ಇಂಗಾಲ ನಿಯಂತ್ರಣಕ್ಕೆ ಭಾರತದ ಕಾರ್ಯತಂತ್ರ


Team Udayavani, Nov 15, 2022, 6:20 AM IST

ಇಂಗಾಲ ನಿಯಂತ್ರಣಕ್ಕೆ ಭಾರತದ ಕಾರ್ಯತಂತ್ರ

ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಈಜಿಪ್ಟ್ ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಮಾವೇಶದಲ್ಲಿ (ಕಾಪ್‌27) ಭಾರತ ತನ್ನ ಕಾರ್ಯತಂತ್ರವನ್ನು ಮಂಡಿಸಿದೆ. ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಯನ್ನು 2070ರೊಳಗೆ ತಲುಪುವುದೂ ಸೇರಿದಂತೆ ಹವಾಮಾನ ವೈಪರೀತ್ಯವನ್ನು ಹಿಮ್ಮೆಟ್ಟಿಸಲು ಹಲವು ಹೆಜ್ಜೆಗಳನ್ನು ಇಡಲಾಗುತ್ತಿದೆ.

ಭಾರತ ಅಮೃತ ಕಾಲದಲ್ಲಿ ಮುನ್ನಡೆಯುತ್ತಿದ್ದು, ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶದ ಅಭಿವೃದ್ಧಿಯ ಓಟಕ್ಕೆ ಹಾಗೂ ಭಾರತದ ಗಾತ್ರಕ್ಕೆ ಅನುಗುಣವಾಗಿ ಆರ್ಥಿಕತೆಯನ್ನು ವಿಸ್ತರಿಸಲು ಹವಾಮಾನ ವೈಪರೀತ್ಯ ಪ್ರಮುಖ ಸವಾಲುಗಳಲ್ಲಿ ಒಂದು. ಈ ಸವಾಲನು ಹಿಮ್ಮೆಟ್ಟಿಸಲು ನರೇಂದ್ರ ಮೋದಿ ಅವರ ಸರಕಾರ ಪ್ರಯತ್ನಿಸುತ್ತಲೇ ಇದೆ.

ಜಾಗತಿಕ ಭೂ ಮೇಲ್ಮೈ ತಾಪಮಾನ ಹೆಚ್ಚಳದ ಹಿನ್ನೆಲೆಯಲ್ಲಿ ಒಟ್ಟಾರೆ ಇಂಗಾಲ ಹೊರಸೂಸುವ ಅನುಪಾತವನ್ನು ಅಳೆಯಲು ಹವಾಮಾನ ವಿಜ್ಞಾನವನ್ನು ಅಳವಡಿಸಲಾಗಿದೆ ಮತ್ತು ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಸೀಮಿತಗೊಳಿಸುವ ವ್ಯವಸ್ಥೆಗೆ ಜಾಗತಿಕ ಇಂಗಾಲ ಬಜೆಟ್‌ ಎಂದು ಕರೆಯಲಾಗುತ್ತದೆ. ಜಾಗತಿಕ ಇಂಗಾಲ ಬಜೆಟ್‌ನ ಹೆಚ್ಚಿನ ಭಾಗವನ್ನು ಅಭಿವೃದ್ಧಿ ಹೊಂದಿದ ದೇಶಗಳು ಅಸಮಾನತೆಯಿಂದ ಬಳಕೆ ಮಾಡುತ್ತಿವೆ ಎಂಬುದು ರಹಸ್ಯವಾಗಿ ಉಳಿದಿಲ್ಲ.

ಕಡಿಮೆ ಇಂಗಾಲದ ಹೊರಸೂಸುವಿಕೆಗೆ ಸೂಕ್ತ ದಿಕ್ಕನ್ನು ನೀಡುವ ನಿಟ್ಟಿನಲ್ಲಿ ದೇಶದ ಅಭಿವೃದ್ಧಿ ಗುರಿಗಳನ್ನು ಅಳವಡಿಸು­ವುದು ಭಾರತದ ಹವಾಮಾನ ವೈಪರೀತ್ಯ ನೀತಿಯ ಪ್ರಮುಖ ಅಂಶ. ಅಭಿವೃದ್ಧಿ ಕಾರ್ಯಗಳು ಮತ್ತು ಹವಾಮಾನ ಪ್ರಕ್ರಿಯೆ­ಯನ್ನು ಪರಸ್ಪರ ವಿರೋಧಾಭಾಸದ ಬದಲು ಪರಸ್ಪರ ಪೂರಕವಾಗಿ ನೋಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪದೇಪದೇ ಹೇಳಿದ್ದಾರೆ.

ಭಾರತ ಉದ್ದದ ಕರಾವಳಿ, ದುರ್ಬಲ ಮುಂಗಾರು ಅಡಚಣೆ, ಜೀವನೋಪಾಯಕ್ಕಾಗಿ ಕೃಷಿ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವ ಅಭಿವೃದ್ಧಿ ಶೀಲ ದೇಶವಾಗಿದೆ ಮತ್ತು ಕಡಿಮೆ ಇಂಗಾಲ ಹೊರಸೂಸುವಿಕೆಗಾಗಿ ಶ್ರಮಿಸುತ್ತಿದೆ. ಅದೇನೇ ಇದ್ದರೂ ಒಂದು ದೊಡ್ಡ ರಾಷ್ಟ್ರವಾಗಿ ತನ್ನ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಅದರ ಸಂಪ್ರದಾಯಗಳು ಹಾಗೂ ಸಂಸ್ಕೃತಿಗೆ ಅನುಗುಣವಾಗಿ ಜಾಗತಿಕ ತಾಪಮಾನ ಏರಿಕೆಯ ಸವಾಲುಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ಭಾರತ ಬದ್ಧವಾಗಿದೆ. ಭಾರತದ ದೀರ್ಘ‌ಕಾಲೀನ ಹಸುರು ಮನೆ ಅಭಿವೃದ್ಧಿ ಕಾರ್ಯತಂತ್ರ (ಎಲ್ .ಟಿ-ಎಲ್ ಇ.ಡಿ.ಎಸ್‌) ಏಳು ಪ್ರಮುಖ ಸ್ಥಿತ್ಯಂತರಗಳ ಮೇಲೆ ಅವಲಂಬಿತವಾಗಿದೆ. ನೀತಿಗಳು, ಕಾರ್ಯ­ಕ್ರಮ­­ಗಳು ಮತ್ತು ಉಪಕ್ರಮಗಳ ಮೂಲಕ ಈಗಾಗಲೇ ಕಡಿಮೆ ಇಂಗಾಲದ ಮಾರ್ಗಗಳಿಗೆ ಈ ಪರಿವರ್ತನೆಯನ್ನು ಭಾರತ ಪ್ರಾರಂಭಿಸಿದೆ.

1 ವಿದ್ಯುತ್‌ ವ್ಯವಸ್ಥೆಯ ಬೆಳವಣಿಗೆಯು ಕಡಿಮೆ ಇಂಗಾಲದ ಉತ್ಪಾದನೆಗೆ ಅನುಗುಣವಾಗಿದೆ.
ವಿದ್ಯುತ್‌ ವಲಯದಲ್ಲಿನ ಬೆಳವಣಿಗೆಯಿಂದ ಕೈಗಾರಿಕೆಯ ವಿಸ್ತರಣೆ, ಹೆಚ್ಚಿನ ಉದ್ಯೋಗ ಸೃಷ್ಟಿ ಮತ್ತು ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಸಹಕಾರಿಯಾಗಲಿದೆ. ಈಗಿನ ಭಾರತ ದಲ್ಲಿ ನವೀಕೃತ ಇಂಧನ ಕ್ಷೇತ್ರ ವಿಸ್ತರಣೆಯಾಗುತ್ತಿದೆ ಮತ್ತು ತನ್ನ ವಿದ್ಯುತ್‌ ಜಾಲ ವಿಸ್ತರಣೆಯಿಂದ ಬಲಗೊಳ್ಳುತ್ತಿದೆ ಮತ್ತು/ಅಥವಾ ಇತರ ಕಡಿಮೆ ಇಂಗಾಲದ ತಂತ್ರಜ್ಞಾನಗಳನ್ನು ಬೆಂಬಲಿ ಸುತ್ತಿದೆ. ಇದು ಪಳೆಯುಳಿಕೆ ಇಂಧನ ಸಂಪನ್ಮೂಲಗಳ ಬಳಕೆಯತ್ತ ಸಾಗಲಿದೆ,

2 ಸಮರ್ಥ ಕಡಿಮೆ ಇಂಗಾಲ ಸಾಗಣೆ ವ್ಯವಸ್ಥೆ
ಸಾಗಣೆ ವಲಯ ಜಿಡಿಪಿ ಬೆಳವಣಿಗೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೊಡುಗೆ ನೀಡುತ್ತದೆ. ಪ್ರಯಾಣಿಕರು ಮತ್ತು ಸರಕುಗಳ ಸಾಗಣೆಗಾಗಿ ಸಾರಿಗೆ ವಿಧಾನಗಳಲ್ಲಿ ಅಗತ್ಯವಿರುವ ಗಮನಾರ್ಹ ವಿಸ್ತರಣೆಯ ಹಿನ್ನೆಲೆಯಲ್ಲಿ ಭಾರತ ಕಡಿಮೆ ಇಂಗಾಲದ ಆಯ್ಕೆಗಳ ಮೇಲೆ ಕೆಲಸ ಮಾಡುತ್ತಿದೆ.

ದೇಶ ಇಂಧನ ದಕ್ಷತೆಯನ್ನು ಉತ್ತೇಜಿಸುತ್ತಿದ್ದು, ಶುದ್ಧ ಇಂಧನಗಳಿಗೆ ಪರಿವರ್ತನೆಯಾಗಲು ಉತ್ತೇಜನ ನೀಡಲಾಗುತ್ತಿದೆ. ಸಾರ್ವಜನಿಕ ಮತ್ತು ಕಡಿಮೆ ಮಾಲಿನ್ಯಕಾರಕ ಸಾರಿಗೆ ವಿಧಾನಗಳ ಕಡೆಗೆ ಬದಲಾವಣೆ, ವಿದ್ಯುದೀಕರಣ ಮತ್ತು ಚತುರ ಸಾಗಣೆ ವ್ಯವಸ್ಥೆಯನ್ನು ಬಲಗೊಳಿಸ
ಲಾಗುತ್ತಿದೆ.

3 ನಗರ ವಿನ್ಯಾಸ, ಕಟ್ಟಡಗಳಲ್ಲಿ ಇಂಧನ ಮತ್ತು ಪರಿಕರ – ದಕ್ಷತೆ ಮತ್ತು ಸುಸ್ಥಿರ ನಗರೀಕರಣ ಅಳವಡಿಕೆ
ನಗರ ಪ್ರದೇಶಗಳ ಅಭಿವೃದ್ಧಿ ವಿಷಯಕ್ಕೆ ಬಂದಲ್ಲಿ, ನಗರಗಳ ವಿಸ್ತರಣೆಯ ದೃಷ್ಟಿಕೋನದಲ್ಲಿ ದೀರ್ಘ‌ ಕಾಲದಲ್ಲಿ ಸುಸ್ಥಿರ ನಗರ ವಿನ್ಯಾಸವನ್ನು ಉತ್ತೇಜಿಸಲಾಗುತ್ತಿದೆ. ಪರಿಸರ ಮತ್ತು ನಗರ ವ್ಯವಸ್ಥೆಗಳಲ್ಲಿ ಹೊಂದಾಣಿಕೆ ಕ್ರಮಗಳನ್ನು ಮುಖ್ಯವಾಹಿನಿಗೆ ತರಲಾಗುತ್ತಿದ್ದು, ಇದು ನಗರ ಯೋಜನ ಮಾರ್ಗಸೂಚಿಗಳು, ನೀತಿಗಳು ಮತ್ತು ಬೈಲಾಗಳಲ್ಲಿ ಸಂಪನ್ಮೂಲ ದಕ್ಷತೆಯನ್ನು ಉತ್ತೇಜಿಸುತ್ತಿದೆ. ಹವಾಮಾನ ಪ್ರತಿಕ್ರಿಯೆ ಮತ್ತು ಅಸ್ತಿತ್ವದಲ್ಲಿ ರುವ ನಿರ್ಮಾಣ ಮತ್ತು ಕಾರ್ಯಾಚರಣೆ, ಭವಿಷ್ಯದ ಕಟ್ಟಡಗ ಳಲ್ಲಿ ಮತ್ತು ನಗರ ವ್ಯವಸ್ಥೆಗಳಲ್ಲಿ ಕಟ್ಟಡ ವಿನ್ಯಾಸದ ಪುನಶ್ಚೇತನ ಗೊಳಿಸಲಾಗುತ್ತಿದೆ.

4 ಅರ್ಥಿಕ ವ್ಯವಸ್ಥೆಯಿಂದ ಹೊರಸೂಸುವಿಕೆಯನ್ನು ಬೇರ್ಪಡಿಸುವುದು
ನರೇಂದ್ರ ಮೋದಿ ಸರಕಾರ ಔಪಚಾರಿಕ ವಲಯ ಹಾಗೂ ಸೂಕ್ಷ¾, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯಕ್ಕೆ ಮಾನ್ಯತೆ ನೀಡುವ ಪ್ರಯತ್ನಕ್ಕೆ ಒತ್ತು ನೀಡಿದೆ. ಈ ಸಂದರ್ಭದಲ್ಲಿ ಕಡಿಮೆ ಇಂಗಾಲದ ಆಯ್ಕೆಗಳನ್ನು ಅನ್ವೇಷಿಸಲಾಗುತ್ತಿದೆ. ನೈಸರ್ಗಿಕ ಮತ್ತು ಜೈವಿಕ ಆಧಾರಿತ ಬಳಕೆ, ಸಂಸ್ಕರಣೆಯನ್ನು ಹೆಚ್ಚಿಸುವ ಪ್ರಯತ್ನಗಳೊಂದಿಗೆ ಇಂಧನ ಮತ್ತು ಸಂಪನ್ಮೂಲಗಳ ದಕ್ಷತೆಯನ್ನು ಸುಧಾರಿಸುವತ್ತ ಭಾರತ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಹಸುರು ಜಲಜನಕವನ್ನು ಉತ್ತೇಜಿ ಸಲಾಗುತ್ತಿದೆ. ಮೂಲ ಸೌಕರ್ಯ, ಕಠಿನ, ಕಡಿಮೆ ಮಾಡುವ ವಲಯಗಳ ಸುಸ್ಥಿರ ಬೆಳವಣಿಗೆಯ ಆಯ್ಕೆಗಳ ಅನ್ವೇಷಣೆ, ಎಂ.ಎಸ್‌.ಎಂ.ಇಗಳ ಸುಸ್ಥಿರ ಬೆಳವಣಿಗೆ ಮತ್ತು ಕಡಿಮೆ ಇಂಗಾಲ ಹೊರಸೂಸುವುದರತ್ತ ಗಮನ ಕೇಂದ್ರೀಕರಿಸಲಾಗಿದೆ.

5 ಇಂಗಾಲಾಮ್ಲ ನಿರ್ಮೂಲನೆ
ಕಾರ್ಬನ್‌ ಡೈ ಆಕ್ಸೆ„ಡ್‌ ನಿರ್ಮೂಲನೆ ಈಗ ವಿಶ್ವದಾ ದ್ಯಂತ ಅನ್ವೇಷಿಸಲ್ಪಡುತ್ತಿರುವ ಹೊಸ ವಲಯ. ಆದಾಗ್ಯೂ ಈ ಕ್ರಮಕ್ಕೆ ನಾವೀನ್ಯ, ತಂತ್ರಜ್ಞಾನ ವರ್ಗಾವಣೆ, ಹವಾಮಾನ, ನಿರ್ದಿಷ್ಟ ಹಣಕಾಸು ಮತ್ತು ಸಾಮರ್ಥ್ಯ ವರ್ಧನೆಯ ಮೂಲಕ ಅಂತಾರಾಷ್ಟ್ರೀಯ ಬೆಂಬಲದ ಅಗತ್ಯವಿದೆ.

6 ಅರಣ್ಯ, ಸಸ್ಯವರ್ಗ ಹೆಚ್ಚಿಸುವುದು
ಭಾರತದ ರಾಷ್ಟ್ರೀಯ ಬದ್ಧತೆಯು ನೈಸರ್ಗಿಕ ಸಂಪನ್ಮೂಲಗಳ ಹೆಚ್ಚಳ, ಸಂಪನ್ಮೂಲ ಪರಂಪರೆಯ ರಕ್ಷಣೆ ಮತ್ತು ಜೀವ ವೈವಿಧ್ಯವನ್ನು ಉತ್ತೇಜಿಸುವ ಕಾರ್ಯತಂತ್ರವನ್ನು ಹೊಂದಿದೆ. ಅರಣ್ಯ ಮತ್ತು ಸಸ್ಯ, ಪ್ರಾಣಿ ಮತ್ತು ಸೂಕ್ಷ¾ ಜೀವಿ ಆನುವಂಶಿಕ ಸಂಪನ್ಮೂಲಗಳ ಮರು ಸ್ಥಾಪನೆ, ಸಂರಕ್ಷಣೆ ಮತ್ತು ನಿರ್ವಹಣೆ, ಅರಣ್ಯದ ಹೊರ ಭಾಗದಲ್ಲಿ ಸಸಿ ನೆಡುವ, ಮರಗಳ ರಕ್ಷಣೆ ಮತ್ತು ನಿರ್ವಹಣೆ, ನರ್ಸರಿಗಳನ್ನು ಮೇಲ್ದಜೇì ಗೇರಿಸುವುದು ಸೇರಿದಂತೆ ರಾಜ್ಯ ಅರಣ್ಯ ಇಲಾಖೆಗಳ ಮೂಲಸೌಕರ್ಯವನ್ನು ಬಲಪಡಿಸಲಾಗುವುದು.

7 ಆರ್ಥಿಕ ಮತ್ತು ಹಣಕಾಸು ಅಂಶಗಳ ಅಭಿವೃದ್ಧಿ
ಬಡತನ ನಿವಾರಣೆ, ಉದ್ಯೋಗ ಮತ್ತು ಆದಾಯ ಹೆಚ್ಚಿಸುವ, ಹವಾಮಾನ ಬದಲಾವಣೆ ಕ್ರಮಗಳನ್ನು ವೃದ್ಧಿಸುವ, ಸಮೃದ್ಧಿಯ ಹೊಸ ಹಂತ ತಲುಪುವ, ಕಡಿಮೆ ಇಂಗಾಲ ಉತ್ಪಾದನೆ ಉದ್ದೇಶಗಳನ್ನು ಸಾಧಿಸಲು ಕಡಿಮೆ ವೆಚ್ಚದ ಅಂತಾರಾಷ್ಟ್ರೀಯ ಆರ್ಥಿಕ ನೆರವು ಅಗತ್ಯವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನೀತಿಗಳ ಮೂಲಕ ಒಂದು ದೇಶವಾಗಿ ಭಾರತ ಭೂ ಗ್ರಹವನ್ನು ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಹವಾ­ಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಒಡಂಬಡಿಕೆಯ ಚೌಕಟ್ಟು, ಅದರ ಕ್ಯೂಟೋ ಶಿಷ್ಟಾಚಾರದಲ್ಲಿ ನಾವು ಸಾಮೂ­ಹಿಕವಾಗಿ ಒಪ್ಪಿಕೊಂಡಿರುವ ಜಾಗತಿಕ ಹವಾಮಾನ ಆಡಳಿತದ ಅಗತ್ಯಗಳನ್ನು ಪೂರೈಸುವಲ್ಲಿ ಮತ್ತು ಅಂತಾರಾಷ್ಟ್ರೀಯ ಸಹಕಾರಕ್ಕೆ ತನ್ನ ಬದ್ಧತೆಯಲ್ಲಿ ಮತ್ತು ಪ್ಯಾರೀಸ್‌ ಒಪ್ಪಂದದ ಅನುಷ್ಠಾನದ ವಿಚಾರದಲ್ಲಿ ಭಾರತ ಕ್ರಿಯಾಶೀಲವಾಗಿದೆ.
(ಲೇಖಕರು ಕೇಂದ್ರ ಪರಿಸರ, ಅರಣ್ಯ ಮತ್ತು
ಹವಾಮಾನ ಬದಲಾವಣೆ ಖಾತೆ ಸಚಿವರು.)

ಭಾರತದ ಗುರಿ
– 2030ರೊಳಗೆ ಭಾರತದ ಜಿಡಿಪಿಯಲ್ಲಿ ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು ಶೇ. 45ಕ್ಕೆ ಇಳಿಸುವುದು
– 2030ರೊಳಗೆ ಸಾಂಪ್ರದಾಯಿಕ ಶಾಖೋತ್ಪನ್ನ ವಿದ್ಯುತ್‌ ಪ್ರಮಾಣವನ್ನು ಶೇ. 50ಕ್ಕೆ ಇಳಿಸುವುದು
– 2070ರೊಳಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ

– ಭೂಪೇಂದ್ರ ಯಾದವ್‌

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.