ಬಿಜೆಪಿ ನಾಜೂಕಿಗೆ ಸಡ್ಡು ಹೊಡೆಯುತ್ತಾ ಕಾಂಗ್ರೆಸ್‌?

ಉತ್ತರಾಖಂಡ: ಕುತೂಹಲ ಕೆರಳಿಸಿದ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

Team Udayavani, Jan 22, 2022, 6:50 AM IST

ಬಿಜೆಪಿ ನಾಜೂಕಿಗೆ ಸಡ್ಡು ಹೊಡೆಯುತ್ತಾ ಕಾಂಗ್ರೆಸ್‌?

ಉತ್ತರಾಖಂಡ ಚುನಾವಣ ಅಖಾಡದಲ್ಲಿ ಕಣಕ್ಕಿಳಿಯಲಿರುವ ತನ್ನ ಹುರಿಯಾಳುಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಕಾಂಗ್ರೆಸ್‌ನಿಂದ ವಲಸೆ ಬಂದಿರುವ ಬಹುತೇಕರಿಗೆ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ನಿಂದ ಪಟ್ಟಿ ಬಿಡುಗಡೆಯಾಗಿಲ್ಲವಾದರೂ ಸೂಕ್ತ ಅಭ್ಯರ್ಥಿಗಳ ಹುಡುಕಾಟ ಮಾತ್ರ ಬಿರುಸಿನಿಂದ ಸಾಗಿದೆ. ಶುಕ್ರವಾರದಂದು ಕಾಂಗ್ರೆಸ್‌ ಕೇಂದ್ರೀಯ ಚುನಾವಣ ಸಮಿತಿ (ಸಿಇಸಿ) ಸಭೆಯೂ ಜರಗಿದೆ. ಇದರ ನಡುವೆಯೇ, ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ಮಾಜಿ ಸಚಿವ ಹರಾಕ್‌ ಸಿಂಗ್‌ ರಾವತ್‌, ಶುಕ್ರವಾರ ಕಾಂಗ್ರೆಸಿಗೆ ಸೇರ್ಪಡೆಗೊಂಡಿದ್ದಾರೆ. ಹಾಗಾಗಿ ಉತ್ತರಾಖಂಡ ಚುನಾವಣ ಕಣ ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಲೆಕ್ಕಾಚಾರವೇನು?
ಒಟ್ಟು 59 ವ್ಯಕ್ತಿಗಳ ಹೆಸರಿರುವ ಬಿಜೆಪಿ ಪಟ್ಟಿಯಲ್ಲಿ ಕಾಂಗ್ರೆಸ್‌ನಿಂದ ಇತ್ತೀಚೆಗೆ ಬಿಜೆಪಿಗೆ ವಲಸೆ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಚ್ಚರಿಯೆಂಬಂತೆ, ಸುಮಾರು 10 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಇವರಲ್ಲಿ ಮಾಜಿ ಸಿಎಂ ಭುವನ್‌ ಚಂದ್ರ ಖಂಡೂರಿಯವರ ಪುತ್ರಿ ರಿತು ಭೂಷಣ್‌ ಖಂಡೂರಿ ಕೂಡ ಒಬ್ಬರು. ಮೇಲ್ನೋಟಕ್ಕೆ ಇದು ವಲಸಿಗರಿಗೆ ಮಣೆ ಹಾಕಿದಂತೆ ಕಂಡರೂ ಇಲ್ಲಿ ಜಾತಿ ಆಧಾರಿತ ಸಮತೋಲನ ಹಾಗೂ ಖಚಿತವಾಗಿ ಗೆಲ್ಲುವ ಕುದುರೆಗಳನ್ನು ಕಣಕ್ಕಿಳಿಸುವ ಬಿಜೆಪಿ ಇರಾದೆ ಎದ್ದು ಕಾಣುತ್ತಿದೆ. ಉತ್ತರಾಖಂಡದಲ್ಲಿ ಬ್ರಾಹ್ಮಣ ಮತದಾರರ ಪ್ರಮಾಣ ಶೇ. 25ರಷ್ಟಿದ್ದು, ಠಾಕೂರ್‌ ಸಮುದಾಯದ ಪ್ರಮಾಣ ಶೇ. 35ರಷ್ಟಿದೆ. ಹಾಗಾಗಿ, ಮೊದಲ ಪಟ್ಟಿಯಲ್ಲಿ 15 ಬ್ರಾಹ್ಮಣರಿಗೆ ಹಾಗೂ 19 ಠಾಕೂರ್‌ ಅಭ್ಯರ್ಥಿಗಳಿಗೆ (ಸಿಎಂ ಪುಷ್ಕರ್‌ ಸಿಂಗ್‌ ಧಮಿ ಸೇರಿ) ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು, ಮೀಸಲಾತಿ ಕಡ್ಡಾಯವಿರುವ ಕ್ಷೇತ್ರಗಳಲ್ಲಿ 12 ಎಸ್‌ಸಿ, 2 ಎಸ್‌ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.

ಟಿಕೆಟ್‌ ವಂಚಿತ ಶಾಸಕರು
ರಘುನಾಥ್‌ ಚೌಹಾನ್‌ (ಉಪ ಸಭಾಪತಿ ಹಾಗೂ ಅಲ್ಮೋರಾ ಶಾಸಕ), ರಿತು ಭೂಷಣ್‌ ಖಂಡೂರಿ (ಯಮೆRàಶ್ವರ್‌ ಶಾಸಕಿ), ಮುನ್ನಿ ದೇವಿ (ಥಾರಾಲಿ), ಸುರೇಂದ್ರ ಸಿಂಗ್‌ ನೇಗಿ (ಕರ್ಣಪರಾಯಾಗ್‌), ಕುನ್ವಾರ್‌ ಪ್ರಣವ್‌ ಸಿಂಗ್‌ ಚಾಂಪಿಯನ್‌ (ಖಂಡೂರ್‌), ಮುಕೇಶ್‌ ಕೋಲಿ (ಪೌರಿ), ಮೀನಾ ಗಂಗೋಲಾ (ಗಂಗೋಲಿಹತ್‌), ಬಲವಂತ್‌ ಬೌರ್ಯಾಲ್‌ (ಕಾಪ್ಕೋಟ್‌), ಮಹೇಶ್‌ ನೇಗಿ (ದ್ವಾರ್ಹಾತ್‌), ಹರ್ಭಜನ್‌ ಸಿಂಗ್‌ ಚೀಮಾ (ಕಾಶೀಪುರ್‌).

ಬಿಜೆಪಿಯ ಹುಷಾರು ಹೆಜ್ಜೆ
ಬಿಜೆಪಿಯ ಮೊದಲ ಪಟ್ಟಿ ಒಂದೇ ಬಾಣದಲ್ಲಿ ಮೂರ್ನಾಲ್ಕು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ, 2016ರಲ್ಲಿ ಹರೀಶ್‌ ರಾವತ್‌ ಸರಕಾರದ ವಿರುದ್ಧ ಬಂಡೆದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಜತೆಗೆ ಜಾತಿ ಆಧಾರಿತ ಲೆಕ್ಕಾಚಾರದಲ್ಲಿಯೂ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಲಾಗಿದೆ. ಹತ್ತು ಹಾಲಿ ಶಾಸಕರಿಗೆ ಟಿಕೆಟ್‌ ನೀಡಿಲ್ಲದಿರುವುದು ಆಯಾ ಕ್ಷೇತ್ರಗಳಲ್ಲಿ ಅವರ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಗೆ ಅನುಗುಣವಾಗಿಯೇ ಕೈಗೊಳ್ಳಲಾಗಿರುವ ಸಹಜ ನಿರ್ಧಾರವೆನಿಸುತ್ತದೆ.

ಕಾಂಗ್ರೆಸ್‌ಗೆ ಬಲ
ಪ್ರಮುಖ ವಿಪಕ್ಷವಾದ ಕಾಂಗ್ರೆಸ್‌ ಸುಮ್ಮನೇ ಕೈಕಟ್ಟಿ ಕುಳಿತಿಲ್ಲ. ತನ್ನ ಹಳೆಯ ಹುಲಿಯಾದ ಹರಾಕ್‌ ಸಿಂಗ್‌ ರಾವತ್‌ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. 2016ರಲ್ಲಿ ಕಾಂಗ್ರೆಸನ್ನು ತೊರೆದು ಬಿಜೆಪಿ ಸೇರಿದ್ದ 10 ನಾಯಕರ ಪೈಕಿ ಹರಾಕ್‌ ಸಿಂಗ್‌ ಕೂಡ ಒಬ್ಬರು. ಈಗ ಅವರು ಪುನಃ ಮಾತೃಪಕ್ಷಕ್ಕೆ ಮರಳಿರುವುದು ಆ ಪಕ್ಷಕ್ಕೆ ಹೆಚ್ಚಿನ ಆತ್ಮವಿಶ್ವಾಸ ತಂದಿದೆ.

ಕಾಂಗ್ರೆಸ್‌ನಿಂದ ಏನು ನಿರೀಕ್ಷಿಸಬಹುದು?
ಹೀಗಾಗಿ ಕಾಂಗ್ರೆಸ್‌ನ ಮೇಲೆ ಈಗ ಒತ್ತಡ ಹೆಚ್ಚಾಗಿದೆ. ಆ ಪಕ್ಷ ಕೂಡ ಜಾತಿ ಆಧಾರಿತ ಲೆಕ್ಕಾಚಾರದಡಿ, ಬಿಜೆಪಿ ಹುರಿಯಾಳುಗಳಿಗೆ ಸಡ್ಡು ಹೊಡೆಯುವಂಥ ನಾಯಕರನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆಯಿದೆ. ಇದರ ನಡುವೆಯೇ ಬಿಜೆಪಿಯ ಮೊದಲ ಪಟ್ಟಿಯಲ್ಲಿ ಟಿಕೆಟ್‌ ವಂಚಿತರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್‌ ಗಾಳ ಬೀಸಬಹುದು.

ಟಾಪ್ ನ್ಯೂಸ್

vittla-1

ವಿಟ್ಲ: ರಸ್ತೆಗೆ ಬಿದ್ದ ವಿದ್ಯುತ್ ಕಂಬ: ಸಂಚಾರ ಅಸ್ತವ್ಯಸ್ತ

4horatti

ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ

3accident

ಕೊಪ್ಪಲಂಗಡಿ: ಚರಂಡಿಗೆ ಉರುಳಿದ ಪಿಕಪ್; ಇಬ್ಬರಿಗೆ ಗಾಯ

2rain

ನಾವು ಮುಳುಗುತ್ತಿದ್ದೇವೆಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

1theft

ತನ್ನ ಮನೆಯಲ್ಲೇ ಚಿನ್ನ ಕದ್ದು ನಕಲಿ ಒಡವೆ ಇಟ್ಟಿದ್ದ ಕಳ್ಳಿ!

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾಸಿಗೆಗಾಗಿ ಆನೆಯ ಕಿತ್ತಾಟ-ವಿಡಿಯೋ ವೈರಲ್‌

ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್‌

thumb 1

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ರಾಮ ಮಂದಿರ ಅಡಿಪಾಯ ಆಗಸ್ಟ್‌ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ

ರಾಮ ಮಂದಿರ ಅಡಿಪಾಯ ಆಗಸ್ಟ್‌ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ

suicide (2)

ಪತ್ನಿಗೆ ಸೀರೆ ಉಡಲು ಬರುವುದಿಲ್ಲ: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ !

1-aad

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ಜಿತೇಂದ್ರ ತ್ಯಾಗಿಗೆ ಜಾಮೀನು

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

cremation

ಶ್ಮಶಾನಕ್ಕೆ ಜಾಗ ಮೀಸಲು ಕಡ್ಡಾಯ: ಸುನಿಲ್‌ ಕುಮಾರ್

vittla-1

ವಿಟ್ಲ: ರಸ್ತೆಗೆ ಬಿದ್ದ ವಿದ್ಯುತ್ ಕಂಬ: ಸಂಚಾರ ಅಸ್ತವ್ಯಸ್ತ

4horatti

ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ

parking

ರಿಕ್ಷಾ, ವಾಹನ ನಿಲುಗಡೆಗೆ ಕಾನೂನುಬದ್ಧ ಸ್ಥಳ

3accident

ಕೊಪ್ಪಲಂಗಡಿ: ಚರಂಡಿಗೆ ಉರುಳಿದ ಪಿಕಪ್; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.