ಒಂದೇ ಎಂದು ಒಗ್ಗಟ್ಟನ್ನು ಸಾರಿದ ಗರಿಮೆ ನಮ್ಮದು. ನಾವೆಲ್ಲ ಭಾರತ ಮಾತೆಯ ಹೆಮ್ಮೆಯ ಮಕ್ಕಳು ಎನ್ನುವ ಮನೋಭಾವ ಇಂದಿಗೂ ನಮ್ಮಲ್ಲಿ ಜೀವಂತ‌ವಿದೆ.

ಪವಿತ್ರಾ ಭಟ್‌, ವಿವೇಕಾನಂದ ಸ್ನಾತಕೋತ್ತರ ಕಾಲೇಜು, ಪುತ್ತೂರು

 

 

 

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.