ಕೈ ಅಂದ ಇಮ್ಮಡಿಗೊಳಿಸುವ “ಕರಿಮಣಿ ಬ್ರಾಸ್ಲೈಟ್”‌

ವಿನ್ಯಾಸ ಮಾಡುವಾಗ ಕರಿಮಣಿ, ಕ್ರಿಸ್ಟಲ್‌ ಮಣಿ, ಹರಳಿನಿಂದ ತಯಾರಿಸಿದ ನಕ್ಷತ್ರ, ಹೃದಯ, ವಿವಿಧ ಆಕೃತಿಯ ಚಿಕ್ಕ ಚಿಕ್ಕ ಪೆಂಡೆಂಟ್‌ ಬಳಸಲಾಗುತ್ತದೆ.

Team Udayavani, Sep 14, 2020, 10:36 AM IST

ಕೈ ಅಂದ ಇಮ್ಮಡಿಗೊಳಿಸುವ “ಕರಿಮಣಿ ಬ್ರಾಸ್ಲೈಟ್”‌

ಸುಂದರ ನಕ್ಷತ್ರ, ಅಲ್ಲೊಂದು ಚಂದ್ರ, ಕಪ್ಪು ಮಣಿಗಳೇ ಸುತ್ತಿಕೊಂಡು ಕೈ ಗೆ ಮೆರಗು ನೀಡುತ್ತಿದೆ ಕರಿಮಣಿ ಬ್ರಾಸ್ಲೈಟ್‌. ಕರಿಮಣಿ ತಾಳಿಸರ, ಕಾಲುಂಗರ, ಕೈಬಳೆ, ಸಿಂಧೂರ ಇವುಗಳು ಮುತ್ತೈದೆ ಶೋಭೆಗೆ ಪ್ರತಿಕದಂತೆ ಎನ್ನುವ ಸಂಪ್ರದಾಯ ನಂಬಿಕೆ ನಮ್ಮಲ್ಲಿದೆ. ಇಂದು ಸಂಪ್ರದಾಯ ಮತ್ತು ಫ್ಯಾಷನ್‌ ಎರಡೂ ಪರಿಕಲ್ಪನೆ ಒಗ್ಗೂಡಿದೆ. ಈ ಕಾರಣದಲ್ಲಿ ನವನವೀನ ಫ್ಯಾಷನ್‌ಗಳು ಬಂದು ಹೋಗಿ ಮತ್ತದೆ ಹಳೇ ಫ್ಯಾಷನ್‌ ನೂತನ ರೂಪವಾಗಿ ಬಂದು ಬಿಟ್ಟಿದೆ. ಇಂತಹ ಫ್ಯಾಷನ್‌ಗಳಲ್ಲಿ ಕರಿಮಣಿ ಸರ ಕೂಡ ಒಂದೆನಿಸಿದೆ.

ಹಿಂದೆಲ್ಲ ಕರಿಮಣಿ ಎಂದರೆ ಕೊರಳಲ್ಲಿ ಸ್ಥಾನ ಪಡೆದಿತ್ತು ಆದರೆ ಇಂದು ಕಾಲ ಬದಲಾಗಿದೆ ಬದುಕಿನ ನೂತನ ಅರ್ಥ ದೊರಕಿಸುವ ಮಂಗಲ ಸೂತ್ರವು ಕೈಗೆ ಮೆರಗು ನೀಡುವ ನಿಟ್ಟಿನಲ್ಲಿ ಸಹ ಉಪಯೋಗಿಸುತ್ತಿದ್ದಾರೆ. ಕರಮಣಿ ಸರದ ಕುರಿತು ಪರವಿರೋಧಗಳು ಆಗಾಗ ಕೇಳಿ ಬರುತ್ತಿದ್ದು ಆಧುನಿಕತೆಯ ಮಂಪರಿನ ನಡುವೆ ಕರಿಮಣಿಯೆಂದರೆ ವಿನೂತನ ರೂಪ ಪಡೆದ ಬ್ರಾಸ್ಲೈಟ್‌ ಫ್ಯಾಷನ್‌ ಪ್ರಿಯರ ಮನಗೆದ್ದಿದೆ ಎನ್ನಬಹುದು.

ಕರಿಮಣಿ ಬಳೆ
ಕರಿಮಣಿ ಬಳೆ ಸ್ವಲ್ಪ ಹಳೆಯ ಫ್ಯಾಷನ್‌ ಆಗಿದ್ದು ಕರಿಮಣಿಯನ್ನು ಬಳೆಯ ನಡುವೆ ಇರಿಸಿ ಸಿದ್ಧಗೊಳಿಸುತ್ತಿದ್ದರು. ಹುಟ್ಟಿದ ಮಗುವಿನ ಪುಟ್ಟ ಕೈಗಳಿಗೆ ದೃಷ್ಟಿತಾಕದಂತೆ ಕರಿಮಣಿ ಬಳೆಯನ್ನು ಬಳಸುತ್ತಿದ್ದರು. ಸಾಮಾನ್ಯವಾಗಿ ಮೊದ ಮೊದಲು ಚಿನ್ನದಲ್ಲಿ ಈ ಫ್ಯಾಷನ್‌ ಪರಿಚಯಿಸಲ್ಪಟ್ಟು ಸಮಾಜದ ಶ್ರೀಮಂತವರ್ಗದ ಮಹಿಳೆಯರು ಮಾತ್ರ ಧರಿಸುತ್ತಿದ್ದ ಕಾರಣ ಮೊದಲು ಅಷ್ಟಾಗಿ ಜನಪ್ರಿಯವಾಗಿರಲಿಲ್ಲ.

ಇದನ್ನೂ ಓದಿ: ಜೀವಯಾನ: ಭಾವನೆಗಳನ್ನು ಅರ್ಥಮಾಡಿಕೊಂಡರೆ ಬದುಕು ಬಲು ಸುಂದರ

ಕಾಲಕ್ರಮೇಣ ಬೆಳ್ಳಿ ಮತ್ತು ಮೆಟಲ್‌ನಲ್ಲಿ ಸಾಮಾನ್ಯವರ್ಗದವರನ್ನು ಸಹ ತಲುಪಿ ಜನಪ್ರಿಯವಾಯಿತು. ಮದುವೆಯಾದವರು, ಯುವತಿಯರು ಸಹ ಈ ಬಳೆ ಧರಿಸುತ್ತಿಸುತ್ತಿದ್ದು ಆಗಾಗ ಪರವಿರೋಧಗಳು ಸಾಮಾನ್ಯವಾಗಿತ್ತು. ಆದರೆ ಕಾಲಕ್ಕನುಗುಣವಾಗಿ ವಿನೂತನ ವಿನ್ಯಾಸ ಪಡೆಯುವುದು ಸಾಮಾನ್ಯವಾಗಿದ್ದು ಇದೀಗ ಕರಿಮಣಿ ಬ್ರಾಸ್ಲೆ„ಟ್‌ ಈ ನಿಟ್ಟಿನಲ್ಲಿ ಮುಂಚುಣಿಯಲ್ಲಿದೆ ಎನ್ನಬಹುದು.

ಕರಿಮಣಿ ಬ್ರಾಸ್ಲೈಟ್‌
ಬಾಲಿವುಡ್‌ನ‌ ಸ್ಟಾರ್‌ ನಟಿಯರಾದ ಶಿಲ್ಪಾ ಶೆಟ್ಟಿ, ಸೋನಮ್‌ ಕಪೂರ್‌ ಈ ಕರಿಮಣಿಯ ಬ್ರಾಸ್ಲೈಟ್‌ ಧರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಮಟ್ಟಿಗೆ ಸದ್ದಾಗಿದ್ದರೂ. ಆ ಬಳಿಕ ಫ್ಯಾಷನ್‌ ನೆಲೆಯಲ್ಲಿ ಇಂದು ಎಲ್ಲೆಡೆ ಈ ರೀತಿ ಬ್ರಾಸ್ಲೈಟ್‌ ಬಳಕೆ ಮಾಡುತ್ತಿದ್ದು ಕೆಲವರು ಕತ್ತಿಗೆ ಕರಿಮಣಿ ಹಾಕುವ ಪರ್ಯಾಯವಾಗಿ ಬ್ರಾಸ್ಲೈಟ್‌ ಮಾಡಿ ಧರಿಸುತ್ತಿದ್ದರೆ ಇನ್ನೂ ಕೆಲವರು ಕತ್ತು ಮತ್ತು ಕೈ ಎರಡಕ್ಕೂ ಪ್ರತ್ಯೇಕವೆಂಬಂತೆ ಆಯ್ಕೆ ಮಾಡಲಾಗಿರುವುದನ್ನು ಕಾಣಬಹುದು.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಕನ್ನಡಿಗರ ಒಡೆತನದ ಕ್ಯಾಸಿನೋ?

ಡಿಸೈನ್‌ ಹೇಗೆ:
ಚಿನ್ನದ ಈ ಮಾದರಿಯ ಬ್ರಾಸ್ಲೈಟ್ ವಿನ್ಯಾಸದಲ್ಲಿ ಚಿನ್ನದ ಮಣಿ ಮತ್ತು ಕರಿಮಣಿಯನ್ನು ಮಿಶ್ರವಾಗಿಸಿ ಅಲಲ್ಲಿ ಸರವನ್ನು ಮತ್ತು ವಿವಿಧ ಬಣ್ಣದ ಹರಳನ್ನು ಸಹ ಬಳಸಿ ಮಾಡುತ್ತಾರೆ. ವಿನ್ಯಾಸ ಮಾಡುವಾಗ ಕರಿಮಣಿ, ಕ್ರಿಸ್ಟಲ್‌ ಮಣಿ, ಹರಳಿನಿಂದ ತಯಾರಿಸಿದ ನಕ್ಷತ್ರ, ಹೃದಯ, ವಿವಿಧ ಆಕೃತಿಯ ಚಿಕ್ಕ ಚಿಕ್ಕ ಪೆಂಡೆಂಟ್‌ ಬಳಸಲಾಗುತ್ತದೆ.

ಯಾವ ಡ್ರೇಸ್‌ಗೆ ಸೂಕ್ತ:
ದಿನನಿತ್ಯ ಬಳಕೆಗೂ ಈ ರೀತಿ ಬ್ರಾಸ್ಲೈಟ್ಉತ್ತಮವಾಗಿದ್ದರೂ ಆಯ್ಕೆ ಮಾಡುವಾಗ ಹರಳು ರಹಿತ ಕರಿಮಣಿ ಬ್ರಾಸೈಟ್‌ ಖರೀದಿಸುವುದು ಉತ್ತಮ. ಜೀನ್ಸ್‌, ಕುರ್ತಿ, ಸೀರೆ ಬಹುತೇಕ ಎಲ್ಲಾ ಬಟ್ಟೆಗೂ ಈ ಬ್ರಾಸ್ಲೈಟ್‌ ತೊಡಬಹುದಾಗಿದೆ.  ಒಟ್ಟಾರೆ ಸಂಪ್ರದಾಯಕ್ಕೂ ಸೈ ಎನ್ನುವ ಫ್ಯಾಷನ್‌ ಪರಿಚಯಿಸಿದ್ದು ಮೆಚ್ಚುವ ಸಂಗತಿಯಾಗಿದೆ.

*ರಾಧಿಕಾ ಕುಂದಾಪುರ

ಟಾಪ್ ನ್ಯೂಸ್

Hebri ಪರಿಸರದಲ್ಲಿ ಮಂಗಗಳ ಸಾವು; ಕಾಡಿಗೆ ತೆರಳುವಾಗ ಇರಲಿ ಜಾಗ್ರತೆ: ವೈದ್ಯರ ಎಚ್ಚರಿಕೆ

Hebri ಪರಿಸರದಲ್ಲಿ ಮಂಗಗಳ ಸಾವು; ಕಾಡಿಗೆ ತೆರಳುವಾಗ ಇರಲಿ ಜಾಗ್ರತೆ: ವೈದ್ಯರ ಎಚ್ಚರಿಕೆ

rishi sun

UK; ಆರ್ಥಿಕ ಹಿಂಜರಿತದಿಂದ ಬ್ರಿಟನ್‌ ಅರ್ಥ ವ್ಯವಸ್ಥೆ ಪಾರು

ದಿ| ಡಾ| ಲಕ್ಷ್ಮಣ ಪ್ರಭು ಅವರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ

ದಿ| ಡಾ| ಲಕ್ಷ್ಮಣ ಪ್ರಭು ಅವರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ

1-weewewqe

PSLVಯ ಹೊಸ ಎಂಜಿನ್‌ ಪರೀಕ್ಷೆ: ಇಸ್ರೋ

Padma Shri ಸ್ವೀಕರಿಸಿದ ದೇಸಿ ಭತ್ತ ತಳಿ ಸಂರಕ್ಷಕ ಬೆಳೇರಿ

Padma Shri ಸ್ವೀಕರಿಸಿದ ದೇಸಿ ಭತ್ತ ತಳಿ ಸಂರಕ್ಷಕ ಬೆಳೇರಿ

Central Govt ರಫ್ತು ನಿರ್ಬಂಧ ತೆರವು: ಈರುಳ್ಳಿ ದರ ಏರಿಕೆ

Central Govt ರಫ್ತು ನಿರ್ಬಂಧ ತೆರವು: ಈರುಳ್ಳಿ ದರ ಏರಿಕೆ

naksal (2)

Chhattisgarh; ಮತ್ತೆ 12 ನಕ್ಸಲೀಯರ ಹತ್ಯೆ: ಈ ವರ್ಷ ಒಟ್ಟು 103 ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Uddav-2

Uddhav Thackeray ಪಕ್ಷದ ಅಭ್ಯರ್ಥಿ ಪರ ಮುಂಬಯಿ ಸ್ಫೋಟ ಆರೋಪಿ ಪ್ರಚಾರ?

Jagan mohan

Andhra; ಜನರ ಖಾತೆಗೆ ಹಣ ಹಾಕಬೇಡಿ: ಸರಕಾರಕ್ಕೆ ಹೈಕೋರ್ಟ್‌

1-weewewqew

ಭಕ್ತರ ದರ್ಶನಕ್ಕೆ ಚಾರ್‌ಧಾಮ್ ಮುಕ್ತ

Hebri ಪರಿಸರದಲ್ಲಿ ಮಂಗಗಳ ಸಾವು; ಕಾಡಿಗೆ ತೆರಳುವಾಗ ಇರಲಿ ಜಾಗ್ರತೆ: ವೈದ್ಯರ ಎಚ್ಚರಿಕೆ

Hebri ಪರಿಸರದಲ್ಲಿ ಮಂಗಗಳ ಸಾವು; ಕಾಡಿಗೆ ತೆರಳುವಾಗ ಇರಲಿ ಜಾಗ್ರತೆ: ವೈದ್ಯರ ಎಚ್ಚರಿಕೆ

rishi sun

UK; ಆರ್ಥಿಕ ಹಿಂಜರಿತದಿಂದ ಬ್ರಿಟನ್‌ ಅರ್ಥ ವ್ಯವಸ್ಥೆ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.