ಐನ್‌ ಸ್ಟೈನ್ ಇನ್ನೊಮ್ಮೆ ವಿಜಯಿಯಾದರೆ?


Team Udayavani, May 24, 2022, 12:25 PM IST

news

ಆಕಾಶದಲ್ಲಿ ಕಾಣುವ ಕೆಲವೊಂದು ನಿರ್ದಿಷ್ಟ ದಿಕ್ಕುಗಳಲ್ಲಿ ತೆಳ್ಳನೆಯ ಬಿಳಿಯ ಮೋಡದಂತಹ ರಚನೆಗಳಿಗೆ (ನದಿಯನ್ನು ಹೋಲುವುದರಿಂದ) “ಆಕಾಶಗಂಗಾ’ ಎಂಬ ಹೆಸರಿದೆ. ಮಿಲ್ಕಿ ವೇ- ಹಾಲುಹಾದಿ ಎಂಬ ಪದಗಳೂ ನದಿಯನ್ನೇ ಸೂಚಿಸು ತ್ತವೆ. ನಕ್ಷತ್ರಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಒತ್ತಟ್ಟಾಗಿ ಸೇರಿರು ವುದೇ ಈ ಮೋಡದ ಭ್ರಮೆ ಹುಟ್ಟಿಸುವುದರ ಕಾರಣ ಎಂದು ಗ್ರೀಕ್‌ ದಾರ್ಶನಿಕ ಹಿಪಾರ್ಚಸ್‌ 2000 ವರ್ಷಗಳ ಹಿಂದೆಯೇ ಊಹಿಸಿದ್ದರೂ ಅದು ವಾಸ್ತವ ಎಂದು ತಿಳಿಯಲು ಗೆಲಿಲಿಯೋ ತನ್ನ ದೂರದರ್ಶಕವನ್ನು 1610ರಲ್ಲಿ ಅತ್ತ ತಿರುಗಿಸುವವರೆಗೂ ಕಾಯಬೇಕಾಯಿತು. “ಇವು ಎಣಿಸಲಸಾಧ್ಯವಾದ ನಕ್ಷತ್ರಗುತ್ಛಗಳ ದಟ್ಟಣೆ. ಬಹಳ ದೂರದಲ್ಲಿ ಚಿಕ್ಕದಾಗಿ ಕಾಣುವ ಅವುಗಳ ನಕ್ಷತ್ರಗಳನ್ನು ಬಿಡಿಬಿಡಿಯಾಗಿ ನೋಡುವುದು ಸಾಧ್ಯವಿಲ್ಲ’ ಎಂಬುದು ಅವರ ಟಿಪ್ಪಣಿ.

ಈ ಮೊದಲ ನೋಟದಿಂದ ಆರಂಭಿಸಿ ದೊಡ್ಡ ದೊಡ್ಡ ದೂರದರ್ಶಕಗಳನ್ನು ಮತ್ತು ಅಂತರಿಕ್ಷ ವೀಕ್ಷಣಾಲಯಗಳನ್ನೂ ಬಳಸಿ ಅಧ್ಯಯನ ಮುಂದುವರಿಯಿತು. ಬಣ್ಣ ಬಣ್ಣದ ನೆಬ್ಯು ಲಾಗಳು, ಸೂರ್ಯನೂ ಸೇರಿದಂತೆ ಎಲ್ಲ ನಕ್ಷತ್ರಗಳ ಚಲನೆ, ನಕ್ಷತ್ರಗುತ್ಛಗಳ ವೈವಿಧ್ಯ ಮತ್ತು ಹಂಚಿಕೆ- ಇವೆಲ್ಲದರ ಜತೆಗೆ ರೇಡಿಯೋ ದೂರದರ್ಶಕ ಒದಗಿಸಿದ ಮಾಹಿತಿ ಇವೆಲ್ಲವೂ ಆಕಾಶಗಂಗೆಯ ಪರಿಪೂರ್ಣ ಚಿತ್ರಣ ದೊರಕಿಸಿಕೊಟ್ಟವು. 100 ವರ್ಷಗಳ ಹಿಂದೆ ನಡೆದ ಒಂದು ಐತಿಹಾಸಿಕ ವಾಗ್ವಾದ ಸೂರ್ಯನ ಸ್ಥಾನವನ್ನು ಗ್ಯಾಲಕ್ಸಿಯ ಕೇಂದ್ರದಿಂದ ದೂರಕ್ಕೆ ಅದರ ಸುರುಳಿಯಂಥ ಬಾಹುವಿಗೆ ತಳ್ಳಿತು.

100 ವರ್ಷಗಳ ಹಿಂದಿನ ಆ ಅವಧಿ ಆಲ್ಬರ್ಟ್‌ ಐನ್‌ ಸ್ಟೈನ್ ಅವರು ತಮ್ಮ ಹೊಸ ಸಿದ್ಧಾಂತಗಳನ್ನು ಪರಿಚಯಿಸಿದ ಕಾಲವೂ ಹೌದು. ವಿಲಕ್ಷಣ ಕಾಯವೊಂದು ಬೆಳಕನ್ನೂ ಹೊರ ಹೋಗ ತೆ ತಡೆಯಬಹುದು ಎಂಬ ವಿಚಿತ್ರ ಪರಿಕಲ್ಪನೆಗೆ ಈ ಸಿದ್ಧಾಂತ ಪುಷ್ಟಿ ನೀಡಿತು. ಹಾಗೊಂದು ಖಾಯ ಅಥವಾ ಪ್ರದೇಶ ಇರುವುದಾದರೆ ಅದನ್ನು ಪತ್ತೆ ಹಚ್ಚುವುದಂತೂ ಅಸಾಧ್ಯ. ಏಕೆಂ ದರೆ ಅದರಿಂದ ಬೆಳಕು ಮತ್ತಿತರ ಯಾವುದೇ ತರಂಗವೂ ಹೊರಬೀಳುವುದಿಲ್ಲ. ಇದು ಕೇವಲ ಸೈದ್ಧಾಂತಿಕ ಕಲ್ಪನೆಯಾಗಿ ಉಳಿದುಕೊಂಡಿದ್ದೂ ಇದೇ ಕಾರಣಕ್ಕೆ. ಎಸ್‌. ಚಂದ್ರಶೇಖರ್‌ ಅವರೂ ಈ ನಿಗೂಢ ಕಾಯಗಳ ಅಧ್ಯಯನ ನಡೆಸಿದ್ದರು. ವೀಲರ್‌ ಎಂಬ ವಿಜ್ಞಾನಿ ಈ ಬಗೆಯ ಕಾಯ (ಪ್ರದೇಶ ಎನ್ನುವುದು ಸೂಕ್ತ) ಗಳಿಗೆ ಕಪ್ಪು ಕುಳಿ (ಬ್ಲಾಕ್‌ ಹೋಲ್‌) ಎಂದು ಹೆಸರಿಸಿದರು.
ಐನ್‌ ಸ್ಟೈನ್ ಅವರು ಕಪ್ಪುಕುಳಿಯ ಪರಿಸರದಲ್ಲಿ ಆಗುವ ಪ್ರಭಾವವನ್ನು ಕೂಲಂಕಷವಾಗಿ ಪರಿಶೀಲಿಸಿದರು. ಅತೀ ಹೆಚ್ಚು ದ್ರವ್ಯರಾಶಿಯ ಪ್ರದೇಶದ ಸುತ್ತಲಿನ ವಸ್ತು ತೋರಿಸಬಹುದಾದ ಗುಣಲಕ್ಷಣಗಳನ್ನು ಚಿತ್ರಿಸಿದರು. ಅದರ ಹಿನ್ನೆಲೆಯಲ್ಲಿ ನಕ್ಷತ್ರ ವೊಂದು ಇದ್ದರೆ ಅದರ ಬೆಳಕು ಬಾಗಿ ಬರುವುದರ ಸೂಚನೆ ಯನ್ನು ಕೊಟ್ಟರಲ್ಲದೆ, ಕಪ್ಪುಕುಳಿಯ ಒಂದು ನಿರ್ದಿಷ್ಟ           ಪರಿಧಿಯ  ಸುತ್ತ ಬೆಳಕಿನ ಉಂಗುರಗಳೂ ಕಾಣಬಹುದು ಎಂದು ಸೂಚಿಸಿದರು. ಈ ಉಂಗುರಗಳ ನಡುವೆ ನೆರಳಿನಂಥ ರಚನೆ ಗಳೂ ಕಾಣುವುವು ಎಂದು ಹೇಳಿದ್ದರು. ಆದರೆ ಇದನ್ನು ಪರೀಕ್ಷಿ ಸುವ ವಿಧಾನ ನಿಗೂಢವಾಗಿಯೇ ಉಳಿದಿತ್ತು.

ಸೈದ್ಧಾಂತಿಕವಾಗಿ ಕಪ್ಪು ಕುಳಿಗಳ ಅಧ್ಯಯನ ತ್ವರಿತವಾಗಿ ಮುಂದುವರಿಯುತ್ತಿದ್ದ ಹಾಗೇ ದೊಡ್ಡ ದೊಡ್ಡ ದೂರದರ್ಶಕ ಗಳಿಂದ ಆಕಾಶಗಂಗೆಯ ಅಧ್ಯಯನವೂ ಮುಂದುವರಿದಿತ್ತು. ಇವುಗಳ ನಡುವೆ ಸಂಬಂಧ ಏನೂ ಇರಲಿಲ್ಲ.

ಗ್ಯಾಲಕ್ಸಿಯ ಕೇಂದ್ರದ ದಿಕ್ಕಿನಲ್ಲಿ ದಟ್ಟವಾಗಿ ಹರಡಿರುವ ಧೂಳು ಬೆಳಕಿನ ತರಂಗಗಳನ್ನು ಸಂಪೂರ್ಣವಾಗಿ ತಡೆಹಿಡಿಯು ವುದರಿಂದ ಅದರ ಅಂತರಾಳವನ್ನು ಕೆದಕುವುದು ಸಾಧ್ಯವಾಗಿರ ಲಿಲ್ಲ. ಸೂರ್ಯನ ದ್ರವ್ಯರಾಶಿಯ ಸುಮಾರು ಮಿಲಿಯನ್‌ ಪಟ್ಟು ಹೆಚ್ಚು ದ್ರವ್ಯರಾಶಿ ಅಲ್ಲಿರಬಹುದು ಎಂಬ ಅಂದಾಜು ಮಾತ್ರ ಇತ್ತು. ನಮ್ಮ ಸಮೀಪದ ಇತರ ಗ್ಯಾಲಕ್ಸಿಗಳಲ್ಲೂ ಹೀಗೆ ಅಪಾರ ದ್ರವ್ಯರಾಶಿ ಕೇಂದ್ರಭಾಗದಲ್ಲಿ ಅಡಗಿದೆ ಎಂಬ ಅಂಶ ಆಗಲೇ ಖಚಿತವಾಗಿದ್ದರಿಂದ ಈ ಫ‌ಲಿತಾಂಶ ಆಶ್ಚರ್ಯವನ್ನೇನೂ ಉಂಟುಮಾಡಲಿಲ್ಲ. ಆದರೆ, ಆಂಡ್ರೊಮಿಡಾ ಗ್ಯಾಲಕ್ಸಿಯ ಕೇಂದ್ರದಲ್ಲಿ ಒಂದು ಕಪ್ಪುಕುಳಿ ಅಡಗಿದೆ ಎಂದು ಪತ್ತೆಯಾದಾಗ ಮಾತ್ರ ನಮ್ಮ ಆಕಾಶಗಂಗೆಯ ಮಧ್ಯದಲ್ಲೂ ಒಂದು ಕಪ್ಪುಕುಳಿ ಇರಬಹುದೇ ಎಂಬ ಪ್ರಶ್ನೆ ಮೂಡಿತ್ತು. ಆದರೆ ಅದನ್ನು “ನೋಡುವುದು’ ಹೇಗೆ?

ದಶಕದ ಹಿಂದೆ ರೇಡಿಯೋ ದೂರ ದರ್ಶಕಗಳನ್ನು ಬಳಸಿ ನಮ್ಮ ಗ್ಯಾಲಕ್ಸಿಯ ಕೇಂದ್ರವನ್ನು ಬಗೆದು ನೋಡುವುದು ಸಾಧ್ಯವಾಯಿತು. ಧೂಳಿನ ಆವರಣದ ಹಿಂದೆ ಇದ್ದ ನಕ್ಷತ್ರಗಳನ್ನು ಅದು ಬಿಡಿಬಿಡಿಯಾಗಿ ತೋರಿಸಿಕೊಟ್ಟಿತು. ಅದರಲ್ಲಿ ಮೂರು ನಕ್ಷತ್ರಗಳ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಿದ ವಿಜ್ಞಾನಿ ಗಳಿಗೆ ಅಲ್ಲೊಂದು ವಿಶೇಷ ಕಂಡಿತು. ಅವು ತೀರಾ ಚಪ್ಪಟೆಯಾಗಿದ್ದ (ದೀರ್ಘ‌ವೃತ್ತ) ಕಕ್ಷೆಗಳಲ್ಲಿ ಏನನ್ನೋ ಪರಿಭ್ರಮಿಸುತ್ತಿದ್ದವು. ಅವುಗಳ ಚಲನೆಯನ್ನು ವಿವರಿಸಲು ಮೂರೂ ಕಾಯಗಳ ಚಲನೆಯನ್ನು ಒಂದೇ ಕಾಯ ನಿಯಂತ್ರಿಸುತ್ತಿದೆ ಎಂಬುದು ಮನದಟ್ಟಾಯಿತು. ಆ “ಕಾಯ’ದ ದ್ರವ್ಯರಾಶಿಯನ್ನು ಲೆಕ್ಕ ಹಾಕಿದಾಗ ಅವರಿಗೊಂದು ಆಶ್ಚರ್ಯ ಕಾದಿತ್ತು. ಆ ಅನೂಹ್ಯ ದ್ರವ್ಯರಾಶಿಯನ್ನು ಪಡೆದುಕೊಂಡಿರಬಹುದಾದಂಥ “ಕಾಯ’ ಕೇವಲ ಕಪ್ಪು ಕುಳಿ ಮಾತ್ರ! ಹೀಗೆ ನಮ್ಮ ಮನೆಯೊಳಗೇ ಅಡಗಿದ್ದ ಕಳ್ಳನ ಪತ್ತೆಯಾಯಿತು. ಆದರೆ ಇದಕ್ಕೆ ಇನ್ನೂ ಬಲವಾದ ರುಜುವಾತು ಅಗತ್ಯವಾಗಿತ್ತು.

ಐದು ವರ್ಷಗಳ ಹಿಂದೆ ಸ್ಥಾಪನೆಯಾದ ಇವೆಂಟ್‌ ಹೊರೈ ಝನ್‌ ತನ್ನ ಬಿರುಗಣ್ಣುಗಳನ್ನು ಆಕಾಶದತ್ತ ಹೊರಳಿಸಿತು. “ಬಿರು’ ಎಂಬ ಗುಣವಾಚಕ ಇಲ್ಲಿ ಸಮಂಜಸವಲ್ಲ. ಆದರೆ ಪರ್ಯಾಯ ಶಬ್ದ ಇಲ್ಲ. ಅದರ ಕಾರಣವನ್ನು ಹೀಗೆ ವಿವರಿ ಸಬಹುದು-ನಿಮ್ಮ ತಾರಸಿಯಲ್ಲಿ ನೀವು ಹಾಕಿಕೊಂಡಿರುವ ಪುಟ್ಟ ಡಿಶ್‌ ಇನ್‌ಸಾಟ್‌ ಉಪಗ್ರಹದ ರೇಡಿಯೋ ತರಂಗಗಳನ್ನು ತನ್ನ “ಬುಟ್ಟಿ’ಗೆ ಹಾಕಿಕೊಂಡು ನಿಮ್ಮ ಟಿವಿಗೆ ತಲುಪಿಸುವುದು. ಆಕಾಶಕಾಯಗಳು ಕಳಿಸುವ ಕ್ಷೀಣ ರೇಡಿಯೋ ತರಂಗಗಳಿಗೆ ಈ “ಬುಟ್ಟಿ’ ಏನೇನೂ ಸಾಲದು. ಅದಕ್ಕೆ ಎಷ್ಟು ದೊಡ್ಡ ಡಿಶ್‌ ಬೇಕು? ಇಡೀ ಭೂಮಿಯಷ್ಟೇ ದೊಡ್ಡದು ಬೇಕು. ಅದಕ್ಕಾಗಿ ಭೂಮಿಯ ಗೋಳಾರ್ಧವನ್ನೇ ಬುಟ್ಟಿಯನ್ನಾಗಿ ಮಾಡಿಕೊಂ ಡಿದೆ ಇವೆಂಟ್‌ ಹೊರೈಝನ್‌. ಹಾಗಾಗಿ ಬಿರುಗಣ್ಣು ಎಂಬುದೂ ಅದರ ಗಾತ್ರಕ್ಕೆ ಹೊಂದುವುದಿಲ್ಲ.

ಈ ದೂರದರ್ಶಕ, ಗ್ಯಾಲಕ್ಸಿಗಳೆಲ್ಲವನ್ನೂ ಪರಿಶೀಲಿಸಿ ಚಿತ್ರ ಗಳನ್ನು ಪೇರಿಸಿಕೊಡುತ್ತಿದೆ. ಮೂರು ವರ್ಷದ ಹಿಂದೆ “ಎಂ - 87′ ಎಂಬ ಗ್ಯಾಲಕ್ಸಿಯ ಚಿತ್ರದಲ್ಲಿ ಕೇಂದ್ರದ ಕಪ್ಪುಕುಳಿಯ ಚಿತ್ರ ಸ್ಪಷ್ಟವಾಗಿ ಕಂಡಿತು. ಐನ್‌ ಸ್ಟೈನ್ ಹೇಳಿದ ಹಾಗೆ ಅದರ ಸುತ್ತಲಿನ ಉಂಗುರಗಳು ಮಧ್ಯ ಮಧ್ಯೆ ನೆರಳಿನಂಥ ಕಪ್ಪು ಪಟ್ಟೆಗಳೂ ಕಂಡವು. ವಿಜ್ಞಾನಿಗಳ ಉತ್ಸಾಹ ಹೇಳತೀರದು. ಕಪ್ಪುಕುಳಿಯ ಮೊದಲ ಭಾವಚಿತ್ರ ಹೀಗೆ ಪ್ರಕಟವಾಯಿತು.ಅದು ಜ್ಯೋತಿರ್ವರ್ಷಗಳ ದೂರದ ಕಪ್ಪು ಕುಳಿ, “ನಮ್ಮ’ ಕಪ್ಪುಕುಳಿ ಇನ್ನೂ ಹತ್ತಿರದಲ್ಲಿದೆ ಅಲ್ಲವೇ? ಅದರ ಚಿತ್ರ ಇನ್ನೂ ಸ್ಪಷ್ಟವಾಗಿ ಕಾಣಬಹುದಲ್ಲವೇ?

ಅದೇ ಈಗ ಮೇಯಲ್ಲಿ ಪ್ರಕಟವಾದ ಚಿತ್ರ. ನಮ್ಮ ಆಕಾಶಗಂಗೆಯ ಮಧ್ಯದಲ್ಲಿ ಅಡಗಿ ಕುಳಿತಿದ್ದ ಕಳ್ಳನ ಚಿತ್ರ. ಆದ್ದರಿಂದಲೇ ಅದಕ್ಕೆ ಅಷ್ಟೊಂದು ಮಹತ್ವ. “ಐನ್‌ಸ್ಟೆçನ್‌ ಅವರು ಇನ್ನೊಮ್ಮೆ ವಿಜಯಿ ಯಾಗಿದ್ದಾರೆ’ ಎಂಬ ತಲೆಬರಹದಲ್ಲಿ ಅವರು ಆಕಾಶ ಗಂಗೆಯ ಕಪ್ಪುಕುಳಿಯ ಬಗ್ಗೆ ಹೇಳಿದ್ದರು ಎಂಬರ್ಥ ಬರುವಂತೆ ಬಿಂಬಿಸ ಲಾಗಿತ್ತು. ಆದರೆ ವಾಸ್ತವ ಅದಲ್ಲ. ಎರಡೂ ಭಾವಚಿತ್ರಗಳನ್ನು ಗಮನಿಸಿ. ಎರಡರಲ್ಲೂ ಅವರು ಸೂಚಿಸಿದ ನೆರಳು ಬೆಳಕಿನ ಉಂಗುರಗಳು ಕಾಣುತ್ತಿವೆಯಲ್ಲವೇ? ಅದು ಕಪ್ಪುಕುಳಿಯ ವೈಶಿಷ್ಟ್ಯ. ಅದನ್ನೇ ಅವರು ಪ್ರತಿಪಾದಿಸಿದ್ದು. ಹಾಗಾಗಿ ಈ ಮುಂದೆ ಇವೆಂಟ್‌ ಹೊರೈಝನ್‌ ತಯಾರಿಸುವ ಪ್ರತಿ ಭಾವ ಚಿತ್ರವೂ ಅವರಿಗೊಂದೊಂದು ಕಿರೀಟವನ್ನು ತೊಡಿಸುವುದು.

ಇವೆಂಟ್‌ ಹೊರೈಝನ್‌ ಟೆಲಿಸ್ಕೋಪ್‌ ನೆರವಿನಿಂದ ನಮ್ಮ ಆಕಾಶಗಂಗೆಯ ಮಧ್ಯದಲ್ಲಿ ಅಡಗಿ ಕುಳಿತಿದ್ದ ಕಳ್ಳನ ಚಿತ್ರ, ಅರ್ಥಾತ್‌ ಬೃಹತ್‌ ಕಪ್ಪುಕುಳಿಯ ನೋಟ ವಿಜ್ಞಾನಿಗಳ ಕಣ್ಣಿಗೆ ಬಿದ್ದಿದೆ. ಈ ಬೃಹತ್‌ ಟೆಲಿಸ್ಕೋಪ್‌ ತೆರದಿಡುವ ಚಿತ್ರಕ್ಕೂ, ನೂರಾರು ವರ್ಷಗಳ ಹಿಂದೆ ವಿಜ್ಞಾನಿ ಅಲ್ಬರ್ಟ್‌ ಐನ್‌ಸ್ಟೈನ್‌ ಕಪ್ಪುಕುಳಿಗಳ ಬಗ್ಗೆ ಮಾಡಿದ ಪ್ರತಿಪಾದನೆಗೂ ಇರುವ ನಂಟೇನಿರಬಹುದು?

– ಬಿ.ಎಸ್‌. ಶೈಲಜಾ , ಖಗೋಳಶಾಸ್ತ್ರ ವಿಜ್ಞಾನಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.