ಐಎಂಎ ಹೊಸ್ತಿಲಿನಲ್ಲಿ ಪಾಂಝಿ ಭೂತದ ಶತಮಾನೋತ್ಸವ


ಜಯದೇವ ಪ್ರಸಾದ ಮೊಳೆಯಾರ, Jul 1, 2019, 5:00 AM IST

kasukudike

ಮೂಲತಃ ಪಾಂಝಿ ಸ್ಕೀಮ್‌ ಎನ್ನುವ ವರ್ಗಕ್ಕೆ ಸೇರುವ ಈ ಮೋಸದಾಟ ಇಂದು ನಿನ್ನೆಯದಲ್ಲ. ಈ ವಂಚನೆಯ ಭೂತಕ್ಕೆ ಈಗ ನೂರು ವರ್ಷ. ಅಂತಹ ಪಾಂಝಿ ಯೋಜನೆಯ ಶತಮಾನೋತ್ಸವವೋ ಎಂಬಂತೆ ಬೆಂಗಳೂರಿನಲ್ಲಿ ನಡೆಯಿತು ಸಾವಿರಾರು ಕೋಟಿ ರೂಪಾಯಿಗಳ ಐಎಂಎ ಪಂಗನಾಮ.

ಕಳೆದ ಕೆಲ ದಿನಗಳಿಂದ ಪತ್ರಿಕೆಗಳಲ್ಲಿ ನಿರಂತರವಾಗಿ ಬರುತ್ತಿರುವ ಐಎಂಎ ಬಹುಕೋಟಿ ಹಗರಣದ ಬಗ್ಗೆ ನೀವೆಲ್ಲರೂ ಓದಿದವರೇ ಆಗಿರುತ್ತೀರಿ. ಅತ್ಯಾಕರ್ಷಕ ಪ್ರತಿಫ‌ಲದ ಆಮಿಷ ನೀಡಿ ಅಮಾಯಕರ ದುಡ್ಡು ದೋಚಿ ಓಡಿಹೋದವರ ಸಾಲಿಗೆ ಇದೀಗ ಇನ್ನೊಂದು ಸೇರ್ಪಡೆ ಆದಂತಾಯಿತು.

ಬೆಂಗಳೂರಿನ ಐಎಂಎ ಹಗರಣವನ್ನು ಬೇರೆ ಬೇರೆ ನಿಲುವುಗಳಿಂದ ವಿಶ್ಲೇಷಣೆ ಮಾಡಲಾಗುತ್ತದೆ. ಅದಕ್ಕೆ ಧಾರ್ಮಿಕ, ರಾಜಕೀಯ ಮಜಲುಗಳು ಇಲ್ಲದಿಲ್ಲ. ಆದರೆ ಕೇವಲ ವಿತ್ತೀಯ ದೃಷ್ಟಿಕೋನದಿಂದ ನೋಡುವುದು ಕೂಡಾ ಅತ್ಯಗತ್ಯ. ಇದರಲ್ಲಿ ಎಲ್ಲರೂ ಕಲಿಯ ಬೇಕಾದ ವಿಷಯ ಸಾಕಷ್ಟು ಇದೆ. ಇಂತಹ ಹಗರಣಗಳು ದಿನಬೆಳಗಾದರೆ ಬೀದಿ ಬೀದಿಗಳಲ್ಲಿ ನಡೆಯುತ್ತಿರುತ್ತವೆ. ಮೂಲತಃ ಪಾಂಝಿ ಸ್ಕೀಮ್‌ ( ಟೋಪಿ ಹಾಕುವ ಸ್ಕೀಮ್‌ಗಳು) ಎನ್ನುವ ವರ್ಗಕ್ಕೆ ಸೇರುವ ಈ ಮೋಸದಾಟ ಇಂದು ನಿನ್ನೆಯದಲ್ಲ. 1919ರಲ್ಲಿ ಮೊದಲ ಬಾರಿ ಅಮೆರಿಕದಲ್ಲಿ ತಲೆಯೆತ್ತಿದ ಈ ವಂಚನೆಯ ಭೂತಕ್ಕೆ ನೂರು ವರ್ಷ. ಅಂತಹ ಪಾಂಝಿ ಯೋಜನೆಯ ಶತಮಾನೋತ್ಸವವೋ ಎಂಬಂತೆ ಬೆಂಗಳೂರಿನಲ್ಲಿ ನಡೆಯಿತು ಸಾವಿರಾರು ಕೋಟಿ ರೂಪಾಯಿಗಳ ಐಎಂಎ ಪಂಗನಾಮ. ಅಷ್ಟಕ್ಕೂ ಪಾಂಝಿ ಎಂದರೇನು? ಅದು ಹೇಗೆ ನಡೆಯುತ್ತದೆ? ಇದರ ಬಗ್ಗೆ ಹಳೆಯ ಕಾಕುಗಳನ್ನು ತಿರುವಿ ಹಾಕಿದರೆ ಸಾಕಷ್ಟು ಮಸಾಲೆ ಸಿಗುತ್ತದೆ. ಇದೋ ಇಲ್ಲಿದೆ ಹಳೆಯ ಪಾಂಝಿ ಭೂತದ ಹೊಸ “ರಿಮೇಕ್‌ ಆರ್ಟಿಕಲ್‌’..

***
1919ರ ಸಮಯ. ಅಮೆರಿಕದ ಬೋಸ್ಟನ್‌ ಪಟ್ಟಣದಲ್ಲಿ ಚಾಲ್ಸ…ಪೋಂಜಿ (1882-1949) ಎಂಬ ಇಟಾಲಿಯನ್‌ ಮೂಲದ ಒಬ್ಬ ಚೋರನಿದ್ದನು. ಅವನು ಅಂತಿಂತಹ ಚೋರನಲ್ಲ. ಅವನೊಬ್ಬ ಸೂಟ್‌ ಬೂಟ್‌ ಧರಿಸಿ, ಬಿಸಿನೆಸ್‌ ನಡೆಸಿ ಒಂದು ಅತ್ಯಾಕರ್ಷಕ ಇನ್ವೆಸ್ಟ್‌ಮೆಂಟ್‌ ಸ್ಕೀಂ ಮುಖಾಂತರ ಲಕ್ಷಾಂತರ ಜನರ ಕೋಟ್ಯಂತರ ಗುಳುಂ ಮಾಡಿದ ಕುಖ್ಯಾತ ಚೋರ – ವಿತ್ತ ಜಗತ್ತಿನ ವೀರಪ್ಪನ್‌!

ಆತ ಮಾಡಿದ್ದಾದರೂ ಏನು?
ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ಅಲ್ಲಿ ಇಲ್ಲಿ ಕೆಲಸ ನೋಡುತ್ತಾ ಇರುತ್ತಿದ್ದ ಈ ಪೋಂಜಿಗೆ ಒಂದು ದಿನ ಸ್ಪೈನ್‌ ದೇಶದ ಒಬ್ಬ ಗ್ರಾಹಕನಿಂದ ಒಂದು ಓಲೆ ಬಂತು. ಅದರೊಳಗೆ ಮರು ಉತ್ತರಕ್ಕಾಗಿ ಬೇಕಾದ ಅಂಚೆ ವೆಚ್ಚಕ್ಕಾಗಿ “ಅಂತಾರಾಷ್ಟ್ರೀಯ ರಿಪ್ಲೆ„ಕೂಪನ್‌’ ಒಂದನ್ನು ಇರಿಸಲಾಗಿತ್ತು. ಪದ್ಧತಿ ಪ್ರಕಾರ ಆ ಕೂಪನನ್ನು ಅಮೆರಿಕದ ಪೋಸ್ಟ್‌ ಆಫೀಸಿನಲ್ಲಿ ತೋರಿಸಿ ಸ್ಪೇನ್‌ ದೇಶಕ್ಕೆ ಮರು ಉತ್ತರಕ್ಕೆ ಬೇಕಾದಷ್ಟು ಅಂಚೆ ಚೀಟಿಯನ್ನು ವಿನಿಮಯದಲ್ಲಿ ತೆಗೆದುಕೊಳ್ಳಬಹುದಿತ್ತು. ಅದನ್ನು ಮಾಡುವಾಗ ಆತನು ಗಮನಿಸಿದ ಅಂಶವೆಂದರೆ ಸ್ಪೇನ್‌ನಲ್ಲಿ ಅಂತಹ ಒಂದು ಕೂಪನ್ನಿಗೆ ತಗಲುವ ವೆಚ್ಚ ಅಮೆರಿಕದಿಂದ ಮರು ಟಪ್ಪಾಲಿಗೆ ತಗಲುವ ಅಂಚೆ ವೆಚ್ಚಕ್ಕಿಂತ ಕಡಿಮೆಯಾಗಿತ್ತು. ಅಂತಹ “ಆರ್ಬಿಟ್ರಾಜ್‌’ ಅಥವಾ ಬೆಲೆಯ ವ್ಯತ್ಯಾಸದಲ್ಲಿ ಸುಮಾರು ಶೇ.400ರಷ್ಟು ಲಾಭ ಗಳಿಸಬಹುದಾಗಿತ್ತು. ಪೋಂಜಿಯ ತೀಕ್ಷ್ಣ ಬುದ್ಧಿಗೆ ಇಷ್ಟೇ ಸಾಕಿತ್ತು. ಕೂಡಲೇ ಪೋಂಜಿ ಅದರಲ್ಲಿ ಒಂದು ಬಿಸಿನೆಸ್‌ ಶುರು ಮಾಡೇ ಬಿಟ್ಟ.

ಸಾರ್ವಜನಿಕರಿಗೆ ಈ ಲಾಭದ ಕತೆಯನ್ನು ಹೇಳಿ ಅಂತಹ ಕೂಪನ್‌ಗಳಲ್ಲಿ ಹೂಡಿ 90 ದಿನಗಳಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇನೆ ಎಂದು ಹಣ ಸಂಗ್ರಹ ಶುರು ಮಾಡಿದ. ಜನರು ಅವನ ಸ್ಕೀಂ ವಿವರಣೆಯನ್ನು ಕೇಳಿ ಅತಿಯಾಸೆಯಿಂದ ಮರುಳಾಗಿ ಹಣ ಹೂಡಿಕೆಗೆ ಮುಗಿಬಿದ್ದರು. ಈ ರಿಪ್ಲೆ„ ಕೂಪನಿನ ಕತೆ “ನೋಡಲು-ಕೇಳಲು’ ಚಂದ. ಅದರೆ ವಾಸ್ತವವೇ ಬೇರೆ. ವಾಸ್ತವದಲ್ಲಿ ಸಾರ್ವಜನಿಕರು ಹೂಡಿದ ಹಣದಷ್ಟು ಪೋಸ್ಟಲ್‌ ಕೂಪನ್‌ ಇಡೀ ಜಗತ್ತಿನಲ್ಲೇ  ರಿಲೀಸ್‌ ಆಗಿರಲಿಲ್ಲ. ಅಲ್ಲದೆ ಪೋಂಜಿ ವಾಸ್ತವದಲ್ಲಿ ಕೂಪನುಗಳನ್ನು ಅಂತಹ ಸಗಟು ಪ್ರಮಾಣದಲ್ಲಿ ವಿನಿಮಯ ಮಾಡಿಕೊಳ್ಳಲೇ ಇಲ್ಲ. ಅವನು ಮಾಡಿದ್ದೇನೆಂದರೆ, ರಿಪ್ಲೆ„ ಕೂಪನ್‌ ಕತೆ ಹೇಳಿ ಹೊಸ ಹೂಡಿಕೆದಾರರ ಹಣದಿಂದ ಹಳೆ ಹೂಡಿಕೆದಾರರಿಗೆ ಬಡ್ಡಿ ಪಾವತಿ ಮಾಡುತ್ತಿದ್ದದ್ದು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಮುಗಿಬಿದ್ದು ಬರುತ್ತಿದ್ದ ಹೂಡಿಕೆಗಳನ್ನು ಬಾಚಿ ಬಾಚಿ ತನ್ನ ಜೇಬು ತುಂಬಿಸಿಕೊಳ್ಳುತ್ತಿದ್ದದ್ದು.

ಶ್ರೀಮಾನ್‌ ಪೋಂಜಿ ಹುಟ್ಟು ಹಾಕಿದ “ಪಾಂಝಿ ಸ್ಕೀಮ…’ ಎಂದೇ ಜಗತøಸಿದ್ಧಿಯಾದ ಇಂತಹ ತಂತ್ರಗಳು ಈ ರೀತಿ ನಡೆಯುತ್ತವೆ:

ಒಂದು ಸ್ಕೀಂನಲ್ಲಿ ಒಂದು ಆಕರ್ಷಕ ಉದ್ಯಮದ ಕತೆ ಹೇಳಿ ಅದರ ಹೂಡಿಕೆದಾರನಿಗೆ ಪ್ರತಿಫ‌ಲ ಅಥವಾ ರಿಟರ್ನ್ ಕೊಡುವುದು ಮುಂಬ ರುವ ಇನ್ನೊಬ್ಬನ ಹೂಡಿಕೆಯಿಂದಲೇ ಹೊರತು ಬೇರೆ ಯಾವುದೇ ಔದ್ಯಮಿಕ ಲಾಭದಿಂದಲ್ಲ. ಅತೀ ಹೆಚ್ಚು ಬಡ್ಡಿದರ ಅಥವ ಪ್ರತಿಫ‌ಲದ ಘೋಷಣೆಯನ್ನು ಮಾಡಿ ಹೆಚ್ಚೆಚ್ಚು ಮೂಲಧನವನ್ನು ಸಂಗ್ರಹಿಸುತ್ತಾ ಅದೇ ಮೂಲಧನವನ್ನು ಹಳೆ ಹೂಡಿಕೆದಾರರಿಗೆ ಕೊಡುತ್ತಾ ಮುಂದುವರಿಯುವುದೇ ಇದರ ಮೂ ತಂತ್ರ. ಹೊಸ ಅಮಾಯಕರು ಸ್ಕೀಮಿಗೆ ಸೇರುತ್ತಲೇ ಇರುವವರೆಗೆ ಈ ಸರಣಿ ಮುಂದುವರಿಯುತ್ತದೆ ಹಾಗೂ ಹಳಬರಿಗೆ ಪ್ರತಿಫ‌ಲ ಸಿಗುತ್ತದೆ. ಹೊಸ ಹೂಡಿಕೆದಾರರು ಬೇಕಾದಷ್ಟು ಸಂಖ್ಯೆಯಲ್ಲಿ ಸಿಗದೇ ಹೋದಾಗ ಈ ಸರಣಿ ತುಂಡಾಗಿ ಹಳೆ ಹೂಡಿಕೆದಾರರಿಗೆ ಕೊಡಲು ಹಣ ಇರುವುದಿಲ್ಲ. ಹೂಡಿಕೆದಾರರು ದಿವಾಳಿಯಾಗುತ್ತಾರೆ. ಅದರೆ ಅಗಲೇ ಅದನ್ನು ಅರಂಭಿಸಿದ ಖದೀ ಮರು ತಮ್ಮ ಜೇಬು ತುಂಬಿಸಿ ಆಗಿರುತ್ತದೆ. ಇನ್ನು ಕೆಲವೊಮ್ಮೆ ಈ ಪಾಂಝಿ ಭೂತಗಳು ಸಂಗ್ರಹಿಸಿದ ನಿಧಿಯನ್ನು ಎತ್ತಿ ಗಂಟು ಮೂಟೆ ಕಟ್ಟಿ ರಾತ್ರೋ ರಾತ್ರಿ ಪರಾರಿಯಾಗುತ್ತಾರೆ. ಹೀಗೆ ಎಲ್ಲರ ಹೂಡಿಕೆಯೂ ಒಂದು ದಿನ ತಂಗಾಳಿಯಲ್ಲಿ ಆವಿಯಾಗಿ ಹೋಗುತ್ತದೆ.

Now, the moral of the story is…
ಯಾವುದೇ ಒಂದು ಹಣಕಾಸಿನ ವ್ಯವಸ್ಥೆಯಲ್ಲಿ ಪ್ರತಿಯೊಂದು ಕಾಲಘಟ್ಟದಲ್ಲೂ ಬಡ್ಡಿದರ ಇಂತಿಷ್ಟು ಎಂದು ಇರುತ್ತದೆ. ಭಾರತದಲ್ಲಿ ರಿಸರ್ವ್‌ ಬ್ಯಾಂಕ್‌ ಇದನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅದರಿಂದ ಅತೀ ಹೆಚ್ಚು ಬಡ್ಡಿದರದ ಆಮಿಷ ತೋರಿಸಿ ದುಡ್ಡು ಸಂಗ್ರಹ ಮಾಡಿದಲ್ಲಿ ಅದನ್ನು ಯಾವುದೇ ನೈಜ ಉದ್ಯಮದಲ್ಲಿ ಹೂಡಿ ಘೋಷಿತ ಪ್ರತಿಫ‌ಲ ನೀಡುವುದು ಸಾಧ್ಯವಿರುವುದಿಲ್ಲ. ಒಂದು ವೇಳೆ ಸಾಧ್ಯವಿದ್ದರೂ, ಪ್ರಚಲಿತ ಬ್ಯಾಂಕು ದರಕ್ಕಿಂತ ಅತಿಹೆಚ್ಚನ ದರದಲ್ಲಿ ಅವರು ಡೆಪಾಸಿಟ್‌ ಯಾಕೆ ಪಡೆಯಬೇಕು? ಬ್ಯಾಂಕಿನಿಂದಲೇ ಸಾಲ ಪಡೆಯಬಹುದಲ್ಲವೇ?

ಕೇವಲ ಜನರನ್ನು ಮರುಳು ಮಾಡಲು ಯಾವ್ಯಾವುದೋ ವಿಚಿತ್ರ ಉದ್ಯಮಗಳ ಬಗ್ಗೆ ಬುರುಡೆ ಬಿಟ್ಟು ಅದರಲ್ಲಿ ಭಾರೀ ಲಾಭ ಸಿಗುತ್ತಾ ಇದೆ ಎಂದು ಜನರನ್ನು ನಂಬಿಸುತ್ತಾರೆ. ಅದನ್ನೆಲ್ಲಾ ಬಿಟ್ಟು ದುಡ್ಡಿನ ಸರಳ ತತ್ವಗಳನ್ನು ಮನದಟ್ಟು ಮಾಡಿಕೊಂಡಲ್ಲಿ ಈ ಪೋಂಜಿ ಭೂತಗಳಿಂದ ಬಚಾವಾಗಿ ಬದುಕಬಹುದು. ಅತಿಯಾದ ದುಡ್ಡಿನಾಸೆಗೆ ಮರುಳಾಗಿ ಅತೀ ಹೆಚ್ಚಿನ ಬಡ್ಡಿದರಗಳ ಹಿಂದೆ ಹೋದಲ್ಲಿ ಪಾಂಝಿ ಭೂತದ ಪೀಡೆಗೆ ಬಲಿಯಾಗುವುದು ಗ್ಯಾರಂಟಿ. ಹಾಗೆ ಆಗಿ ಹೊಂಡಕ್ಕೆ ಬಿದ್ದ ಮೇಲೆ ಯಾವ ಭೂತವೂ ಉಪಯೋಗಕ್ಕೆಬಾರದು. ಎಚ್ಚರವಿರಲಿ !

ಅದಿರಲಿ, ಈ ಸಂದರ್ಭದಲ್ಲಿ ಒಂದು ಮೋಸದ ಪಾಂಝಿ ಸ್ಕೀಮನ್ನು ಗುರುತಿಸುವುದು ಹೇಗೆ ಎಂದು ನೀವುಗಳು ಕೇಳಬಹುದು. ಮೋಸದ ಪಾಂಝಿ ಭೂತದ ಲಕ್ಷಣಗಳು ಈ ಕೆಳಗಿನಂತೆ:

1.ಅತಿಯಾದ ಪ್ರತಿಫ‌ಲ
ನಿಮ್ಮ ಹೂಡಿಕೆಯ ಮೇಲೆ ನಿಮಗೆ ಬಾಯಲ್ಲಿ ನೀರೂರುವಷ್ಟು ಪ್ರತಿಫ‌ಲದ ಗಾಳ ಹಾಕಲಾಗುತ್ತದೆ. ಎಷ್ಟರಮಟ್ಟಿಗೆ ಅಂದರೆ ಅದನ್ನು ಕಂಡೊಡನೆ ನಿಮ್ಮ ಮೆದುಳು ದೀರ್ಘ‌ ರಜೆಗೆ ಹೋಗುತ್ತದೆ. ನೀವು ಯೋಚಿಸುವುದಿಲ್ಲ. ನಿಮ್ಮೊಳಗೆ ಹುದುಗಿರುವ ಲೋಭ ಎಂಬ ರಾಕ್ಷಸ ಅದನ್ನು ಕೂಡಲೇ ಕಚಕ್‌ ಎಂದು ಕಚ್ಚಿಕೊಳ್ಳುತ್ತಾನೆ. ನಿಮ್ಮ ಪ್ರತಿಫ‌ಲ ಅಲ್ಲದೆ ನಿಮಗೆ ಈ ಸ್ಕೀಮನ್ನು ಮಾರುವ ವ್ಯಕ್ತಿಗೆ ಕೈಕಾಲು ತುಂಬಾ ಕಮಿಶನ್‌ ಅಲ್ಲದೆ ಮೂರು ಮೂರು ತಲೆಮಾರುಗಳವರೆಗೆ ಆತನ ಬಾಸುಗಳಿಗೆ ಕೂಡಾ ಸಕಲ ಸವಲತ್ತುಗಳು. ಇವನ್ನೆಲ್ಲಾ ಕೂಡಿದರೆ ಅದೇ ಸುಮಾರು ನಿಮ್ಮ ದುಡ್ಡಿನ ಶೇ. 50 ಬರಬಹುದು. ಅತಿ ರೋಚಕವಾಗಿ ಲೋಭ ಹುಟ್ಟಿಸುವಷ್ಟು ಲಾಭವೇ ಈ ಸ್ಕೀಮಿನ ಮುಖ್ಯ ಭೂಮಿಕೆ

2.ಸೊಗಸಾದ ಕತೆ
ಇಷ್ಟು ಪ್ರತಿಫ‌ಲ ಕೊಡುವ ಉದ್ದಿಮೆಯಾದರೂ ಅದೆಂಥದ್ದು? ಎಲ್ಲಿಂದ ಬರುತ್ತದೆ ಇಷ್ಟು ದುಡ್ಡು ಅಂತ ಕೇಳಿದರೆ ಯಾವತ್ತೂ ಒಂದು ಸೊಗಸಾದ ಕತೆ ಕೇಳಲು ಸಿದ್ಧರಾಗಿ. ಜಗತ್ತಿನಲ್ಲಿ ನೀವು ಕಂಡು ಕೇಳರಿಯದ ಒಂದು ಉದ್ದಿಮೆಯ ವರ್ಣರಂಜಿತ ಕತೆಯಿಂದ ನಿಮ್ಮನ್ನು ಪುಳಕಿತಗೊಳಿಸುತ್ತಾರೆ. ಪ್ರಶ್ನಾವಳಿ ತುಂಬುವುದು, ಚಿನ್ನವನ್ನು 24 ರಿಂದ 22 ಕ್ಯಾರೆಟ್ಟಿಗೆ ಪರಿವರ್ತಿಸುವುದು, ಓಸ್ಟ್ರಿಚ್‌ ಸಾಕುವುದು, ದೂರದ ಸಿಂಗಾಪುರದಲ್ಲಿ ವಿದೇಶಿ ವಿನಿಮಯದ ದೊಡ್ಡ ವ್ಯಾಪಾರ, ಬಿಟ್‌ ಕಾಯಿನ್‌ ಹೆಸರಿನಲ್ಲಿ ಹೂಡಿಕೆ ಇತ್ಯಾದಿ ಸಾಮಾನ್ಯವಾಗಿ ನೀವು ಕೇಳಿರದ ಒಂದು ಭಾರಿ ಘನಂದಾರಿ ಉದ್ದಿಮೆಯ ವರ್ಣನೆ ನಿಮ್ಮ ಮುಂದೆ ಅನಾವರಣಗೊಳ್ಳುತ್ತದೆ. ವಿಚಿತ್ರವೆಂದರೆ ಇಷ್ಟು ದೊಡ್ಡ ಮೊತ್ತದ ಲಾಭ ತಂದುಕೊಡುವ ಆ ಉದ್ದಿಮೆಗಳಲ್ಲಿ ಟಾಟಾ, ಬಿರ್ಲಾ, ಅಂಬಾನಿಯಾದಿಗಳು ಇರುವುದಿಲ್ಲ. ಯಾವುದೇ ಪ್ರಸಿದ್ಧ ಬಿಸಿನೆಸ್‌ ಹೌಸ್‌ಗಳಿಗೆ ಗೊತ್ತಿಲ್ಲದ ಈ ವಿದ್ಯೆ ಇವುಗಳಿಗೆ ಕರಗತವಾಗಿರುತ್ತದೆ!

3.ನಾವು ಡಿಫ‌ರೆಂಟ್‌
ಇದು ಇನ್ನೊಂದು ಅಂಕ. ಕತೆಯ ಈ ಭಾಗಕ್ಕೆ ಬಂದಾಗಂತೂ ನೀವು ಕ್ಲೀನ್‌ಬೌಲ್ಡ… ಆಗಿರುತ್ತಿರಿ. ಪರ್ಸ್‌ ಬಿಚ್ಚಿ ಎಲ್ಲಿ ಸೈನ್‌ ಹಾಕಬೇಕು ಹೇಳಿ ಎನ್ನುತ್ತಾ ಪೆನ್‌ ಕೈಗೆತ್ತಿಕೊಳ್ಳುತ್ತೀರಿ. ನಾಟಕದ ಈ ಅಂಕದ ಹೆಸರು “ವಿ ಆರ್‌ ಡಿಫ‌ರೆಂಟ್‌!’ ಇಲ್ಲಿ ಡಿಫ‌ರೆಂಟ್‌ ಹೇಗೆಂದರೆ ಇವರ ಕಂಪೆನಿಯ ಬಗ್ಗೆ ಜಾಹೀರಾತು ನಿಮಗೆ ಯಾವುದೇ ಪೇಪರ್‌/ಟಿವಿಯಲ್ಲಿ ಸಿಗಲಾರದು. ಇವರ ಮಾರಾಟ ತಂತ್ರ ಬರೇ ಬಾಯಿಂದ ಬಾಯಿಗೆ ಮಾತ್ರ. ಒಬ್ಬರು ಹತ್ತು ಮಂದಿಗೆ, ಆ ಹತ್ತು ಮಂದಿ ಸಾವಿರ ಮಂದಿಗೆ ಮಾರಿ ಬಿಸಿನೆಸ್‌ ಮಾಡುವ ಮಾಡೆಲ್‌ ಇವರದ್ದಾಗಿರುತ್ತದೆ. ಇದರಲ್ಲೇ ಲಾಭ ಇದೆ ಅನ್ನುತ್ತಾರೆ. ದೊಡ್ಡ ದೊಡ್ಡ ಟಾಟಾ ಬಿರ್ಲಾಗಳಿಗೆ ಬಿಸಿನೆಸ್‌ ಮಾಡಲು ಬರುವುದಿಲ್ಲ, ಜಾಹೀರಾತಿಗೆ ದುಡ್ಡು ಹಾಳುಮಾಡುತ್ತಾರೆ ಅನ್ನುತ್ತಾರೆ. ವಿತರಣೆಯಲ್ಲಿ ದುಡ್ಡು ಪೋಲು ಮಾಡುತ್ತಾರೆ ಅನ್ನುತ್ತಾರೆ. ನಾವು ಮಾತ್ರ ಇಂತಹ ನಷ್ಟಗಳನ್ನು ಉಳಿಸಿ ಅದನ್ನು ಗ್ರಾಹಕರಿಗೇ ಸಿಗುವಂತೆ ಹಂಚಿಕೊಳ್ಳುತ್ತೇವೆ ಅನ್ನುವ ಬುರುಡೆ ಬಿಡುತ್ತಾರೆ. ಬಣ್ಣ ಬಣ್ಣದ ಪಾಂಪ್ಲೆಟ್‌, ಬ್ರೋಶರ್‌ ತೋರಿಸುತ್ತಾರೆ. ಇದೊಂದು ಬಿಸಿನೆಸ್‌ ಮಾತ್ರವಲ್ಲ, ಎಲ್ಲರೂ ಆರ್ಥಿಕವಾಗಿ ಸದೃಢವಾಗಲು ಇರುವ ಸಮಾಜ ಸೇವೆ ಅನ್ನುತ್ತಾರೆ. ಈ ಹಂತಕ್ಕೆ ಬಂದಾಗಲಂತೂ ನಿಮ್ಮ ಕಣ್ಣಲ್ಲಿ ಆನಂದ ಬಾಷ್ಪವೇ ಇಳಿಯುತ್ತಿರುತ್ತದೆ.

ವಿವರಗಳನ್ನು ಬರೆಯುತ್ತಾ ಹೋದರೆ ಇದೇ ಒಂದು ಪುಸ್ತಕ ಆದೀತು. ಸದ್ಯಕ್ಕೆ ಇಷ್ಟು ಸಾಕು. ಈ ವಾಸನೆಯ ಜಾಡು ಹಿಡಿಯುವ ಕಲೆಯನ್ನು ಸ್ಥೂಲವಾಗಿ ಕಲಿತರೆ ಸಾಕು. ಯಾವುದಕ್ಕೂ ಯಾವುದೇ ಅತ್ಯಾಕರ್ಷಕ ಯೋಜನೆಯ ಬಗ್ಗೆ ಎಚ್ಚರದಲ್ಲಿರಿ. ಅದರೊಳಗೊಂದು ಪಾಂಝಿ ಭೂತ ಅಡಗಿರಬಹುದು!

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.