ಟೂಲ್‌ಕಿಟ್‌ ಎಂದರೇನು?

Team Udayavani, Feb 15, 2021, 1:29 AM IST

ಟೂಲ್‌ಕಿಟ್‌ ಎಂದರೇನು?

ಕಳೆದ ಒಂದು ವಾರದಿಂದ ಟೂಲ್‌ಕಿಟ್‌, ಟೂಲ್‌ಕಿಟ್‌ ಅಂತ ಓದ್ತಾ ಇದ್ದೇವೆ, ಹಾಗಂದ್ರೆ ಏನು?

ಸರಳವಾಗಿ ಹೇಳುವುದಾದರೆ, ಚಳವಳಿ ಅಥವಾ ಹೋರಾಟ ನಡೆಸುವವರಿಗೆ ಮಾರ್ಗ ದರ್ಶಿಸೂತ್ರ ಇದ್ದ ಹಾಗೆ. ಯಾವಾಗ ಮತ್ತು ಹೇಗೆ ಪ್ರತಿಭಟನೆ ಮಾಡ ಬೇಕು ಎಂದು ಮೊದಲೇ ರೂಪಿ ಸುವ ಒಂದು ಪುಟ್ಟ ಕೈಪಿಡಿ ಇದಾಗಿರುತ್ತದೆ.

ಹಿಂದೆಯೂ ಇತ್ತಾ? ಹೊಸತಾ?

ದಶಕಗಳಿಂದಲೂ ಇಂಥ ಟೂಲ್‌ಕಿಟ್‌ಗಳ ಪ್ರಸ್ತಾವ ಇದೆ. 2011ರಲ್ಲಿ  ವಾಲ್‌ಸ್ಟ್ರೀಟ್‌ ಪ್ರತಿಭಟನೆ, 2019 ರಲ್ಲಿ  ಹಾಂ ಕಾಂ ಗ್‌ ಪ್ರತಿಭಟನೆಗಳ ಲೆಲ್ಲ ಇಂಥ ಟೂಲ್‌ಕಿಟ್‌ ಬಳಸ ಲಾಗಿತ್ತು. ಈಗ ಸಾಮಾಜಿಕ ಜಾಲತಾಣ ಪ್ರಬಲ ವಾಗಿರುವುದ ರಿಂದ ಹೆಚ್ಚು ಜನಕ್ಕೆ ತಿಳಿಯುತ್ತಿದೆಯಷ್ಟೇ.

ಟೂಲ್‌ಕಿಟ್‌ನಲ್ಲೇನಿರುತ್ತದೆ?

ಪ್ರತಿಭಟನಕಾರರು ಏನು ಮಾಡಬೇಕು ಎನ್ನುವ ಗೈಡ್‌ ಇದು. ಉದಾ: ಹಾಂಕಾಂಗ್‌ನಲ್ಲಿ ಪ್ರತಿಭಟನೆ ಸಂದರ್ಭ ಮುಖವಾಡ, ಶಿರಸ್ತ್ರಾಣ ಬಳಸಿ ಎಂದು ಇಂಥ ಟೂಲ್‌ಕಿಟ್‌ನಲ್ಲಿ ಸೂಚಿಸಲಾಗಿತ್ತು. ಭಾರತದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ಸಂ ದರ್ಭ ಟ್ವಿಟರ್‌ನ್ನು ಸಮರ್ಪಕವಾಗಿ ಬಳಸಿ ಕೊಳ್ಳಿ ಎಂದು ಟೂಲ್‌ಕಿಟ್‌ ಸಲಹೆ ನೀಡಿತ್ತು.

ಈಗ ಹುಟ್ಟಿಕೊಂಡಿರುವ ಗ್ರೇಟಾ ಥನ್‌ಬರ್ಗ್‌ ಟೂಲ್‌ಕಿಟ್‌ ಕತೆ ಏನು?

ಪರಿಸರ ಹೋರಾಟಗಾರ್ತಿ, 18ರ ಹರೆ ಯದ ಗ್ರೇಟಾ ತಮ್ಮ ಟ್ವಿಟರ್‌ ಖಾತೆಯಲ್ಲಿ  ಇಂಥದ್ದೊಂದು ಟೂಲ್‌ಕಿಟ್‌ನ್ನು ಶೇರ್‌ ಮಾಡಿದ್ದರು; ಆಮೇಲೆ ಅದನ್ನು ಡಿಲೀಟ್‌ ಮಾಡಿದ್ದರು. ಅದು ಭಾರತದಲ್ಲಿ ಈಗ ನಡೆ ಯುತ್ತಿರುವ ರೈತರ ಪ್ರತಿಭಟನೆ ಕುರಿತಾದ ಮಾರ್ಗದರ್ಶಿ ಸೂತ್ರ ಎಂದು ಹೇಳಲಾಗಿದೆ. ಅದರಲ್ಲಿ ರೈತರ ಪ್ರತಿಭಟನೆ ಯಾವಾಗ ಮತ್ತು ಹೇಗೆ ನಡೆಸಬೇಕೆಂಬ ಮಾಹಿತಿಗಳಿ ದ್ದವು. ಉದಾ: ಫೆ. 4, 5ರಂದು ಟ್ವಿಟರ್‌ ಮೂ ಲಕ ಅಭಿಯಾನ ನಡೆಸಬೇಕು; ಅದಾನಿ, ಅಂಬಾನಿ ವಿರುದ್ಧ ಸಿಡಿದೇಳಬೇಕು; ಫೆ. 13 ಮತ್ತು 14 ರಂದು ಸ್ಥಳೀಯ ಮಟ್ಟದಲ್ಲಿ ಪ್ರತಿ ಭಟನೆ ನಡೆಸಬೇಕು ಎಂಬ ಮಾಹಿತಿಗಳಿ ದ್ದವು. ವಿವಿಧ ವೆಬ್‌ಸೈಟ್‌ಗಳ ಲಿಂಕ್‌ಗಳಿದ್ದವು.

ಈಗ ಪ್ರಚಲಿತದಲ್ಲಿರುವ ಟೂಲ್‌ಕಿಟ್‌ ಯಾಕೆ ಇಷ್ಟೊ.ಂದು ಪ್ರಚಾರ ಪಡೆದಿದೆ?

ಇದರಲ್ಲೇ ಇರುವುದು ಆಸಕ್ತಿಕಾರಕ ವಿಚಾರ. ಇದರಲ್ಲಿ ಉಲ್ಲೇಖ ವಾದ ಹಾಗೆ ಯೇ ಪ್ರತಿಭಟನೆಗಳು ನಡೆ ಯುತ್ತಿವೆ ಎಂದು ಪೊಲೀಸರು ಹೇಳುತ್ತಾರೆ. ಜ.26 ರಂದು ದಿಲ್ಲಿ ಯಲ್ಲಿ ನಡೆದ ಕೆಂಪುಕೋಟೆ ಮುತ್ತಿಗೆ ಸಹ ಇದರಲ್ಲಿ ಉಲ್ಲೇಖ ಗೊಂಡಿದ್ದು, ಪೂರ್ವ ಯೋಜಿತವಾಗಿದೆ. ಇದು ಅಂತರ ರಾ ಷ್ಟ್ರೀಯ ಮಟ್ಟದ ಸಂಚು ಎನ್ನುವುದು ಇದ ರಲ್ಲೇ ರೂಪಿತವಾಗಿದೆ ಎನ್ನುವುದು ಸರಕಾ ರದ ವಾದ. ಇದರ ಹಿಂದೆ ದೇಶವಿರೋಧಿ ಸಂಚಿದೆ. ಇದಕ್ಕೆ ಪೂರಕವಾಗಿ ಗ್ರೇಟ್‌ ಥನ್‌ಬರ್ಗ್‌ ಹಾಗೂ ಪಾಪ್‌ ಗಾಯಕಿ ರಿಹನ್ನಾ ಟ್ವೀಟ್‌ ಮಾಡಿದ್ದು ಇದೆಲ್ಲವನ್ನೂ ನಿರೂಪಿ ಸುತ್ತದೆ ಎಂದು ಸರಕಾರ ಹೇಳಿದೆ.

ಅದ್ಸರಿ, ಈಗ ಬಂಧಿತವಾಗಿರುವ ಬೆಂಗಳೂರಿನ ಹುಡುಗಿ ಪಾತ್ರ ಏನು?

ಈಗ ಬಂಧಿತಳಾಗಿರುವ ದಿಶಾ ರವಿ ಎಂಬಾಕೆ ಫ್ರೈಡೇ ಫಾರ್‌ ಫ್ಯೂಚರ್‌ ಎಂಬ ಸಂಘಟನೆಯ ಸಂಸ್ಥಾಪಕಿಯಾಗಿದ್ದು, ಈ ಟೂಲ್‌ಕಿಟ್‌ನ್ನು ಎಡಿಟ್‌ ಮಾಡುತ್ತಿದ್ದಳು ಎನ್ನಲಾಗಿದೆ. ಹಾಗೆಯೇ ಇವಳಿಗೆ ಖಲಿಸ್ಥಾನ ಉಗ್ರರ ನಂಟು ಇತ್ತೆನ್ನುವುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ.

ಟಾಪ್ ನ್ಯೂಸ್

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.