Udayavni Special

ವಿಧಾನ ಪರಿಷತ್‌ ರದ್ದು ಸಮುಚಿತ ನಿರ್ಧಾರವಲ್ಲ


ಸಂಪಾದಕೀಯ, Jan 28, 2020, 6:00 AM IST

jagan-1

ಇದೇ ಮೇಲ್ಮನೆಗಳು ಒಂದು ಕಾಲದಲ್ಲಿ ಚಿಂತಕರ ಕೂಟವಾಗಿತ್ತು. ಘಟಾನುಘಟಿ ನಾಯಕರು ಇಲ್ಲಿದ್ದರು. ಸಮಾಜದಲ್ಲಿರುವ ಘನವೇತ್ತರ ಅನುಭವವನ್ನು ರಾಷ್ಟ್ರ ನಿರ್ಮಾಣದಲ್ಲಿ ಬಳಸಿಕೊಳ್ಳಲು ಇರುವ ಮಾಧ್ಯಮವಾಗಿತ್ತು ಮೇಲ್ಮನೆ. ಹಿರಿಯರ ಮನೆ ಎನ್ನುವುದು ಇದಕ್ಕಿರುವ ಇನ್ನೊಂದು ಹೆಸರು.

ಆಂಧ್ರ ಪ್ರದೇಶದ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರಕಾರ ವಿಧಾನ ಪರಿಷತ್ತನ್ನು ರದ್ದುಪಡಿಸಲು ಕೈಗೊಂಡಿರುವ ತರಾತುರಿಯ ತೀರ್ಮಾನ ಆಶ್ಚರ್ಯವುಂಟುಮಾಡಿರಬಹುದು. ಆದರೆ ಜಗನ್‌ ಮೋಹನ್‌ ರೆಡ್ಡಿಯ ಕಾರ್ಯಶೈಲಿಯನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಇದು ನಿರೀಕ್ಷಿತ ನಡೆಯೇ ಆಗಿತ್ತು. 58 ಸದಸ್ಯ ಬಲದ ಪರಿಷತ್‌ನಲ್ಲಿ ವೈ.ಎಸ್‌.ಆರ್‌.ಕಾಂಗ್ರೆಸ್‌ನ ಸದಸ್ಯರಿರುವುದು ಬರೀ 9 ಮಂದಿ ಮಾತ್ರ. ಇದು ತನ್ನ ಹಾದಿಗೆ ಇರುವ ದೊಡ್ಡ ಅಡ್ಡಿ ಎಂದು ಜಗನ್‌ ಮೋಹನ್‌ ರೆಡ್ಡಿ ಭಾವಿಸಿರಬಹುದು. ಹೀಗಾಗಿ ವಿಧಾನ ಪರಿಷತ್ತನ್ನು ಇಲ್ಲದಂತೆ ಮಾಡುವ ಮೂಲಕ ಈ ಅಡ್ಡಿಯನ್ನು ನಿವಾರಿಸಿಕೊಂಡಿದ್ದಾರೆ. ಆದರೆ ಒಟ್ಟಾರೆ ಪ್ರಜಾತಂತ್ರದ ಹಿತದೃಷ್ಟಿಯಿಂದ ಹೇಳುವುದಾದರೆ ಇದು ಹಿಮ್ಮುಖ ನಡಿಗೆಯ ತೀರ್ಮಾನ.

ಆಂಧ್ರ ಪ್ರದೇಶದ ವಿಧಾನಸಭೆಯಲ್ಲಿ ಜಗನ್‌ ಮೋಹನ್‌ ಪಕ್ಷ ಅಭೂತಪೂರ್ವ ಬಹುಮತ ಹೊಂದಿದೆ. 175 ಸದಸ್ಯ ಬಲದ ಸದನದಲ್ಲಿ ವೈಎಸ್‌ಆರ್‌ಸಿಪಿ 151 ಶಾಸಕರನ್ನು ಹೊಂದಿದ್ದರೆ ಪ್ರಧಾನ ವಿಪಕ್ಷವಾಗಿರುವ ಟಿಡಿಪಿಗಿರುವುದು ಬರೀ 23 ಸದಸ್ಯ ಬಲ. ಇಂಥ ಬಹುಮತ ಇರುವುದರಿಂದಲೇ ಜಗನ್‌ ಮೋಹನ್‌ ಮೂರು ರಾಜಧಾನಿಯನ್ನು ಹೊಂದುವಂಥ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಆದರೆ ಈ ನಿರ್ಧಾರಗಳು ಮೇಲ್ಮನೆಯಲ್ಲಿ ಸಿಕ್ಕಿ ಹಾಕಿಕೊಂಡರೆ ಕಷ್ಟ ಎಂಬ ಕಾರಣಕ್ಕೆ ಮೇಲ್ಮನೆಯನ್ನೇ ರದ್ದು ಮಾಡಲು ಮುಂದಾಗಿದ್ದಾರೆ. ಟಿಡಿಪಿ ಕೆಲವು ಪ್ರಮುಖ ಮಸೂದೆಗಳನ್ನು ಮೇಲ್ಮನೆಯಲ್ಲಿ ತಡೆ ಹಿಡಿದು, ಜಗನ್‌ ಮೋಹನ್‌ ನಾಗಾಲೋಟಕ್ಕೆ ತಡೆ ಹಾಕುವ ಪ್ರಯತ್ನ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಹಾಗೆಂದು ಮೇಲ್ಮನೆಯನ್ನು ರದ್ದುಪಡಿಸುವ ತೀರ್ಮಾನವನ್ನು ಟಿಡಿಪಿ ಪೂರ್ಣವಾಗಿ ವಿರೋಧಿಸುವ ಸ್ಥಿತಿಯಲ್ಲಿಯೂ ಇಲ್ಲ. ಏಕೆಂದರೆ 1983ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿದಾಗ ತಾನೇ ಮೇಲ್ಮನೆಯನ್ನು ರದ್ದು ಮಾಡಲು ಮುಂದಾಗಿತ್ತು ಹಾಗೂ 1985ರಲ್ಲಿ ಇದರಲ್ಲಿ ಸಫ‌ಲವಾಗಿತ್ತು. ಅನಂತರ 2007ರಲ್ಲಿ ಕಾಂಗ್ರೆಸ್‌ ಮರಳಿ ಅಧಿಕಾರಕ್ಕೇರಿದಾಗ ವಿಧಾನ ಪರಿಷತ್‌ ಮತ್ತೆ ಅಸ್ತಿತ್ವಕ್ಕೆ ಬಂತು.

ಹಾಗೆಂದು ಮೇಲ್ಮನೆಯನ್ನು ರದ್ದುಪಡಿಸುವುದು ಜಗನ್‌ ಮೋಹನ್‌ ಅಂದುಕೊಂಡಷ್ಟು ಸುಲಭವಲ್ಲ. ರಾಜ್ಯದಲ್ಲಿ ಬಹುಮತದ ಬಲದಿಂದ ಮಸೂದೆಯನ್ನು ಅಂಗೀಕರಿಸಿಕೊಳ್ಳಬಹುದು. ಅನಂತರ ಇದು ಕೇಂದ್ರಕ್ಕೆ ಹೋಗಿ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗಿ ಅಂಗೀಕಾರ ಪಡೆದುಕೊಳ್ಳಬೇಕು. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ತನ್ನ ದಾಳ ಉರುಳಿಸದೆ ಬಿಡುವುದಿಲ್ಲ. ಕರ್ನಾಟಕ ಬಿಟ್ಟರೆ ಬಿಜೆಪಿಗೆ ನೆಲೆ ಕಂಡುಕೊಳ್ಳುವ ಭರವಸೆ ಇರುವುದು ಆಂಧ್ರದಲ್ಲಿ. ಇದೀಗ ತಾನಾಗಿ ಒದಗಿ ಬಂದಿರುವ ಈ ಅವಕಾಶವನ್ನು ಬಳಸಿಕೊಳ್ಳದಿರುವಷ್ಟು ಉದಾರಿ ಬಿಜೆಪಿಯಲ್ಲ.

ವಿಧಾನ ಪರಿಷತ್‌ ಅಥವಾ ಮೇಲ್ಮನೆಗೆ ಹಿಂದೆ ಇರುವಷ್ಟು ಮಹತ್ವ ಈಗ ಇಲ್ಲ ಎನ್ನುವುದು ನಿಜ. ಅದೀಗ ಸೋತವರಿಗೆ ಆಶ್ರಯ ಕಲ್ಪಿಸುವ ಆಶ್ರಯತಾಣವಾಗಿದೆ. ದುಡ್ಡಿನ ಥೈಲಿ ಇರುವವರ, ಸಿನೇಮಾದವರ, ಕ್ರೀಡಾಪಟುಗಳ ರಾಜಕೀಯ ಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಮನೆಯಾಗಿದೆ. ಅಂತೆಯೇ ಹಿಂಬಾಗಿಲಿನ ರಾಜಕೀಯ ಮಾಡುವವರಿಗೆ ವೇದಿಕೆಯಾಗಿ ಬದಲಾಗಿದೆ ಎನ್ನುವ ಆರೋಪಗಳೆಲ್ಲ ನಿಜವೇ. ಅಧಿಕಾರಕ್ಕಾಗಿ ಮೇಲಾಟ ನಡೆಸುವ ನಾಯಕರು ಮತ್ತು ರಾಜಕೀಯ ಪಕ್ಷಗಳಿಂದಾಗಿ ಮೇಲ್ಮನೆಯ ಘನತೆಗೆ ಸಾಕಷ್ಟು ಹಾನಿಯಾಗಿದೆ.

ಆದರೆ ಇದೇ ಮೇಲ್ಮನೆಗಳು ಒಂದು ಕಾಲದಲ್ಲಿ ಚಿಂತಕರ ಕೂಟವಾಗಿತ್ತು. ಘಟಾನುಘಟಿ ನಾಯಕರು ಇಲ್ಲಿದ್ದರು. ಸಮಾಜದಲ್ಲಿರುವ ಘನವೇತ್ತರ ಅನುಭವವನ್ನು ರಾಷ್ಟ್ರ ನಿರ್ಮಾಣದಲ್ಲಿ ಬಳಸಿಕೊಳ್ಳಲು ಇರುವ ಮಾಧ್ಯಮವಾಗಿತ್ತು ಮೇಲ್ಮನೆ. ಹಿರಿಯರ ಮನೆ ಎನ್ನುವುದು ಇದಕ್ಕಿರುವ ಇನ್ನೊಂದು ಹೆಸರು. ಇದು ವಯಸ್ಸಿನ ಹಿರಿತನ ಮಾತ್ರವಲ್ಲ ಅನುಭವದ, ಚಿಂತನೆಗಳ ಹಿರಿತನವೂ ಹೌದು. ಕೆಲವೊಮ್ಮೆ ಮುತ್ಸದ್ದಿಗಳನ್ನು ಸಕ್ರಿಯ ರಾಜಕೀಯಕ್ಕೆ ಕರೆತರುವ ಹಾದಿಯೂ ಮೇಲ್ಮನೆಯೇ. ಇದಕ್ಕೊಂದು ಉತ್ತಮ ಉದಾಹರಣೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌. ಹತ್ತು ವರ್ಷ ಮೇಲ್ಮನೆಯ ಸದಸ್ಯರಾಗಿಯೇ ಮನ್‌ಮೋಹನ್‌ ಸಿಂಗ್‌ ಪ್ರಧಾನಿ ಹುದ್ದೆಯನ್ನು ನಿಭಾಯಿಸಿದ್ದರು. ಪ್ರಸ್ತುತ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಮೇಲ್ಮನೆ ಸದಸ್ಯರು. ಮೇಲ್ಮನೆಯ ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿ ಬರುವುದಿಲ್ಲವಾದರೂ ಕೆಳಮನೆಯ ಸದಸ್ಯರಿಗಿರುವ ಎಲ್ಲ ಅಲ್ಲದಿದ್ದರೂ ಅನೇಕ ಅಧಿಕಾರಗಳು ಅವರಿಗೂ ಇರುತ್ತವೆ.

ಆಡಳಿತ ಪಕ್ಷವೇ ಮೇಲ್ಮನೆಯಲ್ಲೂ ಬಹುಮತವನ್ನು ಹೊಂದಿದ್ದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಆದರೆ ಆಂಧ್ರದಂತೆ ಮೇಲ್ಮನೆಯಲ್ಲಿ ಬಹುಮತ ಇಲ್ಲ ಎಂದಾದರೆ ಸರಕಾರಕ್ಕೆ ನಿರೀಕ್ಷಿತ ರೀತಿಯಲ್ಲಿ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಆದರೆ ಹಾಗೆಂದು ನೆಗಡಿಯಾಗುತ್ತದೆ ಎಂದು ಮೂಗನ್ನು ಕೊಯ್ದುಕೊಳ್ಳುವುದು ಸಮುಚಿತ ಕ್ರಮವಲ್ಲ. ಜಗನ್‌ ಮೋಹನ್‌ ಸರಕಾರ ಮಾಡಿರುವುದು ಮಾತ್ರ ಇದನ್ನೇ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

Chamarajanagar-Covid-Hospital

ಚಾಮರಾಜನಗರ: ನಿತ್ಯ ಸೋಂಕು ಪ್ರಕರಣಗಳು ಶತಕದ ಅಂಚಿಗೆ : ಒಟ್ಟು ಪ್ರಕರಣಗಳು ಸಾವಿರದಂಚಿನಲ್ಲಿ

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ATM-730

ಇನ್ನು ನಿಮ್ಮ ಕಾರ್ಡ್ ಮತ್ತು ಮೊಬೈಲ್ ಮೂಲಕ ಆಫ್ ಲೈನ್ ಪಾವತಿಗೂ ಅವಕಾಶ – ಇಲ್ಲಿದೆ ಮಾಹಿತಿ

Gold loan

ಚಿನ್ನದ ಮೌಲ್ಯದ ಶೇ. 90ರಷ್ಟು ಸಾಲ ನೀಡಲು ಆರ್‌ಬಿಐ ಅವಕಾಶ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರ್ಟಿಕಲ್‌ 370 ರದ್ದತಿಗೆ ವರ್ಷ ಐತಿಹಾಸಿಕ ದಿನ

ಆರ್ಟಿಕಲ್‌ 370 ರದ್ದತಿಗೆ ವರ್ಷ ಐತಿಹಾಸಿಕ ದಿನ

ಕುಂಟುತ್ತಿರುವ ವಿಶ್ವ ಆರ್ಥಿಕತೆ ಪುನಶ್ಚೇತನದ ಅನ್ವೇಷಣೆ

ಕುಂಟುತ್ತಿರುವ ವಿಶ್ವ ಆರ್ಥಿಕತೆ ಪುನಶ್ಚೇತನದ ಅನ್ವೇಷಣೆ

ಕೋವಿಡ್‌ 19 ಪ್ರಕರಣ ಹೆಚ್ಚಳ ತಗ್ಗದ ಅಪಾಯ

ಕೋವಿಡ್‌ 19 ಪ್ರಕರಣ ಹೆಚ್ಚಳ ತಗ್ಗದ ಅಪಾಯ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

MUST WATCH

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farmಹೊಸ ಸೇರ್ಪಡೆ

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಾಮಳೆಗೆ ಎರಡನೇ ಬಲಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಾಮಳೆಗೆ ಎರಡನೇ ಬಲಿ

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

Chamarajanagar-Covid-Hospital

ಚಾಮರಾಜನಗರ: ನಿತ್ಯ ಸೋಂಕು ಪ್ರಕರಣಗಳು ಶತಕದ ಅಂಚಿಗೆ : ಒಟ್ಟು ಪ್ರಕರಣಗಳು ಸಾವಿರದಂಚಿನಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.