Udayavni Special

ಕನಕರೆಂಬ ಹರಿಭಕ್ತಿ ವೈಶಿಷ್ಟ್ಯ ವಿಶ್ಲೇಷಕ

Team Udayavani, Nov 15, 2019, 5:15 AM IST

ff-45

ದಾಸ ಸಾಹಿತ್ಯದಲ್ಲಿ ಹೊಸ ಭಕ್ತಿ ಪರಂಪರೆಯೊಂದನ್ನು ಸೃಷ್ಟಿಸುವಲ್ಲಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ. ಕನಕದಾಸರು ಜಾತಿ ಧರ್ಮಗಳ ಸಂಕೋಲೆಗಳನ್ನು ತೊರೆದು ಸಮಾಜಕ್ಕೆ ದಾರ್ಶನಿಕನಾದುದು ಅವರ ಜೀವನದ ಒಂದು ಭಾಗ ಮಾತ್ರ, ಹರಿಭಕ್ತಿಸಾರದ ಮೂಲಕ ಭಕ್ತಿಯ ಎಲ್ಲೆಗಳನ್ನು ಸಮಾಜಕ್ಕೆ ಪರಿಚಯಿಸಿದ್ದು, ಭಕ್ತಿಯೆಂಬ ಮುಕ್ತಿ ಮಾರ್ಗವನ್ನು ಸಾರಿ ಹೇಳಿದ್ದು ಅವರ ಜೀವನದ ಇಂದಿಗೂ ಜನಪ್ರಿಯವಾಗದ ಇನ್ನೊಂದು ಸ್ಥಿತಿ. ಅಲೌಕಿಕ ಜೀವನಕ್ಕೆ ಕಾಲಿಟ್ಟ ದಾಸರು, ತಮ್ಮ 108 ಗದ್ಯಗಳ ಹರಿಭಕ್ತಿ ಸಾರದಲ್ಲಿ ಮುಕ್ತಿಯೆಂಬ ಲೋಕಕೆ ಜ್ಞಾನವೆಂಬುದು ನೈಜ ಮಾರ್ಗವೆಂಬುದನ್ನು ತಿಳಿಸಿದ್ದು ಮಾತ್ರವಲ್ಲ, ಹಿಂದಿನ ಜನ್ಮ ಮತ್ತು ಮುಂದಿನ ಜನ್ಮಗಳೆಂಬ ವಿಮರ್ಶೆಯೊಡನೆ, ಸಮಸ್ತ ಸಂಕುಲವನ್ನು ದೀನರನ್ನಾಗಿ ಮತ್ತು ಹರಿಯನ್ನು ದಾನಿಯನ್ನಾಗಿ ಹೇಳಿರುವ ಬಗೆಯಂತೂ ಉಲ್ಲೇಖನೀಯ.

ಭೋಗ ಭಾಗ್ಯವ ಬಯಸಿ ಮುಕ್ತಿಯ ನೀಗಿ ನಿಮ್ಮನು ಭಜಿಸಲರಿಯದಯೋಗಿಗಳ ಮಾತೇನು ರಕ್ಷಿಸು ನಮ್ಮನನವರತ || 17 ||
ಏನು ಮಾಡಿದರೇನು ಮುಕ್ತಿ ಜ್ಞಾನವಿಲ್ಲದೊಡಿಲ್ಲ ಭಕ್ತಿಗೆ ನೀನೆ
ಕಾರಣನಾಗಿ ರಕ್ಷಿಸು ನಮ್ಮ ನಮ್ಮನನವರತ || 67 ||
ಒಬ್ಬ ದಾರ್ಶನಿಕ, ಭಕ್ತಿ ಪರಂಪರೆಯ ಕವಿ ತನ್ನ ಅಸ್ತಿತ್ವದ ಐದುನೂರು ವರ್ಷಗಳ ಆನಂತರವೂ ಸತತವಾಗಿ ನಮ್ಮ ಸಾಮಾಜಿಕ ಬದುಕನ್ನು ಕೆದಕುತ್ತಲೇ ಪ್ರಸ್ತುತವಾಗುತ್ತಿರುವುದು, ಜತೆ ಜತೆಗೆ ಸಮಾಜವನ್ನು ಗಹನವಾದ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಭಕ್ತಿ ಚಿಂತನೆಗೆ ಒಳಪಡುವಂತೆ ಮಾಡುತ್ತಿರುವುದು ಸೋಜಿ ಗದ ವಿಷಯ. ಮೊದಲನೆಯದಾಗಿ, ಹುಟ್ಟಿಗಂಟಿ ಬಂದ ಜಾತಿಯನ್ನು ತಳ್ಳಿ ಅದರ ವಿರುದ್ಧವಾಗಿ ಈಜಿದ ಕನಕದಾಸರನ್ನು ಯಾವುದೇ ಜಾತಿಗೆ ಸೀಮಿತಗೊಳಿಸುವುದು ಅಷ್ಟು ಸಮಂಜಸವಲ್ಲ. ಕನಕದಾಸರು ಇಂದು ಕೇವಲ ದಾಸಶ್ರೇಷ್ಠರಾಗಿ ಮಾತ್ರವಲ್ಲ, ಮಹಾನ್‌ ಮಾನವತಾವಾದಿ ಯಾಗಿ ಜನ ಮಾನಸದಲ್ಲಿ ನಿಂತಿದ್ದಾರೆ.

ಎರಡನೆಯದಾಗಿ, ಕೀರ್ತನಕಾರರಾದ ಅವರು, ಅದೇ ಸಂಪ್ರದಾಯದ ಇತರರಂತೆ ಕೇವಲ ಮಾಧ್ವಭಕ್ತಿ ಹಾಗೂ ಸಿದ್ಧಾಂತಗಳಿಗೆ ಕಟ್ಟು ಬೀಳದೆ, ಒಂದು ಉದಾರವಾದಿ ಧಾರ್ಮಿಕ ನಿಲುವನ್ನು ಪ್ರಕಟಿಸಿದ್ದು ಪ್ರಶಂಸನೀಯ. ತಾನು ಹುಟ್ಟಿನಲ್ಲಿ ಕುರುಬನೆಂಬ ಬಗ್ಗೆ ಯಾವುದೇ ಕೀಳರಿಮೆ ಇಲ್ಲದೆ, ತಮ್ಮ ಭಕ್ತಿಯ ನಿಲುವನ್ನು ಹರಿಗೆ ಸಾರುತ್ತಾ ಸತುಲಗಳಿಗೆ ದೇವನೊಲಿವನೆಂಬ ಮಾನವ ನಿರ್ಮಿತ ತಪ್ಪು ಸಿದ್ಧಾಂತಗಳನ್ನು ತಲೆಕೆಳಗೆ ಮಾಡಿ “ದೇವನಿಗೆಲ್ಲವೂ ಸತುಲಗಳೆ’ ಎಂದು ತೋರಿಸಿದವರು ಭಕ್ತ ಕನಕದಾಸರು. ಕನಕದಾಸರ ಸಾಹಿತ್ಯದಲ್ಲಿ ಬದುಕಿನ ಹಸನನ್ನು ಅರಸುತ್ತಾ ಬೆಳೆಯುವ ಸಂಘರ್ಷಮಯ ಜೀವಂತ ತುಡಿತವಿದೆ. ಈ ಹಸನನ್ನು ಹೊಸ ಹೊಸ ವಿನ್ಯಾಸದ ಅನ್ವೇಷಣೆಗೆ ಒಳಪಡಿಸಿಕೊಂಡು ಉಗಾಭೋಗ, ಮುಂಡಿಗೆ ಮತ್ತು ಕೀರ್ತನೆಗಳ ಮೂಲಕ ಕೊಂಡೊಯ್ಯುವ ಪರಿ ಇದೆಯಲ್ಲ ಅದು ಇಂದಿನ ದಿನಮಾನಗಳಲ್ಲಿ ತಲ್ಲಣಗಳ ಹುಡುಕಾಟಕ್ಕೆ ಹಾತೊರೆದ ಸಮಾಜದ ಮುಂದೆ ಬೃಹದಾಕಾರದ ತಿರುವಾಗಿ ತೆರೆದುಕೊಳ್ಳಬಲ್ಲದು. ಇದುವೇ 16ನೇಯ ಶತಮಾನದ ಒಬ್ಬ ಸಂತ ಕವಿಯ ಜೀವನ ದರ್ಶನ ಮತ್ತು ಕಾವ್ಯ ಸಂದೇಶ… ಮತ, ಧರ್ಮ, ಕಾಲ ಸೀಮೆಗಳನ್ನು ಮೀರಿ ಇಂದಿಗೂ ಬಹು ಪ್ರಸ್ತುತವಾಗುತ್ತಿರುವ ಬಗೆ.

– ಎಂ.ಡಿ ಉಮೇಶ್‌, ಮಳವಳ್ಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದಲ್ಲಿ ಭೀಕರ ಮಳೆ, ಪ್ರವಾಹ ಭೀತಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ರಾಜ್ಯದಲ್ಲಿ ಭೀಕರ ಮಳೆ, ಪ್ರವಾಹ ಭೀತಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಂಭಿರ ಗಾಯ

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಂಭಿರ ಗಾಯ

ದಾವಣಗೆರೆ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಸೇರಿ ಆರು ಮಂದಿ ಸಾವು

ದಾವಣಗೆರೆ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಸೇರಿ ಆರು ಮಂದಿ ಸಾವು

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಲುಧಿಯಾನಾ ನಗರಕ್ಕೆ ಕಾಡಿದ ಆತ್ಮಹತ್ಯೆ ಭೂತ

ಲುಧಿಯಾನಾ ನಗರಕ್ಕೆ ಕಾಡಿದ ಆತ್ಮಹತ್ಯೆ ಭೂತ

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುರು ಬಸವಣ್ಣನವರು ತೋರಿದ ದಾರಿಯಲ್ಲಿ…

ಗುರು ಬಸವಣ್ಣನವರು ತೋರಿದ ದಾರಿಯಲ್ಲಿ…

sanatana

ಸನಾತನ , ಶ್ರೀಮಂತ ಕೊಂಕಣಿ ಭಾಷೆ – ಸಾಹಿತ್ಯ – ಸಂಸ್ಕೃತಿ

mk-34

ಪುಣ್ಯ ಪರ್ವದಿನ ಸಂಕ್ರಮಣ

j-17

ಕೆ.ಕೆ.ಪೈ ಮತ್ತು ಪರ್ಯಾಯದ ಪಳಮೆ

n-40

ಉತ್ತಮರಾಗೋಣ, ಉಪಕಾರಿಗಳಾಗೋಣ…

MUST WATCH

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mysteryಹೊಸ ಸೇರ್ಪಡೆ

ರಾಜ್ಯದಲ್ಲಿ ಭೀಕರ ಮಳೆ, ಪ್ರವಾಹ ಭೀತಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ರಾಜ್ಯದಲ್ಲಿ ಭೀಕರ ಮಳೆ, ಪ್ರವಾಹ ಭೀತಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಂಭಿರ ಗಾಯ

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಂಭಿರ ಗಾಯ

ದಾವಣಗೆರೆ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಸೇರಿ ಆರು ಮಂದಿ ಸಾವು

ದಾವಣಗೆರೆ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಸೇರಿ ಆರು ಮಂದಿ ಸಾವು

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.