ಸವಾಲಿನ ನಡುವೆ ಶಿಕ್ಷಕರ ದಿನಾಚರಣೆ

Team Udayavani, Sep 5, 2020, 6:03 AM IST

ಸವಾಲಿನ ನಡುವೆ ಶಿಕ್ಷಕರ ದಿನಾಚರಣೆ

ಸಾಂದರ್ಭಿಕ ಚಿತ್ರ

ಇಂದು ಸಮಾಜ ಮತ್ತು ಸರಕಾರ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲಬೇಕಾದ ಅಗತ್ಯವಿದೆ.  ಅವರ ಸಮಸ್ಯೆಗ ಳಿಗೆ ತ್ವರಿತವಾಗಿ ಸ್ಪಂದಿಸಬೇಕಿದೆ. ಶಿಕ್ಷಣ ಕ್ಷೇತ್ರಕ್ಕೆ ಮರುವೇಗ ನೀಡುವ ಈ  ಯೋಧರಿಗೆ ಅಸೌಖ್ಯ, ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ.

ಕೋವಿಡ್‌ ಸಂಕಷ್ಟದ ಕಾಲದಲ್ಲೇ ಶಿಕ್ಷಕರ ದಿನಾಚರಣೆ ಎದುರಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಈ ರೀತಿಯ ಸವಾಲನ್ನು ಶಿಕ್ಷಣ ವಲಯ ಎಂದೂ ಎದುರಿಸಿರಲಿಲ್ಲ. ಖಾಸಗಿ ಶಾಲೆಗಳು, ಸರಕಾರಿ ಶಾಲೆಗಳು, ಕಾಲೇಜುಗಳು… ಒಟ್ಟಾರೆ ಯಾಗಿ ಶೈಕ್ಷಣಿಕ ರಂಗದ ಪ್ರತಿಯೊಂದು ಹಂತಕ್ಕೂ ಸವಾಲೊಡ್ಡಿ ಬಿಟ್ಟಿದೆ ಪುಟ್ಟ ವೈರಸ್‌.

ಶ್ಲಾಘನೀಯ ಸಂಗತಿಯೆಂದರೆ, ಈ ಅತೀವ ಸವಾಲುಗಳ ನಡುವೆಯೇ ನಮ್ಮ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ, ಜತೆಗೆ ವೈಯಕ್ತಿಕ ಸಂಕಷ್ಟವನ್ನೂ ಎದುರಿಸುತ್ತಿದ್ದಾರೆ. ಹೊಸ ಸಹಜತೆಯ ಜತೆಗೆ ಹೆಜ್ಜೆಹಾಕಲೇಬೇಕಾದ ಅನಿವಾರ್ಯತೆ ಇದೆ. ಈ ಕಾರಣಕ್ಕಾಗಿಯೇ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆ ವಿದ್ಯಾಗಮದಂಥ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇದರಡಿಯಲ್ಲಿ ಶಿಕ್ಷಕರು ಗ್ರಾಮಗಳಿಗೆ ತೆರಳಿ, ವಿದ್ಯಾರ್ಥಿಗಳಿಗೆ ಪಾಠ ಮಾಡಿಬರುತ್ತಿದ್ದಾರೆ. ಸರಕಾರವು ಚಂದನ ವಾಹಿನಿಯ ಮೂಲಕವೂ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ.

ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಶಿಕ್ಷಕರು ಕೋವಿಡ್‌ಗೆ ತುತ್ತಾಗಿರುವುದರಿಂದ ಸಹಜವಾಗಿಯೇ ಬೋಧಕರಲ್ಲಿ ಆತಂಕವಿದೆ. ಅಗತ್ಯ ಸುರಕ್ಷಾ ಪರಿಕರಗಳ ಅಲಭ್ಯತೆಯೂ ಅವರಲ್ಲಿನ ಆತಂಕವನ್ನು ಹೆಚ್ಚಿಸುತ್ತಿದೆ.

ಇನ್ನೊಂದೆಡೆ ಖಾಸಗಿ ಶಿಕ್ಷಣ ವಲಯಕ್ಕೂ ಇದು ಪರೀಕ್ಷೆಯ ಸಮಯವೇ. ಖಾಸಗಿ ಶಾಲೆಗಳಿಂದು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಇದರ ನೇರ ಪರಿಣಾಮ ಅಲ್ಲಿನ ಶಿಕ್ಷಕರ ಮೇಲೆ ಆಗತೊಡಗಿದೆ. ಕೆಲವು ಶಾಲೆಗಳಲ್ಲಂತೂ ಐದಾರು ತಿಂಗಳಿಂದ ಸಂಬಳವೇ ಸಿಗದೇ, ಶಿಕ್ಷಕರು ಜೀವನಾಧಾರಕ್ಕಾಗಿ ಅನ್ಯ ಕೆಲಸಗಳತ್ತ ಮುಖ ಮಾಡುವಂತಾಗಿದೆ. ಇವರೆಲ್ಲರ ಸಂಕಷ್ಟಗಳಿಗೆ ಸಮಾಧಾನ ಹೇಳುವ ವಿಚಾರದಲ್ಲಿ ಸರಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ತ್ವರಿತವಾಗಿಯೇ ಚರ್ಚೆ ನಡೆಸಿ, ಮುಂದಡಿ ಇಡಬೇಕಿದೆ.

ಶಿಕ್ಷಣವನ್ನು ಆನ್‌ಲೈನ್‌ ಮಾಡುವ ವಿಚಾರದಲ್ಲಿ ಈಗಲೂ ಹಲವಾರು ಅಡ್ಡಿಗಳಿವೆ. ನೆಟ್‌ವರ್ಕ್‌ ಸಮಸ್ಯೆ ಒಂದೆಡೆಯಾ ದರೆ, ರಾಜ್ಯದ ವಿದ್ಯಾರ್ಥಿ ಕುಟುಂಬಗಳ ಬಳಿ ಅಗತ್ಯ ಫೋನ್‌ಗಳು, ಟ್ಯಾಬ್‌ಗಳ ಕೊರತೆ ಕಾಡುತ್ತಿದೆ. ಈ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕಿದೆ.

ಬದಲಾವಣೆಯೆನ್ನುವುದು ಜಗದ ನಿಯಮ ಎನ್ನುವ ನಾಣ್ನುಡಿಯೇ ಇದೆ ಯಾದರೂ, ಹಠಾತ್ತನೆ ಈ ಪ್ರಮಾಣದ ಬದಲಾವಣೆಗೆ ಒಗ್ಗಿಕೊಳ್ಳುವುದು ಸುಲಭದ ಕೆಲಸವಲ್ಲ. ಯಾವುದೇ ಬೃಹತ್‌ ಬದಲಾ ವಣೆಯಿರಲಿ, ಆರಂಭದಲ್ಲಿ ಅದು ಬಹಳ ಅಸೌಖ್ಯವನ್ನುಂಟು ಮಾಡುತ್ತದೆ ಎನ್ನುವುದು ಸತ್ಯ.

ಈ ಕಾರಣಕ್ಕಾಗಿಯೇ, ಇಂದು ಸಮಾಜ ಮತ್ತು ಸರಕಾರ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲಬೇಕಾದ ಅಗತ್ಯವಿದೆ. ಅವರ ಸಮಸ್ಯೆಗ ಳಿಗೆ ತ್ವರಿತವಾಗಿ ಸ್ಪಂದಿಸಬೇಕಿದೆ. ಶಿಕ್ಷಣ ಕ್ಷೇತ್ರಕ್ಕೆ ಮರುವೇಗ ನೀಡುವ ಈ ಯೋಧರಿಗೆ ಅಸೌಖ್ಯ, ತೊಂದರೆ ಯಾಗದಂತೆ ನೋಡಿಕೊಳ್ಳಬೇಕಿದೆ. ಪಾಠಕ್ಕಿಂತ ಪಠ್ಯೇತರ ಹೊರೆಯೂ ಹೆಚ್ಚಾಗುತ್ತಿದೆ ಎನ್ನುವ ದೂರುಗಳೂ ಕೇಳಿಬರು ತ್ತಿದ್ದು, ಶಿಕ್ಷಕರ ಮೇಲಿಂದ ಈ ಭಾರವನ್ನು ತಗ್ಗಿಸಲು ಸರಕಾರ ಮುಂದಾಗಬೇಕು.

ಕೊರೊನಾ ವಾರಿಯರ್‌ಗಳ ಬಗ್ಗೆ ಚರ್ಚೆ ನಡೆಯುವಾಗಲೆಲ್ಲ ಶಿಕ್ಷಕರ ಹೆಸರು ಕೊನೆಗೆ ಬರುತ್ತಿರುವುದು ಬೇಸರದ ಸಂಗತಿ. ಎಲ್ಲ ಸಂಕಷ್ಟಗಳ ನಡುವೆಯೂ ನವಪೀಳಿಗೆಗೆ ಭದ್ರ ಜ್ಞಾನ ಬುನಾದಿ ಹಾಕಲು ಕಟಿಬದ್ಧರಾಗಿರುವ ಈ ವರ್ಗಕ್ಕೆ ಇಡೀ ಸಮಾಜ ಋಣಿಯಾಗಬೇಕು. ಈಗಿನ ಸಂಕಷ್ಟಗಳೆಲ್ಲ ಆದಷ್ಟು ಬೇಗನೇ ಬಗೆಹರಿಯುವಂತಾಗಲಿ ಎಂದು ಆಶಿಸೋಣ. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಟಾಪ್ ನ್ಯೂಸ್

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

ದಸರಾ ಹಬ್ಬಕ್ಕೆ ಪ್ಯಾನ್‌ ಇಂಡಿಯಾ ಫೈಟ್:‌ ʼಮಾರ್ಟಿನ್‌ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್

ದಸರಾ ಹಬ್ಬಕ್ಕೆ ಪ್ಯಾನ್‌ ಇಂಡಿಯಾ ಫೈಟ್:‌ ʼಮಾರ್ಟಿನ್‌ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್

Davanagere: ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ನಕಲಿ ಎಫ್.ಬಿ ಖಾತೆಯಿಂದ ಹಣಕ್ಕೆ ಬೇಡಿಕೆ

Davanagere: ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ನಕಲಿ ಎಫ್.ಬಿ ಖಾತೆಯಿಂದ ಹಣಕ್ಕೆ ಬೇಡಿಕೆ

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Kotee movie trailer

Kotee movie; ಇನ್ನೆರಡು ದಿನದಲ್ಲಿ ಧನಂಜಯ್‌ ನಟನೆಯ ‘ಕೋಟಿ’ ಟ್ರೇಲರ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam 2

Public Examination: ವಿವೇಕಯುತ ನಡೆ ಇರಲಿ

Farmer

842 ರೈತರ ಆತ್ಮಹತ್ಯೆ; ಮನೋಸ್ಥೈರ್ಯ ತುಂಬುವ ಕಾರ್ಯವಾಗಲಿ

Polluted Water: ಕಲುಷಿತ ನೀರಿನ ಸಮಸ್ಯೆಗೆ ಸರಕಾರ ಅಂತ್ಯ ಹಾಡಲಿ

Polluted Water: ಕಲುಷಿತ ನೀರಿನ ಸಮಸ್ಯೆಗೆ ಸರಕಾರ ಅಂತ್ಯ ಹಾಡಲಿ

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

chef chidambara trailer

Chef Chidambara trailer: ಭರವಸೆ ಮೂಡಿಸಿದ ಅನಿರುದ್ಧ್ ಸಿನಿಮಾ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

12

Sagara: ಮತದಾನಕ್ಕೆ ಬಂದಿದ್ದವರ ಮೊಬೈಲ್ ಕಳ್ಳತನ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

ಈಶಾನ್ಯ ಪದವೀಧರರ ಚುನಾವಣೆ: ಹರಪನಹಳ್ಳಿಯಲ್ಲಿ ಮ.1 ಗಂಟೆಯವರೆಗೆ ಶೇ.33.8 ರಷ್ಟು ಮತದಾನ

ಈಶಾನ್ಯ ಪದವೀಧರರ ಚುನಾವಣೆ: ಹರಪನಹಳ್ಳಿಯಲ್ಲಿ ಮ.1 ಗಂಟೆಯವರೆಗೆ ಶೇ.33.8 ರಷ್ಟು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.