ಸಾಮಾನ್ಯವಾಗಿದೆ ಆಂಬ್ಯುಲೆನ್ಸ್‌ ನಲ್ಲಿ ಹೆರಿಗೆ!

ಮುನ್ನೆಚ್ಚರಿಕಾ ಕ್ರಮಗಳು ಅತ್ಯಗತ್ಯ ! ವರ್ಷಕ್ಕೆ 30 ರಿಂದ 35 ಹೆರಿಗೆ

Team Udayavani, Feb 19, 2021, 4:52 PM IST

delivery common in Ambulance

ಮುಂಡಗೋಡ: ತಾಲೂಕಿನಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಹೆರಿಗೆಗೆಂದು ಆಸ್ಪತ್ರೆಗೆ ಬರುತ್ತಿರುವಾಗ ಮಾರ್ಗ ಮಧ್ಯೆ 108 ಆಂಬ್ಯುಲೆನ್ಸ್‌ನಲ್ಲಿ ಹೆರಿಗೆಯಾಗುವುದು ಸಾಮಾನ್ಯವಾಗಿದೆ. ಮುಂದುವರಿದ ತಂತ್ರಜ್ಞಾನದಿಂದ ಆಸ್ಪತ್ರೆಗಳಲ್ಲಿ ವೈದ್ಯರು ಸಲೀಸಾಗಿ ಹೆರಿಗೆ ಮಾಡಿಸುತ್ತಿದ್ದು, ಅದರಲ್ಲಿಯೂ 108 ಆಂಬ್ಯುಲೆನ್ಸ್‌ನಲ್ಲಿ ಹೆರಿಗೆಯಾಗುವುದು ವಿಶೇಷವಾಗಿದೆ.

2009 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ 108 ಆಂಬ್ಯುಲೆನ್ಸ್‌ ಸೇವೆ ಆರಂಭವಾಯಿತು. ಪ್ರತಿವರ್ಷ 30-35 ಹೆರಿಗೆಗಳು ಆಗುತ್ತಿವೆ. 2020-21 ಸಾಲಿನಿಂದ ಈವರೆಗೂ ಆಂಬ್ಯುಲೆನ್ಸ್‌ನಲ್ಲಿ 25 ಮಹಿಳೆಯರಿಗೆ ಹೆರಿಗೆಯಾಗಿವೆ. 108 ಆಂಬ್ಯುಲೆನ್ಸ್‌ನಲ್ಲಿ ಇಬ್ಬರು ಚಾಲಕ ಮತ್ತು ಇಬ್ಬರು ತುರ್ತು ವೈದ್ಯಕೀಯ ತಂತ್ರಜ್ಞರು ಹಗಲು ಮತ್ತು ರಾತ್ರಿ ಪಾಳೆಯಾಗಿ ಕೆಲಸ ನಿರ್ವಹಿಸುತ್ತಾರೆ.

ಹೆರಿಗೆ ನೋವು ಬಂದ ತಕ್ಷಣ ಒಂದು ತಾಸು ಅಥವಾ ಎರಡು ತಾಸಿನಲ್ಲಿ ಹೆರಿಗೆಯಾಗುತ್ತವೆ. ಆಗ ಗರ್ಭಿಣಿಯ ಸ್ಥಿತಿ ನೋಡಿ ಬಹಳ ನೋವು ಕಾಣಿಸಿಕೊಂಡಾಗ ರಸ್ತೆ ಪಕ್ಕದಲ್ಲಿಯೇ ಆಂಬ್ಯುಲೆನ್ಸ್‌ ನಿಲ್ಲಿಸಿ ಆಶಾ ಕಾರ್ಯಕರ್ತೆ, ಚಾಲಕ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸಹಾಯದಿಂದ ಅಥವಾ ಇವರ್ಯಾರು ಇಲ್ಲದಿದ್ದರೂ ತುರ್ತು ವೈದ್ಯಕೀಯ ತಂತ್ರಜ್ಞರು ಗರ್ಭಿಣಿಗೆ ಧೈರ್ಯ ತುಂಬಿ ಮೊದಲಿನ ಚಿಕಿತ್ಸೆಯ ವರದಿಗಳನ್ನೆಲ್ಲಾ ಪರಿಶೀಲಿಸಿ ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆ ಮಾಡಿಸುತ್ತಿದ್ದಾರೆ. ಹೆರಿಗೆ ವೇಳೆ ತಾಯಿ ಮತ್ತು ಮಗುವಿಗೆ ತೊಂದರೆಯಾಗದ ರೀತಿಯಲ್ಲಿ ಕ್ಲಿಷ್ಟಕರ ಹೆರಿಗೆಗಳೂ ಆಗಿದ್ದಾವೆ.

ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಮಾತನಾಡಿ, 2011ರಿಂದ ನಾನು ತುರ್ತು ವೈದ್ಯಕೀಯ ತಂತ್ರಜ್ಞವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ತಾಲೂಕಿನ ಇಂದೂರ ಗ್ರಾಮದ ಗರ್ಭಿಣಿಯ ಮಗುವಿನ ತಲೆ ಮೊದಲು ಬಾರದೆ ಕಾಲುಗಳು ಮೊದಲು ಬಂದ ಕಷ್ಟಕರವಾದ (ಬ್ರಿಚ್‌ ಪ್ರಸೆಂಟೇಶನ್‌), ಕಲಘಟಗಿ ತಾಲೂಕಿನ ಆಲದಕಟ್ಟಿ ಗ್ರಾಮದ ಎಚ್‌ಐವಿ ಸೋಂಕಿತ ಗರ್ಭಿಣಿಯ ಹೆರಿಗೆಯನ್ನು ಪಿಪಿಇ ಕಿಟ್‌, ಗ್ಲೋಸ್‌ ಮತ್ತು ಮಾಸ್ಕ್ ಧರಿಸಿ ಮತ್ತು ರಕ್ತ ಕಡಿಮೆ ಇರುವ, ನೀರಿನ ಪ್ರಮಾಣ ಕಡಿಮೆ ಇರುವ, ಗರ್ಭಾವಸ್ಥೆಯಲ್ಲಿ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೇ ಇರುವ, ಹೆಪಟೈಟಿಸ್‌ ಬಿ ಇರುವ ಹೆರಿಗೆಗಳನ್ನು ಕೂಡ ಮಾಡಿಸಿದ್ದೇನೆ. ಕೋವಿಡ್‌ ಮತ್ತು ಲಾಕ್‌ಡೌನ್‌ ನಡುವೆಯೂ 108 ಆಂಬ್ಯುಲೆನ್ಸ್‌ ವಾರಿಯರ್ಸ್‌ ಆಗಿ ಕಾರ್ಯ ನಿರ್ವಹಿಸಿದ್ದೇವೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತೀ ಹೆಚ್ಚು 108 ಆಂಬ್ಯುಲೆನ್ಸ್‌ನಲ್ಲಿಯೇ  ಹೆರಿಗೆಯಾದ ತಾಲೂಕು ಮುಂಡಗೋಡ ಆಗಿದೆ. ನಾನೇ ಈ ಎಲ್ಲಾ ಹೆರಿಗೆಗಳನ್ನು ಸುರಕ್ಷಿತವಾಗಿ ಮಾಡಿಸಿದ್ದೇನೆ. ಇದಕ್ಕೆ ನಮ್ಮ ಸಿಬ್ಬಂದಿ, ಪೊಲೀಸ್‌ ಹಾಗೂ ಸಾರ್ವಜನಿಕರು ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.

ಟಾಪ್ ನ್ಯೂಸ್

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

1–dsdasdsad

Sirsi; ಕಾಗೇರಿ ರಿಲಾಕ್ಸ್ ಮೂಡ್: ಪಕ್ಷಿಗಳಿಗೆ ಆಹಾರ, ತೋಟ ಸುತ್ತಾಟ!

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

Voting ಹದಿನೈದು ನಿಮಿಷ ಕಾದು‌ ಮತ ಹಾಕಿದ ಅನಂತಕುಮಾರ!

Voting ಹದಿನೈದು ನಿಮಿಷ ಕಾದು‌ ಮತ ಹಾಕಿದ ಅನಂತಕುಮಾರ್ ಹೆಗಡೆ!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

ಸಮಾಜ – ಬ್ಯಾಂಕನ್ನು ಬಲಿಷ್ಠಗೊಳಿಸುವ ಶಕ್ತಿ ದೇವರು ಕರುಣಿಸಲಿ: ನಿತ್ಯಾನಂದ ಕೋಟ್ಯಾನ್‌

ಸಮಾಜ – ಬ್ಯಾಂಕನ್ನು ಬಲಿಷ್ಠಗೊಳಿಸುವ ಶಕ್ತಿ ದೇವರು ಕರುಣಿಸಲಿ: ನಿತ್ಯಾನಂದ ಕೋಟ್ಯಾನ್‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.