ಕಾನೂನಿಗೂ ಮಾನವೀಯತೆಗೂ ಸಂಘರ್ಷ ನಡದೈತಿ ಅನಸ್ಥೈತಿ


Team Udayavani, Jul 15, 2018, 12:30 AM IST

38.jpg

ಅನ್ಯಾಯ ಆಗೇತಿ ಅಂತ ಗೊತ್ತಿದ್ರೂ, ಅಧಿವೇಶನ ನಡದಾಗ ಉತ್ತರ ಕರ್ನಾಟಕದ ಎಲ್ಲಾ ಎಂಎಲ್‌ ಎಗೋಳು ಒಗ್ಗಟ್ಟಾಗಿ ಪ್ರತಿಭಟನೆ ಮಾಡಿದ್ದ
ಕಾಣಲಿಲ್ಲಾ. ಕರಾವಳಿಗೆ ಅನ್ಯಾಯ ಆಗೇತಿ ಅಂದ್‌ ಕೂಡ್ಲೆ ಆ ಭಾಗದ ಶಾಸಕರೆಲ್ಲಾ ಗಾಂಧಿ ಮುಂದ್‌ ಕುಂತ ಪ್ರತಿಭಟನೆ ಮಾಡಿದ್ರು. ಮಲೆನಾಡಿಗೆ ಅನ್ಯಾಯ ಆಗೇತಿ ಅಂದ್ರೂ ಆ ಭಾಗದ ಎಲ್ಲಾ ಎಮ್ಮೆಲ್ಲೆಗೋಳು ಪಕ್ಷಾ ಮರತು ಒಂದಾದ್ರು. ಆದ್ರ ಉತ್ತರ ಕರ್ನಾಟಕಕ್ಕ ಅನ್ಯಾಯ ಆಗೇತಿ ಅಂತ ಪ್ರತಿಪಕ್ಷದ ಎಮ್ಮೆಲೆ ಬಾಯಿ ಮಾಡಿದ್ರ ಆಡಳಿತ ಪಕ್ಷದಾಗ ನಿಂತು ಅದ ಭಾಗದ ಮಿನಿಸ್ಟ್ರೆ ಅನ್ಯಾಯ ಆಗಿಲ್ಲಾ ಅಂದ್ರು

ಐತಾರ ಮುಂಜಾನೆದ್ದು ದೌಡ್‌ ಕಬ್ಬನ್‌ ಪಾರ್ಕಿಗಿ ಹೋಗಬೇಕು ಅಂತ ಯಜಮಾನ್ತಿ ಮುಂದ ಅಂದೆ. ಐತಾರ ದಿನಾ ಅಷ್ಟು ದೌಡ್‌ ಅಲ್ಲೇನೈತಿ ಅಂದ್ಲು. ಕಬ್ಬನ್‌ ಪಾರ್ಕಿಗಿ ಯಾಕ್‌ ಹೊಕ್ಕಾರ್‌ ಗೊತ್ತಿಲ್ಲನ? ನೀನು ಬಾ ಹೋಗೂನು ಅಂದೆ. ಅಷ್ಟ ಹೇಳಗೊಡದ ಶ್ರೀಮತಿ ಇಂಟರ್‌ನಲ್‌ ಸೆಕ್ಯುರಿಟಿ ವಿಂಗ್‌
ಅಲರ್ಟ್‌ ಆತು ಅಂತ ಕಾಣತೈತಿ. ನಾ ಯಾಕ್‌ ಬರ್ಲಿ ಯಾರ್‌ ಕೂಡ ತಿರಗ್ಯಾಡಾಕ್‌ ಹೊಂಟಿಯೋ ಹೋಗಿ ಬಾ ಅಂದ್ಲು. ಸುಮ್ನ ಒತ್ತಾಯ ಮಾಡಿ ಕರಕೊಂಡು ಬಂದು ಅಕಿ ಮನಸಿಗ್ಯಾಕ ಬ್ಯಾಸರಾ ಮಾಡೂದು ಅಂತೇಳಿ ಮನ್ಯಾಗ ಬಿಟ್ಟು ಗಾಡಿ ಹತ್ತಿದೆ. ಅಷ್ಟರಾಗ ನನ್ನ ಸಲುವಾಗಿ ಕಬ್ಬನ್‌ ಪಾರ್ಕಿನ್ಯಾಗ ಕಾಯಾರು ಯಾಡ್‌ ಸರೆ ವೇರ್‌ ಆರ್‌ ಯು? ಅಂತ ಮೆಸೆಜ್‌ ಹಾಕಿದ್ರು. 

ಸಿಗ್ನಲ್‌ನ್ಯಾಗ ಮೆಸೆಜ್‌ ನೋಡಿ ಆನ್‌ ದ ವೇ ಜಸ್ಟ್‌ ಟು ಮಿನಿಟ್‌ ಅಂತ ಮೆಜೆಸ್‌ ಮಾಡಿ ಸೀದಾ ಕಬ್ಬನ್‌ ಪಾರ್ಕಿಗೆ ಬಂದೆ. ಗಾಡಿ ಪಾರ್ಕ್‌ ಮಾಡಗೊಡದ ಎಷ್ಟೊತ್ತು ಕಾಯೋದು ನಿನ್ನ ಸಲುವಾಗಿ ಅಂದರು. ಇಷ್ಟು ವರ್ಷ ಕಾದೇವಿ ಅಂತ ಯಾಕ್‌ ಅವಸರಾ ಮಾಡ್ತೀರಿ ಏನರ ಮಾಡೂನು ಬರ್ರಿ ಅಂತೇಳಿ ಎಲ್ಲಾರೂ ಕೂಡಿ ಕುಂತಿವಿ. ಉತ್ತರ ಕರ್ನಾಟಕದಿಂದ ಬಂದು ಬೆಂಗಳೂರಾಗ ಬದುಕು ಕಟಗೊಂಡಾರು ಇಲ್ಲಿದ್ಕೊಂಡು ನಮ್ಮ ಭಾಗಕ್ಕ ಏನಾರ ಮಾಡಬೇಕಲ್ಲಾ ಅಂತೇಳಿ ಸೇರಿಕೊಂಡಿದ್ವಿ. ಅದರಾಗ ಮನ್ನಿ ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್‌ನ್ಯಾಗ ಉತ್ತರ ಕರ್ನಾಟಕಕ್ಕ ಭಾಳ ಅನ್ಯಾಯ ಆಗೇತಿ ಅಂತೇಳಿ ಅದರ ವಿರುದ್ದ ಹೋರಾಟ ಮಾಡಿ ಸರ್ಕಾರದ ಗಮನಾ ಸೆಳಿಬೇಕಲ್ಲಾ ಅಂತೆಲ್ಲಾ ಲೆಕ್ಕಾಚಾರ ಹಾಕಿದ್ವಿ. ನಾವು ಯಾವುದೋ ಮೂಲ್ಯಾಗ ಕುಂತು ಹತ್ತಿಪ್ಪತ್ತು ಮಂದಿ ಹೋರಾಟ ಮಾಡ್ತೇವಿ ಅಂದ್ರ ಯಾರ್‌ ಕೇಳ್ತಾರು? ಅನ್ಯಾಯ ಆಗೇತಿ ಅಂತ ಗೊತ್ತಿದ್ರೂ ನಮ್ಮ ಭಾಗದ ನಾಯಕರ ಯಾರೂ ಮಾತ್ಯಾಡ್ವಾಲು ಅನ್ನೋದ ಭಾಳ ಮಂದಿ ಅಭಿಪ್ರಾಯ ಆಗಿತ್ತು.

ಈ ತಾರತಮ್ಯ, ಅನ್ಯಾಯ ಅನ್ನೋದು ರಾಜ್ಯ ಉದಯ ಆದಾಗಿಂದಲೂ ನಡ್ಯಾಕತ್ತೇತಿ. ಇಷ್ಟು ವರ್ಷ ಆದ್ರೂ ಅದು ಸರಿ ಹೋಗಿಲ್ಲ ಅಂದ್ರ ಇದಕ್ಕೆಲ್ಲಾ ಯಾರ್‌ ಕಾರಣಾ ಅನ್ನೋದು ಭಾಳ ವಿಚಾರ ಮಾಡಬೇಕಾಗೇತಿ. ಯಾಕಂದ್ರ ನಮ್ಮ ರಾಜಕಾರಣಿಗೋಳು ಹೆಂಗದಾರು ಅಂದ್ರ ಅವರು ಅಧಿಕಾರದಾಗ ಇದ್ದಾಗ ಎಲ್ಲಾ ಅಭಿವೃದ್ಧಿಛಿ ಆಗೇತಿ ಅಂತ ಹೇಳ್ತಾರು. ಆಡಳಿತ ಪಕ್ಷದಾಗ ಇದ್ರೂ ಅಧಿಕಾರ ಸಿಗಲಿಲ್ಲಂದ್ರ, ಇಲ್ಲಂದ್ರ ಪ್ರತಿಪಕ್ಷದಾಗ ಕುಂತಿದ್ರಂದ್ರ ಘೋರ ಅನ್ಯಾಯ ಆಗಿ ಬಿಡೆತೈತಿ. ಅವರಿಗೆ ಅಧಿಕಾರ ಸಿಗಲಿಲ್ಲ ಅಂದ್ರೂ ಅವರ ಕಾರಣಾ, ಆ ಭಾಗಕ್ಕ ಅನ್ಯಾಯ ಆಗೇತಿ ಅಂದ್ರೂ ಅವರ ಕಾರಣ ಅನತೈತಿ. ಅಡಗಿ ಮನ್ಯಾಗ ಗಡಗಿ ಸಪ್ಪಳಾ ಜೋರಾಗಾಕತ್ತೇತಿ ಅಂದ್ರ ಅದಕ್ಕ ಗಂಡನ ಕಾರಣ. ನಾ ಅಲ್ಲಾ ಅಂತ ಗಂಡಾದಾಂವ ಸ್ವಂತ ಹೆಂಡ್ತಿ ಮುಂದ್‌ ಹೇಳಿ ರಾತ್ರಿ ಮನ್ಯಾಗನ ಊಟಾ ಮಾಡಿ ಮಲಕೊಳ್ಳಲಿ ನೋಡುನು.

ಅನ್ಯಾಯ ಆಗೇತಿ ಅಂತ ಗೊತ್ತಿದ್ರೂ, ಅಧಿವೇಶನ ನಡದಾಗ ಉತ್ತರ ಕರ್ನಾಟಕದ ಎಲ್ಲಾ ಎಂಎಲ್‌ಎಗೋಳು ಒಗ್ಗಟ್ಟಾಗಿ ಪ್ರತಿಭಟನೆ ಮಾಡಿದ್ದ ಕಾಣಲಿಲ್ಲಾ. ಕರಾವಳಿಗೆ ಅನ್ಯಾಯ ಆಗೇತಿ ಅಂದ್‌ ಕೂಡ್ಲೆ ಆ ಭಾಗದ ಶಾಸಕರೆಲ್ಲಾ ಕರೆ ಪಟ್ಟಿ ಕಟಗೊಂಡು ಗಾಂಧಿ ಮುಂದ್‌ ಕುಂತ ಪ್ರತಿಭಟನೆ ಮಾಡಿದ್ರು. ಮಲೆನಾಡಿಗೆ ಅನ್ಯಾಯ ಆಗೇತಿ ಅಂದ್ರೂ ಆ ಭಾಗದ ಎಲ್ಲಾ ಎಮ್ಮೆಲ್ಲೆಗೋಳು ಪಕ್ಷಾ ಮರತು ಗದ್ಲಾ ಮಾಡ್ತಾರು. ಆದ್ರ ಉತ್ತರ ಕರ್ನಾಟಕಕ್ಕ ಅನ್ಯಾಯ ಆಗೇತಿ ಅಂತ ಪ್ರತಿಪಕ್ಷದ ಎಮ್ಮೆಲೆ ಬಾಯಿ ಮಾಡಿದ್ರ ಆಡಳಿತ ಪಕ್ಷದಾಗ ನಿಂತು ಅದ ಭಾಗದ ಮಿನಿಸ್ಟ್ರೆ ಅನ್ಯಾಯ ಆಗಿಲ್ಲಾ ಅನ್ನೋದ್ನ ಸಮರ್ಥನೆ ಮಾಡ್ಕೊತಾರು. 

ಎಲೆಕ್ಷನ್‌ ನಿಂತಾಗ ಎಲ್ಲಾ ಎಮ್ಮೆಲ್ಲೆ ಅಭ್ಯರ್ಥಿಗೋಳು ತಮ್ಮ ಕ್ಷೇತ್ರಕ್ಕ ಕೋಟ್ಯಾಂತರ ರೂಪಾಯಿ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಮಾಡೇನಿ ಅಂತ ಭಾಷಣಾ ಮಾಡ್ತಾರು. ಅಧಿವೇಶನದಾಗ ಬಂದು ಮಾತ್ಯಾಡುವಾಗ ನಮ್ಮದು ಅತ್ಯಂತ ಹಿಂದುಳಿದ ತಾಲೂಕು ಅಂತಾರು. ಮಾಜಿ ಮಂತ್ರಿಯೊಬ್ಬರು ತಮ್ಮ ಕ್ಷೇತ್ರಾನ ಸಿಂಗಾಪೂರ್‌ ಮಾಡಿದಂಗ ಮಾಡೇನಿ ಒಂದ್‌ ಸಾರಿ ಬಂದು ನೋಡು ಅಂತ ಹೇಳಿದ್ರು, ಅಷ್ಟು ಅಭಿವೃದ್ಧಿ ಮಾಡಿದ್ರೂ ಜನಾ ಅವರ್ನ ಸೋಲಿಸಿ ಬ್ಯಾರೇದಾರ್ನ ಆರಿಸಿ ಕಳಿಸ್ಯಾರು, ಹೊಸದಾಗಿ ಬಂದ್‌ ಎಮ್ಮೆಲ್ಲೆ ತಮ್ಮದು ಅತ್ಯಂತ ಹಿಂದುಳಿದ ಕ್ಷೇತ್ರ ಅಂತ ಭಾಷಣಾ ಮಾಡ್ತಾರು. ಯಾರ್‌ ಮಾತ್‌ ನಂಬುದು ಹೇಳ್ರಿ? ಭಾರತ ವಿಶ್ವದಾಗ ಆರನೇ ದೊಡ್ಡ ಶ್ರೀಮಂತ ದೇಶ ಅಂತ ವರ್ಲ್ಡ್ ಬ್ಯಾಂಕ್‌ನ್ಯಾರು ಹೇಳ್ತಾರಂತ. ಆದ್ರ ದೇಶದಾಗಿನ ಜನರ ಆದಾಯ ಮಾತ್ರ ಹೆಚ್ಚಾಗಿಲ್ಲ. ಫ್ರಾನ್ಸ್‌ನ ಹಿಂದ್‌ ಹಾಕಿ ಶ್ರೀಮಂತ ರಾಷ್ಟ್ರ ಆಗಿರೋ ಭಾರತದ ಜನರ ತಲಾ ಆದಾಯ ಅವರಿಗಿಂತ ಇಪ್ಪತ್ತು ಪಟ್ಟು ಕಡಿಮಿ ಐತೆಂತ. ಅಂದ್ರ ದೇಶ ಶ್ರೀಮಂತ ಆಗಾಕತ್ತೇತಿ ಜನಾ ಮಾತ್ರ ಬಡುರಾಗೇ ಉಳದಾರು. ಅಂಬಾನಿ ಏಷ್ಯಾದ ಅತಿದೊಡ್ಡ ಶ್ರೀಮಂತ ಆದ್ರೂ ದೇಶದ ಜನರ ತಲಾ ಆದಾಯ ಮಾತ್ರ ಹೆಚ್ಚಗಿ ಆಗವಾಲ್ರು.

ಅದಕ್ಕ ಆಳಾರು ಮತ್ತು ಜನರ ನಡಕಿನ ಅಂತರ ಕಾರಣ ಅನತೈತಿ. ಉತ್ತರ ಕರ್ನಾಟಕ ಭಾಗದ ಎಮ್ಮೆಲ್ಲೆಗೋಳಿಗೆ ಗೌಡ್ರಿ, ಸವಕಾರ್ರಿ, ದೇಸಾಯಿಗಿರಿ ಮನಸ್ಥಿತಿ ಇನ್ನೂ ಕಡಿಮಿ ಆಗಿಲ್ಲ ಅನತೈತಿ. ಹಿಂಗಾಗೇ ಅವರು ತಮ್ಮ ಗತ್ತಿನ್ಯಾಗ ತಿರಗ್ಯಾಡ್ತಾರು ಬಿಟ್ರ, ಆ ಭಾಗದ ಅಭಿವೃದ್ಧಿ ಬಗ್ಗೆ ಒಗ್ಗಟ್ಟು ತೋರಸಾಕ ಹೋಗುದಿಲ್ಲ ಅನತೈತಿ. ಒಂದೂರಿನ ಗೌಡ ಮತ್ತೂಂದು ಊರಿಗೆ ಆಳು ಅನ್ನೊ ಗಾದಿ ಮಾತೈತಿ. ಪ್ರಜಾಪ್ರಭುತ್ವದಾಗ ಯಾರಿಗೆ ಯಾರು ಸುಪ್ರೀಂ ಅನ್ನೋದ ದೊಡ್ಡ ಪ್ರಶ್ನೆ ಆಗೇತಿ ಅನತೈತಿ. ಯಾಕಂದ್ರ ಶಾಸಕರೆಲ್ಲಾ ತಾವು ಮಾಡಿರೋ ಕಾನೂನನ್ನ ಕೋರ್ಟ್‌ಗೆ ಪ್ರಶ್ನೆ ಮಾಡಾಕ್‌ ಅಧಿಕಾರ ಇಲ್ಲಾ. ಶಾಸಕಾಂಗ ಎಲ್ಲಾರಿತ ಸುಪ್ರೀಂ ಅನ್ನೋದು ಅವರ ವಾದಾ. ಸದನದೊಳಗ ಏನ್‌ ಮಾತಾಡಿದ್ರೂ ನಮ್ನ ಕೇಳಾಕ
ಕೋರ್ಟಿಗೆ ಅಧಿಕಾರ ಇಲ್ಲಾ. ಇಲ್ಲಿ ನಾವ ಸುಪ್ರೀಂ ಅಂತ ಕೆಲವು ಎಮ್ಮೆಲ್ಲೆಗೋಳು ಜಡ್ಜ್ಗೋಳ್‌ ಮ್ಯಾಲ ಇರೋಬರೋ ಸಿಟ್ಟೆಲ್ಲಾ ಅಲ್ಲೇ ತೀರಿಸಿಕೊಂಡು ಬಿಟ್ರಾ.

ಜಡ್ಜ್ಗೋಳು ಇದನ್ನ ಕೇಳಿ ಸುಮ್ನ ಇರ್ತಾರಾ? ಅವರೂ ಕಾಯ್ತಿರಾìರು. ಅವರ ಹಂತೇಕ ಕೇಸ್‌ ಬಂದಾಗ ಅವರು ನಾವ ಸುಪ್ರೀಂ ಅಂತ ಹೇಳ್ತಾರು. ನಮ್ಮ ಟಿವಿ ಆಂಕರ್‌ಗೊàಳು ಸ್ಟುಡಿಯೋದಾಗ ಕುಂತಾಗ ಅವರ ಸುಪ್ರೀಂ ಅವರ ಮುಂದ ಸುಪ್ರೀಂ ಕೋರ್ಟು ಇಲ್ಲಾ. ಶಾಸಕಾಂಗಾನೂ ಇಲ್ಲಾ. ನಮ್ಮನ್ಯಾಗ ನಾವ ಸುಪ್ರೀಂ. ಆದ್ರ ಏನ್‌ ಬಂತು? ನಡಮನ್ಯಾಗ ನಡಿ ಅಧಿಕಾರ ಅಡಗಿ ಮನ್ಯಾಗ ನಡಿದುಲ್ಲಾ. ನಡಮನ್ಯಾಗ ಅಧಿಕಾರ ಐತಿ ಅಂತೇಳಿ ಅಡಗಿ ಮನ್ಯಾಗ ಚಲಾಯಿಸಾಕ ಹೋದ್ರ ಬೆಡ್‌ ರೂಮಿಗಿ ಪ್ರವೇಶವಿಲ್ಲ. ನಾ ಎಮ್ಮೆಲ್ಲೆ ನಾನ ಸುಪ್ರೀಂ ಅಂತೇಳಿ ಅಧಿಕಾರ ಇದ್ದಾಗ
ದರ್ಪಾ ತೋರಿದ್ರ ಎಲೆಕ್ಷೆನ್‌ ದಿನಾ ಮತದಾರ ನಾನ ಸುಪ್ರೀಂ ಅಂತಾನು. ಪ್ರಜಾಪ್ರಭುತ್ವದಾಗ ಎಲ್ಲಾರೂ ಸಮಾನರು ಅನ್ನೋ ದಾದ್ರ ಈ ಸುಪ್ರೀಂ ಅನ್ನೋದೇ ಸಂವಿಧಾನ ಬಾಹಿರ ಅನಕಾನೂನಿಗೂ ಮಾನವೀಯತೆಗೂ ಸಂಘರ್ಷ ನಡದೈತಿ ಅನಸ್ಥೈತಿ.

ಸಮಾನತೆ ಅನ್ನೋದು ಬಂದಾಗ ಮನ್ನಿ ಅಕ್ರಮ ಸಂಬಂಧದ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ್ಯಾಗ ಒಂದು ಅಫಿಡವಿಟ್‌ ಸಲ್ಲಿಸಿ ಅಕ್ರಮ ಸಂಬಂಧದ ತಪ್ಪಿಗೆ ಹೆಣ್ಮಕ್ಕಳ್ನ ಹೊಣೆಗಾರರನ್ನಾಗಿ ಮಾಡಬಾರದು ಅಂತ ಹೇಳ್ತಾರು. ಇದ್ನ ನೋಡಿದ್ರ ಕೇಂದ್ರ ಸರ್ಕಾರ ಹೆಣ್ಮಕ್ಕಳಿಗೆ ಈ ಸಮಾಜದಾಗ ಸಮಾನತೆ ಇಲ್ಲ ಅಂತ ಹೇಳಿದಂಗ ಕಾಣತೈತಿ. ಮದುವಿ ಆದ ಗಂಡಸಿನ ಮ್ಯಾಲ ಹುಡುಗಿ ಕಣ್‌ ಹಾಕಿದ್ರ, ಪಾಪ ಹೆಣ್ಮಗಳು
ಅಂತ ಮಾನವೀಯತೆಯಿಂದ ಕರುಣೆ ತೋರಿಸಿದ್ರೆ ಏನ್‌ ಮಾಡೋದು? ಕಣ್‌ ಹಾಕಿದಾಕಿಗೆ ಕರುಣೆ ತೋರಬೇಕಾ ಕಟಗೊಂಡಾಕಿ ಕಾನೂನಿಗೆ ತಲಿ ಬಾಗಬೇಕಾ? ಏನ್‌ ಮಾಡಿದ್ರೂ ಒಬ್ಬರಿಗೆ ಅನ್ಯಾಯ ಆಗೂದ. ಕಾನೂನು ಮತ್ತ ಮಾನವೀಯತೆ ನಡಕ ಯಾರ್‌ ಸುಪ್ರೀಂ ಅನ್ನೋ ಸಂಘರ್ಷ ನಡದೈತಿ ಅಂತ ಅನಸೆôತಿ. ಸಮಾಜಾ ದೊಡ್ಡದಾ ಸಂವಿಧಾನ ದೊಡ್ಡದಾ ಅನ್ನೋ ಪ್ರಶ್ನೆ ಬಂದಾಗ. ಸಮಾಜಾನ ಇಲ್ಲದ ಸಂವಿಧಾನ ಇದ್ರೆನ್‌ ಬಂತು ಅನ್ನೋ ಪ್ರಶ್ನೆ ಮೂಡತೈತಿ. ಅದ್ಕ ಸುಪ್ರೀಂ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದ್ರೂ, ಮಾನವೀಯತೆ ಆಧಾರದ ಮ್ಯಾಲ ಕ್ಷಮಾದಾನ ನೀಡೋ ಅಧಿಕಾರ ಸಂವಿಧಾನದಾಗ ಕೊಟ್ಟಾರು ಅನಸ್ಥೈತಿ. 

ಸಮಾಜದಾಗ ಸಮಾನತೆ ಬರಬೇಕಂದ್ರ ಅನ್ಯಾಯದ ಕೂಗು ನಿಲ್ಲಬೇಕು. ಅದಕ್ಕೆ ಆಳಾರು ಅನ್ಯಾಯ ಆಗದಂಗ ನೋಡಕೊಬೇಕು. ಕಬ್ಬನ್‌ ಪಾರ್ಕಿಗಿ ಹ್ವಾದ ಗಂಡ ಎಷ್ಟೊತ್ತಾದ್ರೂ ಬರದಿದ್ರ ಮನ್ಯಾಗ ಕುಂತ ಮಡದಿ ಮನಸಿನ್ಯಾಗ ಮೂಡೋ ಆಲೋಚನೆ ಸುಮ್ನ ಕಲ್ಪಿಸಿಕೊಂಡ್ರು ರವಿಚಂದ್ರನ ಕನ್ನಡಾ ಸಿನೆಮಾ ಹಾಡು ಕೇಳಿದಂಗ ಅಕ್ಕೇತಿ. ಆದ್ರೂ ಏನೋ ಆಗೇತಿ ಅಂತ ಅಂದ್ಕೊಂಳ್ಳಾರಿಗೆ ಇರೋ ವಿಷಯ ಹೇಳಿ ಬಿಡಬೇಕು. ನಾನಂತೂ ಯಜಮಾನ್ತಿಗೆ ಇರೋದೆಲ್ಲಾ ಹೇಳಿದೆ. ಆದ್ರೆ, ಸ್ವಲ್ಪ ತೆರಿಗೆ ಬಿತ್ತು. ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೇನೂ, ಅಧಿಕಾರ ನಡಸಾರಿಗೆ ಹೊರೆ ಜಾಸ್ತಿ ಆದ್ರೂನು ಇರೋದೇನು ಅಂತ ಹೇಳಿ ನ್ಯಾಯಾ ಕೊಡಬೇಕಿತ್ತು ಅಂತ ಅನಸ್ಥೈತಿ.

ಶಂಕರ ಪಾಗೋಜಿ

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.