ಭಾರತದ ಆಶಾಕಿರಣ ಮೋದಿ


Team Udayavani, May 31, 2022, 6:25 AM IST

ಭಾರತದ ಆಶಾಕಿರಣ ಮೋದಿ

ಭಾರತ ಇಂದು ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿರುವ ದೇಶ. ಇದನ್ನು ಸಾಧ್ಯವಾಗಿಸಿದ್ದು ಎಲ್ಲರನ್ನು, ಎಲ್ಲವನ್ನೂ ಸರಿದೂಗಿಸಿಕೊಂಡು ಮುನ್ನಡೆಯಬಲ್ಲ ನಾಯಕತ್ವ. ಭಾರತದ ಜನರನ್ನು ಮುಂದೆ ಕರೆದೊಯ್ಯುವ ನಾಯಕ ಒಂದು ಬಲವಾದ, ನಿರ್ದಿಷ್ಟ ಗುರಿ ಹೊಂದಿರಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಲ್ಲಿ ಆ ದೃಷ್ಟಿ ಕೋನವಿದೆ. ದೇಶ ಹಿಂದೆಂದೂ ಕಂಡಿರದಿದ್ದ ವಿಶಿಷ್ಟ, ಅಪರೂಪದ ಜನನಾಯಕ ನರೇಂದ್ರ ಮೋದಿಯವರು. ಕಳೆದ ಎಂಟು ವರ್ಷಗಳಿಂದ ದೇಶವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ದೇಶದ ಜನರ ಆಶಾಕಿರಣವಾಗಿದ್ದಾರೆ.

ನೆರೆದೇಶಗಳ ಸ್ನೇಹ, ಸಮರ್ಥ ರಾಜತಾಂತ್ರಿಕತೆ, ಗುರಿ ಸಾಧನೆಯ ಆಡಳಿತ, ದೇಶದ ಸಂಸ್ಕೃ ತಿಯ ಪುನರುಜ್ಜೀವನ, ಸ್ವತ್ಛ ಭಾರತ, ಜನ್‌ಧನ್‌, ಆಯುಷ್ಮಾನ್‌ ಭಾರತ, ನಮಾಮಿ ಗಂಗಾ, ಬೇಟಿ ಪಡಾವೋ, ಬೇಟಿ ಬಚಾವೋ, ಸುಕನ್ಯಾ ಸಮೃದ್ಧಿ, ಡಿಬಿಟಿ, ಡಿಜಿಟಲ್‌ ಇಂಡಿಯಾ , ಉಜ್ವಲ್, ಉಡಾನ್‌, ಮೇಕ್‌ ಇನ್‌ ಇಂಡಿಯಾ, ಕಿಸಾನ್‌ ಸಮ್ಮಾನ್‌, ಆತ್ಮನಿರ್ಭರ ಭಾರತ, ನೂತನ ಶಿಕ್ಷಣ ನೀತಿ, ಜಲ್‌ ಜೀವನ್‌ ಮಿಷನ್‌ ಮುಂತಾದ ಯಶಸ್ವಿ ಯೋಜನೆಗಳಿಂದ ದೇಶಕ್ಕೊಂದು ಸ್ಪಷ್ಟ ಗುರಿ ಹಾಗೂ ಅದನ್ನು ಸಾಧಿಸುವ ಹಾದಿಯನ್ನು ತೋರಿದ್ದಾರೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ಪ್ರಯಾಸ್‌- ಎಂಬ ಮಂತ್ರದೊಂದಿಗೆ ಭಾರತವನ್ನು ಮತ್ತು ಭಾರತೀಯರನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸುತ್ತಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ..: ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನಮ್ಮ ಪ್ರಧಾನಿಗಳು ಮುಟ್ಟದ ಕ್ಷೇತ್ರವಿಲ್ಲ. ಬಡವರು, ರೈತರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಸೇರಿ  ದಂತೆ ಎಲ್ಲರ ಕ್ಷೇಮಾಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ, ರಾಷ್ಟ್ರೀಯ ಭದ್ರತೆ, ಆರ್ಥಿಕತೆ, ವಸತಿ, ವಿದೇಶೀ ನೇರ ಬಂಡವಾಳ, ಬಾಹ್ಯಾಕಾಶ ತಂತ್ರಜ್ಞಾನದ ವಾಣಿಜ್ಯೀಕರಣ, ಉದ್ಯಮ ಶೀಲತೆಗೆ ಒತ್ತು ನೀಡಿ ಅಪ್ರತಿಮ ಸಾಧನೆ ಮಾಡಲಾಗಿದೆ.

ಭ್ರಷ್ಟಾಚಾರ ನಿಯಂತ್ರಣ: ದೇಶ ಕಟ್ಟುವ ಕಾಯಕಕ್ಕೆ ತಮ್ಮನ್ನು ಅರ್ಪಿಸಿ ಕೊಂಡಿರುವ ಮೋದಿ, ಆಡಳಿತದಲ್ಲಿ ಪಾರದರ್ಶಕತೆ ತರುವ ಮೂಲಕ ದೇಶದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ. “ನ ಖಾವೂಂಗಾ, ನ ಖಾನೆ ದೂಂಗಾ’ ಎಂದು ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ.

ಕೋವಿಡ್‌ 19 ಸಾಂಕ್ರಾಮಿಕದ ನಿರ್ವಹಣೆ: ಪ್ರಪಂಚದ 2ನೇ ಅತೀ ಹೆಚ್ಚು ಜನಸಂಖ್ಯೆ ಇರುವ ಭಾರತ ದೇಶದಲ್ಲಿ ಕೋವಿಡ್‌ ನಿಯಂತ್ರಣ ದೊಡ್ಡ ಸವಾಲು. ಆದರೆ ಇದನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿ ಸುವಲ್ಲಿ ಪ್ರಧಾನಿ ಮೋದಿಯವರು ಸಕಾಲದಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಜನತೆಗೆ ಕೋವಿಡ್‌ನಿಂದ ರಕ್ಷಣೆ ಒದಗಿ  ಸಿತು. ಕೋವಿಡ್‌ ಸಂದರ್ಭದಲ್ಲಿ ಜೀವ ಹಾಗೂ ಜೀವನವನ್ನು ಸಂರಕ್ಷಿಸಿದ ಶ್ರೇಯಸ್ಸು ಮೋದಿಯವರಿಗೆ ಸಲ್ಲುತ್ತದೆ. ಸಂಕಷ್ಟದಲ್ಲಿದ್ದ ದೇಶದ ಜನತೆಗೆ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‌ ಘೋಷಿಸಿ ಜನರ ಕಷ್ಟಕ್ಕೆ ಜತೆಯಾಗಿದ್ದು ಜನರ ಮನಗಳಲ್ಲಿ ಅಚ್ಚಳಿಯದೇ ಉಳಿದಿದೆ. ಕೋವಿಡ್‌ ಸಾಂಕ್ರಾಮಿಕ ಜನರ ಜೀವನಕ್ಕೆ ಹಾಗೂ ಆರ್ಥಿಕತೆಯ ಮೇಲೆ ಪೆಟ್ಟು ನೀಡಿದರೂ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಮೂಲಕ ಪಿಡುಗಿನ ವಿರುದ್ಧ ಮೇಲುಗೈ ಸಾಧಿಸಲು ಶ್ರಮಿಸಿದರು.

ಪಿಪಿಇ ಕಿಟ್, ಸ್ಯಾನಿಟೈಸರ್‌ ತಯಾರಿಕೆಯಲ್ಲಿ ತೊಡಗಿ ಸ್ವಾವಲಂಬಿ ದೇಶವಾಗಿದೆ. ಕೊರೊನಾ ಸಂದರ್ಭದಲ್ಲಿ ರೈತರು ದಾಖಲೆ ಪ್ರಮಾಣದಲ್ಲಿ ಬೆಳೆ ಬೆಳೆದಿದ್ದನ್ನು ಮನಗಂಡ ಮೋದಿ ಸರಕಾರ ದಾಖಲೆ ಪ್ರಮಾಣದಲ್ಲಿ ರೈತರಿಂದ ಅವರ ಉತ್ಪನ್ನಗಳನ್ನು ಖರೀದಿಸಿದೆ. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.

ಲಸಿಕಾ ಕಾರ್ಯಕ್ರಮ: ಕೋವಿಡ್‌ ವಿರುದ್ಧ ನಮ್ಮನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳಲು ನಮಗಿರುವ ಏಕಮಾತ್ರ ಅಸ್ತ್ರ ಲಸಿಕೆ ಎನ್ನುವುದನ್ನು ಅರಿತ ಪ್ರಧಾನಿಗಳು ವಿಶ್ವದಲ್ಲಿಯೇ ಅತೀ ದೊಡ್ಡ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ನಮ್ಮ ನಡುವಿನ ಸಾಧಕರಿಗೆ ಪ್ರಶಸ್ತಿ: ನಮ್ಮ ನಡುವಿನ ಅಸಾಮಾನ್ಯ ಸಾಧಕರನ್ನು ಗುರುತಿಸಿ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವಂತೆ ಮಾಡಿದ್ದು ನಮ್ಮ ಪ್ರಧಾನಿಗಳು. ಅನೇಕ ಪ್ರತಿಭಾವಂತರು ಅಸಾಧಾರಣ ಕೆಲಸಗಳನ್ನು ಎಲೆ ಮರೆಯ ಕಾಯಿಯಂತೆ ಮಾಡುತ್ತಿದ್ದಾರೆ. ಹೆಚ್ಚಿನವರು ಹೊರ ಪ್ರಪಂಚಕ್ಕೆ ತಿಳಿಯುವುದೇ ಇಲ್ಲ ಎಂದು ಅರಿತುಕೊಂಡು ಸ್ಫೂರ್ತಿದಾಯಕ, ಅಸಾಮಾನ್ಯರನ್ನು ಗುರುತಿಸಿ ಅವರಿಗೆ ಸಮ್ಮಾ¾ನ ಮಾಡುವ ಮೂಲಕ ಭಾರತದ ಮೂಲೆ ಮೂಲೆಗಳಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿರುವ ಸಾಧಕರನ್ನು ಗುರುತಿಸುವ ಕೆಲಸ ಮಾಡಿದ್ದಾರೆ.

ನವೋದಯ: ಎಲ್ಲರನ್ನು ಒಳಗೊಳ್ಳುವ, ಯಾವುದೇ ತಾರತಮ್ಯವಿಲ್ಲದ ಸಮಸಮಾಜ ಕಟ್ಟುವ ನಿಟ್ಟಿನಲ್ಲಿ ಮೋದಿಯವರ ಆಶಯ- ಎಲ್ಲರೊಂದಿಗೆ ಎಲ್ಲರ ವಿಕಾಸ ಅವರ ಧ್ಯೇಯ ಮತ್ತು ಗುರಿ. ಈ ಗುರಿ ಸಾಧನೆಯ ಹಾದಿಯಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಧೃತಿಗೆಡದೆ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದಾರೆ. ಇದರ ಪರಿಣಾಮವಾಗಿ ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುವಂತಾಗಿದೆ. ಭಾರತದೀ ನೆಲದ ಮೇಲೆ ನವೋದಯವನ್ನು ತೆರೆದಿದೆ ಎಂದರೆ ಅತಿಶಯೋಕ್ತಿಯೇನಲ್ಲ.

ಅಂದಂದಿಗಾದನಿತು ಬುಡಕಟ್ಟಿ ಕಳೆ ತೆಗೆದು
ಚೆಂದಳಿರು ದಿನದಿನಮುಮೊಗೆಯೆ ನೀರೆರೆದು
ಸಂದಬಲದಿಂದ ಜಗದಶ್ವತ್ಥ ಸೇವೆಯಲಿ
ನಿಂದಿರುವುದಲೆ ಧರ್ಮ-ಮಂಕುತಿಮ್ಮ

ಡಿವಿಜಿಯವರು ಕಗ್ಗದಲ್ಲಿ ಹೇಳಿರುವಂತೆ ನಮ್ಮ ಸಾಮಾಜಿಕ ಜೀವನ ದಲ್ಲಿರುವ ಕಳೆಗಳನ್ನು ಪ್ರತಿನಿತ್ಯ ತೆಗೆದು ದಣಿವಿರದ ಜೀವನೋತ್ಸಾಹ ದಿಂದ, ಸತತ ಪರಿಶ್ರಮದಿಂದ ಮತ್ತು ಸಾಮಾಜಿಕ ಕಳಕಳಿಯಿಂದ ಭಾರತವನ್ನು ಶ್ರೀಮಂತಗೊಳಿ ಸುತ್ತಿದ್ದಾರೆ ನರೇಂದ್ರ ಮೋದಿ.

– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.