Qatar; ಶಾಂತಿದೂತನಾಗಿ ಜಗತ್ತಿನ ಮನಗೆದ್ದ ಕತಾರ್‌


Team Udayavani, Nov 27, 2023, 5:40 AM IST

1-sasdasd

ಕಳೆದ ನಾಲ್ಕೈದು ದಶಕಗಳಲ್ಲಿ ಜಗತ್ತು ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ. ಈ ಅವಧಿಯಲ್ಲಿ ಜಾಗತಿಕವಾಗಿ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿಯೂ ಗಮನಾರ್ಹ ಬೆಳವಣಿಗೆಗಳಾಗಿವೆ. ಹಲವು ರಾಷ್ಟ್ರಗಳು ಪಾರಮ್ಯ ಮೆರೆಯಲು ಪೈಪೋಟಿ ನಡೆಸುತ್ತಿದ್ದರೆ, ಮತ್ತೂಂದಿಷ್ಟು ರಾಷ್ಟ್ರಗಳಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹಗಳು, ಪ್ರಾದೇಶಿಕ ತಕರಾರುಗಳು, ಪ್ರತ್ಯೇಕತಾವಾದ, ಭಯೋತ್ಪಾದನೆಯಂತಹ ನಕಾರಾತ್ಮಕ ಬೆಳವಣಿಗೆಗಳು ಇವುಗಳ ಅಭಿವೃದ್ಧಿಗೆ ಬಲುದೊಡ್ಡ ತೊಡಕಾಗಿ ಪರಿಣಮಿಸಿದೆ. ಇವೆಲ್ಲವೂ ಮೇರೆ ಮೀರಿದಾಗ ಸಂಘರ್ಷ, ಯುದ್ಧದ ಪರಿಸ್ಥಿತಿ ಸೃಷ್ಟಿಯಾಗಿ ಇಡೀ ಜಗತ್ತನ್ನೇ ಅಶಾಂತಿ, ಆತಂಕದ ಮಡುವಿನಲ್ಲಿ ಮುಳುಗುವಂತೆ ಮಾಡುತ್ತಿವೆ. ಇಂಥ ಸಂದರ್ಭಗಳಲ್ಲೆಲ್ಲ ಶಾಂತಿ, ಸಂಧಾನದ ಮಾತುಗಳು ವಿಶ್ವದೆಲ್ಲೆಡೆ ಮಾರ್ದನಿಸುತ್ತವೆಯಾದರೂ ಈ ಪ್ರಕ್ರಿಯೆಯ ಮುಂದಾಳತ್ವ ವಹಿಸುವವರಾರು ಎಂಬ ಪ್ರಶ್ನೆ ವಿಶ್ವ ಸಮುದಾಯವನ್ನು ನಿರಂತರವಾಗಿ ಕಾಡುತ್ತಲೇ ಬಂದಿದೆ. ಪ್ರತಿಯೊಂದು ರಾಷ್ಟ್ರಗಳು ಕೂಡ ಸ್ವ ಹಿತಾಸಕ್ತಿ, ತನ್ನ ಸಾರ್ವಭೌಮತೆಯ ರಕ್ಷಣೆಯನ್ನು ಮುಂದೊಡ್ಡಿ ಸಂಘರ್ಷದಲ್ಲಿ ನಿರತವಾಗಿರುವ ಎರಡು ರಾಷ್ಟ್ರಗಳ ಪೈಕಿ ಒಂದರ ಬೆನ್ನಿಗೆ ನಿಂತೋ, ಇಲ್ಲವೇ ಇತ್ತಂಡಗಳಿಂದ ಅಂತರ ಕಾಯ್ದುಕೊಳ್ಳುವ ತಂತ್ರ ಅನುಸರಿಸುತ್ತವೆ. ಆದರೆ ಈ ಎರಡೂ ನಿಲುವುಗಳಿಗಿಂತ ಕೊಂಚ ಭಿನ್ನ ಮಾತ್ರವಲ್ಲದೆ ಒಂದಿಷ್ಟು ಅಚ್ಚರಿಯ ನಿಲುವನ್ನು ಮಧ್ಯ ಪ್ರಾಚ್ಯದ ಕೆಲವೊಂದು ರಾಷ್ಟ್ರಗಳು ತಾಳುತ್ತ ಬಂದಿವೆ. ಈಗ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಸಂಘರ್ಷದ ವಿಷಯದಲ್ಲೂ ಕತಾರ್‌ ಇದೇ ಧೋರಣೆ ತಳೆಯುವ ಮೂಲಕ ಜಾಗತಿಕ ಸಮುದಾಯದ ಮನಗೆದ್ದಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳ ಸಹಿತ ಜಗತ್ತಿನ ವಿವಿಧ ರಾಷ್ಟ್ರ ಗಳ ನಡುವೆ ರಾಜತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗಿ ಸಂಘರ್ಷದ ವಾತಾವರಣ ನಿರ್ಮಾಣವಾದಾಗ ಮಧ್ಯ ಪ್ರಾಚ್ಯದ ಕೆಲವು ದೇಶಗಳು ಮಧ್ಯಸ್ಥಿಕೆದಾರನ ಪಾತ್ರ ವಹಿಸಿ ಎರಡು ರಾಷ್ಟ್ರಗಳ ನಡುವೆ ಸಂಧಾನ ಮಾತುಕತೆ ನಡೆಸಲು ಆಸಕ್ತಿ ತೋರಿವೆ. ಈ ಪೈಕಿ ಈಜಿಪ್ಟ್, ಒಮಾನ್‌, ಕುವೈಟ್‌, ಕತಾರ್‌ ಪ್ರಮುಖವಾದವು. ಅದರಲ್ಲಿ ಕತಾರ್‌ ಪ್ರಾದೇಶಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮತ್ತು ಸಂಧಾನಕಾರನ ಪಾತ್ರವನ್ನು ನಿರ್ವಹಿಸುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಅದು ರಾಷ್ಟ್ರಗಳ ನಡುವೆ ಇರಲಿ ಅಥವಾ ಯಾವುದೇ ಭಯೋತ್ಪಾದಕ, ಪ್ರತ್ಯೇಕ ತಾವಾದ ಮತ್ತು ಜನಾಂಗೀಯ ಸಂಘಟನೆಗಳಿರಲಿ ಇವೆಲ್ಲವುಗಳೊಂದಿಗೆ ಸಂಪರ್ಕ ಹೊಂದುವ ಮೂಲಕ ಮಧ್ಯಸ್ಥಿಕೆದಾರನ ಪಾತ್ರವಹಿಸಿ ಉದ್ವಿಗ್ನತೆಯನ್ನು ಶಮನ ಗೊಳಿಸುವಲ್ಲಿ ಕತಾರ್‌ ಯಶಸ್ವಿಯಾಗಿದೆ. ಕತಾರ್‌ನ ಈ ಶಾಂತಿ ಮಂತ್ರ ಈಗ ಹಮಾಸ್‌ ಮತ್ತು ಇಸ್ರೇಲ್‌ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಿಸುವಲ್ಲಿಯೂ ಕಾರಣೀಭೂತವಾಗಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕತಾರ್‌ನ ಆಡಳಿತ ತನ್ನ ಸಂಧಾನ ಮಾತುಕತೆಗಳನ್ನು ಮುಂದುವರಿಸಿದೆ.

ದಶಕಗಳ ಇತಿಹಾಸ: ಕತಾರ್‌ನ ಈ ಮಧ್ಯಸ್ಥಿಕೆ, ಸಂಧಾನ ಪ್ರಯತ್ನಗಳು ಹೊಸದೇನಲ್ಲವಾಗಿದ್ದು, ಇದಕ್ಕೆ ದಶಕಗಳ ಇತಿಹಾಸವಿದೆ. 1990ರ ದಶಕದಿಂದೀಚೆಗೆ ಕತಾರ್‌ ರಾಜ ತಾಂತ್ರಿಕ ನೆಲೆಯಲ್ಲಿ ಸಂಧಾನಕಾರನ ಪಾತ್ರವನ್ನು ಯಶಸ್ವಿ ಯಾಗಿ ನಿರ್ವಹಿಸುತ್ತ ಬಂದಿದೆ. ಅಮೆರಿಕ- ತಾಲಿಬಾನ್‌ ಒಪ್ಪಂದ, 2008ರಲ್ಲಿ ಲೆಬನಾನ್‌, 2010ರಲ್ಲಿ ಯೆಮನ್‌, 2011ರಲ್ಲಿ ಡಾಫ‌ìರ್‌, 2012ರಲ್ಲಿ ಗಾಜಾ, 2020- 21ರಲ್ಲಿ ಅಮೆರಿಕ-ತಾಲಿಬಾನ್‌ ಬಿಕ್ಕಟ್ಟು ಇವುಗಳಲ್ಲಿ ಪ್ರಮುಖವಾದವು. ಇನ್ನು ಉಕ್ರೇನ್‌, ಸೂಡಾನ್‌, ಇರಾನ್‌, ಅಫ್ಘಾನಿ ಸ್ಥಾನದಲ್ಲೂ ಸಂಕಷ್ಟದ ಪರಿಸ್ಥಿತಿ ಎದುರಾದಾಗಲೆಲ್ಲ ಕತಾರ್‌ ತನ್ನ ಈ ರಾಜತಾಂತ್ರಿಕ ಸಂಧಾನ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದು ಬಹುತೇಕ ಪ್ರಯತ್ನಗಳು ಸಫ‌ ಲವಾಗಿವೆ. ಅಫ್ಘಾನಿ ಸ್ಥಾನದಲ್ಲಿನ ತಾಲಿಬಾನಿ ಉಗ್ರರು ಮತ್ತು ಗಾಜಾದಲ್ಲಿನ ಹಮಾಸ್‌ ಉಗ್ರ ಸಂಘಟನೆಯ ನಾಯಕರೊಂದಿಗೂ ನೇರ ಸಂಪರ್ಕವನ್ನು ಕತಾರ್‌ ಹೊಂದಿದೆ. ಇದು ಸಂಘ ರ್ಷದ ಸಂದರ್ಭದಲ್ಲೆಲ್ಲ ಸಂಧಾನ ಪ್ರಕ್ರಿಯೆ ನಡೆಸಲು ಕತಾರ್‌ಗೆ ಪೂರಕವಾಗಿ ಪರಿಣಮಿಸಿದೆ.

ಹಮಾಸ್‌ ಉಗ್ರ ಸಂಘಟನೆಯ ನಾಯಕರೊಂದಿಗೆ ಸಂಪರ್ಕ ಹೊಂದಿರುವ ಕತಾರ್‌, ದೋಹಾದಲ್ಲಿ ರಾಜಕೀ ಯ ಕಚೇರಿಯನ್ನು ತೆರೆಯಲು ಹಮಾಸ್‌ಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಕಾರಣದಿಂದಾಗಿ ಕತಾರ್‌ನ ರಾಜತಾಂ ತ್ರಿಕರು ಮತ್ತು ಸಂಸ್ಥೆಗಳಿಗೆ ಹಮಾಸ್‌ ಒತ್ತೆ ಇರಿಸಿಕೊಂ ಡಿರುವ ಇಸ್ರೇಲಿಯನ್ನರ ಹೆಸರುಗಳು ಮತ್ತು ಗುರುತು ಗಳನ್ನು ಕಲೆಹಾಕಲು ಸಾಧ್ಯವಾಗಿದೆ. ಇದು ಹಮಾಸ್‌ ಉಗ್ರರ ಒತ್ತೆಸೆರೆಯಿಂದ ಇಸ್ರೇಲಿಯನ್ನರ ಬಿಡುಗಡೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಸಾಧ್ಯವಾಗಿದೆ. ಇದೇ ವೇಳೆ ಇಸ್ರೇಲ್‌ನಲ್ಲಿ ಸೆರೆಯಲ್ಲಿರುವ ಪ್ಯಾಲೆಸ್ತೀನ್‌ ಕೈದಿಗಳನ್ನು ಬಿಡುಗಡೆ ಮಾಡಿಸುವಲ್ಲಿಯೂ ಕತಾರ್‌ನ ಈ ರಾಜತಾಂತ್ರಿಕ ಚಾಣಾಕ್ಷತನ ಕೆಲಸ ಮಾಡಿದೆ.

ಸದೃಢ ಆರ್ಥಿಕತೆ: ಕತಾರ್‌ನ ಈ ರಾಜತಾಂತ್ರಿಕ ಸಾಮ ರ್ಥ್ಯ ಮತ್ತು ದಕ್ಷತೆಯ ಬಗೆಗೆ ನಿಜಕ್ಕೂ ಪ್ರಶ್ನೆಗಳು ಮೂಡುವುದು ಸಹಜ. ಕತಾರ್‌ ಜಾಗತಿಕ ರಾಜತಾಂತ್ರಿಕ ಕೇಂದ್ರವಾಗಿ ಮತ್ತು ಮಧ್ಯಸ್ಥಿಕೆದಾರನಾಗಿ ಗುರುತಿ ಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿರುವುದು ಅಲ್ಲಿನ ರಾಜಕೀಯ ನೇತೃತ್ವಕ್ಕಿಂತಲೂ ಮುಖ್ಯವಾಗಿ ಅಲ್ಲಿನ ಸದೃಢ ಆರ್ಥಿಕತೆ. ಕತಾರ್‌ನ ರಾಜಕೀಯ ನಾಯಕತ್ವ ಈ ಹಿಂದಿನಿಂದಲೂ ದೇಶವನ್ನು ಆರ್ಥಿಕವಾಗಿ ಸಶಕ್ತ ಗೊಳಿಸಲು ಪಣತೊಟ್ಟು ಅದಕ್ಕೆ ತಕ್ಕಂತೆ ಕಾರ್ಯ ಯೋಜನೆಯನ್ನು ರೂಪಿಸುತ್ತಲೇ ಬಂದಿದೆ. ಸಂಪತ್ತಿನ ನಿರ್ವಹಣೆ, ಹೂಡಿಕೆ ಸಾಮರ್ಥ್ಯ ಹಾಗೂ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ದೇಶಗಳೊಂದಿಗೆ ಮಾತ್ರವಲ್ಲದೆ ಅಮೆರಿಕದಂತಹ ಬಲಾಡ್ಯ ರಾಷ್ಟ್ರಗಳೊಂದಿಗೆ ಕತಾರ್‌, ರಾಜಕೀಯ ಮತ್ತು ಆರ್ಥಿಕ ಸಹಭಾಗಿತ್ವ ಹೊಂದುವ ಮೂಲಕ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ.

ಕತಾರ್‌ನ ಈ ಮಧ್ಯಸ್ಥಿಕೆ ನೀತಿ ಅದರ ವಿದೇಶಾಂಗ ನೀತಿಯ ಪ್ರಮುಖ ಭಾಗವಾಗಿದೆ. ಸಂಧಾನಕಾರನ ಪಾತ್ರ ನಿರ್ವಹಿಸುವಾಗಲೆಲ್ಲ ಕತಾರ್‌, ತನ್ನ ಆಂತರಿಕ ಸಾಮರ್ಥ್ಯದ ಜತೆಜತೆಯಲ್ಲಿ ಬಾಹ್ಯ ಶಕ್ತಿಗಳನ್ನೂ ಬಳಸಿ ಕೊಂಡಿದೆ. ಇದಕ್ಕಾಗಿ ರಾಜತಾಂತ್ರಿಕ ಮತ್ತು ಗುಪ್ತಚರ ತರಬೇತಿಯ ಸಹಿತ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಭಾರೀ ಪ್ರಮಾಣದಲ್ಲಿ ಹಣವನ್ನೂ ವ್ಯಯಿಸಿದೆ. ಇವೆಲ್ಲದರಲ್ಲೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಯಾವುದೇ ಸಂಘರ್ಷ, ಬಿಕ್ಕಟ್ಟು ತಲೆದೋರಿದಾಗ ರಾಜತಾಂತ್ರಿಕ ಮತ್ತು ಸಂಧಾನ ಮಾರ್ಗದ ಮೂಲಕ ಶಾಂತಿಯುತ ಪರಿಹಾರ ಕಂಡು ಕೊಳ್ಳಲು ಗರಿಷ್ಠ ಆದ್ಯತೆಯನ್ನು ನೀಡುತ್ತ ಬಂದಿದೆ.

ಹೂಡಿಕೆಯಲ್ಲೂ ಮುಂದೆ: ಭೌಗೋಳಿಕವಾಗಿ ಅತೀ ಚಿಕ್ಕ ರಾಷ್ಟ್ರವಾಗಿರುವ ಕತಾರ್‌ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಆದರೆ ಕತಾರ್‌ ಈಗ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು. ವಿಶ್ವ ರಾಷ್ಟ್ರಗಳಿಗೆ ದ್ರವೀಕೃತ ಅನಿಲ ಪೂರೈಕೆಯಲ್ಲಿ ಮುಂಚೂಣಿ ಯಲ್ಲಿರುವ ಮತ್ತು ಅಧಿಕ ಪ್ರಮಾಣದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪವನ್ನು ಹೊಂದಿರುವ ವಿಶ್ವದ 3ನೇ ಅತೀ ದೊಡ್ಡ ರಾಷ್ಟ್ರ ಕತಾರ್‌. ತಲಾ ಆದಾಯದಲ್ಲೂ ವಿಶ್ವದಲ್ಲಿ ಆರನೇ ಸ್ಥಾನದಲ್ಲಿದ್ದರೆ, ಅರಬ್‌ ರಾಷ್ಟ್ರಗಳ ಪೈಕಿ ಅಗ್ರಸ್ಥಾನದಲ್ಲಿದೆ. ನೈಸರ್ಗಿಕ ಅನಿಲ ರಫ್ತಿನಲ್ಲಿ ಕತಾರ್‌ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಕತಾ ರ್‌ನ ಒಟ್ಟಾರೆ ರಫ್ತು ಆದಾಯದಲ್ಲಿ ಶೇ. 85ರಷ್ಟು ಹೈಡ್ರೋಕಾರ್ಬನ್‌ಗಳಿಂದ ಸಂಗ್ರಹವಾಗುತ್ತಿದೆ. ನೈಸ ರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮಾರಾ ಟದಿಂದ ಸಂಗ್ರಹಿಸಿದ ಮೊತ್ತವನ್ನು ಕತಾರ್‌, ಅಮೆರಿಕನ್‌ ಟ್ರೆಜರಿ ಬಿಲ್‌(ಟಿ -ಬಿಲ್‌)ಗಳಲ್ಲಿ ಹೂಡಿಕೆ ಮಾಡುತ್ತಿದೆ. ಇದರಿಂದಾಗಿ ಅಮೆರಿಕ ಮತ್ತು ಕತಾರ್‌ ಪರಸ್ಪರ ಅವಲಂ ಬಿತ ದೇಶಗಳಾಗಿ ಮಾರ್ಪಟ್ಟಿವೆ.

ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿರುವ ಕತಾರ್‌, ಆಹಾರ ಭದ್ರತೆಯ ನಿಟ್ಟಿನಲ್ಲಿ ದಾಪುಗಾಲು ಇರಿಸಿದೆ. ಇನ್ನು ಇರಾಕ್‌ನ ತೈಲ ಕೈಗಾರಿಕೆಯಲ್ಲಿ ಶೇ. 25ರಷ್ಟು ಹೂಡಿಕೆ ಮಾಡುವ ಮೂಲಕ ಪಾಶ್ಚಾತ್ಯ ದೇಶಗಳಿಗೆ ಸಡ್ಡು ಹೊಡೆದಿದೆ. ದಕ್ಷಿಣ ಇಂಗ್ಲೆಂಡ್‌ನ‌ಲ್ಲಿ ಕ್ಲೈಮೇಟ್‌ ಟೆಕ್‌ ಯುನಿಕಾರ್ನ್ಗಳ ಸ್ಥಾಪನೆಗಾಗಿ 4 ಬಿಲಿಯನ್‌ ಸ್ಟರ್ಲಿಂಗ್‌ ಪೌಂಡ್‌ಗಳಷ್ಟು ಹೂಡಿಕೆಯನ್ನು ಮಾಡಿದೆ. ಇದೇ ವೇಳೆ ಜಾಗತೀಕರಣದ ಪಾಲುದಾರ ರಾಷ್ಟ್ರವಾಗಿ ಜಾಗತಿಕ ಉತ್ಪಾದನ ಜಾಲ ಮತ್ತು ಪೂರೈಕೆ ಸರಪಳಿಯ ಪ್ರಮುಖ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಜಾಗತಿಕ ಎಲ್‌ಎನ್‌ಜಿ ಮಾರುಕಟ್ಟೆಯಲ್ಲಿ ಪ್ರಮುಖ ಪೂರೈಕೆದಾರ ರಾಷ್ಟ್ರವಾಗುವ ಗುರಿಯೊಂದಿಗೆ 2018ರಲ್ಲಿ ಒಪೆಕ್‌ನಿಂದ ಹೊರಬಂದು ಕ್ಷೇತ್ರದಲ್ಲಿ ಸ್ವಾವಲಂಬನೆಯ ದಿಸೆಯಲ್ಲಿ ಸಾಗಿದೆ.

ವಿರೋಧಿಗಳಿಗೂ ಶಾಂತಿ ಮಂತ್ರದ ಪಾಠ: ನೆರೆಯ ದೇಶಗಳಾದ ಸೌದಿ ಅರೇಬಿಯಾ ಮತ್ತು ಯುಎಇ, ಕತಾರ್‌ನ ವಿಷಯದಲ್ಲಿ ಪದೇಪದೆ ಮಧ್ಯಪ್ರವೇಶಿಸಲು ಪ್ರಯತ್ನಗಳನ್ನು ನಡೆಸುತ್ತ ಬಂದಿದೆಯಾದರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಕತಾರ್‌, ವಿಶ್ವದ ಎಲ್ಲ ರಾಷ್ಟ್ರ ಗಳೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದೆ. ಆದರೆ ಕತಾರ್‌ನ ಈ ನಡೆ 2017-21ರ ಅವಧಿಯಲ್ಲಿ ಸೌದಿ ಅರೇಬಿಯಾದ ಕೆಂಗಣ್ಣಿಗೆ ಗುರಿಯಾಗಿ ಕತಾರ್‌ ಮೇಲೆ ನಿರ್ಬಂಧ ಹೇರಿತ್ತು. ಕತಾರ್‌ ಭಯೋತ್ಪಾದಕ ಸಂಘಟನೆಗಳೊಂದಿಗೆ ಹೊಂದಿರುವ ನಂಟಿನ ಬಗೆಗೆ ಸೌದಿ, ಯುಎಇ ಪ್ರಬಲ ಆಕ್ಷೇಪವನ್ನು ವ್ಯಕ್ತಪಡಿಸುತ್ತಲೇ ಬಂದಿವೆ. ಆದರೆ ಈ ಎರಡು ರಾಷ್ಟ್ರಗಳ ಸಹಿತ ಅರಬ್‌ ಮತ್ತು ಮುಸ್ಲಿಂ ರಾಷ್ಟ್ರಗಳೊಂದಿಗಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆ ಬಾರದಂತೆ ಕತಾರ್‌ ಎಚ್ಚರಿಕೆಯ ಹೆಜ್ಜೆಯನ್ನು ಇರಿಸಿದೆ.

ಹರೀಶ್‌ ಕೆ.

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.