ವೃತ್ತಿಪರ ಕೌನ್ಸೆಲಿಂಗ್‌: ತಾಂತ್ರಿಕ ಅಡಚಣೆಗಳನ್ನು ಬೇಗನೆ ಸರಿಪಡಿಸಿ


Team Udayavani, Oct 22, 2022, 6:00 AM IST

ವೃತ್ತಿಪರ ಕೌನ್ಸೆಲಿಂಗ್‌: ತಾಂತ್ರಿಕ ಅಡಚಣೆಗಳನ್ನು ಬೇಗನೆ ಸರಿಪಡಿಸಿ

ಭಾರೀ ವಿಳಂಬದ ಬಳಿಕ ಸಿಇಟಿ ಮತ್ತು ಯುಜಿ ನೀಟ್‌ ಕೌನ್ಸೆಲಿಂಗ್‌ ಶುರುವಾಗಿದ್ದು, ಈಗ ಇದಕ್ಕೆ ತಾಂತ್ರಿಕ ಅಡಚಣೆಯ ಸಮಸ್ಯೆ ತಲೆದೋರಿದೆ. ಹೀಗಾಗಿ, ಯುಜಿ-ನೀಟ್‌ ಅರ್ಜಿಗಳನ್ನು ತುಂಬುವ ಕಡೇ ದಿನಾಂಕವನ್ನು ಅ.25ರ ವರೆಗೆ ಮುಂದೂಡಿಕೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಕೊಂಚ ನಿರಾಳತೆಯನ್ನೂ ನೀಡಲಾಗಿದೆ.

ಈ ನಡುವೆಯೇ, ಪ್ರಸಕ್ತ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ವೆಬ್‌ಸೈಟ್‌ ಕೈಕೊಡಲು ಕಾರಣವೇನು ಎಂಬ ಬಗ್ಗೆ ಚರ್ಚೆಗಳೂ ಆರಂಭವಾಗಿವೆ. ಕೆಇಎ ಅಧಿಕಾರಿಗಳ ಪ್ರಕಾರ, 15 ವರ್ಷಗಳ ಹಳೆಯ ಸಾಫ್ಟ್ವೇರ್‌ ನಿಂದಾಗಿಯೇ ಈ ತಾಂತ್ರಿಕ ಸಮಸ್ಯೆಗಳಾಗುತ್ತಿವೆ. ಇದನ್ನು ಸರಿಪಡಿಸಲು ನೋಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗೆಯೇ, ರಾಜ್ಯ ಸರಕಾರದ ಗಮನಕ್ಕೂ ತಂದು, ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಕೋರಿಕೊಂಡಿದ್ದಾರೆ.

ಸದ್ಯ ಕೆಇಎ ವೆಬ್‌ಸೈಟ್‌ ಮೂಲಕವೇ ಸಿಇಟಿ ಎಂಜಿನಿಯರಿಂಗ್‌, ಯುಜಿ ನೀಟ್‌, ಪಿಜಿ ನೀಟ್‌, ಕೆಪಿಟಿಸಿಎಲ್‌ ಪರೀಕ್ಷೆ, ಸ್ನಾತಕೋತ್ತರ ಎಂಡಿ ಮತ್ತು ಎಂಎಸ್‌, ಸಹಾಯಕ ಶಿಕ್ಷಕರ ನೇಮಕ ಸೇರಿದಂತೆ ಹಲವಾರು ಪರೀಕ್ಷೆ ಗಳ ಕುರಿತಂತೆ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಹೀಗಾಗಿಯೇ ಸಮಸ್ಯೆ ತಲೆದೋರಿದೆ ಎಂದು ಕೆಇಎ ಅಧಿಕಾರಿಗಳು ಹೇಳಿದ್ದಾರೆ.

ಏನೇ ಇರಲಿ, ಸಿಇಟಿ ಮತ್ತು ಯುಜಿ ನೀಟ್‌ ವಿದ್ಯಾರ್ಥಿಗಳಿಗಂತೂ ಈ ತಾಂತ್ರಿಕ ಸಮಸ್ಯೆ ನಿದ್ದೆ ಇಲ್ಲದಂತೆ ಮಾಡಿದೆ. ಕೆಲವು ವಿದ್ಯಾರ್ಥಿಗಳ ಮನೆ ಗಳಲ್ಲಿ ಹಗಲು ರಾತ್ರಿ ಈ ವೆಬ್‌ಸೈಟ್‌ ಸರಿಯಾಯಿತೇ ಎಂದು ಕಾದು ನೋಡುವುದೇ ಆಗಿದೆ. ಕೆಲವೊಬ್ಬ ವಿದ್ಯಾರ್ಥಿಗಳು 12 ಗಂಟೆಗಳ ಕಾಲ ಈ ವೆಬ್‌ಸೈಟ್‌ ಮುಂದೆ ಕುಳಿತು ಅರ್ಜಿ ಸಲ್ಲಿಸಲು ಕಾದಿದ್ದಾರೆ. ಆದರೂ ಇವರ ಸಮಸ್ಯೆ ಬಗೆಹರಿದಿಲ್ಲ ಎನ್ನುವುದು ಖೇದಕರ.

ವಿಚಿತ್ರವೆಂದರೆ ಈ ವರ್ಷದ ಸಿಇಟಿ ಆರಂಭವಾದಾಗಿನಿಂದಲೂ ವಿದ್ಯಾರ್ಥಿ ಗಳಿಗೆ ಒಂದಿಲ್ಲೊಂದು ಸಮಸ್ಯೆ ತಲೆದೋರುತ್ತಲೇ ಇದೆ. ಆರಂಭ ದಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕೇವಲ ಸಿಇಟಿ ಅಂಕ ಪರಿ ಗಣನೆ ಮಾಡುತ್ತೇವೆ ಎಂದು ಹೇಳಿ ಈ ವಿದ್ಯಾರ್ಥಿಗಳು ಕೋರ್ಟ್‌ಗೆ ಹೋದ ಮೇಲೆ ಸಮಸ್ಯೆ ತಿಳಿಯಾಯಿತು.
ಇದರಿಂದಾಗಿಯೂ ಸಿಇಟಿ ಕೌನ್ಸೆಲಿಂಗ್‌ ಕೂಡ ತಡವಾಗಿ ಆರಂಭ ವಾಯಿತು. ಅತ್ತ ನೀಟ್‌ ಫ‌ಲಿತಾಂಶ ಕೂಡ ಈ ಭಾರಿ ತೀರಾ ತಡವಾಗಿಯೇ ಬಂದಿದೆ. ಇದರ ಪ್ರವೇಶ ಪ್ರಕ್ರಿಯೆ ಕೂಡ ಈಗಷ್ಟೇ ನಡೆಯುತ್ತಿದೆ.

ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಸರಕಾರ ಈ ಕೂಡಲೇ ಎಚ್ಚೆತ್ತು ತಾಂತ್ರಿಕವಾಗಿ ಏನೇನು ಸಮಸ್ಯೆಗಳಾಗಿವೆ ಎಂಬುದನ್ನು ನೋಡಿಕೊಳ್ಳ  ಬೇಕು. ಅಲ್ಲದೆ ಇಡೀ ದೇಶದಲ್ಲೇ ಕರ್ನಾಟಕ ತಾಂತ್ರಿಕತೆಯ ವಿಚಾರದಲ್ಲಿ ಮುಂದಿ ರುವ ರಾಜ್ಯ. ಇಲ್ಲೇ ಸರ್ವರ್‌ ರೀತಿಯ ಸಮಸ್ಯೆಗಳು ಕಾಣಿಸಿ   ಕೊಂಡರೆ ಅದು ನಾಚಿಕೆಗೇಡಿನ ವಿಚಾರವಾಗುತ್ತದೆ. ಈ ಬಗ್ಗೆ ಸರಕಾರ ಗಮನಹರಿಸಬೇಕು. ಅಲ್ಲದೆ ಈಗ ಬಳಕೆ ಮಾಡುತ್ತಿರುವ ಸಾಫ್ಟ್ ವೇರ್‌ ಕೂಡ 15 ವರ್ಷ ಹಳೆಯದಾಗಿದ್ದು, ಈಗಿನ ಒತ್ತಡಕ್ಕೆ ಇದು ಕಾರ್ಯ ನಿರ್ವ ಹಿಸುವ ಸಾಧ್ಯತೆಗಳು ಕಡಿಮೆಯೇ. ಇದನ್ನು ಅಪ್‌ಡೇಟ್‌ ಮಾಡುವತ್ತ ಗಮನ ಹರಿಸಬೇಕು.

ಹಾಗೆಯೇ ಏಕಕಾಲದಲ್ಲಿ ಬಹಳಷ್ಟು ಪರೀಕ್ಷೆಗಳು, ನೋಂದಣಿ ಪ್ರಕ್ರಿಯೆ  ಗಳನ್ನು ನಡೆಸುವುದು ಕೂಡ ಸರಿಯಲ್ಲ. ಪ್ರಮುಖವಾಗಿ ಯಾವುದಾದರೂ ಒಂದು ಪ್ರವೇಶ ಪ್ರಕ್ರಿಯೆ ನಡೆಯುವಾಗ ಬೇರೆಯವುಗಳಿಗೆ ಮತ್ತೂಂದು ಸಮಯ ನೀಡುವುದು ಉತ್ತಮ.

ಟಾಪ್ ನ್ಯೂಸ್

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

police crime

West Bengal ಬಿಜೆಪಿಯ ಮುಸ್ಲಿಂ ಕಾರ್ಯಕರ್ತನ ಬರ್ಬರ ಹತ್ಯೆ

1-wq-wewqe

T20 World Cup; ಪಪುವಾ ನ್ಯೂ ಗಿನಿಯ ವಿರುದ್ಧ ವಿಂಡೀಸ್‌ ಗೆ 5 ವಿಕೆಟ್ ಗಳ ಜಯ

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam 2

Public Examination: ವಿವೇಕಯುತ ನಡೆ ಇರಲಿ

Farmer

842 ರೈತರ ಆತ್ಮಹತ್ಯೆ; ಮನೋಸ್ಥೈರ್ಯ ತುಂಬುವ ಕಾರ್ಯವಾಗಲಿ

Polluted Water: ಕಲುಷಿತ ನೀರಿನ ಸಮಸ್ಯೆಗೆ ಸರಕಾರ ಅಂತ್ಯ ಹಾಡಲಿ

Polluted Water: ಕಲುಷಿತ ನೀರಿನ ಸಮಸ್ಯೆಗೆ ಸರಕಾರ ಅಂತ್ಯ ಹಾಡಲಿ

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

1-asdasdas

Tamil actor ಕರುಣಾಸ್‌ ಬಳಿ 40 ಬುಲೆಟ್‌ಗಳು ಪತ್ತೆ!

mob

WhatsApp ನಲ್ಲಿ ಶೀಘ್ರ ಚಾಟ್‌ ಫಿಲ್ಟರ್‌ ಅಪ್‌ಡೇಟ್‌?

Vimana 2

Again ವಿಮಾನಕ್ಕೆ ಬಾಂಬ್‌ ಬೆದರಿಕೆ: ವಾರದಲ್ಲಿ 4ನೇ ಘಟನೆ

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.