ಯಾವುದು ನಂಬಿಕೆ? ಯಾವುದು ಮೂಢನಂಬಿಕೆ?


Team Udayavani, Oct 6, 2017, 6:15 AM IST

Human-values,.jpg

ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರುವ ಪಾಶವೀ ಪ್ರವೃತ್ತಿಯ ಬಾಬಾಗಳು, ಪವಾಡ ಪುರುಷರು, ದೇವ ಮಾನವರು ಎಸಗುವ ಅಪಚಾರಗಳನ್ನು ಸರಕಾರ ಮೂಕಪ್ರೇಕ್ಷಕರಾಗಿ ನೋಡುವಂತಿಲ್ಲ ನಿಜ. ಆದರೆ ನಂಬಿಕೆಗಳಲ್ಲಿ ಯಾವುದನ್ನು ಕಾನೂನಿನ ದೃಷ್ಟಿಯಿಂದ ಸಹಿಸಿಕೊಳ್ಳಬಹುದು-ಯಾವುದನ್ನು ಸಹಿಸಲಾಗದು, ಯಾವುದು ಶಿಕ್ಷಾರ್ಹ-ಯಾವುದು ಶಿಕ್ಷಾರ್ಹವಲ್ಲ ಎಂದು ವ್ಯಾಖ್ಯಾನಿಸುವುದು  ಅಷ್ಟೇನೂ ಸುಲಭದ ಕೆಲಸವಲ್ಲ. ಕೆಲವರ ಭಾವನಾತ್ಮಕ ನಂಬಿಕೆ, ಇತರರಿಗೆ ಮೌಡ್ಯವಾಗಿ ಕಾಣಬಹುದು. 

ಮೂಢನಂಬಿಕೆಗಳ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ವಿಧೇಯಕ ತರುವ ಕುರಿತು ಸರಕಾರ ತುಂಬಾ ಸಮಯದಿಂದ ಹೇಳುತ್ತಲೇ ಬಂದಿದೆ. ಕೆಲವು ದಿನಗಳ ಹಿಂದೆ ಈ ಕುರಿತು ಮಹತ್ವಪೂರ್ಣ ನಿರ್ಣಯ ಕೈಗೊಂಡ ವರದಿಯಾಗಿದೆ. ಸರಕಾರದ ಒಳ ಹೊರಗೆ ಈ ಕುರಿತು ಪರ-ವಿರೋಧ, ಅಭಿಪ್ರಾಯ-ಭಿನ್ನಾಭಿಪ್ರಾಯಗಳ ವೈರುಧ್ಯ ಮೇಲ್ನೋಟದಲ್ಲೇ ಕಾಣುತ್ತಿದೆ. ತಮ್ಮ ಸಮಾಜವಾದಿ ತತ್ವಗಳ ಸೈದ್ಧಾಂತಿಕ ಹಿನ್ನೆಲೆಯ ಕುರಿತು ಅಭಿಮಾನಪಡುತ್ತಿರುವ ಹಿರಿಯ ಸಚಿವ ರೋರ್ವರೇ ಕೊಂಚ ಸಮಯದ ಹಿಂದೆ “ಕುರಿ ಕೋಳಿ ಕಡಿಯುವುದು ತಪ್ಪು ಎಂದರೆ ಜನ ನಮ್ಮನ್ನು ಹಳ್ಳಿಯ ಒಳಗೆ ಬಿಟ್ಟಾರೆಯೇ’ ಎಂದು ಪ್ರಶ್ನಿಸಿದ್ದರು. ನಂಬಿಕೆಗಳ ಹೆಸರಲ್ಲಿ ಮುಗ್ಧ ಜನತೆಯನ್ನು ಶೋಷಿಸುವ, ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರುವ ಪಾಶವೀ ಪ್ರವೃತ್ತಿಯ ಬಾಬಾಗಳು, ಪವಾಡ ಪುರುಷರು, ದೇವ ಮಾನವರು ಎಸಗುವ ಅಪಚಾರಗಳನ್ನು ಸರಕಾರ ಮೂಕಪ್ರೇಕ್ಷಕರಾಗಿ ನೋಡುವಂತಿಲ್ಲ ನಿಜ. ಆದರೆ ನಂಬಿಕೆಗಳಲ್ಲಿ ಯಾವುದನ್ನು ಕಾನೂನಿನ ದೃಷ್ಟಿಯಿಂದ ಸಹಿಸಿ ಕೊಳ್ಳಬಹುದು-ಯಾವುದನ್ನು ಸಹಿಸಲಾಗದು, ಯಾವುದು ಶಿಕ್ಷಾರ್ಹ-ಯಾವುದು ಶಿಕ್ಷಾರ್ಹವಲ್ಲ ಎಂದು ವ್ಯಾಖ್ಯಾನಿಸುವುದು ಕೂಡ ಅಷ್ಟೇನೂ ಸುಲಭದ ಕೆಲಸವಲ್ಲ. ಕೆಲವರ ಭಾವನಾತ್ಮಕ ನಂಬಿಕೆ, ಇತರರಿಗೆ ಮೌಡ್ಯವಾಗಿ ಕಾಣಬಹುದು.
 
ಬಿಡುವೆನೆಂದರೂ ಬಿಡಲಾರದು!
ಸಾಮಾನ್ಯ ಮನುಷ್ಯನಿಂದ ಅಸಾಧ್ಯವೆನಿಸುವುದು ಸಾಧ್ಯವಾ ದಾಗ, ಅಸಂಭವವೆನಿಸಿದ್ದು ಸಂಭವವಾದದ್ದು ಕಂಡು, ಕೇಳಿದ ಅನುಭವಗಳು ಅನೇಕ ನಂಬಿಕೆಗಳಿಗೆ ನೀರೆರೆಯುತ್ತವೆ. ಬದುಕಿನ ಅನೇಕ ಆಕಸ್ಮಿಕ ತಿರುವು-ಮುರುವುಗಳು, ಆಶ್ಚರ್ಯಕರ ಸನ್ನಿವೇಶಗಳು ಮತ್ತು ಘಟನೆಗಳು ಮನುಷ್ಯನನ್ನು ಅಗೋಚರ ಶಕ್ತಿಯ ಇರುವಿಕೆಯನ್ನು ನಂಬುವಂತೆ ಮಾಡುತ್ತದೆ. ಇಂತಹ ಐತಿಹ್ಯಗಳು, ವೃತ್ತಾಂತಗಳು, ವದಂತಿಗಳು ನಮ್ಮ ಸಮಾಜದಲ್ಲಿ ತಲೆ ತಲಾಂತರಗಳಿಂದ ಪೀಳಿಗೆಯಿಂದ ಪೀಳಿಗೆಗೆ ಹರಿದು ಬರುತ್ತಿವೆ. ಇವೇ ನಂಬಿಕೆಗಳಾಗಿ ನಮ್ಮ ಸಾಮಾಜಿಕ, ಧಾರ್ಮಿಕ ಬದುಕಿನಲ್ಲಿ ಆಳವಾಗಿ ಬೇರೂರಿವೆ.

ಯಾವುದೋ ದೈವಸ್ಥಾನದಲ್ಲಿ ಅವರವರ ಶಕöನುಸಾರ ದೇವಿ­ಗೊಂದು ಮರ¨ªೋ ಬೆಳ್ಳಿಯ¨ªೋ ಮಗುವಿನ ತೊಟ್ಟಿಲು ಸಮರ್ಪಿ­ಸುವುದರಿಂದ ಸಂತಾನ ಪ್ರಾಪ್ತಿಯಾಗುವುದೆನ್ನುವ, ಅತಿ ಎತ್ತರದ ಬೆಟ್ಟದ ಮೇಲಿರುವ ಇನ್ಯಾವುದೋ ದೇವರ ಬಳಿ ಬರಿಗಾಲಲ್ಲಿ ನಡೆದು ಹೋಗಿ ಬೇಡಿದರೆ ಬೇಡಿದವರ ಮನೋಕಾಮನೆ ಈಡೇರುವುದೆನ್ನುವ ಅನೇಕ ನೂರಾರು ನಂಬಿಕೆಗಳು ನಮ್ಮ ಮನೆ-ಮನಗಳಲ್ಲಿ ಬೃಹತ್‌ ವೃಕ್ಷಗಳಾಗಿ ಬೆಳೆದು ನಿಂತಿವೆ. ವಿಜ್ಞಾನ-ತಂತ್ರಜ್ಞಾನದ ಇಂದಿನ ಆಧುನಿಕ ಯುಗಕ್ಕೆ ಅನಾಗರಿಕವೆನ್ನುವ, ಆದರೆ ಬದುಕಿನ ಕಷ್ಟ ಕಾರ್ಪಣ್ಯ ಗಳಿಗೆ ಪರಿಹಾರ ರೂಪವಾಗಿ ಕುರಿ-ಕೋಳಿ ಕಡಿಯುವ, ಕೆಂಡ ಹಾಯುವ, ಸಾಮಾನ್ಯರಿಗೆ ನಂಬಲೂ- ಬಿಡಲೂ ಕಷ್ಟಕರವಾಗಿರುವ ಸತ್ತವರಿಗೆ ಎಡೆ ಇಡುವ, ತಿಥಿ ಮಾಡುವ ನಂಬಿಕೆಗಳು ಬಿಡುವೆನೆಂದರೂ ಬಿಡಲಾರದೆಂಬಂತೆ ಕಾಡುತ್ತಿದೆ. 

ಇವೆಲ್ಲ ಸಾಮಾನ್ಯರ ಪಾಡಾದರೆ ನಮ್ಮ ಜನ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳೂ ನಂಬಿಕೆಗಳ ಕುರಿತು ಬಹಳ ಹಿಂದುಳಿ ದಿಲ್ಲ. ವಾಸ್ತು ಸರಿಯಿಲ್ಲವೆಂದು ವಿಧಾನಸೌಧದ ಭದ್ರ ಗೋಡೆ ಗಳನ್ನೇ ಒಡೆಯುವ ಮಂತ್ರಿ ಮಹೋದಯರ ನಂಬಿಕೆಗಳನ್ನು ಒಡೆಯುವುದು ಅಷ್ಟೇನೂ ಸರಳ ಕೆಲಸವಲ್ಲ. ಯಾವುದೋ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ ಅವರ ಅಧಿಕಾರ ಕೈತಪ್ಪುತ್ತದೆ, ಕೆಟ್ಟ ಘಳಿಗೆಯಲ್ಲಿ ಮಂತ್ರಿ ಮಂಡಳ ವಿಸ್ತರಿಸಿದರೆ ಸರಕಾರ ಉರುಳುತ್ತದೆ ಎನ್ನುವ (ಮೂಢ) ನಂಬಿಕೆಗಳು ನಮ್ಮ ರಾಜಕೀಯ ವಲಯದಲ್ಲಿ ಭದ್ರವಾಗಿ ಬೇರೂರಿವೆ. ಜನರ ತೆರಿಗೆಯ ಹಣದಲ್ಲಿ ಹೊಸದಾಗಿ ಖರೀದಿಸಿದ ಚಕಮಕ ಹೊಳೆಯುವ ಕಾರಿನ ಮೇಲೆ ಕಾಗೆ ಮಲ ವಿಸರ್ಜಿಸಿದ್ದು ಅಪ­ಶಕುನವೆಂದು ಕಾರನ್ನೇ ಬದಲಿಸುವ ಮಾನಸಿಕತೆ ನಮ್ಮನ್ನಾಳುವವರನ್ನು ಆವರಿಸಿದೆಯೆಂದ ಮೇಲೆ ಯಾವುದು ಸಾತ್ವಿಕ ನಂಬಿಕೆ, ಯಾವುದು ಮೂಢ ನಂಬಿಕೆ  ಎನ್ನುವುದನ್ನು ನಿರ್ಧರಿಸುವುದು ಸುಲಭವೇ? ಆದರೂ ನಮ್ಮ ಘನ ಸರಕಾರ ಮೂಢ ನಂಬಿಕೆಯ ವಿರುದ್ಧ ಕಾನೂನು ಜಾರಿಗೆ ತರಲು ಹೊರಟಿದೆ. ಸರಕಾರಕ್ಕೆ ಇದೊಂದು ಉಗಿಯಲೂ ಆಗದ ನುಂಗಲೂ ಆಗದ ಬಿಸಿ ತುಪ್ಪವಾಗದಿರದು.

ನಂಬಿಕೆಗಳ ಜಾಗತೀಕರಣ!
ಹೊಸದಾಗಿ ಕೊಂಡುತಂದ ಗಾಡಿಗೆ ಪೂಜೆ ಮಾಡಿ ನಿಂಬೆ-ಮೆಣಸು ಕಟ್ಟುವ, ಕುಂಬಳ ಕತ್ತರಿಸುವ, ಮಗು ಹಠ ಮಾಡುತ್ತಿದೆ ಎಂದು ಕೆಂಪು ಕೆಂಡದ ಹಾನದಾರತಿ ಎತ್ತುವ, ಬೆಕ್ಕು ದಾರಿಗಡ್ಡ ಬಂದು ಅಪಶಕುನವಾಯಿತೆನ್ನುವ, ಅಧಿಕಾರ ವಹಿಸಿಕೊಳ್ಳುವ ಮೊದಲು, ಕಚೇರಿ ಉದ್ಘಾಟನೆಯ ಮೊದಲು ಹೋಮ-ಹವನ ಮಾಡುವ, ಹುಟ್ಟಿದ್ದಕ್ಕೆ-ಸತ್ತದ್ದಕ್ಕೆ ಶಾಸ್ತ್ರ ಕೇಳುವ, ತಲೆ ಕೂದಲು ಕತ್ತರಿಸಲು ವಾರ ನೋಡುವ, ಗೌಳಿ ಪತನಕ್ಕೆ ಪಂಚಾಂಗದಲ್ಲಿ ಏನು ಬರೆದಿದೆ ಎಂದು ನೋಡಲು ಕಾತರಿಸುವ ಮನ ನಮ್ಮದು! ಇಂತಹ ಅಸಂಖ್ಯ ನಂಬಿಕೆಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಪತ್ರಿಕೆಗಳು, ಟಿವಿ ಚಾನಲ್‌ಗ‌ಳಲ್ಲಿ ರಾಶಿ ಫ‌ಲ ತಿಳಿದುಕೊಳ್ಳಲು ಕಾತರಿಸುವ ಜನರನ್ನು ಯಾವ ಪತ್ರಿಕೆಯವರೂ ಟೀವಿ ಚಾನಲ್‌ಗ‌ಳೂ ನಿರ್ಲಕ್ಷಿಸಲು ಸಾಧ್ಯವಾಗುತ್ತಿಲ್ಲ. ಪ್ರಗತಿಪರ ಪತ್ರಿಕೆಗಳೂ ಇವುಗಳಿಗೆ ಕಾಯಂ ಕಾಲಂ ಮೀಸಲಿರಿಸುತ್ತದೆ. ಇಲೆಕ್ಟ್ರಾನಿಕ್‌ ಮಾಧ್ಯಮಗಳು ಭವಿಷ್ಯ-ಕಣಿ-ಸಂಖ್ಯಾಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರೆನಿಸಿದ ವರ್ಣ ರಂಜಿತ ವ್ಯಕ್ತಿಗಳ ಸಲಹೆಗಳನ್ನು ಬಿತ್ತರಿಸಿ ತಮ್ಮ ಜೇಬು ತುಂಬಿಕೊಳ್ಳುತ್ತವೆ. 

ಜಾಗತೀಕರಣದ ಇಂದಿನ ಯುಗದಲ್ಲಿ ನಮ್ಮ ನಂಬಿಕೆಗಳು ದೇಶದ ಸೀಮೋಲ್ಲಂಘನೆ ಮಾಡಿ ಪಾಶ್ಚಾತ್ಯ ರಾಷ್ಟ್ರಗಳವರೆಗೆ ಹರಡುತ್ತಿವೆ. ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ತನ್ನ ಕೋಟಿನ ಜೇಬಿನಲ್ಲಿ ಸದಾ ಸಂಕಟಮೋಚಕನೆಂಬ ನಂಬಿಕೆಗೆ ಪಾತ್ರನಾಗಿರುವ ಹನುಮನ ಪುಟ್ಟ ಮೂರ್ತಿಯೊಂದನ್ನು ಇಟ್ಟು­ಕೊಳ್ಳುತ್ತೇನೆ ಎಂದು ಒಮ್ಮೆ ನುಡಿದಿದ್ದರು. ಉತ್ತರದ ರಾಜ್ಯ­ಗಳಲ್ಲಿ ಹನುಮಾನ್‌ ಚಾಲೀಸ್‌ ಪ್ರತಿಯೊಂದನ್ನು ಸದಾ ತಮ್ಮೊಂದಿಗೆ ಇಟ್ಟುಕೊಳ್ಳುವ ದೊಡ್ಡ ಸಂಖ್ಯೆಯ ಜನರಿ¨ªಾರೆ. ಏಷ್ಯಾದ ಅನೇಕ ದೇಶಗಳ ರಾಷ್ಟ್ರ ಪ್ರಮುಖರು ಭಾರತದ ವಿವಿಧ ದೇವಾಲಯ, ದರ್ಗಾಗಳಿಗೆ ಶ್ರದ್ಧಾಭಕ್ತಿಗಳಿಂದ ಭೇಟಿ ನೀಡುತ್ತಾರೆ. ವಿಜ್ಞಾನ ತಂತ್ರಜ್ಞಾನದಲ್ಲಿ ವಿಶ್ವದÇÉೇ ಅಗ್ರಗಣ್ಯ ರಾಷ್ಟ್ರವಾಗಿರುವ ಅಮೆರಿಕದ ಸಂಸತ್ತಿನಲ್ಲಿ ವೇದ ಮಂತ್ರ ಪಠಣಕ್ಕೆ ಏರ್ಪಾಡಾಗುತ್ತದೆ. ಭಾವನೆಗಳು, ನಂಬಿಕೆಗಳನ್ನು ಕಾನೂನಿನ ಮೂಲಕ ಕಟ್ಟಿಹಾಕಲು ಸಾಧ್ಯವಿಲ್ಲ. ಸಂವೇದನಶೀಲ ವಿಷಯವೆನ್ನಿಸಿದ ನಂಬಿಕೆಗಳಿಗೆ ಅಂಕುಶ ಹಾಕುವ ಕಾನೂನು ರಚನೆಯಲ್ಲಿ ವಿಶೇಷ ಎಚ್ಚರಿಕೆ ಅಗತ್ಯ.

ಬೇಕಾಗಿದ್ದು ಕಡಿವಾಣ ಹಾಕುವ ಇಚ್ಛಾಶಕ್ತಿ    
ಒಂದಂತೂ ನಿಜ. ಅನ್ಯರಿಗೆ ತೊಂದರೆಯಾಗದ ನಿರುಪದ್ರವಿ ಮತ್ತು ಸಾತ್ವಿಕ ನಂಬಿಕೆಗಳು ಇತರರಿಗೆ ಮೌಡ್ಯವಾಗಿ ಕಂಡರೂ ಅದರ ಮೇಲೆ ಕಾನೂನಿನ ದಂಡ ಪ್ರಯೋಗ, ಕಾನೂನಿನ ದುರುಪಯೋಗಕ್ಕೆ ಕಾರಣವಾಗಬಹುದು. ಬೇರೆಯವರ ಭಾವ ನೆಗಳಿಗಾಗಲೀ, ಹಕ್ಕುಗಳಿಗಾಗಲೀ ಅಥವಾ ಮಾನವ ಹಕ್ಕುಗಳಿಗೆ ಅಪಚಾರ ಎಸಗದ ನಿರುಪದ್ರವಿ ನಂಬಿಕೆಗಳ ಕುರಿತು ಹೆಚ್ಚಿನ ಅರಿವನ್ನು ಮೂಡಿಸುವುದರ ಮೂಲಕವೇ ಹೋಗಲಾಡಿಸುವ ಪ್ರಯತ್ನ ಮಾಡಬೇಕಾಗಿದೆ. ನೈಸರ್ಗಿಕ ವಿಕೋಪಗಳಿಂದ ಬೆಳೆ ಕಳೆದುಕೊಳ್ಳುವ ಅಸುರಕ್ಷಿತ ಭಾವನೆಯಲ್ಲಿರುವ ಅಸಹಾಯಕ ಬಡ ರೈತ, ಅನಿರೀಕ್ಷಿತ ಲಾಭ-ನಷ್ಟದ ಏಟು ತಿನ್ನುವ ಅಡಿಗಡಿಗೂ ಅಂಜಿ ನಡೆಯುವ ವ್ಯಾಪಾರಿ, ಪ್ರಾಣವನ್ನೇ ಪಣವಾಗಿಸಿ ಶತ್ರುಗಳನ್ನು ಹೆಡೆಮುರಿ ಕಟ್ಟಿ ತರಲು ಹೊರಟ ಸೈನಿಕ ತನ್ನ ಮಾನಸಿಕ ಸ್ವಾಸ್ಥ್ಯಕ್ಕಾಗಿ-ಶಾಂತಿಗಾಗಿ ನಡೆಸುವ ಪ್ರಾರ್ಥನೆ ಕೆಲವರಿಗೆ ಮೌಡ್ಯವಾಗಿ ಕಂಡರೂ ಅದು ಅವರಿಗೆ ಸಂಜೀವಿನಿಯಾಗಿರುತ್ತದೆ. 

ಧಾರ್ಮಿಕ ನಂಬಿಕೆಯ ಹೆಸರಲ್ಲಿ ಅಸಹಾಯಕ ಮಹಿಳೆ ಯನ್ನು ದೆವ್ವವೆಂದು ಹೊಡೆಯುವುದು, ಸ್ತ್ರೀಯರ-ಮಕ್ಕಳ ಮೇಲಿನ ಹಿಂಸೆ, ಜ್ಯೋತಿಷಶಾಸ್ತ್ರದ ಹೆಸರಲ್ಲಿ ಅಮಾಯಕರಿಂದ ಹಣ ಲಪಟಾಯಿಸುವುದು, ಪುಣ್ಯ- ಮೋಕ್ಷ ಪ್ರಾಪ್ತಿಯ ಹೆಸರಲ್ಲಿ ನಡೆಯುವ ವಂಚನೆಗಳಿಗೆ ಕಡಿವಾಣ ಅಗತ್ಯ. ಸರಕಾರಕ್ಕೆ ಇಚ್ಛಾ ಶಕ್ತಿ ಇದ್ದರೆ ಇವುಗಳನ್ನು ಈಗಿರುವ ವಂಚನೆ, ಮಹಿಳಾಯೊಡನೆ, ಮಕ್ಕಳ ಶೋಷಣೆ ಕಾನೂನುಗಳ ಮೂಲಕವೂ ನಿಯಂತ್ರಿಸಲು ಸಾಧ್ಯವಿದೆ. ಇಂತಹ ಅನೇಕ ನಂಬಿಕೆಗಳು ಎಲ್ಲ ಧರ್ಮಗಳಲ್ಲೂ ಇವೆ. ಕೇವಲ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು, ಕೆಲವರನ್ನು ಖುಷಿಪಡಿಸಲು ಅವಸರ ದಲ್ಲಿ ಕಾನೂನು ತಂದರೆ ಇದರಿಂದ ಅಪೇಕ್ಷಿತ ಬದಲಾವಣೆ ಗಿಂತ ಸರಕಾರಕ್ಕೆ ಅಪಪ್ರಚಾರವೇ ಬಳುವಳಿಯಾಗಿ ದೊರಕುವ ಸಾಧ್ಯತೆ ಹೆಚ್ಚು. ಜನನಾಯಕರು, ಅಧಿಕಾರಿಗಳು ಮೊದಲು ಮಠ-ಮಂದಿರ ಸುತ್ತು ಹಾಕುವ, ಚಿನ್ನ-ಬೆಳ್ಳಿ ಸಮರ್ಪಿಸುವ, ಅದ್ದೂರಿಯ ಯಜ್ಞ-ಯಾಗಗಳ ಮೊರೆಹೋಗುವ ಬದಲು ಜನತಾ ಜನಾರ್ದನನ ಸೇವೆಗಿಂತ ಮಿಗಿಲಾದ ಪುಣ್ಯ ಕಾರ್ಯ ಇನ್ನೊಂದಿಲ್ಲ ಎನ್ನುವುದನ್ನು ಮನಗಾಣಲಿ. ತಮ್ಮ ನಡೆ-ನುಡಿಗಳಿಂದ ಆದರ್ಶ ಮೆರೆಯುವ ಮೂಲಕ ಅಂಧಶ್ರದ್ಧೆ ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಿ.

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.