ಇಶಾನ್‌ ‌-ಅನನ್ಯಾ ಪಾಂಡೆ ಅಭಿನಯದ ‘ಖಾಲಿ-ಪೀಲಿ’ ಟೀಸರ್‌ ಔಟ್‌

Team Udayavani, Aug 24, 2020, 3:50 PM IST

Khali peeli

ಇಶಾನ್‌ ಖಟ್ಟರ್‌ ಮತ್ತು ಅನನ್ಯಾ ಪಾಂಡೆ ಅಭಿನಯದ ‘ಖಾಲಿ-ಪೀಲಿ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ನಿರ್ದೇಶಕ ಮಕ್ಬೂಲ್‌‌ ಖಾನ್‌ ಅವರ ಈ ರೊಮ್ಯಾಂಟಿಕ್‌-ಆಕ್ಷನ್‌ ಚಿತ್ರದಲ್ಲಿ ಇಶಾನ್‌ ಅವರನ್ನು ಟ್ಯಾಕ್ಸಿ ಡ್ರೈವರ್‌ ಆಗಿ ಕಾಣಬಹುದು.

ಕಥಾ ನಾಯಕಿ ಅನನ್ಯಾ ತನ್ನ ಟ್ಯಾಕ್ಸಿಯಲ್ಲಿ ಕುಳಿತಾಗ ಮಧ್ಯರಾತ್ರಿಯಲ್ಲಿ ಅವರ ಜೀವನದಲ್ಲಿ ನಡೆಯುವ ಬದಲಾವಣೆಗಳು ಕಥಾವಸ್ತುವಾಗಿದೆ.

ಈ ಆಕ್ಷನ್‌ ಪ್ಯಾಕ್ಡ್ ಮಸಾಲಾ ಚಿತ್ರದ ಟೀಸರ್‌ನಲ್ಲಿ ಇಶಾನ್‌ ಮತ್ತು ಅನನ್ಯಾ ಅವರು ಪೊಲೀಸರು ಮತ್ತು ಸಾರ್ವಜನಿಕರಿಂದ ಓಡಿಹೋಗುವುದನ್ನು ಕಾಣಬಹುದು.

ಹಿಮಾಂಶು ಕಿಶನ್‌ ಮೆಹ್ರಾ, ಅಲಿ ಅಬ್ಟಾಸ್‌ ಜಾಫ‌ರ್‌ ಮತ್ತು ಝೀ ಸ್ಟುಡಿಯೋಸ್‌ ಈ ಚಿತ್ರವನ್ನು ನಿರ್ಮಿಸಿದೆ. ಆದರೆ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಈ ಚಿತ್ರವನ್ನು ಒಟಿಟಿ ಪ್ಲಾಟ್‌ಫಾರ್ಮ್ನಲ್ಲಿ ಬಿಡುಗಡೆ ಮಾಡುವ ಕುರಿತು ಇತ್ತೀಚೆಗೆ ಮಾಹಿತಿಯೊಂದು ಹರಿದಾಡುತ್ತಿತ್ತು.

ಈ ಮೊದಲು ಬಿಡುಗಡೆಯ ದಿನಾಂಕವನ್ನು ಕಳೆದ ಜೂನ್‌ 12ರಂದು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಲಾಕ್‌ಡೌನ್‌ ಕಾರಣ ಇದು ಸಾಧ್ಯವಾಗಿರಲಿಲ್ಲ. ವರದಿಗಳ ಪ್ರಕಾರ, ಚಿತ್ರದ ಶೂಟಿಂಗ್‌ ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಶೀಘ್ರ ಪೋಸ್ಟ್‌ ಪ್ರೊಡಕ್ಷನ್‌ ಪೂರ್ಣವಾಗಲಿದೆ. ಮಧ್ಯರಾತ್ರಿಯಲ್ಲಿ ಭೇಟಿಯಾಗುವ ಹುಡುಗ ಮತ್ತು ಹುಡುಗಿಯ ಕುರಿತಾಗಿ ಈ ಚಿತ್ರದ ಕಥೆ ಹೆಣೆಯಲ್ಪಟ್ಟಿದೆ.

ಚಿತ್ರದಲ್ಲಿ ಇಶಾನ್‌ ಮತ್ತು ಅನನ್ಯಾ ಇಬ್ಬರೂ ತಪೋರಿ ಶೈಲಿಯೊಂದಿಗೆ ಚಿತ್ರಿಸಲಿದ್ದಾರೆ. ಜೈದೀಪ್‌ ಅಹ್ಲಾವತ್‌ ಮುಖ್ಯ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಮಕ್ಬೂಲ್‌ ಖಾನ್‌ ಅವರ ಈ ಚಿತ್ರದಲ್ಲಿ ಆಕ್ಷನ್‌ ಮತ್ತು ಮಸಾಲೆಗಳು ಸಾಕಷ್ಟು ಕಾಣುತ್ತಿವೆ. ಈ ಚಿತ್ರದಲ್ಲಿ ಇಶಾನ್‌ ಮತ್ತು ಅನನಾ ಜೋಡಿಯು ಚೆನ್ನಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಇಶಾನ್‌ ಜತೆಗೆ, ಅನನ್ಯಾ ಕೂಡ ಆಕ್ಷನ್‌ ಮೋಡ್‌ನ‌ಲ್ಲಿ ಕಾಣಿಸಿಕೊಂಡಿದ್ದಾರೆ.

ಅನನ್ಯಾ ಪಾಂಡೆ ಮತ್ತು ಇಶಾನ್‌ ಖಟ್ಟರ್‌ ಇಬ್ಬರು ಜತೆಯಾಗಿ ನಟಿಸುತ್ತಿರುವ ಬಾಲಿವುಡ್‌ನ‌ಲ್ಲಿನ ಮೂರನೇ ಚಿತ್ರ ಇದಾಗಿದೆ. ಮತ್ತಷ್ಟು ಕುತೂಹಲ ತಣಿಸಲು ಟ್ರೈಲರ್‌ಗೆ ಕಾಯಲೇಬೇಕು.

View this post on Instagram

Bola tha na.. Aarele Teaser link in bio #KhaaliPeeli ??

A post shared by Ishaan (@ishaankhatter) on

ಟಾಪ್ ನ್ಯೂಸ್

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

1-wewewe

Mangaluru CCB  ಕಾರ್ಯಾಚರಣೆ: ಅಕ್ರಮ ಪಿಸ್ತೂಲ್ ಹೊಂದಿದ್ದ ಇಬ್ಬರ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwe

Cannes 2024 : ಐಶ್ವರ್ಯಾ ರೈ ಹೊಸ ಲುಕ್‌ಗೆ ನೆಟ್ಟಿಗರ ಪರ, ವಿರೋಧ ಕಮೆಂಟ್‌

12

Cannes‌ Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು

11

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.