ಎಂಟು ತಿಂಗಳ ನಂತರ ಹೊಸ ಸಿನಿಮಾ ತೆರೆಗೆ

ಆಕ್ಟ್-1978 ರಿಲೀಸ್‌

Team Udayavani, Nov 20, 2020, 4:41 PM IST

ಎಂಟು ತಿಂಗಳ ನಂತರ ಇಂದು ಹೊಸ ಸಿನಿಮಾ ತೆರೆಗೆ

ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಈ ವಾರ ಮೊದಲ ಚಿತ್ರವಾಗಿ “ಆಕ್ಟ್-1978′ ಬಿಡುಗಡೆಯಾಗಿದೆ. ಲಾಕ್‌ಡೌನ್‌ ಬಳಿಕ ಬಿಡುಗಡೆಯಾಗಿರುವ ದಕ್ಷಿಣ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಕೂಡಾ ಈ ಚಿತ್ರದ್ದು. ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಗರಿಗೆದರಿದೆ.

ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಸರ್ಕಾರ ಶರತ್ತುಬದ್ಧ ಅನುಮತಿ ನೀಡಿದ್ದರೂ, ಇಲ್ಲಿಯವರೆಗೆ ಯಾವುದೇ ಹೊಸಚಿತ್ರಗಳುಬಿಡುಗಡೆಯಾಗಿರಲಿಲ್ಲ. ಈಗಾಗಲೇ ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿದ್ದ ಚಿತ್ರಗಳನ್ನೇ ಬಹುತೇಕ

ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ರೀ-ರಿಲೀಸ್‌ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿತ್ತು. ಆದರೆ ಇದೀಗ ನಿಧಾನವಾಗಿ ಚಿತ್ರರಂಗ ಸಹಜ ಸ್ಥಿತಿಗೆ ಮರಳುತ್ತಿದ್ದು, ಹೊಸಚಿತ್ರಗಳನ್ನು ಬಿಡುಗಡೆ ಮಾಡಿದರೆ, ಪ್ರೇಕ್ಷಕರು ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಕಡೆಗೆ ಮುಖ ಮಾಡಬಹುದು ಎಂಬ ವಿಶ್ವಾಸದಲ್ಲಿ ನಿಧಾನವಾಗಿ ಒಂದರ ಹಿಂದೊಂದು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಣೆ ಮಾಡಲು ಮುಂದಾಗಿವೆ.

ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಈ ವಾರ ಮೊದಲ ಚಿತ್ರವಾಗಿ “ಆಕ್ಟ್-1978′ ಚಿತ್ರ ಇಂದು (ನ.20) ಬಿಡುಗಡೆಯಾಗುತ್ತಿದೆ. ಲಾಕ್‌ಡೌನ್‌ ಬಳಿಕ ಬಿಡುಗಡೆಯಾಗಿರುವ ದಕ್ಷಿಣ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಕೂಡಾ ಈ ಚಿತ್ರದ್ದು.ಕಳೆದ ಎರಡು ವಾರದಿಂದ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್  ಗಳತ್ತ ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿರುವ “ಆಕ್ಟ್-1978′ ಚಿತ್ರತಂಡ, ಈಗಾಗಲೇ ಭರ್ಜರಿಯಾಗಿ ಚಿತ್ರದ ಪ್ರಚಾರಕಾರ್ಯಗಳನ್ನು ನಡೆಸಿದೆ. ಚಿತ್ರತಂಡದ ಮೂಲಗಳ ಪ್ರಕಾರ ಸಿಂಗಲ್‌ ಸ್ಕ್ರೀನ್‌ ಮತ್ತು ಮಲ್ಟಿಪ್ಲೆಕ್ಸ್‌ ಸೇರಿದಂತೆ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ “ಆಕ್ಟ್-1978′ ಚಿತ್ರ ತೆರೆಕಾಣುತ್ತಿದೆ. ಇದರ ಬೆನ್ನಲ್ಲೆ ನ.27 ರಂದು ಯುವ ನಿರ್ದೇಶಕ ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಈ ವಾರ ಮೊದಲ ಚಿತ್ರವಾಗಿ “ಆಕ್ಟ್-1978′ ಬಿಡುಗಡೆಯಾಗಿದೆ. ಲಾಕ್‌ಡೌನ್‌ ಬಳಿಕ ಬಿಡುಗಡೆಯಾಗುತ್ತಿರುವ ದಕ್ಷಿಣ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಕೂಡಾ ಈ ಚಿತ್ರದ್ದು. ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಗರಿಗೆದರಿದೆ.

ಇದನ್ನೂ ಓದಿ: ಲಾಕ್‌ಡೌನ್‌ ಬಳಿಕ ಹೊಸ ಚಿತ್ರದತ್ತ ಸೆಂಚುರಿ ಸ್ಟಾರ್ : ‌ಶಿವಪ್ಪನಾದ ಶಿವಣ್ಣ

ಕಳೆಗಟ್ಟಿದ ಚಿತ್ರಮಂದಿರಗಳು ಹೊಸ ನಿರೀಕ್ಷೆಯಲ್ಲಿ ಪ್ರೇಕ್ಷಕರು ಪ್ರಬಿಕ್‌ ಮೊಗವೀರ್‌ ನಿರ್ದೇಶನದ “ಗಡಿಯಾರ’, ಅರವಿಂದ್‌ ಕಾಮತ್‌ ನಿರ್ದೇಶನದ “ಅರಿಷಡ್ವರ್ಗ’ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಈ ವಾರಾಂತ್ಯದಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಈ ಪಟ್ಟಿಗೆ ಇನ್ನೂ ಎರಡು – ಮೂರು ಹೊಸ ಚಿತ್ರಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. ಉಳಿದಂತೆಡಿಸೆಂಬರ್‌ ಮೊದಲ ವಾರ ಮೂರು, ಎರಡನೇ ವಾರ ಎರಡು ಹೊಸಬರ ಚಿತ್ರಗಳು ಬಿಡುಗಡೆಗೆ ಪ್ಲಾನ್‌ಮಾಡಿಕೊಳ್ಳುತ್ತಿವೆ. ಈ ಸಂಖ್ಯೆಯಲ್ಲಿ ಸ್ವಲ್ಪ ಏರಿಳಿತವಾದರೂ, ಒಂದಷ್ಟು ಚಿತ್ರಗಳು ಬಿಡುಗಡೆಯಾಗುವುದಂತೂ ಬಹುತೇಕ ಪಕ್ಕಾ ಆಗಿದಂತಿದೆ.

ಇನ್ನು ಗಾಂಧಿನಗರ ಸೇರಿದಂತೆ, ಬೆಂಗಳೂರಿನ ಮತ್ತು ರಾಜ್ಯದ ಇತರ ಜಿಲ್ಲಾಕೇಂದ್ರಗಳಲ್ಲಿರುವ ಬಹುತೇಕ ಪ್ರಮುಖ ಚಿತ್ರಗಳಲ್ಲಿಕಳೆದ ಎರಡು-ಮೂರು ವಾರಗಳಿಂದ ಸ್ವಚ್ಛತೆ, ಸೀಟ್‌ ವ್ಯವಸ್ಥೆ, ಲೈಟಿಂಗ್‌, ಪೇಂಟಿಂಗ್‌, ಸ್ಯಾನಿಟೈಸೇಷನ್‌ ಸೇರಿದಂತೆ ಒಂದಷ್ಟು ದುರಸ್ಥಿಕೆಲಸಗಳನ್ನು ಭರದಿಂದ ನಡೆಸುತ್ತಿದ್ದು, ಈ ವಾರದಿಂದ ಬಹುತೇಕ ಚಿತ್ರಮಂದಿರಗಳು ಪ್ರೇಕ್ಷಕರಿಗೆ ಪ್ರದರ್ಶನ ಮುಕ್ತವಾಗಲಿವೆ. ರಾಜ್ಯದ ಪ್ರಮುಖ ಚಿತ್ರಮಂದಿರಗಳ ಮುಂದೆ ಮುಂಬರಲಿರುವ ಸಿನಿಮಾಗಳಕಟೌಟ್‌, ಬ್ಯಾನರ್‌, ಪೋಸ್ಟರ್‌ಗಳು ಒಂದೊಂದಾಗಿ ರಾರಾಜಿಸುತ್ತಿದ್ದು, ನಿಧಾನವಾಗಿ ಚಿತ್ರಮಂದಿರಗಳ ಮುಂದೆ ರಂಗೇರುತ್ತಿವೆ.ಈಗಾಗಲೇ ಬಿಡುಗಡೆ ಘೋಷಿಸಿರುವಕೆಲ ಹೊಸ ಸಿನಿಮಾಗಳ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ಕೂಡ ಶುರುವಾಗಿದ್ದು, ನಿಧಾನವಾಗಿ ಪ್ರೇಕ್ಷಕರು ಆನ್‌ಲೈನ್‌ಮೂಲಕ ಟಿಕೆಟ್‌ ಖರೀದಿಗೆ ಮುಂದಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಆನ್‌ಲೈನ್‌ ಟಿಕೆಟ್‌ ಮಾರಾಟ ಕೂಡ ಗಣನೀಯವಾಗಿ ಏರಿಕೆ ಕಾಣುತ್ತಿರುವುದರಿಂದ, ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಕೂಡಕೊಂಚ ಮಟ್ಟಿಗೆ ನಿರಾಳರಾಗುತ್ತಿದ್ದಾರೆ.

ಧೈರ್ಯ ಮಾಡಿ ನೀರಿಗೆ ಇಳಿದಿದ್ದೀವಿ. ಯಾರಾದರೂ ಒಬ್ಬರು ಧೈರ್ಯ ಮಾಡಿ ಬಂದಾಗ ಎಲ್ಲರಿಗೂ ಒಂದು ದಾರಿ ಆಗುತ್ತದೆ. ನಮಗೆಸಿಗುವ ಪ್ರತಿಕ್ರಿಯೆ ನೋಡಿಕೊಂಡು ಬೇರೆ ಸಿನಿಮಾದವರು ಮುಂದೆ ಬರುತ್ತಾರೆ. ಹೇಗಿದ್ದರೂ ಚಿತ್ರರಂಗ ರಿಕವರಿ ಆಗಲೇಬೇಕು. ಬೇಗನೇ ಆಗಲಿ ಎಂಬುದು ನಮ್ಮ ಆಶಯ. ಆರಂಭದಿಂದಲೂ ನಮಗೆ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ರಿಲೀಸ್‌ ಮಾಡಬೇಕೆಂಬ ಆಸೆ ಇತ್ತು.ದೇವರಾಜ್‌ ಆರ್‌. ನಿರ್ಮಾಪಕರು, ಆ್ಯಕ್ಟ್ 1978

ಎಂಟು ತಿಂಗಳ ನಂತರ ದಕ್ಷಿಣ ಭಾರತದಲ್ಲೇ ಹೊಸ ಸಿನಿಮಾವಾಗಿ ನಮ್ಮ “ಆಕ್ಟ್ 1978′ ರಿಲೀಸ್‌ ಆಗುತ್ತಿದೆ. ಹೊಸ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು. ನಿಮ್ಮಿಂದಲೇ ನಾವು. ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸಿನಿಮಾ ನೋಡಿ ಪ್ರೋತ್ಸಾಹಿಸಿ. ಶಿವರಾಜ್‌ಕುಮಾರ್‌, ನಟ

ಸಿನಿಪ್ರಿಯರು ಏನಂತಾರೆ? :

ಏಳೆಂಟು ತಿಂಗಳಿನಿಂದ ಥಿಯೇಟರ್‌ ನಲ್ಲಿಯಾವುದೇ ಸಿನಿಮಾಗಳನ್ನೂ ನೋಡಲಾಗಲಿಲ್ಲ. ಈ ವಾರ ರಿಲೀಸ್‌ ಆಗುವ ಸಿನಿಮಾವನ್ನುಖಂಡಿತ ನೋಡುತ್ತೇನೆ. ರಂಗನಾಥ್‌, ಆಟೋರಿಕ್ಷಾ ಚಾಲಕ

ಈಗ ಹೊಸ ಸಿನಿಮಾಗಳ ಬಿಡುಗಡೆ ಆರಂಭವಾಗಿದೆ. ಹೊಸ ಸಿನಿಮಾ ರಿಲೀಸ್‌ ಆಗುತ್ತಿರುವುದರಿಂದ ಮತ್ತೆ ಫ‌ಸ್ಟ್‌ ಡೇ ಫ‌ಸ್ಟ್‌ ಶೋ ನೋಡ್ತೀನಿ. ಪ್ರಜ್ವಲ್‌ ಗೌಡ, ಹೋಟೆಲ್‌ ನೌಕರ ಗಾಂಧಿನಗರ

ಮೊದಲಿನಿಂದಲೂ ನಮಗೆ ಇಡೀಫ್ಯಾಮಿಲಿ ಜೊತೆ ಸಿನಿಮಾ ನೋಡಿ ಅಭ್ಯಾಸ.ಕೋವಿಡ್ ದಿಂದಾಗಿ ಈ ವರ್ಷ ಫ್ಯಾಮಿಲಿ ಜೊತೆಯಾವ ಸಿನಿಮಾಗಳನ್ನೂ ನೋಡಲಾಗಲಿಲ್ಲ. ಈಗ ಸ್ವಲ್ಪಕೊರೊನಾ ಭಯ ಕಡಿಮೆಯಾಗಿರೋದ್ರಿಂದ, ಒಳ್ಳೆಯ ಸಿನಿಮಾವನ್ನ ನೋಡುವಯೋಚನೆಯಿದೆ. ರಶ್ಮಿ, ಸಾಫ್ಟ್ವೇರ್‌ ಉದ್ಯೋಗಿ

ಎಂಟು ತಿಂಗಳ ನಂತರ ತೆರೆಕಾಣುತ್ತಿರುವ ಹೊಸ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಆನಂದಿಸಬೇಕೆಂದಿದ್ದೇನೆ. ನಾವು ಫ್ರೆಂಡ್ಸ್‌ ಜೊತೆಯಾಗಿ ಹೋಗುತ್ತೇವೆ. ರಾಜೇಶ್‌ ಪಿಂಟೋ, ಕಾಲೇಜು ವಿದ್ಯಾರ್ಥಿ

-ಜಿ.ಎಸ್‌.ಕಾರ್ತಿಕ ಸುಧನ್

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.