ನಗರ ಎಲ್‌ಇಡಿ ಬೆಳಕು ಯೋಜನೆ ಕತ್ತಲಲ್ಲಿ !

ಜಿಲ್ಲೆಯ 5 ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳಲ್ಲಿ ದಾರಿದೀಪ ಯೋಜನೆ

Team Udayavani, Feb 13, 2021, 3:40 AM IST

ನಗರ ಎಲ್‌ಇಡಿ ಬೆಳಕು ಯೋಜನೆ ಕತ್ತಲಲ್ಲಿ !

ಕಾರ್ಕಳ: ವಿದ್ಯುತ್‌ ಉಳಿತಾಯಕ್ಕೆ ಅನುಕೂಲವಾಗುವ ನಗರ ಸ್ಥಳೀಯಾಡಳಿತಗಳ ವ್ಯಾಪ್ತಿಯಲ್ಲಿ ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆ ಕತ್ತಲಲ್ಲಿದೆ.

ಉಡುಪಿ ಜಿಲ್ಲೆಯ ನಗರಸಭೆ, ಕಾರ್ಕಳ ಪುರಸಭೆ, ಕುಂದಾಪುರ ಪುರಸಭೆ, ಕಾಪು ಪುರಸಭೆ ಹಾಗೂ  ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗಳಲ್ಲಿ   ಯೋಜನೆಯನ್ನು ಜಾರಿಗೆ  ತರುವ ಉದ್ದೇಶವಿತ್ತು. ಇಲ್ಲೆಲ್ಲ ಸರ್ವೇ ಕೂಡ ನಡೆದಿತ್ತು. ಅವುಗಳನ್ನು ಸರಕಾರಕ್ಕೂ ಸಲ್ಲಿಸಲಾಗಿದೆ. ಆದರೆ ಟೆಂಡರ್‌ ಪ್ರಕ್ರಿಯೆಗಳು ನಡೆಯದೆ ರಾಜ್ಯವ್ಯಾಪಿ ಯೋಜನೆ ಅರ್ಧಕ್ಕೇ  ನಿಂತಿದೆ. ಒಂದೇ ಬಾರಿಗೆ ಟೆಂಡರ್‌ ನಡೆಯಬೇಕಿದ್ದು, ವಿಳಂಬದಿಂದ ಯೋಜನೆ ನನೆಗುದಿಗೆ ಬಿದ್ದಿದೆ ಎನ್ನಲಾಗುತ್ತಿದೆ.

ತಪ್ಪುವುದೇ ದೂರು :

ಸಾಮಾನ್ಯ ದೀಪಗಳನ್ನು ಅಳವಡಿಸಿದರೆ ಅವು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಬೇಗ ಹಾಳಾಗುತ್ತವೆ.  ನಿರ್ವಹಣೆ ಮಾಡಲು  ಹಣ ವೆಚ್ಚ ಮಾಡಬೇಕು. ಹಾಗಾಗಿ ಎಲ್ ಇಡಿ ದೀರ್ಘ‌ ಬಾಳಿಕೆ ಜತೆಗೆ ಹೆಚ್ಚು ದುರಸ್ತಿ ಬರುವುದಿಲ್ಲ.

ಸಾರ್ವಜನಿಕರಿಂದ ದೂರುಗಳು  ಬರುವುದಿಲ್ಲ

ಎನ್ನುವ ಅಭಿಪ್ರಾಯವಿದೆ. ಬೀದಿದೀಪಗಳ ನಿರ್ವಹಣೆ 5 ವರ್ಷಕ್ಕೆ  ಖಾಸಗಿಯವರಿಗೆ ನೀಡಲಾಗುತ್ತಿದೆ. ಎಲ್ಇಡಿ ವಿದ್ಯುತ್‌ ದೀಪ ಹಾಗೂ  ಅದರ ನಿರ್ವಹಣೆ ಮಾಡಿದ ಅನಂತರ ಉಳಿತಾಯ ಹಣದಿಂದ ಸ್ಥಳಿಯಾಡಳಿತಕ್ಕೆ ಅನುಕೂಲವಾಗುತ್ತದೆ.

ಭಿನ್ನ ಧ್ವನಿಯೂ ಇದೆ  :

ವಿದ್ಯುತ್‌ ಉಳಿತಾಯ, ಎಲ್ಇಡಿ  ವಿದ್ಯುತ್‌ ದೀಪ ಇದೆಲ್ಲವೂ ಮೇಲ್ಮಟ್ಟದ  ಲೂಟಿ ಸ್ಕೀಂಗಳೇ ಆಗಿವೆ. ಹಲವು ವರ್ಷದಿಂದ ಸರ್ವೇಗಾಗಿಯೇ ಹಣ ವ್ಯಯವಾಗಿದೆ. ಯೋಜನೆ ಯಶಸ್ವಿಯಾಗುವುದು ಅನುಮಾನ ಎಂಬ ಭಿನ್ನ ಧ್ವನಿಯೂ  ವ್ಯಕ್ತವಾಗುತ್ತಿದೆ.

2 ವರ್ಷಗಳ ಹಿಂದೆ ಸರ್ವೆ :

ಎರಡು ವರ್ಷಗಳ ಹಿಂದೆ ಸರ್ವೆ ನಡೆದಾಗ ಯೋಜನೆ ಬಗ್ಗೆ  ಸಾಕಷ್ಟು ಚರ್ಚೆಗಳು ನಡೆದಿತ್ತು. ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆ ಕೂಡ ನಡೆದಿತ್ತು. ಬಳಿಕ  ಉಡುಪಿ ಜಿಲ್ಲೆಯಲ್ಲಿ ಯೋಜನೆ  ಅನುಷ್ಠಾನಕ್ಕೆ ಸರಕಾರಕ್ಕೆ  ವರದಿ ಸಲ್ಲಿಕೆಯಾಗಿದೆ. ಪ್ರಸ್ತುತ ಬೀದಿದೀಪಗಳಿಂದ ಹೆಚ್ಚು ವಿದ್ಯುತ್‌ ಬಳಕೆಯಾಗುತ್ತಿದೆ. ಕಡಿಮೆ ವಿದ್ಯುತ್‌ನಲ್ಲಿ  ಹೆಚ್ಚು  ಪ್ರಕಾಶ ನೀಡುವ ಬಾಳಿಕೆ ಬರುವ  ಎಲ್ಇಡಿ ದೀಪಗಳನ್ನು ಅಳವಡಿಸಲು  ಹಣ ಹಾಗೂ ವಿದ್ಯುತ್‌ ಉಳಿತಾಯ ವಾಗುತ್ತದೆ. ಈ ಕುರಿತು ತಜ್ಞರ‌ ತಂಡ ಅಧ್ಯಯನ ನಡೆಸಿ ಯೋಜನೆ ಕಾರ್ಯಗತಗೊಳಿಸಲು  ಮುಂದಾಗಿತ್ತು. ಹಾಲಿ ಅಳವಡಿಸಿರುವ ವಿದ್ಯುತ್‌ ದೀಪಗಳನ್ನು ಬದಲಿಸಿ, ಎಲ್ಇಡಿ ದೀಪ ಅಳವಡಿಸಿ, ವಿದ್ಯುತ್‌ ಹಾಗೂ ನಿರ್ವಹಣೆಗೆ  ವ್ಯಯವಾಗುವ ಹಣ ಉಳಿತಾಯ ಮಾಡಿ ಗುತ್ತಿಗೆದಾರರು ಹಾಗೂ ನಗರ ಸ್ಥಳಿಯಾಡಳಿತ

ಗಳು ಸ್ಮರ್ಧಾತ್ಮಕ ರೀತಿ ಹಂಚಿಕೊಳ್ಳುವ ಷರತ್ತಿಗೆ ಒಳಪಟ್ಟು ಖಾಸಗೀಕರಣ ಮಾಡಿದರೆ ಸ್ಥಳೀಯಾಡಳಿಗಳಿಗೆ ಆರ್ಥಿಕವಾಗಿ ಲಾಭ ವಾಗು ತ್ತದೆ ಎನ್ನುವ ಉದ್ದೇಶದಿಂದ  ಈ ಯೋಜನೆ  ಜಾರಿಗೆ ತರಲಾಗುತ್ತಿದೆ.ಮೂರು ವರ್ಷದ ಹಿಂದಿನ ಯೋಜನೆ ಸರಕಾರ ಎಲ್ಇಡಿ ಅಳವಡಿಕೆಗೆ ನಗರ, ಪುರಸಭೆ ವ್ಯಾಪ್ತಿಯ ಬೀದಿ ದೀಪಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವಂತೆ ಉದ್ದೇಶಿಸಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ರಾಜ್ಯದ ವಿವಿಧ ಜಿಲ್ಲೆಗಳ  ನಗರ  ಸ್ಥಳಿಯಾಡಳಿತಗಳ  ಆಯುಕ್ತರಿಗೆ  2018ರಲ್ಲಿ ಆದೇಶ ನೀಡಿದ್ದರು.

ವಿದ್ಯುತ್‌ ಮಿತ  ಬಳಕೆಗೆ ಪ್ಲ್ಯಾನ್‌  :

ವಿದ್ಯುತ್‌ ಮಿತಬಳಕೆ ದೃಷ್ಟಿಯಿಂದ ಕೇಂದ್ರ ಸರಕಾರ ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ಯೋಜನೆಯನ್ನು ಆಯಾ ರಾಜ್ಯದ ಸ್ಥಳಿಯ ಸಂಸ್ಥೆಗಳು ಅಳವಡಿಸಿಕೊಳ್ಳಬೇಕಿದ್ದು. ತಮ್ಮ  ಉಸ್ತುವಾರಿಯಲ್ಲೇ ಯೋಜನೆಗೆ ಚಾಲನೆ ನೀಡಬೇಕಿದೆ. ಸರಕಾರಿ ಮಟ್ಟ ದಲ್ಲಿ  ಪ್ರಕ್ರಿಯೆ ಬಾಕಿಯಾಗಿ ಯೋಜನೆ ನಿಂತಿದೆ. ತಾಂತ್ರಿಕ ಕಾರಣದಿಂದಾಗಿ ಯೋಜನೆ ಮುಂದೆ ಹೋಗಿಲ್ಲ.

ಸರ್ವೆ ಪ್ರಕಾರ ಕಂಬಗಳು :

ಉಡುಪಿ (ನಗರಸಭೆ)

ವಾರ್ಡ್‌ 23     ಕಂಬಗಳು-4787

ಕಾರ್ಕಳ (ಪುರಸಭೆ)

ವಾರ್ಡ್‌ 23,  ಕಂಬಗಳು 3,115

ಕುಂದಾಪುರ (ಪುರಸಭೆ)

ವಾರ್ಡ್‌-23   ಕಂಬಗಳು-2,161

ಕಾಪು (ಪುರಸಭೆ)

ವಾರ್ಡ್‌-23   ಕಂಬಗಳು-1,520

ಸಾಲಿಗ್ರಾಮ  (ಪ.ಪಂ.)

ವಾರ್ಡ್‌-16  ಕಂಬಗಳು-1,460

ಯೋಜನೆಗೆ ಸಂಬಂಧಿಸಿ ಖಾಸಗಿ ಸಂಸ್ಥೆ  ಸರ್ವೆ ನಡೆಸಿದೆ. ಟೆಂಡರ್‌ ಹಂತದಲ್ಲಿದೆ. ಶೀಘ್ರದಲ್ಲಿ   ಸಮ್ಮತಿ ಸಿಗುವ  ಸಾಧ್ಯತೆಯಿದೆ.

ಅರುಣ ಪ್ರಭ, ಯೋಜನಾ ನಿರ್ದೇಶಕರು,  ಜಿಲ್ಲಾ ನಗರಾಭಿವೃದ್ಧಿ ಕೋಶ,  ಉಡುಪಿ

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Iranian President Ebrahim Raisi passed away in a helicopter crash

Ebrahim Raisi; ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ರೈಸಿ

To India’s youth get jobs, Modi should retire: Rahul Gandhi

Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ

ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

4 ವರ್ಷ ಪೂರ್ಣಗೊಳ್ಳದೆ ಎಲ್‌ಕೆಜಿ ಪ್ರವೇಶವಿಲ್ಲ

4 ವರ್ಷ ಪೂರ್ಣಗೊಳ್ಳದೆ ಎಲ್‌ಕೆಜಿ ಪ್ರವೇಶವಿಲ್ಲ

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Iranian President Ebrahim Raisi passed away in a helicopter crash

Ebrahim Raisi; ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ರೈಸಿ

To India’s youth get jobs, Modi should retire: Rahul Gandhi

Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ

ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.