ಬೆಂಕಿಯಲ್ಲಿ ಬೆಂದ ಬದುಕು: ಮದುವೆ ಮನೆಯ ಸಂತೋಷ ಕಿತ್ತುಕೊಂಡ ಬೆಂಕಿಯ ಕೆನ್ನಾಲಿಗೆ

Team Udayavani, Nov 12, 2020, 2:26 PM IST

ಬೆಂಕಿಯಲ್ಲಿ ಬೆಂದ ಬದುಕು: ಮದುವೆ ಮನೆಯ ಸಂತೋಷ ಕಿತ್ತುಕೊಂಡ ಬೆಂಕಿಯ ಕಿನ್ನಾಲಿಗೆ

ಬೆಂಗಳೂರು: ಹೊಸ ಗುಡ್ಡದಹಳ್ಳಿಯಲ್ಲಿ ನಡೆದ ಬೆಂಕಿ ಅವಘಡದಿಂದ ಕಟ್ಟಡ, ಪೀಠೊಪಕರಣಗಳು, ವಾಹನಗಳು ಮಾತ್ರ ಸುಟ್ಟು ಕರಕಲಾಗಿಲ್ಲ. ಹತ್ತಾರು ಕುಟುಂಬಗಳ ಬದುಕನ್ನೇ ಮೂರಾಬಟ್ಟೆಯಾಗಿಸಿದೆ. ಒಬ್ಬರು ಮನೆ, ಪೀಠೊಪಕರಣಗಳು, ಚಿನ್ನಾಭರಣಗಳನ್ನು ಕಳೆದು ಕೊಂಡರೆ, ಮತ್ತೂಬ್ಬರು ಮಗಳಮದುವೆಗಾಗಿ ತಂದಿಟ್ಟಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಇನ್ನೊಬ್ಬರ ಮನೆಯ ಕುಡಿಯುವ ನೀರಿನ ಟ್ಯಾಂಕ್‌ಗಳೇ ಬೆಂಕಿ ತುತ್ತಾಗಿವೆ. ಇನ್ನು ಕೆಲವರು ಮನೆಗಳು ಸಂಪೂರ್ಣ ಸುಟ್ಟುಹೋಗಿವೆ. ಗೋಡನ್‌ನ ಬೆಂಕಿಯ ಕಿನ್ನಾಲಿಗೆ ಮದುವೆ ಮನೆಹಾಗೂ ಕುಟುಂಬ ಸದಸ್ಯರ ಮನಸ್ಸುಗಳನ್ನೇ ಸುಟ್ಟಹಾಕಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮನೆ ಮಾಲೀಕ ಹಾಗೂ ಫ‌ರ್ನಿಚರ್‌ ತಯಾರಿಕಾ ಕಾರ್ಖಾನೆ ಮಾಲೀಕಮಣಿ, 2003ರಿಂದಲೂಇಲ್ಲಿ ವಾಸ ಮಾಡಿಕೊಂಡಿದ್ದೇನೆ. ಮೂರ ಮನೆಗಳನ್ನು ಭೋಗ್ಯಕ್ಕೆ ನೀಡಲಾಗಿದೆ.

ಮೊದಲಅಂತಸ್ತಿನಲ್ಲಿಫ‌ರ್ನಿ ಚರ್‌ಕುರ್ಚಿಗಳಕಾರ್ಖಾನೆ ಯಿದೆ. ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಮನೆಗೆ ಬಂದು ನೋಡಿದಾಗ 3ನೇ ಮಹಡಿಯಲ್ಲಿ ಶೇಖರಿಸಿದ್ದ 400 ಕುರ್ಚಿಗಳು ಸೇರಿ ಪೀಠೊಪಕರಣ ಹಾನಿ ಗೀಡಾಗಿವೆ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯಲ್ಲಿ ಇದ್ದವರನ್ನು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಾಂತರ ಮಾಡಿದರು. ಎರಡನೇ ಮಹಡಿಯ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬುಧವಾರ ನನ್ನ ಮಗಳ ಮದುವೆ ಇತ್ತು. ಅದಕ್ಕಾಗಿ ತಂದಿದ್ದ ಎಲ್ಲ ವಸ್ತುಗಳು ಬೆಂಕಿನುಂಗಿಕೊಂಡಿದೆ. ಆದರೂ ಗಂಡಿನಮನೆಯವರಿಗೆ ಒಪ್ಪಿಸಿ ಸರಳವಾಗಿ ಮದುವೆ ಮಾಡಿಕೊಟ್ಟಿದ್ದೇವೆ. ಮನೆ ಮೇಲ್ಭಾಗದಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್‌ಗಳು ಸುಟ್ಟುಹೋಗಿವೆ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಿದ್ದೇವೆ. ಕಣ್ಣೀರಲ್ಲೇ ಮಗಳ ಮದುವೆ ಮಾಡಲಾಗಿದೆ. 18 ಲಕ್ಷ ಲೋನ್‌ ಕಟ್ಟಬೇಕಿದೆ ಈಹಂತದಲ್ಲಿ ದುರಂತ ಸಂಭವಿಸಿರುವುದು ನೋವು ತಂದಿದೆ ಎಂದು ಭಾವಕರಾದರು.

ಹರ್ಷಾ ಎಂಬವರ ಮನೆ ಕೂಡ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅವರ ವೃತ್ತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆಗಳು ಬೆಂಕಿಯಲ್ಲಿ ಕರಕಲಾಗಿವೆ. “ಮಧ್ಯಾಹ್ನ ಎರಡು ಗಂಟೆಗೆ ಮಾಹಿತಿ ಸಿಕ್ಕಿತ್ತು. ಆಫೀಸ್‌ನಿಂದಕೂಡಲೇಬಂದೆ, ಆದರೆ, ಒಳಗಡೆ ಯಾರನ್ನು ಬಿಡಲಿಲ್ಲ. ರಾತ್ರಿ ಪೂರ್ತಿ ಫ‌ುಟ್‌ಪಾತ್‌ನಲ್ಲಿ ಮಲಗಿದ್ದೆ. ಟಿವಿ, ಫ್ರೀಜ್‌, ಬೀರು ಎಲ್ಲವೂ ಕಳೆದುಕೊಂಡಿದ್ದೇನೆ . ಎಂಟು ವರ್ಷ ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಖರೀದಿಸಿದ ವಸ್ತುಗಳು ಕಣ್ಣ ಮುಂದೆಯೇ ಸುಟ್ಟಿವೆ. ಈಗ ಎಂಟು ವರ್ಷಗಳ ಹಿಂದಕ್ಕೆ ಹೋಗಿದ್ದೇವೆ. ಹಣ ಕೂಡ ಇಲ್ಲ. ಆಫೀಸ್‌ನಲ್ಲಿ ಯಾರಾದರೂ ಕೊಟ್ಟರೆ ಬದುಕಬೇಕು ಎಂದು ಹರ್ಷಾ ಕಣ್ಣೀರು ಸುರಿಸಿದರು.

ಬೆಂಕಿಯಲ್ಲಿ ಬೆಂದ 80 ಸಾವಿರ ರೂ.: ಪ್ರಸನ್ನ ಮತ್ತು ಅವರ ಸಹೋದರಿ ಸುನೀತಾ ಅವರ ಮನೆ ಕೂಡ ಬೆಂಕಿಯ ಕಿನ್ನಾಲಿಗೆ ಬಲಿಯಾಗಿದೆ. “ಮನೆಯಲ್ಲಿದ್ದ ದಾಖಲೆಗಳು, ಬಟ್ಟೆಗಳು, ಎಲೆಕ್ಟ್ರಾನಿಕ್‌ ವಸ್ತುಗಳು ಸುಟ್ಟು ಹೋಗಿವೆ. 80 ಸಾವಿರ ರೂ. ನಗದು, ಚಿನ್ನಾಭರಣ, ಟಿವಿ, ಫ್ರೀಜ್‌ ಕಳೆದುಕೊಂಡಿದ್ದೇವೆ. ರಾತ್ರಿ ಮತ್ತೂಬ್ಬ ಸಹೋದರಿ ಮನೆಯಲ್ಲಿ ಮಲಗಿದ್ದೇವು. ಹಾಕಿಕೊಳ್ಳಲು ಬಟ್ಟೆಗಳು ಇಲ್ಲ ಎಂದು ಅಣ್ಣ-ತಂಗಿ ಬೇಸರ ವ್ಯಕ್ತಪಡಿಸಿದರು.

ಇನ್ನು ರಾಜು ಅವರ ಮನೆ ಕೂಡ ಬೆಂಕಿಗೆ ತುತ್ತಾಗಿದೆ.ಬೆಂಕಿಕಾವಿಗೆ ಮನೆಯ ಹಿಂಬದಿಯ ಗೋಡೆ ಬಿರುಕು ಬಿಟ್ಟಿದ್ದು,ಕಿಟಕಿಯ ಗಾಜುಗಳು ಒಡೆದು ವಸ್ತುಗಳು ಸುಟ್ಟು ಹೋಗಿವೆ.

ಪಾರಿವಾಳ ರಕ್ಷಿಸಿದ ಸಿಬ್ಬಂದಿ : ಗೋಡೌನ್‌ ಸಮೀಪದ ಕಟ್ಟಡದಲ್ಲಿ ನಿವಾಸಿಯೊಬ್ಬರು 150ಕ್ಕೂ ಅಧಿಕ ಪಾರಿವಾಳಗಳನ್ನು ಸಾಕಿದ್ದರು. ಆದರೆ,ಕೆಲ ಪಾರಿವಾಳಗಳು ಬೆಂಕಿಗೆ ಬೆಂದು ಹೋಗಿದ್ದವು. ಇನ್ನುಳಿದವು ಪ್ರಾಣ ರಕ್ಷಣೆಗಾಗಿ ಜೋರಾಗಿ ಕೂಗಿಕೊಳ್ಳುತ್ತಿದ್ದವು. ಅದನ್ನುಕಂಡ ಅಗ್ನಿಶಾಮಕ ದಳದ ಅಧಿಕಾರಿ-ಸಿಬ್ಬಂದಿ, ಸುಮಾರು 100ಕ್ಕೂ ಅಧಿಕ ಪಾರಿವಾಳಗಳನ್ನು ರಕ್ಷಿಸಿ ಹಾರಿಸಿದರು.

ರಾಸಾಯನಿಕವಸ್ತುಗಳು :  ಅಸಿಟೋನ್‌, ಮಿಥೈನ್‌ಕ್ಲೋರೈಡ್‌, ಕ್ಲೋರಫಾರಂ, ಆಲ್ಕೋಹಾಲ್‌ಕೆಮಿಕಲ್‌, ಟಿಎಚ್‌ಎಫ್, ಟ್ಯೂನಿ, ಐಎಸ್‌ಒ ಪ್ರೊಪೈಲ್‌ ಆಲ್ಕೋಹಾಲ್‌, ಎಕ್ಸಿನಾ,ಬೆನ್ಜಿ, ಥಿನ್ನರ್‌, ಹೆಟಾಪಿನ್‌, ಬೂಟನಾಲ್‌ ಸೇರಿ 16 ಬಗೆಯ ರಾಸಾಯನಿಕ ವಸ್ತುಗಳನ್ನು ಗೋಡೌನ್‌ನಲ್ಲಿ ಸಂಗ್ರಹಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.

ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

Cucumber price: ಬಿಸಿಲ ಬರೆ; 1ಕೆಜಿ ಸೌತೆಕಾಯಿ ಬೆಲೆ 62 ರೂ.!

Cucumber price: ಬಿಸಿಲ ಬರೆ; 1ಕೆಜಿ ಸೌತೆಕಾಯಿ ಬೆಲೆ 62 ರೂ.!

ನನಗೂ ಭೂ ವ್ಯವಹಾರಕ್ಕೂ ಸಂಬಂಧ ಇಲ್ಲ: ಬೆಂವಿವಿ ಪ್ರೊ.ಮೈಲಾರಪ್ಪ ಸ್ಪಷ್ಟನೆ 

ನನಗೂ ಭೂ ವ್ಯವಹಾರಕ್ಕೂ ಸಂಬಂಧ ಇಲ್ಲ: ಬೆಂವಿವಿ ಪ್ರೊ.ಮೈಲಾರಪ್ಪ ಸ್ಪಷ್ಟನೆ 

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.