ಹೊರಳು ನೋಟ: 2022 ರಲ್ಲಾದ ಪ್ರಮುಖ ಘಟನೆಗಳು


Team Udayavani, Dec 2, 2022, 9:20 AM IST

tdy-44

ಪಾಕ್‌ ಬಾಂಬ್‌ ಸ್ಫೋಟ: 57 ಸಾವು:

ಪಾಕಿಸ್ಥಾನದ ಖೈಬರ್‌-ಪಖ್ತುಂಖ್ವಾ ಪ್ರಾಂತದ ರಾಜಧಾನಿ ಪೇಶಾವರದಲ್ಲಿನ ಶಿಯಾ ಮಸೀದಿ ಯಲ್ಲಿ ಮಾ.4ರಂದು  ಮಧ್ಯಾಹ್ನದ ಪ್ರಾರ್ಥನೆ ವೇಳೆ ಪ್ರಬಲ ಬಾಂಬ್‌ ಸ್ಫೋಟಿಸಿ ಕನಿಷ್ಠ 57 ಮಂದಿ ಮೃತಪಟ್ಟು,  200ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದರು. ಇಬ್ಬರು ದಾಳಿ ಕೋರರು ಮಸೀದಿಗೆ ನುಗ್ಗಲು ಮುಂದಾದಾಗ ನಡೆದ ಪೊಲೀಸ್‌ ಮತ್ತು ಉಗ್ರರ ಗುಂಡಿನ ಚಕಮಕಿ ಯಲ್ಲಿ ಓರ್ವ ದಾಳಿಕೋರ ಹಾಗೂ ಪೊಲೀಸ್‌ ಸಾವನ್ನಪ್ಪಿದ್ದರು. ಮತ್ತೋರ್ವ ಉಗ್ರ ಮಸೀದಿ ಒಳ ನುಗ್ಗಿ ಬಾಂಬ್‌ ಸ್ಫೋಟಿಸಿದ್ದ.

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ,  ಪಂಜಾಬ್‌ನಲ್ಲಿ ಆಪ್‌ಗೆ ಅಧಿಕಾರ :

ಭಾರೀ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ, ಪಂಜಾಬ್‌ ರಾಜ್ಯಗಳ ವಿಧಾನಸಭೆಗಳ ಚುನಾವಣೆ ಫ‌ಲಿತಾಂಶ ಮಾ. 10ರಂದು ಪ್ರಕಟವಾಯಿತು. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಆಡಳಿತವಿರೋಧಿ ಅಲೆ ಎದುರಿಸಿಯೂ ಬಿಜೆಪಿ ಗೆದ್ದುಕೊಂಡರೆ, ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿ (ಎಎಪಿ) ಆಡಳಿತಾರೂಢ ಕಾಂಗ್ರೆಸ್‌ ಮತ್ತು ವಿಪಕ್ಷ ಅಕಾಲಿದಳ-ಬಿಜೆಪಿ ಮೈತ್ರಿಕೂಟ ವನ್ನು ಸೋಲಿಸಿ ಅಧಿಕಾರಕ್ಕೇರಿತು. ಕೇಂದ್ರದ ವಿರುದ್ಧ ರೈತರ ಆಕ್ರೋಶ, ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ಆಂತರಿಕ ಕಚ್ಚಾಟ, ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ಹಲವು ಕೊಡುಗೆಗಳನ್ನು ಘೋಷಿಸಿದ್ದು ಆಪ್‌ ಪಾಲಿಗೆ ವರದಾನವಾಗಿ ಪರಿಣಮಿಸಿತು.

ಪ.ಬಂಗಾಲ: ರಾಜಕೀಯ ಹತ್ಯೆ:

ಪಶ್ಚಿಮ ಬಂಗಾಲದ ಭಿರ್‌ಭುಮ್‌ನ ರಾಮ್‌ಪುರ್‌ಹಾತ್‌ದಲ್ಲಿ ಮಾ.22ರಂದು ಇಬ್ಬರು ಮಕ್ಕಳ ಸಹಿತ 8 ಮಂದಿ ಸಜೀವವಾಗಿ ದಹಿಸಿ ಹೋಗಿದ್ದರು.  ಮಾ.21ರ ತಡರಾತ್ರಿ ರಾಮ್‌ಪುರ್‌ಹಾತ್‌ನ ಬಶಾìಲ್‌ ಎಂಬ ಗ್ರಾಮದಲ್ಲಿ ತೃಣ ಮೂಲ ಕಾಂಗ್ರೆಸ್‌ನ ಸ್ಥಳೀಯ ಮುಖಂಡ ಭಾಡು ಶೇಖ್‌ರನ್ನು ಹತ್ಯೆ ಮಾಡ ಲಾಗಿತ್ತು. ಈ ಘಟನೆ ಘಟಿಸಿದ ಕೆಲವೇ ಗಂಟೆಗಳಲ್ಲಿ ಬೋಗುತಿ ಎಂಬ ಗ್ರಾಮ ದಲ್ಲಿರುವ 8 ಮನೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿತ್ತು.

ಶೇನ್‌ ವಾರ್ನ್, ರಾಡ್ನಿ ಮಾರ್ಷ್‌ ನಿಧನ :

ಮಾ.4ರಂದು ಆಸ್ಟ್ರೇಲಿಯಾ ಇಬ್ಬರು ಖ್ಯಾತ ಕ್ರಿಕೆಟಿಗರನ್ನು ಕಳೆದುಕೊಂಡಿತು. ಒಂದೂವರೆ ದಶಕದ ಕಾಲ ವಿಶ್ವದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನರಾಗಿದ್ದ ಲೆಜೆಂಡ್ರಿ ಲೆಗ್‌ಸ್ಪಿನ್ನರ್‌ ಶೇನ್‌ ವಾರ್ನ್ ಥಾಯ್ಲೆಂಡ್‌ನ‌ಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು.   ಇದೇ ದಿನ “ಐರನ್‌ ಗ್ಲೌಸ್‌’ ಖ್ಯಾತಿಯ ವಿಕೆಟ್‌ ಕೀಪರ್‌ ಆಗಿದ್ದ ರಾಡ್ನಿ ಮಾರ್ಷ್‌ ಹೃದಯಾಘಾತದಿಂದ ಸಾವನ್ನಪ್ಪಿದರು. ಜಾಗತಿಕ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿದ್ದ ರಾಡ್ನಿ ವಿಲಿಯಂ ಮಾರ್ಷ್‌, 96 ಟೆಸ್ಟ್‌ಗಳಿಂದ 343 ಕ್ಯಾಚ್‌ ಹಾಗೂ 12 ಸ್ಟಂಪಿಂಗ್‌ ಮಾಡಿದ ದಾಖಲೆಯನ್ನು ಹೊಂದಿದ್ದರು.

ಚೀನ ವಿಮಾನ ದುರಂತ :

132 ಮಂದಿ ಪ್ರಯಾಣಿಕರನ್ನು ಹೊತ್ತೂಯ್ಯುತ್ತಿದ್ದ  ಚೀನದ ವಿಮಾನವು ಮಾ.21ರಂದು ವುಝೌ ಸಮೀಪದ ಟೆಂಗ್‌ ಕೌಂಟಿಯ ಪರ್ವತದ ಮೇಲೆ ಪತನಗೊಂಡಿತು. ಪ್ರಯಾಣದ ಮಧ್ಯೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ವಿಮಾನದಲ್ಲಿದ್ದ 132 ಮಂದಿಯೂ ಸಾವಿಗೀಡಾದರು.

 ಆಸ್ಟ್ರೇಲಿಯಾ ಟೆನಿಸ್‌ ತಾರೆ ಆ್ಯಶ್ಲಿ ಬಾರ್ಟಿ ವಿದಾಯ :

ಆಸ್ಟ್ರೇಲಿಯಾದ ಶ್ರೇಷ್ಠ ಟೆನಿಸ್‌ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಮಾ.23ರಂದು ದಿಢೀರ್‌ ವಿದಾಯ ಹೇಳಿದರು. 25 ವರ್ಷದ ಆ್ಯಶ್ಲಿ ತಮ್ಮ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಸಹಿತ 3 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದರು.

ಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ :

ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಬಿಕ್ಕಟ್ಟಿಗೆ ಸಿಲುಕಿದ್ದ ಶ್ರೀಲಂಕಾದಲ್ಲಿ ಸರಕಾರ ಎ.3ರಂದು ತುರ್ತು ಪರಿಸ್ಥಿತಿ ಘೋಷಿಸಿ 36 ತಾಸುಗಳ ಕರ್ಫ್ಯೂ ವಿಧಿಸಿತು. ಆಹಾರ, ಆವಶ್ಯಕ ವಸ್ತುಗಳ ಕೊರತೆಯಿಂದ ಕಂಗೆಟ್ಟ ಜನರು ಅಧ್ಯಕ್ಷ ಗೋಟಬಾಯ ರಾಜ ಪಕ್ಸರ ರಾಜೀನಾಮೆಗೆ ಆಗ್ರಹಿಸಿ ಎ.1ರಂದು ರಾತೋ ರಾತ್ರಿ ಅಧ್ಯಕ್ಷರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ವನಿತಾ ವಿಶ್ವಕಪ್‌: 7ನೇ ಬಾರಿ ಆಸ್ಟ್ರೇಲಿಯಾ ಚಾಂಪಿಯನ್‌ :

ಕ್ರೈಸ್ಟ್‌ಚರ್ಚ್‌ನಲ್ಲಿ ಎ.3ರಂದು ನಡೆದ ವನಿತಾ ವಿಶ್ವಕಪ್‌ ಫೈನಲ್‌ ನಲ್ಲಿ ಅಪ್ರತಿಮ ಪ್ರದರ್ಶನದಿಂದ ಆಸ್ಟ್ರೇಲಿಯಾ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ನ್ನು ಸೋಲಿಸಿ 7ನೇ ಬಾರಿ ಚಾಂಪಿಯನ್‌ ಆಯಿತು.

ಹಿಜಾಬ್‌ ವಿವಾದಕ್ಕೆ ಅಲ್‌ಕಾಯಿದಾ ಪ್ರವೇಶ! :

ಹಿಜಾಬ್‌ ವಿವಾದದಲ್ಲಿ ಉಗ್ರ ಸಂಘಟನೆ ಆಲ್‌ ಕಾಯಿದಾ ಎ.6ರಂದು  ಮಧ್ಯ ಪ್ರವೇಶಿಸಿ ಕುತೂಹಲ ಕೆರಳಿಸಿತ್ತು.  ಹಿಜಾಬ್‌ ವಿವಾದದ ವೇಳೆ ಸುದ್ದಿಯಾಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ‌ ಅಲ್‌ಕಾಯಿದಾ ಮುಖ್ಯಸ್ಥ ಐಮನ್‌ ಅಲ್‌- ಜವಾಹಿರಿಯ 9 ನಿಮಿಷಗಳ ವೀಡಿಯೋ ತನ್ನ ಅಧಿಕೃತ ಮಾಧ್ಯಮ ಶಬಾಬ್‌ನಲ್ಲಿ ಪ್ರಸಾರಿಸಿದ್ದ.

ಪ್ರಧಾನಿ ಜಮ್ಮು ಭೇಟಿ: ಆತ್ಮಾಹುತಿ ದಾಳಿ ಸಂಚು ವಿಫ‌ಲ :

ಪ್ರಧಾನಿ ಮೋದಿ ಜಮ್ಮು ಭೇಟಿ ನೀಡುವ ವೇಳೆ ಆತ್ಮಾಹುತಿ ದಾಳಿಗೆ ಸಂಚು ಹಾಕಿದ್ದ ಉಗ್ರರನ್ನು 2 ದಿನದ ಮುನ್ನವೇ ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಜಮ್ಮು ನಗರದ ಹೊರವಲಯದಲ್ಲಿ ಎ.22ರ ಬೆಳ್ಳಂಬೆಳಗ್ಗೆ ಸುಮಾರು 5 ಗಂಟೆ ನಡೆದ ಎನ್‌ಕೌಂಟರ್‌ನಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಉಗ್ರರನ್ನು ಹತ ಮಾಡಲಾಯಿತು.

ಕೇಂದ್ರೀಯ ವಿವಿಯ ಹಲವು ಕೋಟಾ ರದ್ದು :

ಕೇಂದ್ರೀಯ ವಿದ್ಯಾಲಯ (ಕೆ.ವಿ.)ಗಳಲ್ಲಿ ಸಂಸದರಿಗೆ ಇರುವ ಕೋಟಾ ಸಹಿತ ಹಲವು ವಿಶೇಷ ಪ್ರವೇಶ ಅವಕಾಶಗಳನ್ನು ರದ್ದು ಮಾಡಿ ಎ.26 ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು ಜತೆಗೆ ಹೊಸ ನಿಯಮಗಳನ್ನೂ ಬಿಡುಗಡೆ ಮಾಡಿತ್ತು.  ಇದಲ್ಲದೆ ಶಿಕ್ಷಣ ಸಚಿವಾ ಲಯದ ಉದ್ಯೋಗಿಗಳ ಮಕ್ಕಳಿಗೆ, ಕೇ.ವಿ.ಯ ನಿವೃತ್ತ ಉದ್ಯೋಗಿಗಳ ಸಂಘ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಿಗೆ ಮೀಸಲಾಗಿ ಇರುವ ವಿವೇಚನ ಕೋಟಾಗಳನ್ನು ರದ್ದುಗೊಳಿಸಲಾಯಿತು.

ಪ್ರಮುಖ ಘಟನೆಗಳು :

ಮಾರ್ಚ್‌:

ಮಾ.4: ಮೊಹಾಲಿಯಲ್ಲಿ ವಿರಾಟ್‌ ಕೊಹ್ಲಿ 100ನೇ  ಟೆಸ್ಟ್‌, ಈ ಸಾಧನೆ ಮಾಡಿದ ಭಾರತದ ಆರನೇ ಕ್ರಿಕೆಟಿಗ

ಮಾ. 9: ಕ್ರಿಕೆಟ್‌ಗೆ ಶ್ರೀಶಾಂತ್‌ ವಿದಾಯ

ಮಾ.15: ನಾಸಾದ‌ ಸ್ಪೇಸ್‌ ವಾಕ್‌ನಲ್ಲಿ ಭಾರ‌ತೀಯ ರಾಜಾಚಾರಿ ಭಾಗಿ

ಮಾ.16: ಹೊಸದಿಲ್ಲಿಯಲ್ಲಿ ಭಾರತದ ಮೊದಲ ಹೈಡ್ರೋಜನ್‌ ಕಾರಿಗೆ ಚಾಲನೆ

ಮಾ.21: ಕೊಯಮತ್ತೂರು: ಜಗ್ಗಿ ವಾಸುದೇವ್‌ ಅವರಿಂದ ಮಣ್ಣು ಉಳಿಸಿ ಅಭಿಯಾನ ಆರಂಭ

ಮಾ.23: ಹೈದರಾಬಾದ್‌: ಸಿಕಂದರ್‌ಬಾದ್‌ ಬೆಂಕಿ ಅವಘಡ, 11 ಸಾವು

ಮಾ.23: ಅಫ್ಘಾನಿಸ್ಥಾನ: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಿರ್ಬಂಧ

ಮಾ.25: ಆರ್‌ಆರ್‌ಆರ್‌ ಸಿನೆಮಾ ತೆರೆಗೆ, ದಾಖಲೆ ಗಳಿಕೆ

ಮಾ.27: ಬಾಸೆಲ್‌: ಸ್ವಿಸ್‌ ಓಪನ್‌, ಸಿಂಧೂ ಚಾಂಪಿಯನ್‌

ಮಾ.28: ತೆಲಂಗಾಣದಲ್ಲಿ ಲಕ್ಷ್ಮೀ ನರಸಿಂಹ ದೇಗುಲ ಲೋಕಾರ್ಪಣೆ

ಎಪ್ರಿಲ್‌:

ಎ. 1: ರಷ್ಯಾ ಮೇಲೆ ಉಕ್ರೇನ್‌ ಮೊದಲ ದಾಳಿ

ಎ. 7:  ವಿಶ್ವಸಂಸ್ಥೆಯ ವಿಟೋ ಸದಸ್ಯತ್ವದಿಂದ ರಷ್ಯಾ ಉಚ್ಛಾಟನೆ

ಎ.8: ಉಕ್ರೇನ್‌ ರೈಲು ನಿಲ್ದಾಣಕ್ಕೆ ಕ್ಷಿಪಣಿ ದಾಳಿ

ಎ.8: ಬಾಲಸೋರ್‌: ಡಿಆರ್‌ಡಿಒದ ಕ್ಷಿಪಣಿ ಛೇದನ ಪರೀಕ್ಷೆ ಯಶಸ್ವಿ

ಎ.13: ಉಕ್ರೇನ್‌ ಮೇಲೆ ಶೆಲ್‌ ದಾಳಿ

ಎ.11: ಪಾಕಿಸ್ಥಾನದ ನೂತನ ಪ್ರಧಾನಿಯಾಗಿ ಪಾಕಿಸ್ಥಾನ ಮುಸ್ಲಿಂ ಲೀಗ್‌-ನವಾಜ್‌ ಪಕ್ಷದ ಮುಖಂಡ ಶಹಬಾಜ್‌ ಷರೀಫ್ ಆಯ್ಕೆ

ಎ.14: ಮುಂಬಯಿಯಲ್ಲಿ ಆಲಿಯಾ- ರಣಬೀರ್‌ ಮದುವೆ

ಎ.15: ರಷ್ಯಾದ ಯುದ್ಧ ನೌಕೆ ಮಾಸ್ಕೊವಾ ಮುಳುಗಡೆ

ಎ.19: ಗುಜರಾತ್‌ನಲ್ಲಿ ಡಬ್ಲ್ಯುಎಚ್‌ಒನ ಸಾಂಪ್ರದಾಯಿಕ ವೈದ್ಯಪದ್ಧತಿಯ ಕೇಂದ್ರಕ್ಕೆ ಪ್ರಧಾನಿಯಿಂದ ಶಂಕುಸ್ಥಾಪನೆ

ಎ.20: ಮುಂಬಯಿಯಲ್ಲಿ ಆರನೇ ಸಬ್‌ಮರೀನ್‌ ಐಎನ್‌ಎಸ್‌ ವಾಗ್‌ಶೀರ್‌ ಲೋಕಾರ್ಪಣೆ

ಎ.21: 2022ರ ವಿಸ್ಡನ್‌ ಪ್ರಶಸ್ತಿಗೆ ರೋಹಿತ್‌, ಬೂಮ್ರಾ ಆಯ್ಕೆ

ಎ.21: ಬಿಟ್ರನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಭಾರತ ಭೇಟಿ

ಎ.23: ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌, ರವಿ ದಹಿಯಾಗೆ ಚಿನ್ನ

ಟಾಪ್ ನ್ಯೂಸ್

tdy-4

ಭೂಕಂಪ: ಕಟ್ಟಡಗಳಡಿ ಸಿಲುಕಿ ಟರ್ಕಿಯ ಖ್ಯಾತ ಫುಟ್ಬಾಲ್‌ ಆಟಗಾರ ಮೃತ್ಯು

vote

ಕರಾವಳಿಯಲ್ಲಿ ಪಕ್ಷಗಳ ಸಮಾವೇಶ-ಯಾತ್ರೆಗಳ ಜಾತ್ರೆ

ನವಲಗುಂದ ಪಟ್ಟಣ ಅಭಿವೃದ್ಧಿಗೆ ಪುರಸಭೆ ಪಣ

ನವಲಗುಂದ ಪಟ್ಟಣ ಅಭಿವೃದ್ಧಿಗೆ ಪುರಸಭೆ ಪಣ

PArk

ವಿಶೇಷ ಚೇತನ ಮಕ್ಕಳಿಗೆ ಕದ್ರಿಯಲ್ಲಿ ಪ್ರತ್ಯೇಕ ಪಾರ್ಕ್‌..!

ponds

ಅವಿಭಜಿತ ಕುಂದಾಪುರ ತಾ.: 69 ಕೆರೆಗಳಿಗೆ ಮರುಜೀವ

tdy-3

ದಳಪತಿ ವಿಜಯ್ ʼಲಿಯೋʼ ಚಿತ್ರದಿಂದ ಹೊರಬಂದ ತ್ರಿಷಾ?: ವೈರಲ್‌ ಸುದ್ದಿಗೆ ನಟಿ ತಾಯಿ ಸ್ಪಷ್ಟನೆ

tdy-2

ಮುಖಾಮುಖಿ ಢಿಕ್ಕಿಯಾಗಿ ಕಂದಕಕ್ಕೆ ಉರುಳಿದ ಬಸ್‌ – ಕಾರು : ಕನಿಷ್ಠ 30 ಮಂದಿ ಮೃತ್ಯುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿನಾಶಕಾರಿ ಭೂಕಂಪಗಳು; ಇಲ್ಲಿದೆ ಜಗತ್ತಿನಲ್ಲಿ ಈವರೆಗೆ ದಾಖಲಾದ ಭೂಕಂಪಗಳ ವಿವರ

ವಿನಾಶಕಾರಿ ಭೂಕಂಪಗಳು; ಇಲ್ಲಿದೆ ಜಗತ್ತಿನಲ್ಲಿ ಈವರೆಗೆ ದಾಖಲಾದ ಭೂಕಂಪಗಳ ವಿವರ

bಡಚ್ಚರ ನಗರಗಳೂ, ಬೈಸಿಕಲ್‌ಗ‌ಳೂ…

ಡಚ್ಚರ ನಗರಗಳೂ, ಬೈಸಿಕಲ್‌ಗ‌ಳೂ…

ಹಾಡಿನ ತಾರೆ ಆಗಸ  ಸೇರಿತು…ಸವಿನೆನಪುಗಳನ್ನು ಬಿಟ್ಟು ಸಾಗಿದ ವಾಣಿ ಜಯರಾಂ

ಹಾಡಿನ ತಾರೆ ಆಗಸ  ಸೇರಿತು…ಸವಿನೆನಪುಗಳನ್ನು ಬಿಟ್ಟು ಸಾಗಿದ ವಾಣಿ ಜಯರಾಂ

ಕಡಲು- ಮಲೆನಾಡ ನಡುವಣ ಆಡುಂಬೊಲ

ಕಡಲು- ಮಲೆನಾಡ ನಡುವಣ ಆಡುಂಬೊಲ

ಇಂದಿನಿಂದ ಏನೇನು? ಬದಲಾವಣೆ? ಇಲ್ಲಿದೆ ಕೆಲವೊಂದು ಮಾಹಿತಿ

ಇಂದಿನಿಂದ ಏನೇನು? ಬದಲಾವಣೆ? ಇಲ್ಲಿದೆ ಕೆಲವೊಂದು ಮಾಹಿತಿ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

tdy-4

ಭೂಕಂಪ: ಕಟ್ಟಡಗಳಡಿ ಸಿಲುಕಿ ಟರ್ಕಿಯ ಖ್ಯಾತ ಫುಟ್ಬಾಲ್‌ ಆಟಗಾರ ಮೃತ್ಯು

vote

ಕರಾವಳಿಯಲ್ಲಿ ಪಕ್ಷಗಳ ಸಮಾವೇಶ-ಯಾತ್ರೆಗಳ ಜಾತ್ರೆ

ನವಲಗುಂದ ಪಟ್ಟಣ ಅಭಿವೃದ್ಧಿಗೆ ಪುರಸಭೆ ಪಣ

ನವಲಗುಂದ ಪಟ್ಟಣ ಅಭಿವೃದ್ಧಿಗೆ ಪುರಸಭೆ ಪಣ

PArk

ವಿಶೇಷ ಚೇತನ ಮಕ್ಕಳಿಗೆ ಕದ್ರಿಯಲ್ಲಿ ಪ್ರತ್ಯೇಕ ಪಾರ್ಕ್‌..!

ponds

ಅವಿಭಜಿತ ಕುಂದಾಪುರ ತಾ.: 69 ಕೆರೆಗಳಿಗೆ ಮರುಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.