ಯಶಸ್ಸು ನಮ್ಮದಾಗ ಬೇಕಾದರೆ ಸ್ವಪ್ರಯತ್ನ ಮುಖ್ಯ


Team Udayavani, Nov 20, 2021, 6:05 AM IST

ಯಶಸ್ಸು ನಮ್ಮದಾಗ ಬೇಕಾದರೆ ಸ್ವಪ್ರಯತ್ನ ಮುಖ್ಯ

ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಯಶಸ್ಸಿಗಾಗಿ ಹಾತೊರೆಯುತ್ತಾರೆ. ಯಶಸ್ಸೆಂಬುದು ಹಣಕೊಟ್ಟು ಖರೀದಿಸುವಂಥದ್ದಲ್ಲ ಅಥವಾ ಯಾರೋ ನಮಗೆ ದಾನವಾಗಿ ನೀಡುವಂತದ್ದೂ ಅಲ್ಲ. ಯಶಸ್ಸಿನ ಸೂತ್ರವಿರುವುದು ಬರೀ ಸ್ವ ಪ್ರಯತ್ನದಲ್ಲಿ. ಸಾಧನೆಯ ಬಗೆಗಿನ ಕನಸುಗಳನ್ನು ನಾವು ಕಾಣುತ್ತೇವೆಯಾದರೂ ಅವು ಗಳನ್ನು ನನಸಾಗಿಸಲು ಪ್ರಯತ್ನವನ್ನೇ ಮಾಡುವುದಿಲ್ಲ. ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಯಾರು ಸಹಾಯ ಮಾಡಿಯಾರೆಂಬ ನಿರೀಕ್ಷೆಯಲ್ಲಿಯೇ ದಿನ ಕಳೆಯುತ್ತಿರುತ್ತೇವೆ. ಪುಸ್ತಕಗಳನ್ನು ಓದುವುದರಿಂದ, ಅನುಭವ ಇದೆ ಎಂದ ಮಾತ್ರಕ್ಕೆ ಯಶಸ್ಸು ದೊರಕುವುದಿಲ್ಲ. ಸಾಧಕರ ಸಾಧನೆಯ ಮಾರ್ಗಗಳು, ನಡೆದು ಬಂದ ರೀತಿಗಳು ನಮಗೆ ಪ್ರೇರಣೆ ಯಾಗಬೇಕು ಮಾತ್ರವಲ್ಲದೆ ಆವುಗಳ ಅನುಷ್ಠಾನವೂ ಕೂಡ.

ಮನೆಯಂಗಳದಲ್ಲಿ ಆಡುತ್ತಿರುವ ಮಗು ಕಾಲು ಜಾರಿ ಬೀಳುತ್ತದೆ. ಬಿದ್ದ ಕೂಡಲೇ ಅದು ತನ್ನ ಸುತ್ತಮುತ್ತಲೆಲ್ಲ ಒಮ್ಮೆ ಕಣ್ಣು ಹಾಯಿಸುತ್ತದೆ. ಅಲ್ಲಿ ಯಾರಾದರೂ ಇದ್ದರೆ ಅದು ಕೂಡಲೇ ಅಳಲು ಪ್ರಾರಂಭಿಸುತ್ತದೆ. ಅದೇ ಮಗು ಆ ಕ್ಷಣದಲ್ಲಿ ತನ್ನ ಸುತ್ತಮುತ್ತ ಯಾರೂ ಇಲ್ಲದಿದ್ದಾಗ ಒಮ್ಮೆ ಭಯಗೊಂಡರೂ ನಿಧಾನಕ್ಕೆ ಮೇಲೆದ್ದು ಮುನ್ನಡೆಯುತ್ತದೆ.

ಇದು ಪ್ರತಿಯೊಬ್ಬರಿಗೂ ಅನ್ವಯಿಸುವ ಮಾತು. ನಮಗೆ ಯಾರಾದರೂ ಸಹಾಯ ಮಾಡುವವರು ಇದ್ದಾಗ ನಾವು ಸ್ವಪ್ರಯತ್ನವನ್ನೇ ಮಾಡುವುದಿಲ್ಲ. ಮನಸ್ಸು ಮತ್ತು ನಮ್ಮ ಚಟುವಟಿಕೆಗಳು ನಿಷ್ಕ್ರಿಯವಾಗಿರುತ್ತವೆ. ಕಠಿನ ಪರಿಸ್ಥಿತಿಗಳಲ್ಲಿ ಸಿಕ್ಕಿ ಬಿದ್ದಾಗ, ಯಾರಿಂದಲೂ ನೆರವು ದೊರಕದಿದ್ದಾಗ ನಮ್ಮಲ್ಲಿರುವ ಪ್ರಯತ್ನಶೀಲ ಮನಸ್ಸು ಜಾಗೃತವಾಗುತ್ತದೆ. ಪ್ರತೀ ಕ್ಷಣ ಮೈ-ಮನಸ್ಸು ಚಟುವಟಿಕೆಗಳ ಗೂಡಾಗಿರುತ್ತದೆ.
ಕಠಿನ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕೇ ಸಿಗುತ್ತದೆ. ಪ್ರಯತ್ನವೇ ಮಾಡದೇ ಫ‌ಲಿತಾಂಶದೆಡೆ ಕಣ್ಣು ಹಾಯಿಸು ವುದು ಸರಿಯಲ್ಲ. ಯಶಸ್ಸು ನಮ್ಮದಾಗ ಬೇಕಾದರೆ ಸ್ವಪ್ರಯತ್ನವೂ ಅಷ್ಟೇ ಮುಖ್ಯ ವಾಗಿರುತ್ತದೆ. ಆತ್ಮವಿಶ್ವಾಸ ಹಾಗೂ ಸ್ವ-ಪ್ರಯತ್ನ ಯಶಸ್ಸಿನ ಗುಟ್ಟು ಎಂಬು ದನ್ನು ನಾವೆಲ್ಲರೂ ಮೊದಲು ಅರಿತು ಕೊಳ್ಳಬೇಕು. ಆದ್ದರಿಂದ ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು. ಒಂದರ್ಥದಲ್ಲಿ ತಾಳ್ಮೆಯು ನಮ್ಮ ಯಶಸ್ಸಿನ ಪರಿಪಾಠವನ್ನು ಸಹ ಗ್ರಹಿಸುತ್ತದೆ ಎನ್ನಬಹುದು.

ಇದನ್ನೂ ಓದಿ:ಬಡವರು, ದಲಿತರು, ರೈತರ ಬಗ್ಗೆ ಇಂದಿರಾಗಾಂಧಿ ಕಳಕಳಿ ಅಪಾರ

ಬಹುತೇಕ ಜನರು ಯಶಸ್ಸಿನ ಬಾಗಿಲಿನವರೆಗೆ ಬಂದು ಕೊನೇ ಕ್ಷಣದಲ್ಲಿ ತಮ್ಮ ಪ್ರಯತ್ನವನ್ನು ಕೈ ಚೆಲ್ಲಿ ಬಿಡುತ್ತಾರೆ. ಯಶಸ್ಸಿಗೆ ಕೊಂಚ ದೂರದಲ್ಲಿರುವಾಗ ವೈಫ‌ಲ್ಯಕ್ಕೆ ಹೆದರಿ ಪಲಾಯನ ಮಾಡ ಬೇಡಿ. ಯಶಸ್ಸಿನ ಪ್ರತಿಯೊಂದು ಕಥೆಯೂ ಸೋಲಿನ ಕಥೆಯೂ ಆಗಿರಬಹುದು. ಅದೇ ರೀತಿ ಸೋಲಿನ ಪ್ರತಿಯೊಂದು ಕಥೆಯೂ ದೊಡ್ಡ ಪ್ರಮಾಣದ ಯಶಸ್ಸಿಗೆ ಮೆಟ್ಟಿಲಾಗಬಹುದು. ನೀವು ಸೋಲಿನ ಪ್ರಮಾಣವನ್ನು ದ್ವಿಗುಣಗೊಳಿಸಿದಷ್ಟು ಯಶಸ್ಸಿಗೆ ಹತ್ತಿರವಾಗುತ್ತೀರಿ. ಹಾಗೆಂದು ಪ್ರಯತ್ನ ಪಡದೆ ಸೋಲಿನತ್ತ ಸಾಗಬೇಡಿ. ಯಶಸ್ಸಿಗೆ ಬೇಕಾದ ಅವಿರತ ಪ್ರಯತ್ನ ನಿಮ್ಮದಾಗಿರಲಿ.

ಯಶಸ್ಸು ಎಂಬ ಯಾತ್ರೆ ಬಂಡಿಯಲ್ಲಿ ಸಾಗುವ ಮುನ್ನ ಜೀವನದಲ್ಲಿ ಒಮ್ಮೆ ಯಾದರೂ ಅವಮಾನಕ್ಕೆ ಒಳಗಾಗಲೇ ಬೇಕು. ಏಕೆಂದರೆ ಅವಮಾನವನ್ನು ಮಾಡಿಸಿ ಕೊಳ್ಳದೆ ಸಮ್ಮಾನ ಮಾಡಿಸಿ ಕೊಂಡ ವರು ಈ ಜಗತ್ತಿನಲ್ಲಿ ಯಾರು ಇಲ್ಲ. ಅವಮಾನವಾದಾಗಲೇ ನಿಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ. ಆತ್ಮ ಸಾಕ್ಷಿಗೆ ನೋವಾದಾಗಲೇ ನಿಮ್ಮಲ್ಲಿ ಜವಾ ಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ಅವಮಾನ ವಾದಾಗಲೇ ಸಮ್ಮಾನ ಸಿಗುತ್ತದೆ. ಅವಮಾನವಾದಾಗಲೇ ಏನಾದರೂ ಒಂದನ್ನು ಸಾಧಿಸಬೇಕು ಎಂಬ ಕಿಚ್ಚು ಎದೆ ಯಲ್ಲಿ ಹೊತ್ತಿ ಕೊಳ್ಳುತ್ತದೆ. ಹಾಗಾಗಿ ಅವಮಾನ, ಅನುಮಾನ, ಸಮ್ಮಾನ ಈ 3 ಸೂತ್ರಗಳನ್ನು ಅನುಸರಿಸಿದಾಗಲೇ ಅಂತಿಮವಾಗಿ ಯಶಸ್ಸು ಕಾಣಲು ಸಾಧ್ಯ.

ಸತತವಾಗಿ ಪ್ರಯತ್ನಿಸಿದರೆ ಎಲ್ಲರಿಗೂ ಯಶಸ್ಸು ಲಭಿಸುತ್ತದೆ. ಹಲವಾರು ಸಾಧಕರು ಮತ್ತು ಮಹಾನ್‌ ವ್ಯಕ್ತಿಗಳು ಸಾಧನೆಯ ಶಿಖರವನ್ನು ತಲುಪಿದ್ದು ತಮ್ಮ ಸ್ವಪ್ರಯತ್ನ ದಿಂದಲೇ. ದೃಢವಾದ ಮನಸ್ಸು ಸ್ಪಷ್ಟ ಗುರಿ ತಿವಿಕ್ರಮನಂತಹ ಛಲವಿದ್ದರೆ ಯಶಸ್ಸು ಬಿಸಿಲ್ಗುದುರೆಯಲ್ಲ. ಜೀವನ ಸಾಗರದಲ್ಲಿ ಸ್ವ ಪ್ರಯತ್ನದ ಯಾನ ಸಾಗುತಿರಲಿ ಯಶಸ್ಸಿನ ದಿಗಂತದೆಡೆಗೆ.

-ಸೌಮ್ಯಾ, ಕಾರ್ಕಳ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.