ಅಧ್ಯಯನ ಪೀಠಗಳಲ್ಲಿ ಸಂಶೋಧನೆ ನಡೆಯಲಿ


Team Udayavani, Jan 29, 2022, 6:00 AM IST

ಅಧ್ಯಯನ ಪೀಠಗಳಲ್ಲಿ ಸಂಶೋಧನೆ ನಡೆಯಲಿ

ರಾಜ್ಯದ 17 ವಿವಿಗಳಲ್ಲಿನ ಅಧ್ಯಯನ ಪೀಠಗಳಲ್ಲಿ ಬಹುತೇಕ ಪೀಠಗಳು ಮತ್ತು ಸಂಶೋಧನ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಸೊರಗುತ್ತಿವೆ. ಸ್ವತಃ ಉದಯವಾಣಿ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ಅಂಶ ಬಹಿರಂಗವಾಗಿದೆ. ಜಗತ್ತು ತಂಡ ಮಹನೀಯರನ್ನು ಸ್ಮರಿಸುವ ಸಲುವಾಗಿಸ್ಥಾಪಿತವಾದ ಅಧ್ಯಯನ ಪೀಠಗಳಲ್ಲಿ ವಿದ್ಯಾರ್ಥಿಗಳು ಅಥವಾ ಸಂಶೋಧನಾರ್ಥಿಗಳು ಇಲ್ಲದೇ ಇರುವುದು ದುರಂತವೇ ಸರಿ.

ಅಧ್ಯಯನ ಪೀಠಗಳ ವಿಚಾರದಲ್ಲಿ ಸರಕಾರದ ನಿರ್ಲಕ್ಷ್ಯ ಅಥವಾ ವಿದ್ಯಾರ್ಥಿಗಳ ನಿರಾಸಕ್ತಿ ಕುರಿತಂತೆ ಒಂದು ಅಧ್ಯಯನದ ಅಗತ್ಯ ಜರೂರತ್ತಾಗಿದೆ. ಬಹು ಹಿಂದಿನಿಂದಲೂ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಪೀಠಗಳನ್ನು ರಚಿಸುವ ರೂಢಿ ನಡೆದುಕೊಂಡು ಬಂದಿದೆ. ಕೆಲವೊಮ್ಮೆ ಅಂತೂ ಜಾತಿಗಳ ನಡುವಿನ ಜಿದ್ದಾಜಿದ್ದಿಗಾಗಿ ಅಧ್ಯಯನ ಪೀಠ ರಚನೆಯಾಗಿರಬಹುದೇ ಎಂಬ ಸಂದೇಹಗಳೂ ಮೂಡುತ್ತವೆ.

ಸದ್ಯ ರಾಜ್ಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಬಸವಣ್ಣ, ಸಂವಿಧಾನ ಶಿಲ್ಪಿ ಡಾ|ಬಿ.ಆರ್‌. ಅಂಬೇಡ್ಕರ್‌, ಸ್ವಾಮಿ ವಿವೇಕಾನಂದ, ರಾಷ್ಟ್ರಕವಿ ಕುವೆಂಪು, ಬಾಬು ಜಗಜೀವನ್‌ ರಾಂ, ಡಾ| ರಾಜಕುಮಾರ್‌, ಕೆಂಪೇಗೌಡ ಹಾಗೂ ಆಯಾಯ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಗೆ ಅನುಸಾರವಾಗಿ ಅಧ್ಯಯನ ಪೀಠಗಳು ರಚನೆಯಾಗಿವೆ. ಒಂದು ಲೆಕ್ಕಾಚಾರದಲ್ಲಿ ನೋಡುವುದಾದರೆ ಇದು ಅತ್ಯಂತ ಉತ್ತಮವಾದ ಕೆಲಸ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಯಾವುದೇ ಮಹನೀಯ ವ್ಯಕ್ತಿ ಬಗ್ಗೆ ಸುದೀರ್ಘ‌ವಾಗಿ ಅಧ್ಯಯನ ನಡೆಸಿರುವುದಿಲ್ಲ. ಅಲ್ಲದೆ ಕೆಲವು ಮಹನೀಯರ ನುಡಿಯಾದರ್ಶಗಳು ಮುಂದಿನ ಪೀಳಿಗೆಗೂ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆಯೂ ಇದೆ. ಇಂಥ

ಸಂದರ್ಭದಲ್ಲಿ ಮಹನೀಯರ ಕುರಿತಾದ ಅಧ್ಯಯನ ಪೀಠಗಳು ಹೆಚ್ಚೆಚ್ಚು ಕೆಲಸ ಮಾಡಿ, ಇವರ ಸಾಧನೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ.

ಆದರೆ ರಾಜ್ಯದಲ್ಲಿರುವ ಬಹುತೇಕ ಅಧ್ಯಯನ ಪೀಠಗಳಿಗೆ ಸರಿಯಾದ ಅನುದಾನವೇ ಸಿಗುತ್ತಿಲ್ಲ. ಅಲ್ಲದೆ ಈ ಅಧ್ಯಯನ ಪೀಠಗಳಿಗೆ ಪ್ರತಿಧೀವರ್ಷವೂ ಸರಕಾರದ ಕಡೆಯಿಂದ ಅನುದಾನ ಹೋಗಬೇಕು. ಈ ಅನುದಾನದ ವಿಚಾರದಲ್ಲೇ ರಾಜ್ಯ ಸರಕಾರ‌ ಅತ್ಯಂತ ನಿರ್ಲಕ್ಷ್ಯ ವಹಿಸಿದೆ ಎಂಬುದು ಅಧ್ಯಯನ ಪೀಠಗಳ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ಏಕೆಂದರೆ ಎಲ್ಲ ವಿವಿಗಳಲ್ಲಿನ ಅಧ್ಯಯನ ಪೀಠಗಳನ್ನು ನೋಡಿದಾಗ, ಎಲ್ಲರದ್ದೂ ಇದೊಂದೇ ಆಕ್ಷೇಪ ಕೇಳಿಬಂದಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ, ಅಧ್ಯಯನ ಪೀಠಗಳು ಇನ್ನಷ್ಟು ಕಾರ್ಯಚಟುವಟಿಕೆಗಳನ್ನು ನಡೆಸಲೇಬೇಕಾಗಿದೆ. ಕಾರ್ಯಚಟುವಟಿಕೆ ಎಂದರೆ, ಕೇವಲ ಜಯಂತಿ ಮತ್ತು ವಿಚಾರ ಸಂಕಿರಣ ನಡೆಸುವುದಲ್ಲ. ಇದಕ್ಕಿಂತಲೂ ಮಹನೀಯರ ಜೀವನಾದರ್ಶಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸಿ ಹೇಳಬೇಕಾಗಿದೆ. ಇದನ್ನು ಬಿಟ್ಟು,
ಹೆಸರಿಗಷ್ಟೇ ಪೀಠ ಮಾಡಿ, ಅವುಗಳಿಗೆ ಅನುದಾನ ನೀಡದೇ

ಹೋದರೆ ಆ ಮಹನೀಯರಿಗೆ ಅವಮಾನ ಮಾಡಿದಂತೆಯೇ ಸರಿ. ಯಾವುದೇ ಕಾರಣಕ್ಕೂ ಸರಕಾರಗಳಾಗಲಿ ಅಥವಾ ವಿಶ್ವವಿದ್ಯಾನಿಲಯಗಳಾಗಲಿ ಮಹನೀಯರಿಗೆ ಅವಮಾನ ಮಾಡುವ ಕೆಲಸ ಮಾಡಬಾರದು. ಈ ಕೂಡಲೇ ಅಧ್ಯಯನ ಪೀಠಗಳಿಗೆ ಅಗತ್ಯ ಅನುದಾನ ನೀಡಿ,ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕು.

ಟಾಪ್ ನ್ಯೂಸ್

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ

ಮುಂದುವರಿದ ಭಾರೀ ಮಳೆ: ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ

ಮುಂದುವರಿದ ಭಾರೀ ಮಳೆ: ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ

AIMIM leader arrested for derogatory comment on Shivling

ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯೋಜನಾಬದ್ಧ, ಸುಸ್ಥಿರ ಅಭಿವೃದ್ಧಿಯತ್ತ ಗಮನವಿರಲಿ

ಯೋಜನಾಬದ್ಧ, ಸುಸ್ಥಿರ ಅಭಿವೃದ್ಧಿಯತ್ತ ಗಮನವಿರಲಿ

ಹಣದುಬ್ಬರದ ನಾಗಾಲೋಟಕ್ಕೆ ಕಡಿವಾಣ ಅನಿವಾರ್ಯ

ಹಣದುಬ್ಬರದ ನಾಗಾಲೋಟಕ್ಕೆ ಕಡಿವಾಣ ಅನಿವಾರ್ಯ

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

ಈ ವರ್ಷವಾದರೂ ಸುಸೂತ್ರವಾಗಿ ನಡೆಯಲಿ ಶಾಲೆಗಳು

ಈ ವರ್ಷವಾದರೂ ಸುಸೂತ್ರವಾಗಿ ನಡೆಯಲಿ ಶಾಲೆಗಳು

ಆ್ಯಸಿಡ್‌ ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆಯಾಗಲಿ

ಆ್ಯಸಿಡ್‌ ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆಯಾಗಲಿ

MUST WATCH

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

ಹೊಸ ಸೇರ್ಪಡೆ

ಶಿರ್ವ: ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

ಶಿರ್ವ: ತಂದೆ -ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಹೈಟೆಕ್‌ ಬಸ್ ನಿಲ್ದಾಣ ನಿರ್ಮಿಸಿದ ಮಕ್ಕಳು

g-school1

ಸೌಕರ್ಯಗಳಿರುವಲ್ಲಿ ವಿದ್ಯಾರ್ಥಿಗಳಿಲ್ಲ; ವಿದ್ಯಾರ್ಥಿಗಳಿರುವಲ್ಲಿ ಸೌಲಭ್ಯಗಳೇ ಇಲ್ಲ

e-property

ಭೂ ಮಾಲಕತ್ವಕ್ಕೆ ಇ-ಪ್ರಾಪರ್ಟಿ ಕಾರ್ಡ್‌

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ

waste-management

ರೆಂಕೆದಗುತ್ತು ಪ್ರಾಯೋಗಿಕ ಯೋಜನೆಗೇ ಅಪಸ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.