ನಿರಂತರ ಮಳೆಗೆ ನೆಲ ಕಚ್ಚಿದ ಮೆಣಸಿನ ಕಾಳು

Team Udayavani, Oct 19, 2020, 4:13 PM IST

Hasan-tdy-1

ಸಕಲೇಶಪುರ: ಪ್ರಸಕ್ತ ಸಾಲಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ, ಬಹುತೇಕ ತೋಟಗಳಲ್ಲಿನ ಕಾಳುಮೆಣಸಿನ ಬಳ್ಳಿ ಕೊಳೆಯಲಾರಂಭಿಸಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಸಾಮಾನ್ಯವಾಗಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ಕಡಿಮೆ ಆಗಬೇಕಿದ್ದ ಮಳೆ, ಇನ್ನೂ ಮುಂದುವರಿದಿದ್ದು, ಮೆಣಸು ಬೆಳೆಗಾರರನ್ನು ಆತಂಕಕ್ಕೆ ಇಡುಮಾಡಿದೆ.

ಬಳ್ಳಿಯಬುಡದಲ್ಲಿ ಕಾಣಿಸಿಕೊಳ್ಳುವ ಸೊರಗು ರೋಗ ನಿಧಾನವಾಗಿ ಇಡೀ ಬಳ್ಳಿಯನ್ನೇ ಬಲಿಪಡೆಯುತ್ತಿದೆ.ಮಳೆಗಾಲದ ಆರಂಭದಲ್ಲಿ ಸಮೃದ್ಧವಾಗಿ ಬೆಳೆದುನಿಂತ ಮೆಣಸಿನ ಬಳ್ಳಿ, ನಿರೀಕ್ಷೆಗೂ ಮೀರಿ ಫ‌ಸಲು ಬರುವ ನಿರೀಕ್ಷೆ ರೈತರಲ್ಲಿತ್ತು. ಆದರೆ, ಮಳೆ ವಿಪರೀತವಾದ್ದರಿಂದ ಬಳ್ಳಿ ಕೊಳೆತು ಇಳುವರಿನೆಲಕಚ್ಚಿದೆ ಎನ್ನುತ್ತಾರೆ ಬೆಳೆಗಾರ ಪ್ರದೀಪ್‌.

ಬೆಳೆಗಾರರಿಗೆ ಚಿಂತೆ: ಜಂತು ಹುಳುವಿನಿಂದಸೊರಗು ರೋಗ ಬರುವುದಾದರೂ ಅಲ್ಲಿ ಗಿಡಗಳು ನಿಧಾನವಾಗಿ ಸೊರಗುತ್ತವೆ. ಈ ರೋಗಕ್ಕೆ ತುತ್ತಾದ ಬಳ್ಳಿಯಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಒಣಗಿ ಹೋಗುತ್ತವೆ. ರಭಸದ ಮಳೆಯಿಂದ ಸೊರಗು ರೋಗಕಾಣಿಸಿಕೊಂಡು ತೋಟಗಳಉದ್ದಕ್ಕೂ ವ್ಯಾಪಿಸುತ್ತಿರುವುದು ಬೆಳೆಗಾರರ ಚಿಂತೆಗೆಕಾರಣವಾಗಿದೆ.

ಬೆಲೆಯೂ ಏರುತ್ತಿಲ್ಲ: ಇತ್ತ ಮಳೆಯಿಂದ ಶೇ.25ರಷ್ಟು ಫ‌ಲಸು ನೆಲಕಚ್ಚಿರುವ ಬೆನ್ನಲ್ಲೇ ಇತ್ತ ಮಾರುಕಟ್ಟೆಯಲ್ಲಿ ಕಾಳು ಮೆಣಸಿನ ದರ ಕೇಜಿಗೆ 350 ರೂ.ಕ್ಕೆ ಇಳಿದಿದೆ. ಬೆಳೆ ಕಡಿಮೆ ಆದ್ರೂ, ಬೆಲೆಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರು ದಾರಿ ಕಾಣದೆ ಸಾಲದ ಸುಳಿಗೆ ಸಿಲುಕುವಂತಾಗಿದೆ. ಪ್ರಸಕ್ತ ಸಾಲಿನಲ್ಲಿ ಕೂಲಿ, ರಸಗೊಬ್ಬರ,ಕೀಟನಾಶಕಗಳ ದರ ಏರಿಕೆ ಕಂಡಿರುವ ಕಾರಣ ಬೆಳೆಯ ವೆಚ್ಚ ಅಧಿಕವಾಗಿದೆ. ಆದರೆ, ಇಳುವರಿ ಇಳಿಮುಖಗೊಂಡಿದೆ.

ಮಳೆಯಿಂದ ಮೆಣಿಸಿನ ಬಳ್ಳಿ ಉಳಿಸಿಕೊಳ್ಳಲು ರೈತರಿಗೆ ಸಾಧ್ಯವಾ ಗುತ್ತಿಲ್ಲ. ಈಗ ಕೊಯ್ಲು ಮಾಡಿರುವ ಮೆಣಸು ಒಣಗಿಸಲಾಗದೇ, ಇತ್ತ ಬೆಲೆ ಕುಸಿತದಿಂದ ಮಾರಲೂ ಆಗದೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಔಷಧಿ ಸಿಂಪಡಿಸಿ ಮೆಣಸು ಬಳ್ಳಿ ರಕ್ಷಿಸಿ :

ಸಕಲೇಶಪುರ: ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಮೆಣಸು ಬಳ್ಳಿಯನ್ನು ರಕ್ಷಿಸಿಕೊಳ್ಳಲುಬೆಳೆಗಾರರು ಸೂಕ್ತ ಔಷಧೋಪಚಾರಮಾಡಬೇಕು ಎಂದು ಹಿರಿಯತೋಟಗಾರಿಕೆ ಇಲಾಖೆಸಹಾಯಕ ನಿರ್ದೇಶಕಿ ವಿಜಯಚಿತ್ರ ಹೇಳಿದ್ದಾರೆ.

ಈ ಕುರಿತುಪ್ರಕಟಣೆ ನೀಡಿರುವ ಅವರು, ಕಾಳುಮೆಣಸುಬೆಳೆಗಾರರು ಬಳ್ಳಿಗಳಿಗೆ 100 ಗ್ರಾಂಮೆಟಲಾಕ್ಷೆಲ್‌ ಮತ್ತು500 ಗ್ರಾಮ್‌ ಮ್ಯಾಂಕೋಜೆಬ್‌ ಶಿಲೀಂದ್ರ ನಾಶಕಗಳನ್ನು 200 ಲೀಟರ್‌ನೀರಿನಲ್ಲಿ ಕರಗಿಸಿ, ಪ್ರತಿ ಬಳ್ಳಿಗೆ 2 ರಿಂದ 3ಲೀಟರ್‌ ದ್ರಾವಣವನ್ನು ಬಳ್ಳಿಗಳ ಬುಡಕ್ಕೆ ಹಾಕಬೇಕು ಮತ್ತು ಬಳ್ಳಿಗಳಿಗೆ ಸಿಂಪಡಣೆ ಮಾಡಬೇಕು ಎಂದು ಹೇಳಿದ್ದಾರೆ.

ಮಳೆ ನೀರು ನಿಲ್ಲದಂತೆ ಬಸಿಗಾಲುವೆ ಗಳನ್ನು ಮಾಡುವುದು ಮತ್ತು ಪ್ರತಿ ಬಳ್ಳಿಗೆ50 ರಿಂದ 100 ಗ್ರಾಂ ಪೊಟಷ್‌ ರಸಗೊಬ್ಬರವನ್ನು ನೀಡಲು ತೋಟಗಾರಿಕೆ ಇಲಾಖೆ ಹಾಗೂ ಸಾಂಬಾರ ಮಂಡಳಿಯಿಂದ ಶಿಫಾರಸು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆ ವತಿಯಿಂದ ರೈತರು ತಮ್ಮ ಕಾಳುಮೆಣಸು ತೋಟಗಳನ್ನು ಪುನಶ್ಚೇತನಗೊಳಿಸಲು 2020-21ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ 620 ಎಕರೆ ಗುರಿ ನಿಗದಿಯಾಗಿದೆ. ಈ ಯೋಜನೆಯಡಿ ರೈತರಿಂದ ಸ್ವೀಕೃತವಾದ ಅರ್ಜಿಗಳಿಗೆ ಗರಿಷ್ಠ 1 ಎಕರೆಗೆ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಸೂಡೋಮೋನಸ್‌ ಮತ್ತು ಲಘು ಪೋಷ ಕಾಂಶಗಳನ್ನು ನೀಡಲಾಗುತ್ತಿದೆ. 10 ಗ್ರಾಮ್‌ ಟ್ರೈಕೋಡರ್ಮಾ, ಸೂಡೋಮೋನಸ್‌ ಜೈವಿಕ ಗೊಬ್ಬರಗಳನ್ನು 1 ಬುಟ್ಟಿ ಕೊಟ್ಟಿಗೆ ಗೊಬ್ಬರಕ್ಕೆ ಮಿಶ್ರಣ ಮಾಡಿ ಪ್ರತಿ ಬಳ್ಳಿಗೆ ನೀಡುವುದರಿಂದ ಶಿಲೀಂಧ್ರ ರೋಗಹರಡುವುದನ್ನು ನಿಯಂತ್ರಿಸಬಹುದಾಗಿದೆ. ಈರೀತಿಕ್ರಮಕೈಗೊಳ್ಳುವಂತೆಕಾಳುಮಣಸು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

ಮಳೆಯಿಂದ ತೋಟದಲ್ಲಿ ಶೀತ ಹೆಚ್ಚಾಗಿ ಮೆಣಸಿನ ಬಳ್ಳಿಯ ಬೇರು ಕೊಳೆಯುತ್ತದೆ. ಬುಡದಲ್ಲಿ ಫ‌ಂಗಲ್ಸ್‌ ಬಂದು ಮೆಣಸಿನ ಬಳ್ಳಿ ಸಾಯುತ್ತಿದೆ.ಎಲೆ,ಕಾಳು ಉದುರುತ್ತಿದೆ. ಎಷ್ಟೇಔಷಧಿ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈಗಾಗಲೇ ಶೇ.25 ಬೆಳೆ ನಾಶವಾಗಿದೆ. ಉಳಿದ ಬೆಳೆ ಉಳಿಸಿ ಕೊಳ್ಳಲು ಹರಸಾಹಸ ಪಡುವಂತಾಗಿದೆ. ಈ ವರ್ಷ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇಳುವರಿ ಕಡಿಮೆ ಆಗಿದೆ. ಹೀಗಾಗಿ ರೈತರ ಸ್ಥಿತಿ ಅತಂತ್ರವಾಗಿದೆ.ಕೂಡಲೇಸರ್ಕಾರ ಮೆಣಸು ಬೆಳೆಗಾರರ ನೆರವಿಗೆ ಬರಬೇಕಿದೆ. -ಪ್ರಜ್ವಲ್‌, ಕಾಫಿ, ಮೆಣಸು, ಬೆಳೆಗಾರ

ಮೆಣಸಿನ ಬಳ್ಳಿ ಪುನಶ್ಚೇತನಕ್ಕೆ ಬೆಳೆಗಾರರಿಗೆ ಇಲಾಖೆಯಿಂದ ಸಬ್ಸಿಡಿ ದರಲ್ಲಿ ಔಷಧಿಯನ್ನು ವಿತರಿಸಲಾಗುತ್ತದೆ. ಈಗಾಗಲೇ 1560 ರೈತರುಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಹೆಚ್ಚಿನ ಅರ್ಜಿ ಬರುವ ಸಾಧ್ಯತೆ ಇದೆ. ಅದರಲ್ಲಿ ಅರ್ಹರನ್ನು ಆಯ್ಕೆ ಮಾಡಿ ಕಡಿಮೆ ದರದಲ್ಲಿ ಔಷಧಿ ನೀಡಲಾಗುವುದು. ವಿಜಯಚಿತ್ರ, ಸಹಾಯಕ ನಿರ್ದೇಶಕಿ, ತೋಟಗಾರಿಕೆ ಇಲಾಖೆ.

ಸುಧೀರ್‌, ಎಸ್‌.ಎಲ್‌.

ಟಾಪ್ ನ್ಯೂಸ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.