ಮಿತಿಗಳಿದ್ದರೂ ತಾಲೂಕು ಪಂಚಾಯತ್‌ನ ಅಗತ್ಯ ಇದೆ…


Team Udayavani, Feb 16, 2021, 6:15 AM IST

ಮಿತಿಗಳಿದ್ದರೂ ತಾಲೂಕು ಪಂಚಾಯತ್‌ನ ಅಗತ್ಯ ಇದೆ…

ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆ 1993ರನ್ವಯ ತಾಲೂಕು ಪಂಚಾಯತ್‌ಯು ಸ್ಥಳೀಯ ಸಂಸ್ಥೆಯಾಗಿ ಸರಕಾರದ ಒಂದು ಮಾಧ್ಯಮಿಕ ಭಾಗವೆಂದು ಪರಿಗಣಿಸ ಲಾಗಿದೆ. ಆದರೆ ತಾಲೂಕು ಪಂಚಾಯತ್‌ಗೆ ನೇರವಾಗಿ ತೆರಿಗೆ ವಿಧಿಸುವ, ತೆರಿಗೆ ಸಂಗ್ರಹಿಸುವ, ಸಿಬ್ಬಂದಿ ನೇಮಕಾತಿ ಮತ್ತು ಸ್ವಂತ ಸಂಪನ್ಮೂಲಗಳಿಂದ ಆದಾಯ ಸೃಷ್ಟಿಸುವ ಮತ್ತು ಶೇಖರಿಸುವ ಅಧಿಕಾರವಿರುವುದಿಲ್ಲ.

ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆ 1993 ಅಡಿಯ ಲ್ಲಿಯೇ ಗ್ರಾಮ ಪಂಚಾಯತ್‌ಯನ್ನೂ ಗ್ರಾಮೀಣ ಸ್ಥಳೀಯ ಸಂಸ್ಥೆಯೆಂದು ಸೃಜಿಸುವುದರ ಜತೆಗೆ ಇದನ್ನು ಸ್ಥಳೀಯ ಸ್ವಯಂ ಸರಕಾರ ಎಂದೂ ಪರಿಗಣಿಸಿ ಗುರುತಿಸಲ್ಪಟ್ಟಿದೆ. ಆದರೆ ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ಗಳು ಹಾಗಾಗದೆ ಹೆಚ್ಚಾಗಿ ಸರಕಾರಿ ನೌಕರರಿಂದಲೇ ನಿರ್ವ ಹಿಸಲ್ಪಡುತ್ತವೆ. ತಾಲೂಕು ಪಂಚಾಯತ್‌ಯು ಮೂರು ಹಂತದ ಪಂಚಾಯತ್‌ ವ್ಯವಸ್ಥೆಯಲ್ಲಿ ತನ್ನ ಸ್ವಂತಿಕೆಯನ್ನು ಕಳೆದುಕೊಂಡಿದೆ.

ಮೂರು ಹಂತದ ಸ್ಥಳೀಯ ಸಂಸ್ಥೆಗಳ ವ್ಯವಸ್ಥೆಯಲ್ಲಿ ಇದು ಗ್ರಾಮ ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ಸಂಸ್ಥೆಗಳ ನಡುವಿನ ಸೇತುವೆ ಯಾಗಿದೆ. ಆದ್ದರಿಂದ ಶಾಸಕರುಗಳು ಈ ತಾಲೂಕು ಪಂಚಾಯತ್‌ ವ್ಯವಸ್ಥೆಯನ್ನು ಮುಂದುವರಿಸಬೇಕೆಂದು, ಇದನ್ನು ಉಳಿಸ ಬೇಕೆಂದು ಅಪೇಕ್ಷಿಸುತ್ತಿದ್ದಾರೆ. ಗ್ರಾಮ ಪಂಚಾಯತ್‌ ಮತ್ತು ಪಟ್ಟಣ ಪಂಚಾಯತ್‌ಗಳಂತೆ ತಾಲೂಕು ಪಂಚಾಯತ್‌ ಸಮಿತಿಗೆ ಒಂದು ನಿರ್ದಿಷ್ಟ ಕಾರ್ಯ ವಾಗಲೀ ಅಥವಾ ಪ್ರತ್ಯೇಕ ಕಾರ್ಯಕ್ಷೇತ್ರಗಳಾಗಲೀ ಇರುವುದಿಲ್ಲ.
ಮೇಲ್ಕಂಡ ಅಂಶಗಳಿದ್ದಾಗಿಯೂ, ತಾಲೂಕು ಪಂಚಾಯತ್‌ಯ ಅವಶ್ಯಕತೆ ಇದೆ ಏಕೆಂದರೆ…

1. ಬೆಳಗಾವಿಯಂತಹ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್‌ನ ಒಬ್ಬ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯು ಸುಮಾರು 500ಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್‌ಗಳ ಮೇಲ್ವಿಚಾರಣೆ ಮತ್ತು ಎಲ್ಲ ಸಮಸ್ಯೆಗಳ ಕಡೆ ಗಮನ ಹರಿಸಬೇಕಾಗುತ್ತದೆ.

2. ವಿಸ್ತಾರವಾದ ಭೂ ಪ್ರದೇಶ ಹೊಂದಿರುವ ದೂರದ ಹಳ್ಳಿಗಳ ಪ್ರದೇಶಗಳ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಎದುರಾಗುವ ಸಮಸ್ಯೆಗಳಿಗೆ ತತ್‌ಕ್ಷಣ ಸ್ಪಂದಿಸುವ ಕೆಲಸಗಳು ಜಿಲ್ಲಾ ಪಂಚಾಯತ್‌ ಒಂದರಿಂದಲೇ ನಿರ್ವಹಿಸಲು ಸಾಧ್ಯವಿಲ್ಲ.

3. ತಾಲೂಕು ಪಂಚಾಯತ್‌ ಒಂದು ಕ್ಷೇತ್ರದ ವಿಧಾನಸಭಾ ಸದಸ್ಯರಿಗೆ ಒಬ್ಬ ಕಾರ್ಯನಿರ್ವಹಣಾ ಅಧಿ ಕಾರಿಯು ಸಮನ್ವಯ ಅಧಿಕಾರಿಯಾಗಿ ಅವಶ್ಯಕತೆ ಇರುತ್ತದೆ.

4.ಗ್ರಾಮ ಪಂಚಾಯತ್‌ ಸದಸ್ಯರು ಮತ್ತು ದೂರ ಹಳ್ಳಿಗಳ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಕೇಂದ್ರಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ.

5.ತಾಲೂಕು ಪಂಚಾಯತ್‌ಗಳ ನಿರ್ವಾಹಣಾಧಿಕಾರಿ ಕಚೇರಿಗಳು ತಾಲೂಕು ಆಡಳಿತ ಮತ್ತು ಜಿಲ್ಲಾ ಪಂಚಾಯತ್‌ ಆಡಳಿತ ವ್ಯವಸ್ಥೆಗಳ ನಡುವಿನ ಸೇವಾ ಕೇಂದ್ರಗಳಾಗಿ, ಜಿಲ್ಲಾ ಪಂಚಾಯತ್‌ಯ ಪ್ರತಿನಿಧಿಯಂತೆ ಬ್ಲಾಕ್‌ ಮಟ್ಟದಲ್ಲಿ ಜನರ ತತ್‌ತಕ್ಷಣದ ಸಮಸ್ಯೆಗಳಿಗೆ ಸ್ಪಂದಿಸುವ ಸೇವಾ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತವೆ.

6. ಗ್ರಾಮ ಪಂಚಾಯತ್‌ಗಳಿಗೆ ವಿತರಿಸಲಾದ ಹಣ ಮತ್ತು ಕಾರ್ಯವೈಖರಿಯ ಮೇಲ್ವಿಚಾರಣೆ, ಸಿಬಂದಿ ನಿಯಂತ್ರಣಗಳಿಗಾಗಿ ತಾಲೂಕು ಪಂಚಾಯತ್‌ಗಳು ಬೇಕು.

7. 29 ವಿಷಯಾಧಾರಿತ ಗ್ರಾಮ ಪಂಚಾಯತ್‌ಯ ಕೇಂದ್ರ ಮತ್ತು ರಾಜ್ಯ ಸರಕಾರದ ಮುಖ್ಯ ಯೋಜನೆಗಳು, ನರೇಗಾ, ಪಿ.ಎಂ.ಎ.ವೈ, ಎಸ್‌.ಬಿ.ಎಂ., ಎನ್‌.ಆರ್‌.ಎಲ್‌.ಎಂ, 15 ನೇ ಹಣಕಾಸು ನಿಧಿಗಳನ್ನು ನಿರ್ವಹಣೆ ಮಾಡುವುದು. ಹೀಗೆ ಗ್ರಾಮ ಪಂಚಾಯತ್‌ಯ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಯಾಗಿ ಗುಣಮಟ್ಟದ ದೂರದರ್ಶಿತ್ವದ ಯೋಜನೆಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಲು ಸಹಕರಿಸಲು ಇದರ ಅಸ್ತಿತ್ವ ಅಗತ್ಯ.

8. ಕೆ.ಡಿ.ಪಿ ಸಭೆ, ಗ್ರಾಮ ಸಭೆ, ಜಮಾಬಂದಿಗಳನ್ನು ಸಂಘಟಿಸಲು, ಗ್ರಾಮ ಪಂಚಾಯತ್‌ಗಳ ಗುರಿ ಮತ್ತು ಧ್ಯೇಯೋದ್ದೇಶಗಳನ್ನು ಪೂರೈಸಲು ಸಹಕಾರಿಯಾಗಿ ಕಾರ್ಯನಿರ್ವಹಿಸಲು ಅವಶ್ಯಕತೆಯಿದೆ. ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೇ ಈ ಎಲ್ಲ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ.

9. ವಿವಿಧ ಯೋಜನೆಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಲು ಮತ್ತು ಗುರಿ ಸಾಧನೆಗಳ ಸಮೀಕ್ಷೆ ನಡೆಸಲು ಮತ್ತು ಅವುಗಳ ಕಾರ್ಯವೈಖರಿಯ ವರದಿಗಳ ತಯಾರಿಕೆ ಮತ್ತು ಮಾಹಿತಿಯನ್ನು ಶಾಸಕರಿಗೆ, ಸರಕಾರಗಳಿಗೆ ಸಲ್ಲಿಸುವುದಕ್ಕಾಗಿ ಮತ್ತು ಇವುಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡಲು ತಾಲೂಕು ಪಂಚಾಯತ್‌ ಅವಶ್ಯಕವಿರುತ್ತದೆ.

10. ಮುಂಗಡ ಪತ್ರ ತಯಾರಿಕೆ, ಲೆಕ್ಕ ಪರಿಶೋಧನೆ ಮತ್ತು ಅವಶ್ಯಕತೆಗೆ ತಕ್ಕಂತೆ ಎದುರಾಗುವ ಸವಾಲುಗಳ ಅವಶ್ಯಕತೆಗೆ ತಕ್ಕಂತೆ ಪರಿಹಾರ ಒದಗಿಸುವ ಕಾರ್ಯನಿರ್ವಹಿಸಲು ಅವಶ್ಯಕ.

ತಾಲೂಕು ಪಂಚಾಯತ್‌ಅನ್ನು ಹೇಗೆ ಬಲಪಡಿಸುವುದು.
1. ತಾಲೂಕು ಪಂಚಾಯತ್‌ ಸ್ಥಳೀಯ ಸಂಸ್ಥೆಯನ್ನು ಸರಕಾರಿ ಕಚೇರಿಯನ್ನಾಗಿ ಪರಿವರ್ತಿಸುವುದು.
2. ಅಸಿಸ್ಟೆಂಟ್‌ ಕಮಿಷನರ್‌ಗಳನ್ನು ಹಣಕಾಸು ಆಡಳಿತಾಧಿಕಾರಿಗಳಾಗಿ ನೇಮಿಸುವುದು.
3. ತಾಲೂಕು ಕಾರ್ಯನಿರ್ವಾಹಕಾಧಿಕಾರಿಗಳು ಗ್ರಾಮ ಪಂಚಾಯತ್‌ ಸಿಬಂದಿಗಳಿಗೆ ನೇಮಕಾತಿ ಮತ್ತು ಶಿಸ್ತು ನಿರ್ವಹಣಾ ಪ್ರಾಧಿಕಾರಗಳಾಗಿರಬೇಕು. ( ಪ್ರಸ್ತುತ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು. ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ.)

– ಮಹಾಂತೇಶ ಕವಟಗಿಮಠ, ವಿಧಾನಪರಿಷತ್‌ ಮುಖ್ಯ ಸಚೇತಕ

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.