ಭಾರತ-ಚೀನ ಮುಖಾಮುಖಿ; ಇದಿರೇಟು ನೀಡಲು ಭಾರತ ಸರ್ವಸನ್ನದ್ಧ


Team Udayavani, Sep 13, 2020, 6:20 AM IST

ಭಾರತ-ಚೀನ ಮುಖಾಮುಖಿ; ಇದಿರೇಟು ನೀಡಲು ಭಾರತ ಸರ್ವಸನ್ನದ್ಧ

ಹೊಸದಿಲ್ಲಿ: ಶಾಂತಿ ಮಂತ್ರ ಪಠಿಸುತ್ತಲೇ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡುತ್ತಿರುವ ಚೀನವು ಮತ್ತೆ ತನ್ನ ಕೆಟ್ಟ ಚಾಳಿ ಮುಂದುವರಿಸಿದೆ. ಲಡಾಖ್‌ ಸನಿಹದ ಪ್ಯಾಂಗಾಂಗ್‌ ತ್ಸೋನ ದಕ್ಷಿಣ ಭಾಗದಲ್ಲಿರುವ ಸ್ಪ್ಯಾಂಗ್ಗರ್‌ ಗ್ಯಾಪ್‌ ಬಳಿ ಚೀನದ ಸಾವಿರಾರು ಸೈನಿಕರು ಟ್ಯಾಂಕರ್‌ಗಳು ಮತ್ತು ಹೋವಿಟ್ಜರ್‌ಗಳೊಂದಿಗೆ ಜಮಾಯಿಸಿದ್ದಾರೆ. ಈ ಮೂಲಕ ಎರಡೂ ಸೇನೆಗಳು ಮುಖಾಮುಖಿಯಾಗಿ ನಿಂತು ಯುದ್ಧ ಮಾಡುವಷ್ಟು ಸನಿಹಕ್ಕೆ ಬಂದಿವೆ.

ಈ ಬೆಳವಣಿಗೆಗಳ ಬೆನ್ನಲ್ಲೇ ಭಾರತೀಯ ಸೇನೆಯೂ ತೀವ್ರ ಕಟ್ಟೆಚ್ಚರ ವಹಿಸಿದೆ. ಚೀನದ ಸೈನಿಕರು ಗಡಿಯ ಸನಿಹಕ್ಕೆ ಬರುತ್ತಿದ್ದಂತೆ ಭಾರತೀಯ ಯೋಧರೂ ಶಸ್ತ್ರಾಸ್ತ್ರ ಗಳೊಂದಿಗೆ ಗಡಿಯತ್ತ ಧಾವಿಸಿದ್ದಾರೆ. ಚೀನದ ಸೇನೆಯ ಅಟಾಟೋಪ ಎದುರಿಸಲು ಸೇನೆಯೂ ಸರ್ವರೀತಿಯಲ್ಲೂ ಸನ್ನದ್ಧವಾಗಿ ನಿಂತಿದೆ ಎಂದು ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಒಂದು ಆಂಗ್ಲ ವೆಬ್‌ಸೈಟ್‌ ವರದಿ ಮಾಡಿದೆ.

ಮೂಲಗಳ ಪ್ರಕಾರ ಚೀನದ ಮಿಲಿಶಿಯಾ ಸ್ಕ್ವಾಡ್‌ ಈ ಭಾಗಕ್ಕೆ ಬಂದಿದೆ. ಇದರಲ್ಲಿ ಪರ್ವತಾರೋಹಿಗಳು, ಬಾಕ್ಸರ್‌ಗಳು, ಸ್ಥಳೀಯ ಸಮರ ಕ್ಲಬ್‌ನ ಸದಸ್ಯರು ಮತ್ತು ಇತರ ಸಿಬಂದಿ ಇರುತ್ತಾರೆ. ಈ ಸ್ಕ್ವಾಡ್‌ ಅನ್ನು ಚೀನ ಸೇನೆಯ ನೆರವಿಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಪಹರಣ: ಗ್ಲೋಬಲ್‌ ಟೈಮ್ಸ್‌ ಧಿಮಾಕು
ಅರುಣಾಚಲ ಪ್ರದೇಶದ ಐವರು ಯುವಕರ ಅಪಹರಣ ಪ್ರಕರಣದ ಬೆನ್ನಲ್ಲೇ ಕಳೆದ ಸೋಮವಾರ ಚೀನ ಸರಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಅರುಣಾಚಲ ಪ್ರದೇಶ ಸಂಬಂಧ ಉದ್ಧಟತನ ಮೆರೆದಿತ್ತು. ಇದುವರೆಗೆ ಚೀನವು ಈ ರಾಜ್ಯಭಾರತದ್ದು ಎಂದು ಗುರುತಿಸಿಯೇ ಇಲ್ಲ ಎಂದಿತ್ತು. ಅದು ಟಿಬೆಟ್‌ನ ಮತ್ತೂಂದು ಭಾಗ ಎಂದೇ ನಂಬಿದ್ದೇವೆ ಎಂದು ಬರೆದು ಭಾರತೀಯ ಸಾರ್ವಭೌಮತೆ ವಿಚಾರದಲ್ಲಿ ಮೂಗುತೂರಿಸಿತ್ತು.

ಈ ಉದ್ಧಟತನದ ನಡುವೆಯೇ ಚೀನವು ಸದ್ದಿಲ್ಲದೆ ಭಾರತದ ಯುವಕರನ್ನು ಬಿಡುಗಡೆ ಮಾಡಿದೆ. ಮಾಲ್ಡೀವ್ಸ್‌ ಜತೆ ಅಮೆರಿಕ ಒಪ್ಪಂದ
ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನದ ಪ್ರಭಾವವನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕ ಸರಕಾರವು ಮಾಲ್ಡೀವ್ಸ್‌ ಜತೆಗೆ ರಕ್ಷಣಾತ್ಮಕ ಒಪ್ಪಂದಗಳಿಗೆ ಸಹಿ ಹಾಕಿದೆ. ಅಮೆರಿಕದ ಈ ನಡೆಯು ಭಾರತಕ್ಕೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.