ವಿಶೇಷ ಲೇಖನ; ಮಕ್ಕಳ ಹಬ್ಬ ಊರಹಬ್ಬವೂ ಆಗಬೇಕು…ಏನಿದು ಮಕ್ಕಳ ವಿಜ್ಞಾನ ಹಬ್ಬ


Team Udayavani, Nov 14, 2019, 10:19 AM IST

Makkala-Habbe

ರಾಜ್ಯದ ಮೂವತ್ತನಾಲ್ಕು ಶೈಕ್ಷಣಿಕ ಜಿಲ್ಲೆಗಳ ಆರು ನೂರಾ ಇಪ್ಪತ್ಮೂರು ಕ್ಲಸ್ಟರ್ ಗಳಲ್ಲಿ ಈ ವರ್ಷದ ಡಿಸೆಂಬರ್ ಒಳಗಾಗಿ ಮಕ್ಕಳ ವಿಜ್ಞಾನ ಹಬ್ಬಗಳನ್ನು ಸಮಗ್ರ ಶಿಕ್ಷಣ ಅಭಿಯಾನವು ಭಾರತ ಜ್ಞಾನ ವಿಜ್ಞಾನ ಸಮಿತಿಯ ನೆರವಿನೊಂದಿಗೆ ಸಂಘಟಿಸುತ್ತಿದೆ. ಮಕ್ಕಳ ಹಬ್ಬದ ಉದ್ಧೇಶಗಳೇನು? ಹಬ್ಬ ಹೇಗಿರುತ್ತದೆ? ಅದರ ತಾತ್ವಿಕ ನೆಲಗಟ್ಟು ಹೇಗಿದೆ? ಮತ್ತು ಈ ಹಬ್ಬವನ್ನು ಸಂಘಟಿಸಲು ಶಿಕ್ಷಣ ಇಲಾಖೆ ಹೇಗೆ ಸಜ್ಜಾಗಿದೆ ಎಂಬುದರ ಕುರಿತು ಒಂದಿಷ್ಟು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಕಲಿಕೆಯು ಸಾಮಾಜಿಕ ಪ್ರಕ್ರಿಯೆ ಎಂದು ಮನಃಶಾಸ್ತಜ್ಞ ವೈಗೋಸ್ಕಿಯವರು ಹೇಳುತ್ತಾರೆ. ಮಗುವಿನ ಕಲಿಕೆಯ ಅಡಿಪಾಯವಿರುವುದೇ ಆ ಮಗುವು ತನ್ನ ಸುತ್ತಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವಹನಗಳಲ್ಲಿ ಹೇಗೆ ಮತ್ತು ಎಷ್ಟು ಭಾಗವಹಿಸಿದೆ ಎಂಬುದರ ಮೇಲೆ. ಗುಣಮಟ್ಟದ ಮತ್ತು ಗುರಿ ನಿರ್ಧರಿತವಾದ ಒಡನಾಟಗಳನ್ನು ವಿನ್ಯಾಸಗೊಳಿಸುವ ಮತ್ತು ಅಂತಹ ಒಡನಾಟಗಳು ಮಗುವಿನ ಕಲಿಕೆಯ ಪರಿಸರದಲ್ಲಿ ಸಂಭವಿಸುವಂತೆ ಮಾಡುವುದು ಶಾಲಾ ಶಿಕ್ಷಣದಲ್ಲಿ ತೊಡಗಿರುವವರೆಲ್ಲರ ಜವಾಬ್ದಾರಿ. ಪ್ರತಿ ಮಗುವೂ ಅನನ್ಯವಾದ ಪ್ರತಿಭೆ ಮತ್ತು ಚೈತನ್ಯವನ್ನು ಹೊಂದಿರುವುದರಿಂದ ಮಗುವು ಕಲಿಕೆಯ ಸಂದರ್ಭವನ್ನು ನಿಭಾಯಿಸುವ ರೀತಿಗಳಲ್ಲೂ ಸಾಕಷ್ಟು ವಿಭಿನ್ನತೆಗಳು ಇದ್ದೇ ಇರುತ್ತವೆ.  ಈ ಭಿನ್ನತೆಯು ಕಲಿಕೆಯ ವೇಗ, ಗ್ರಹಿಕೆಯ ಹರವು ಮತ್ತು ಆಳಗಳನ್ನು ನಿರ್ಧರಿಸುತ್ತದೆ.  ಪ್ರತಿ ಮಗುವೂ ನಿರ್ವಹಿಸಬಹುದಾದ ಮತ್ತು ಪ್ರತಿ ಮಗುವೂ ತನ್ನದೇ ವಿಶಿಷ್ಟ ಜ್ಞಾನವನ್ನು ರಚಿಸಿಕೊಳ್ಳಲು ಸಾಧ್ಯವಾಗಬಹುದಾದ ಕಲಿಕೆಯ ಪರಿಸರವನ್ನು ತರಗತಿ ಕೋಣೆಯಲ್ಲಿ ತರಲು ಈಗಾಗಲೆ ಸಾಕಷ್ಟು ಕಾರ್ಯಕ್ರಮಗಳು, ಸಾಕಷ್ಟು ಕಾರ್ಯಾಗಾರಗಳನ್ನು ಇಲಾಖೆಯು ಹಮ್ಮಿಕೊಳ್ಳುತ್ತಾ ಬಂದಿದೆ. `ಎಲ್ಲರೂ ಕಲಿಯುವ ಮತ್ತು ಎಲ್ಲರೂ ಬೆಳೆಯುವ ‘ ಉದ್ಧೇಶದ ಇಂತಹ ಕಾರ್ಯಕ್ರಮಗಳ ಮುಂದುವರಿಕೆಯಾಗಿ ಮಕ್ಕಳ ವಿಜ್ಞಾನ ಹಬ್ಬವನ್ನು ಇಲಾಖೆ ಸಂಘಟಿಸುತ್ತಿದೆ.

ಸ್ಮೃತಿ ಕೇಂದ್ರಿತವಾದ ಕಲಿಕೆಯ ದಾರಿಗಳು ಮಕ್ಕಳ ಮೇಲ್ಮಟ್ಟದ ಕೌಶಲಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತವೆ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದರೂ ತರಗತಿ ಕೋಣೆಯು ಇನ್ನೂ ಬಾಯಿಪಾಠದ ಕಲಿಕೆಗೆ ಪರ್ಯಾಯವನ್ನು ಕಂಡುಕೊಳ್ಳುವಲ್ಲಿ ಯಶ ಕಾಣದಿರುವುದಕ್ಕೆ ಹಲವು ಕಾರಣಗಳಿವೆ. ಮಗುವಿನ ಸಂತಸ ಮತ್ತು ಸ್ವಾತಂತ್ರ್ಯವನ್ನು ತರಗತಿ ವ್ಯವಹಾರಗಳು ಗೌರವಿಸದಿರುವುದೂ ಮಗುವಿಗೆ ಕಲಿಕೆ ಹೊರೆಯಾಗಲು ಕಾರಣವಾಗಿದೆ. “ಮಕ್ಕಳ ವಿಜ್ಞಾನ ಹಬ್ಬದಲ್ಲಿ ಸೃಜನಶೀಲ ಮತ್ತು ಸಂತಸದ ಕಲಿಕೆಗೆ ಪೂರಕವಾದ ಚಟುವಟಿಕೆಗಳನ್ನು ಮಕ್ಕಳು ನಿರ್ವಹಿಸುತ್ತಾರೆ. ಈ ಚಟುವಟಿಕೆಗಳು ಮಕ್ಕಳನ್ನು ಕಲಿಯುವ ಒತ್ತಡದಲ್ಲಿ ನೂಕುವ ಬದಲು ಕಲಿಕೆಯನ್ನು ಸಂಭ್ರಮಿಸುವಂತೆ ಮಾಡಬಲ್ಲವು.” ಎನ್ನುತ್ತಾರೆ ಸಮಗ್ರ ಶಿಕ್ಷಣ ಕನರ್ಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಡಾ. ಎಂ ಟಿ ರೇಜುರವರು.

ಸೂಕ್ತ ರೀತಿಯಲ್ಲಿ ನಿರ್ವಹಿಸಲ್ಪಟ್ಟರೆ ಕಲಿಕೆಯ ಜೊತೆ ಜೊತೆಯೇ ಎದುರಾಗುವ ಪ್ರಶ್ನೆಗಳನ್ನು ಪ್ರಜ್ಞೆಯಾಗಿ ರೂಪಿಸುವ ಶಕ್ತಿಯೂ ಮಕ್ಕಳು ನಡೆಸುವ ಚಟುವಟಿಕೆಗಳಿಗಿದೆ. ಈ ಚಟುವಟಿಕೆಗಳು ಹೊಸದಾಗಿ ಆವಿಷ್ಕಕರಿಸಿದವಲ್ಲದಿದ್ದರೂ ಮಕ್ಕಳ ವಿಜ್ಞಾನ ಹಬ್ಬದ ವ್ಯಾಪ್ತಿ ಮತ್ತು ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಮರುನಿರೂಪಿಸಲ್ಪಟ್ಟಿವೆ. ಈ ಕಾರ್ಯಕ್ರಮದ ವಿನ್ಯಾಸ, ನಿರ್ವಹಣೆ ಮತ್ತು ಸಂಘಟನೆಯೆಲ್ಲವೂ ತರಗತಿ ಕೋಣೆಯಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಬೇಕೆಂಬ ಹಂಬಲದಲ್ಲಿರುವ ಶಿಕ್ಷಕ-ಶಿಕ್ಷಕಿಯರದ್ದೇ ಆಗಿದೆ. ಇಲ್ಲಿನ ಚಟುವಟಿಕೆಗಳ ಆಯ್ಕೆ, ಅವುಗಳ ಮರುನಿರೂಪಣೆ, ಬೆರಳಚ್ಚು, ಪುಟ ವಿನ್ಯಾಸ, ರೇಖಾ ಚಿತ್ರಗಳು, ಮುಖಪುಟ ರಚನೆ, ಎಲ್ಲವನ್ನೂ ಶಿಕ್ಷಕ-ಶಿಕ್ಷಕಿಯರೇ ನಿರ್ವಹಿಸಿದ್ದಾರೆ. ಈ ಚಟುವಟಿಕೆಗಳನ್ನು ಮಕ್ಕಳೊಡನೆ ನಿರ್ವಹಿಸುವವರೂ ಅವರೇ ಆಗಿರುವರು.

ಮಕ್ಕಳ ಹಬ್ಬವು ಊರಹಬ್ಬವೂ ಆಗಬೇಕು ಎಂಬುದು ಈ ಕಾರ್ಯಕ್ರಮದ ಸದಾಶಯವಷ್ಟೇ ಅಲ್ಲ ಉದ್ದೇಶ ಕೂಡಾ. ಈ ಕಾರ್ಯಕ್ರಮದ ಒಟ್ಟೂ ಆಶಯ ಮತ್ತು ಆಕೃತಿಯು ಸಮಾನತೆ ಮತ್ತು ಸಹಬಾಳ್ವೆಯ ಬೆಳಕನ್ನು ಹಂಚುವ ಉದ್ಧೇಶವನ್ನು ಹೊಂದಿರುವುದಾದರೂ ಹಬ್ಬದ ಸದ್ಯದ ಗುರಿ ಜನಸಮುದಾಯದ ಗಮನವನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವುದೇ ಆಗಿದೆ.  ಸಮುದಾಯದ ಸಂಘಟನೆ ಮಕ್ಕಳ ಹಬ್ಬದ ಪ್ರಮುಖ ಉದ್ದೇಶಗಳಲ್ಲೊಂದು. ಜನಸಮುದಾಯದ ಗಮನ ಸೆಳೆದು, ಪಾಲ್ಗೊಳಿಸಿ ಸರಕಾರಿ ಶಾಲಾ ವ್ಯವಸ್ಥೆಯನ್ನು ಬಲಪಡಿಸುವುದು ಸದ್ಯದ ತುರ್ತು. ಹಲವಾರು ಕಾರಣಗಳಿಂದ ಸರಕಾರಿ ಶಾಲಾ ವ್ಯವಸ್ಥೆಯಿಂದ ನಿಧಾನವಾಗಿ ದೂರ ಸರಿಯುತ್ತಿರುವ ಸಮುದಾಯದ ಬೆಂಬಲವನ್ನು ಮತ್ತೆ ಒಗ್ಗೂಡಿಸಿ ಬಲ ತುಂಬಬೇಕಿದೆ. ಸಮುದಾಯದ ಪಾಲ್ಗೊಳ್ಳುವಿಕೆ ಇಲ್ಲದೇ ಮಕ್ಕಳ ಹಬ್ಬದ ಉದ್ದೇಶ ಸಂಪೂರ್ಣವಾಗಲಾರದು.

ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು; ಅಪರಿಮಿತ ಸ್ವಾತಂತ್ರ್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರವನ್ನುಂಟು ಮಾಡಬಲ್ಲದು. ತನ್ನದೇ ಲೋಕವೊಂದನ್ನು ವಿಸ್ತರಿಸಿಕೊಳ್ಳುತ್ತಾ ಮಗು ಎಲ್ಲ ಸೀಮೆಗಳನ್ನು ಉಲ್ಲಂಘಿಸಿ ವಿಶ್ವಮಾನವನಾಗಲು ಇಂತಹ ಸಡಗರ ಅನಿವಾರ್ಯ ಕೂಡಾ. ಹಿರಿಯರ ಪ್ರಪಂಚವು ಬಾಲ್ಯದ ಕೀಲಿಕೈಗಳಾದ `ಸೃಜನಶೀಲ ಚೈತನ್ಯ’ ಮತ್ತು `ದಾರಾಳ ಸಂತಸ’ ಗಳನ್ನು ಸ್ವಲ್ಪವೂ ಯೋಚಿಸದೇ ಹಾಳುಗೆಡವಬಹುದಾದ ಸಾಧ್ಯತೆಗಳಿವೆ ಎನ್ನುತ್ತಾರೆ ಕವಿ ರವೀಂದ್ರನಾಥ ಠಾಗೋರರು. ಮಕ್ಕಳ ಸಂತಸ ಮತ್ತು ಚೈತನ್ಯವನ್ನೇ ಬಂಡವಾಳ ಮಾಡಿಕೊಂಡು ವಿಜ್ಞಾನ ಹಬ್ಬವು ಜೀವತಳೆಯಬೇಕಿದೆ.

ವಿಜ್ಞಾನವು ಅತ್ಯಂತ ಕ್ಷಿಪ್ರವಾಗಿ ಗುರಿಯತ್ತ ಕೊಂಡೊಯ್ಯಬಲ್ಲ ದಾರಿ- ಬದುಕಿನ ದಾರಿ. ವ್ಯಕ್ತಿಯು ತನ್ನ ವೈಜ್ಞಾನಿಕ ಸೃಷ್ಟಿಶೀಲತೆಯನ್ನು ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ತನ್ನನ್ನು ನಿರ್ಧಾರದತ್ತ ಕೊಂಡೊಯ್ಯಬಲ್ಲ  ಅಧಾರ ಚಾಕಟ್ಟುಗಳನ್ನು, ಊಹೆಗಳನ್ನು ರಚಿಸಿಕೊಳ್ಳುವ ಮತ್ತು ಹೀಗೆ ರಚಿಸಿಕೊಂಡ ಮೂಲಾಧಾರಗಳನ್ನು ಮತ್ತೆ ಮತ್ತೆ ಪರಾಂಬರಿಸಿ ಮುರಿದುಕಟ್ಟುವ ಕಲೆಗಾರಿಕೆ ಇದು. ನಿರಂತರ ನಿಕಷೆಯಲ್ಲಿ ನಿರ್ಧಾರಗಳನ್ನು ತಳೆಯುವ ಮತ್ತು ಅವುಗಳನ್ನು ಸದಾ ಪ್ರಶ್ನಿಸುವ ಎದೆಗಾರಿಕೆ ಕೂಡಾ. ಕುತೂಹಲ, ದೂರದೃಷ್ಟಿ, ಪ್ರಯೋಗಶೀಲತೆ ಮತ್ತು ಒಳಗೊಳ್ಳುವಿಕೆಯ ಮೂಲಕವೇ ವೈಜ್ಞಾನಿಕ ಮನೋವೃತ್ತಿ ಪ್ರಕಟಗೊಳ್ಳಬೇಕು.

2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟುನ್ನು ರೂಪಿಸುವ ಸಂದರ್ಭದಲ್ಲಿ ಮಂಡಿಸಲಾದ ಯಥಾಸ್ಥಿತಿ ಅಧ್ಯಯನಗಳಲ್ಲಿ ವಿಜ್ಞಾನ ಕಲಿಕೆಯ ಉದ್ಧೇಶಗಳನ್ನು ಸ್ಪಷ್ಟಪಡಿಸಲಾಗಿದೆ. ತನ್ನ ಬದುಕಿನ ಅನುಭವಗಳನ್ನು ವಿಜ್ಞಾನದ ನಿಜಬೆಳಕಿನಲ್ಲಿ ನೋಡುವ, ಮೆಚ್ಚುವ ಮತ್ತು ಎದುರಾಗುವ ಅವಕಾಶಗಳನ್ನು ವಿಜ್ಞಾನ ತರಗತಿಗಳು ನೀಡಬೇಕು. ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಕುತೂಹಲ, ಸೌಂದರ್ಯೋಪಾಸನೆ ಮತ್ತು ಸೃಜನಶೀಲತೆಯ ಬೆಳವಣಿಗಾಗಿ ತರಗತಿಕೋಣೆಗಳಲ್ಲಿ ಅಳವಡಿಸಿಕೊಳ್ಳಬೇಕು. ದುಡಿಮೆಯ ಪ್ರಪಂಚಕ್ಕೆ ಕಾಲಿಡಲು ಅನುಕೂಲವಾಗುವಂತೆ ವಿಜ್ಞಾನದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನವನ್ನು ಗಳಿಸುವ ಮಾರ್ಗಗಳನ್ನು ರೂಪಿಸಬೇಕು. ಸಹಬಾಳ್ವೆ, ಸಹೋದರತೆ ಮತ್ತು ಪ್ರಜಾಪ್ರಭುತ್ವದ ವಿಧಾನಗಳನ್ನು ಅನುಸರಿಸುವ ಮೌಲ್ಯಗಳು ವಿಜ್ಞಾನದ ಕಲಿಕೆಯಿಂದಲೂ ರೂಪಿಸಲ್ಪಡಬೇಕು. ವೈಜ್ಞಾನಿಕ ಮನೋವೃತ್ತಿ, ವಿಮಶರ್ಾತ್ಮಕ ಚಿಂತನೆಗಳು, ವಸ್ತುನಿಷ್ಠತೆ ಮತ್ತು ಪೂವರ್ಾಗ್ರಹಗಳಿಂದ ಮುಕ್ತವಾದ ನಿರಂಕುಶಮತಿತ್ವವನ್ನು ವಿಜ್ಞಾನದ ಕಲಿಕೆ ಒದಗಿಸಬೇಕು. ಇದು ಶಿಕ್ಷಣದ ಗುರಿಯೂ ಹೌದು.

ಜ್ಞಾನದ ಸಂರಚನೆಗಳನ್ನು ಭಾಷೆ ಮತ್ತು ನೇರ ಅನುಭವಗಳ ಮೂಲಕ ಮಗು ರೂಪಿಸಿಕೊಳ್ಳುತ್ತದೆ. ತನ್ನ ಅನುಭವಗಳನ್ನು ಸೋಸಿ, ಅವುಗಳ ಬೆಳಕಿನಲ್ಲಿ ತರ್ಕಬದ್ಧವಾಗಿ ತನ್ನ ಅರಿವನ್ನು ಭಾಷೆಯ ಮೂಲಕ ಪೋಣಿಸುವ ಕೌಶಲವೂ ಮಗುವಿನ ವೈಚಾರಿಕ ವಿಕಾಸಕ್ಕೆ ಅಗತ್ಯ. ತರಗತಿಕೋಣೆಯು ತನ್ನ ಸ್ಮರಣೆ ಆಧರಿತ ಕಲಿಕೆಯ ವಿಧಾನಗಳಿಂದ ಹೊರಬರಲು ಕಲಿಕೆಯ ಕುರಿತಾದ ಸಮಾಜದ ದೃಷ್ಟಿಕೋನದಲ್ಲೇ ಬದಲಾವಣೆ ಆಗಬೇಕಿದೆ. ಮಗುವಿನ ಕುತೂಹಲ, ಕುತೂಹಲದ ಉತ್ಪನ್ನವಾದ ಪ್ರಶ್ನಿಸುವ ಸ್ವಭಾವ, ತನ್ನ ಪ್ರಶ್ನೆಗಳಿಗೆ ತಾನೇ ಉತ್ತರಹುಡುಕಿಕೊಳ್ಳಬಲ್ಲ ಕಲಿಕಾ ಪರಿಸರ, ಪ್ರಶ್ನೆಗಳ ಮೂಲಕ ಉಂಟಾಗಬಹುದಾದ ಸಂವಾದ-ಚರ್ಚೆಗಳು ತರಗತಿಯ ಭಾಗವಾಗಿ ರೂಪುಗೊಳ್ಳಬೇಕಿದೆ. ಈ ಕಾರಣಕ್ಕಾಗಿಯೂ ಮಕ್ಕಳ ವಿಜ್ಞಾನ ಹಬ್ಬವು ಕಲಿಕೆಯ ವಿಧಾನ ಮತ್ತು ಫಲಗಳ ಕುರಿತು ಸಾರ್ವಜನಿಕ ಚರ್ಚೆ ಯನ್ನು ಉಂಟುಮಾಡಬಲ್ಲ ಸಾಮಾಜಿಕ ವೇದಿಕೆಯೂ ಆಗಬೇಕು.

ನಾಟಕ, ಚರ್ಚೆ, ಸಂವಾದ, ಯೋಜನೆ, ಪ್ರಯೋಗ ಮುಂತಾದ ಚಟುವಟಿಕೆಗಳು ಕಲಿಕೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತವೆ. ಜ್ಞಾನವು ಸ್ವತಃ ರಚಿಸಿಕೊಳ್ಳಬಹುದಾದದ್ದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಇವೇ ವಿಧಾನಗಳಿಂದ ಮಾತ್ರ ಕಲಿಕೆ ಸಂಭವಿಸಲು ಸಾಧ್ಯ. ಅಲ್ಲದೆ,  ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯು ತರಗತಿ ವ್ಯವಹಾರಗಳನ್ನು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸರಿಹೊಂದುವಂತೆ ಮಾಡುತ್ತದೆ. ಪ್ರಶ್ನೆಗಳನ್ನು ಕೇಳುವ ಮಕ್ಕಳು ಯೋಚಿಸಬಲ್ಲರು ಕೂಡಾ. ಮಗು ತನ್ನ ಇಂದ್ರೀಯಗಳ ಮೂಲಕ ಪಡೆದ ಅನುಭವಗಳನ್ನು ವಿಶ್ಲೇಷಣೆಯ ನಿಕಷಕ್ಕೆ ಒಡ್ಡಿ ತೀರ್ಮಾನ ತೆಗೆದುಕೊಳ್ಳುವಂತಹ ಕಲಿಕೆಯ ಪರಿಸರವನ್ನು ರೂಪಿಸಬೇಕಿದೆ. ಶಾಲೆಯು ಮಕ್ಕಳ ಕುತೂಹಲವನ್ನು ತಣಿಸುವ ಸ್ಥಳವಾದಾಗಷ್ಟೇ ಕಲಿಕೆಯ ಸ್ಥಳವಾಗಬಲ್ಲದು. ಇವೆಲ್ಲವೂ ಸಾಧ್ಯವಾಗಬೇಕಾದರೆ, ಮಗುವಿನ ಸ್ವತಂತ್ರ ಚಿಂತನಾ ಸಾಮಥ್ರ್ಯ, ವಿಮರ್ಶಾತ್ಮಕ ದೃಷ್ಟಿಕೋನ, ಪ್ರಯೋಗಶೀಲತೆ ಮತ್ತಿತರ ಮೇಲ್ಮಟ್ಟದ ಕೌಶಲಗಳು ಮೌಲ್ಯಮಾಪನದಿಂದ ಗುರುತಿಸಲ್ಪಡಬೇಕು. ಪೂರಕ ತರಗತಿ ಕೌಶಲಗಳು ತಂತಾನೆ ರೂಪುಗೊಳ್ಳಲು ಸಾಧ್ಯವಿಲ್ಲ.

ಪ್ರಶ್ನಿಸುವ ಮತ್ತು ಆಲೋಚಿಸುವ ಮನಸ್ಸು ನಿಸರ್ಗದ ಅದ್ಬುತಗಳನ್ನು ಬೆರಗುಗಣ್ಣಿನಿಂದ ನೋಡುವುದಷ್ಟಕ್ಕೆ ತೃಪ್ತಿಗೊಳ್ಳದೆ ಅದಕ್ಕೆ ಸ್ಪಂದಿಸುತ್ತದೆ. ನಿಸರ್ಗದಜೊತೆ ಅಂತರಕ್ರಿಯೆಯಲ್ಲಿ ತೊಡಗಿ ಅರ್ಥಪೂರ್ಣ ಸಂಬಂಧಗಳನ್ನು ಹುಡುಕುತ್ತದೆ. ಪರಿಕಲ್ಪನಾತ್ಮಕ ಮತ್ತು ಗಣಿತೀಯ ಮಾದರಿಗಳನ್ನು ಭಾಷೆಯ ಸಹಾಯದಲ್ಲಿ ರಚಿಸಿಕೊಳ್ಳುತ್ತಾ ಈ ಅದ್ಭುತ ಜಗತ್ತನ್ನು ಅರಿಯಲು ಪ್ರಯತ್ನಿಸುತ್ತದೆ. ಇದೇ ಕಲಿಕೆ. ನಿಸರ್ಗದ ರಚನೆ, ಕಾರ್ಯವಿಧಾನದಲ್ಲಿರುವ ಕ್ರಮಬದ್ಧತೆ ಮತ್ತು ನಿರ್ಧಿಷ್ಟ ವಿನ್ಯಾಸಗಳನ್ನು ಪ್ರಶ್ನೆಗಳು, ಪ್ರಯೋಗಗಳ ಮೂಲಕ ಹುಡುಕುವುದು. ನಿಖರವಾದ ಊಹೆಗಳನ್ನು ರಚಿಸುವುದು. ಪ್ರಮೇಯಗಳನ್ನು ಪ್ರಯೋಗಗಳ ಮೂಲಕ ಸಾಧಿಸುವುದು ಮತ್ತು ಇವೆಲ್ಲವುಗಳ ಮೂಲಕ ನಿಸರ್ಗದ ಮೂಲತತ್ವಗಳನ್ನು ಅರಿಯುವುದು. ವಿಜ್ಞಾನದ ಗುರಿ. ಎಲ್ಲ ಕಲಿಕಾ ಶಿಸ್ತುಗಳಿಗೆ ಸಂಬಂಧಿಸಿದಂತೆಯೂ ಈ ಮಾತು ಸತ್ಯವೇ ಆಗಿದೆ.

ಮಕ್ಕಳ ವಿಜ್ಞಾನ ಹಬ್ಬದಲ್ಲಿ ಅನೇಕ ಚಟುವಟಿಕೆಗಳನ್ನು ಮಕ್ಕಳು ಮಾಡುತ್ತಾರೆ. ಈ ಎಲ್ಲ ಚಟುವಟಿಕೆಗಳನ್ನೂ ಮಕ್ಕಳು ಖುಷಿಯಿಂದ ಪಾಲ್ಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಕ್ಲಸ್ಟರಿನಿಂದಲೂ ಆಯ್ದ ಶಿಕ್ಷಕರಿಗೆ ಈ ಕುರಿತು ತರಬೇತಿಯನ್ನೂ ನೀಡಲಾಗುತ್ತದೆ. ಮಗುವಿನ ಹೊರ ಬದುಕಿನ ಅನುಭವಗಳು ಕಲಿಕೆಯ ಪ್ರಕ್ರಿಯೆಯಲ್ಲಿ ಬಳಕೆಯಾಗುತ್ತವೆ. ವಿದ್ಯಾರ್ಥಿ ಗಳು ತಮ್ಮ ತಮ್ಮಲ್ಲಿ ಚರ್ಚಿ ಸಿ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ತಾವೇ ಕಂಡುಕೊಳ್ಳುತ್ತಾರೆ. ಶಿಕ್ಷಕರು ಇದನ್ನು ಉತ್ತೇಜಿಸುತ್ತಾರೆ. ವಿದ್ಯಾರ್ಥಿ ಗಳಿಗೆ ತಮ್ಮ ಅಭಿಪ್ರಾಯಗಳನ್ನು ಹೇಳಲು ಮುಕ್ತ ಅವಕಾಶವಿರುತ್ತದೆ. ಪ್ರಶ್ನೆಗಳು, ಪ್ರಯೋಗಗಳು, ಅವಲೋಕನ, ಯೋಜನೆ ಮತ್ತಿತರ ವಿಧಾನಗಳ ಮೂಲಕ ಪಡೆದುಕೊಂಡ ದತ್ತಾಂಶಗಳನ್ನು ಪರಿಶೀಲಿಸಿ, ಮೌಲ್ಯೀಕರಿಸಿ ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಿಕ್ಷಕರು ಅನುಕೂಲಿಸುತ್ತಾರೆ. ಇದೆಲ್ಲದರ ಜೊತೆಗೆ, ಮಗುವು ತಂಡವಾಗಿ ಕಾರ್ಯನಿರ್ವಹಿಸುವ ಸಾಮಾಜಿಕ ಕೌಶಲವನ್ನು ಗಳಿಸಿಕೊಳ್ಳುತ್ತದೆ.

ಜಿಲ್ಲಾಮಟ್ಟದ ಹಬ್ಬಗಳು ಸನಿವಾಸ ಕಾರ್ಯಕ್ರಮಗಳಾಗಿವೆ. ಅತಿಥಿ-ಅತಿಥೇಯ ಮಾದರಿಯಲ್ಲಿ ಕಾರ್ಯಕ್ರಮ ನಡೆಯುವ ಶಾಲೆಯ ಪ್ರತಿ ಮಗುವೂ ಬೇರೆ ಊರಿನಿಂದ ಬಂದ ಅತಿಥಿ ಮಗುವಿಗೆ ಅತಿಥೇಯನಾಗುತ್ತಾನೆ ಅಥವಾ ಆಗುತ್ತಾಳೆ. ಮೂರೂ ದಿನಗಳಲ್ಲೂ ಮಕ್ಕಳು ಕಲಿಕೆಯ ಪ್ರಕ್ರಿಯೆಯಲ್ಲಿ ಆಟದ ರೀತಿಯಲ್ಲಿ ಪಾಲ್ಗೊಳ್ಳುತ್ತಾರೆ. ಆ ಮೂಲಕ ಪ್ರತೀ ಮಗುವೂ ತನ್ನದೇ ಜ್ಞಾನ ರಚನೆಯಲ್ಲಿ ಪಾಲ್ಗೊಳ್ಳುತ್ತದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿ ಮಗುವೂ ಎಂದೆಂದೂ ಮರೆಯದ ನೆನಪುಗಳನ್ನು ತನ್ನೊಡನೆ ಕೊಂಡೊಯ್ಯುತ್ತದೆ.

ಮಗುವೇ ಕಲಿಕೆಯ ಸಂದರ್ಭಗಳನ್ನು ಸೃಷ್ಟಿಸುವ, ನಿಭಾಯಿಸುವ ಮತ್ತು ಈ ಪ್ರಕ್ರಿಯೆಯಲ್ಲಿ ದೊರೆತ ಅನುಭವಗಳ ಮೂಲಕ ತನ್ನದೇ ಜ್ಞಾನ ಸೃಷ್ಟಿಯಲ್ಲಿ ತೊಡಗುವ ಕ್ಲಾಸ್ ರೂಮುಗಳನ್ನು ನಿಜವಾಗಿಸಲು ಇಂತಹ ಹಬ್ಬಗಳು ಅಗತ್ಯ. ಸಂದರ್ಭಗಳನ್ನು ಯುಕ್ತಿಯಿಂದ ನಿಭಾಯಿಸುವ ಮತ್ತು ತಪ್ಪುಗಳಿಂದಲೂ ಕಲಿಯುವ ಅವಕಾಶಗಳನ್ನು ಕಲಿಕೆಯ ಪ್ರಕ್ರೀಯೆಯಲ್ಲಿ ನೀಡಬೇಕಾಗುತ್ತದೆ. ವಿದ್ಯಾರ್ಥಿಗಳು ಪ್ರಯತ್ನಶೀಲರಾಗುವಂತೆ ಮಾಡುವ ಕಲಿಕೆಯ ಸನ್ನಿವೇಶಗಳನ್ನು ಸೃಷ್ಟಿಸುವುದು ಆ ಮೂಲಕ ತನ್ನ ಸುತ್ತಲಿನ ಭೌತಿಕ ಮತ್ತು ಸಾಮಾಜಿಕ ಜಗತ್ತನ್ನು ಗ್ರಹಿಸಲು ವಿಜ್ಞಾನ ಹಬ್ಬವು ಅವಕಾಶವನ್ನು ಸೃಷ್ಟಿಸಬಲ್ಲದು.

ಹಬ್ಬವು ಘಟನೆಯಾಗದೆ ನಿತ್ಯದ ಬದುಕಾಗಲಿ!

ಉದಯ ಗಾಂವಕರ

ಶಿಕ್ಷಕರು, ಕುಂದಾಪುರ

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.