ಜನರ ಬದುಕು ನಿರ್ವಹಣೆಗೆ ಗಡಿ ವಿವಾದ ಅಡ್ಡಿಯಾಗದಿರಲಿ

Team Udayavani, Dec 8, 2022, 6:00 AM IST

ಜನರ ಬದುಕು ನಿರ್ವಹಣೆಗೆ ಗಡಿ ವಿವಾದ ಅಡ್ಡಿಯಾಗದಿರಲಿ

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಒಂದು ಹಂತವನ್ನು ಮೀರಿ ಮುಂದೆ ಹೋಗಿದೆ. ಬುಧವಾರ ಆರಂಭವಾದ ಸಂಸತ್‌ ಅಧಿವೇಶನ­ದಲ್ಲೂ ಈ ವಿಚಾರವನ್ನು ಪ್ರಸ್ತಾವಿಸುವ ಮೂಲಕ ಮಹಾರಾಷ್ಟ್ರದ ರಾಜ­ಕಾರಣಿ­­ಗಳು ಇದನ್ನು ರಾಷ್ಟ್ರೀಯ ವಿಷಯ ಎಂಬಂತೆ ಬಿಂಬಿಸಹೊರಟಿ­ದ್ದಾರೆ. ಹಾಗೆ ನೋಡಿದರೆ ಇದು ಈ ಗಡಿ ವಿವಾದ ಎಂದೋ ಮುಗಿದುಹೋದ ವಿಚಾರ.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಿರುವ ಮಹಾಜನ್‌ ವರದಿಯನ್ನು ಎಲ್ಲೆಡೆ ಒಪ್ಪಿಕೊಳ್ಳಲಾಗಿದೆ. ಇಷ್ಟಾದರೂ ಅಗತ್ಯ ಬಿದ್ದಾಗ ಮತ್ತೆ ಪ್ರಸ್ತಾವಿಸುವ ಮಹಾರಾಷ್ಟ್ರ ವಿನಾ ಕಾರಣ ಗೊಂದಲವನ್ನು ಸೃಷ್ಟಿಸುತ್ತಲೇ ಇರುವುದು ಖಂಡನೀಯ. ಬೆಳಗಾವಿ ಹೋರಾಟವನ್ನೇ ಅಲ್ಲಿನ ಮುಖ್ಯಮಂತ್ರಿ ಏಣಿಯಾಗಿ ಮಾಡಿಕೊಂಡಿದ್ದನ್ನು ಮರೆಯುವ ಹಾಗಿಲ್ಲ. ಈ ಬಾರಿಯಂತೂ ಯಾವುದೇ ಪ್ರಚೋದನೆ ಇಲ್ಲದೆ ಮಹಾರಾಷ್ಟ್ರ ಸರಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿ ಮತ್ತೆ ನ್ಯಾಯಾಂಗವನ್ನು ಎಳೆದುತರಲು ಮುಂದಾಗಿದೆ. ಅಷ್ಟೇ ಆಗಿದ್ದರೆ ಚಿಂತೆ ಇರಲಿಲ್ಲ. ಕಾನೂನು ಮಟ್ಟದಲ್ಲಿ  ಹೋರಾಟಕ್ಕೆ ಕರ್ನಾಟಕವೂ ಸಜ್ಜಾಗ­ಬಹುದಿತ್ತು. ಆದರೆ ಲಕ್ಷ್ಮಣ ರೇಖೆಯನ್ನು ದಾಟಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಹಾರಾಷ್ಟ್ರ, ಇಬ್ಬರು ಸಚಿವರನ್ನು ಬೆಳಗಾವಿಗೆ ಕಳುಹಿಸಲು ನಿರ್ಧರಿಸಿದ್ದು ಅತಿರೇಕವೇ. ತನ್ನ ವ್ಯಾಪ್ತಿಯಲ್ಲಿಲ್ಲದ ಪ್ರದೇಶಕ್ಕೆ ತನ್ನ ಸಚಿವರನ್ನು ಕಳುಹಿಸಿ ಅಲ್ಲಿ ಬೆಂಕಿ ಹಚ್ಚುವ ಪ್ರಯತ್ನಕ್ಕೆ ಕೈ ಹಾಕುವುದನ್ನು ಯಾವ ಒಕ್ಕೂಟ ವ್ಯವಸ್ಥೆಯಲ್ಲೂ ಸಹಿಸಿಕೊಳ್ಳುವಂಥದ್ದಲ್ಲ.

ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಠಿನ ನಿಲುವು ತೆಗೆದುಕೊಂಡು ಮಹಾರಾಷ್ಟ್ರ ಸಚಿವರ ಭೇಟಿಗೆ ಆಕ್ಷೇಪ ವ್ಯಕ್ತಪಡಿಸದೆ ಇದ್ದಿದ್ದರೆ ಉಭಯ ರಾಜ್ಯಗಳ ಗಡಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿತ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ನಡುವೆ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರು, ಮಹಾರಾಷ್ಟ್ರ ನಾಗರಿಕರ ಮೇಲೆ ಕನ್ನಡಿಗರಿಂದ ಹಲ್ಲೆಯಾಗಿದೆ; ಕರ್ನಾಟಕ ಸಿಎಂ ಪ್ರಚೋದನೆ ಇದಕ್ಕೆಲ್ಲ ಕಾರಣ ಎಂಬರ್ಥದಲ್ಲಿ  ಲೋಕಸಭೆಯಲ್ಲಿ ಮಾತನಾಡಿರುವುದು ಖಂಡನಾರ್ಹ. ಇನ್ನೊಂದೆಡೆ ಮಹಾರಾಷ್ಟ್ರ ಡಿಸಿಎಂ ಫ‌ಡ್ನವೀಸ್‌ ಅವರು ಕೇಂದ್ರ ಗೃಹ ಸಚಿವರ ಬಳಿ ತಮ್ಮ ಅಹವಾಲನ್ನು ಮುಂದಿರಿಸಿದ್ದಾರೆ. ಇದು ಉಭಯ ರಾಜ್ಯಗಳ ಗಡಿ ವಿಚಾರವನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡುವ ಮೂಲಕ ಮತ್ತಷ್ಟು ದಿನ ಈ ವಿವಾದ ಹೊತ್ತಿ ಉರಿಯುವಂತೆ ಮಾಡುವ ಹುನ್ನಾರ ಮಹಾರಾಷ್ಟ್ರದ್ದಾಗಿದೆ. ಈ ವಿಚಾರದಲ್ಲಿ ಶಿವಕುಮಾರ್‌ ಉದಾಸಿ ಬಿಟ್ಟರೆ ರಾಜ್ಯದ ಬೇರಾವ ಸಂಸದರು ಮಾತನಾಡಿಲ್ಲ. ನಾಡು-ನುಡಿ ವಿಚಾರದಲ್ಲಿ ಸಂಸದರ ಮೌನ ಉತ್ತಮ ನಡೆ ಅಲ್ಲವೇ ಅಲ್ಲ.

ಗಡಿ ವಿಚಾರದಲ್ಲಿ ರಾಜಕೀಯ ಮಧ್ಯಪ್ರವೇಶ ಮಾಡುವುದನ್ನು ತತ್‌ಕ್ಷಣ ನಿಲ್ಲಿಸಬೇಕು. ಎರಡೂ ರಾಜ್ಯಗಳಲ್ಲೂ ಬಿಜೆಪಿ ಆಡಳಿತದಲ್ಲಿರುವುದ ರಿಂದ ಉಭಯ ರಾಜ್ಯಗಳ ನಡುವೆ ಸೌಹಾರ್ದತೆ ಮೂಡಿಸಲು ಅವಕಾಶ ಹೆಚ್ಚು. ಈ ಅವಕಾಶವನ್ನು ಬಳಸಿಕೊಂಡು ಕರ್ನಾಟಕ ತನ್ನ ನಿಲುವನ್ನು ಖಚಿತ ದನಿಯಲ್ಲಿ  ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಒಂದೆಡೆ ಕಾನೂನು ಹೋರಾಟಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜತೆಗೆ ಈ ವಿಚಾರವನ್ನು ಮತ್ತಷ್ಟು ಎಳೆಯದಂತೆ ಮಹಾರಾಷ್ಟ್ರಕ್ಕೆ ಪಕ್ಷದ ನಾಯಕತ್ವದ ಮೂಲಕವಾದರೂ ತಿಳಿ ಹೇಳಬೇಕಿರುವುದು ರಾಜ್ಯ ಬಿಜೆಪಿ ಹೊಣೆಗಾರಿಕೆಯೂ ಹೌದು. ಗಡಿ ವಿವಾದದಿಂದ ಜನರ ಬದುಕು ನಿರ್ವ­ಹಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಜವಾಬ್ದಾರಿಯಾಗಿದೆ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.