• ಸನಾತನ , ಶ್ರೀಮಂತ ಕೊಂಕಣಿ ಭಾಷೆ – ಸಾಹಿತ್ಯ – ಸಂಸ್ಕೃತಿ

  ಕೊಂಕಣಿ ಭಾಷೆ, ಸಾಹಿತ್ಯ , ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಕೊಂಕಣಿ ಅಕಾಡೆಮಿಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ನಿಮಿತ್ತ ಕೊಂಕಣಿ ಅಕಾಡೆಮಿಯ ಕಾರ್ಯಚಟುವಟಿಕೆಗಳು ಮತ್ತು ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಿದು….

 • ಪುಣ್ಯ ಪರ್ವದಿನ ಸಂಕ್ರಮಣ

  ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಜಗದ ಚರಾಚರ ಆಗು- ಹೋಗುಗಳಿಗೆ ಸೂರ್ಯನೇ ಕಾರಣ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ತನ್ನ ಪಥ ಬದಲಿಸಿ, ವಸಂತಕಾಲ ಸಮೀಪಿಸುವ ಕಾಲವಾದ್ದರಿಂದ ಪ್ರಕೃತಿಯಲ್ಲಿ ವಿಶೇಷ ಚೈತನ್ಯ, ಸೌಂದರ್ಯ ತುಂಬುವ ಕಾಲ. ಆದ್ದರಿಂದ ಸಂಕ್ರಾಂತಿಗೆ…

 • ಕೆ.ಕೆ.ಪೈ ಮತ್ತು ಪರ್ಯಾಯದ ಪಳಮೆ

  ಕೆ.ಕೆ. ಪೈ ಹೇಳುತ್ತಿದ್ದ ಹಾಗೆ ಉಡುಪಿ ಪರ್ಯಾಯ ಎಲ್ಲರಿಗೂ ಅವಕಾಶಗಳನ್ನೊದಗಿಸುವ ನಾಡಹಬ್ಬ. ಪರ್ಯಾಯವು ಕೇವಲ ಸಂಭ್ರಮಿಸುವ ಅವಕಾಶವನ್ನು ಮಾತ್ರ ಒದಗಿಸುವುದಿಲ್ಲ. ಪರ್ಯಾಯ ಕಾಲದ ವ್ಯಾಪಾರ ವ್ಯವಹಾರಗಳ ವಿಸ್ತರಣೆಯಿಂದ ಉಡುಪಿಯ ಆರ್ಥಿಕತೆಗೆ ಪುಷ್ಟಿ ದೊರೆಯುತ್ತದೆ. ಕೆ.ಕೆ. ಪೈಯವರು ನಮ್ಮನ್ನಗಲಿ ಇಂದಿಗೆ…

 • ಉತ್ತಮರಾಗೋಣ, ಉಪಕಾರಿಗಳಾಗೋಣ…

  ಉತ್ತಮನಾಗು-ಉಪಕಾರಿಯಾಗು ಎಂದೇ ಬದುಕಿದ ಸ್ವಾಮಿ ವಿವೇಕಾನಂದರ ಜೀವನ ಸಂದೇಶವು ನಮ್ಮ ಮಕ್ಕಳ ಮನಸುಗಳನ್ನು ಚಿರಂತನವಾಗಿ ಪ್ರೇರೇಪಿಸಬೇಕಾದಲ್ಲಿ ಗುರುವಿನ ಸ್ಥಾನದಲ್ಲಿ ನಿಂತ ಶಿಕ್ಷಕರ ಜವಾಬ್ದಾರಿ ದೊಡ್ಡದಿದೆ ಆತ್ಮೀಯ ಶಿಕ್ಷಕರೇ, ಕುವೆಂಪುರವರು ತಮ್ಮ “ಸ್ವಾಮಿ ವಿವೇಕಾನಂದ’ ಕೃತಿಯಲ್ಲಿ ಅಮೆರಿಕ ದೇಶದಲ್ಲಿದ್ದ ಸಂದರ್ಭದಲ್ಲಿ…

 • ಸಾಂಸ್ಕೃತಿಕ ಹರಿಕಾರ ಶ್ರೀವಿಶ್ವೇಶತೀರ್ಥರು

  ಉಡುಪಿ ಕರ್ನಾಟಕದ ಸಾಂಸ್ಕೃತಿಕ ನಗರವೆಂದೇ ಪ್ರಸಿದ್ಧಿ. ಹಾಗಾಗುವಲ್ಲಿ ಉಡುಪಿ ಶ್ರೀಕೃಷ್ಣ ಮಠ ಮತ್ತು ಅಷ್ಟ ಮಠಗಳ ಕೊಡುಗೆ ಗಮನಾರ್ಹ. ಯತಿಶ್ರೇಷ್ಠರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈ ಸಾಂಸ್ಕೃತಿಕ ಕಲಾಕಾರ್ಯ ಕ್ರಮಗಳ ಹರಿಕಾರ. ಕಲೆ, ಸಂಸ್ಕೃತಿ ಕುರಿತ ಅವರ ಪ್ರೀತಿ…

 • ಪೇಜಾವರ ಶ್ರೀ ಮೂಲಕ ವಿಧಿ ಕೊಟ್ಟ ಕರೆ

  ಡಿ. 29ರಂದು ಇಹಲೋಕದ ಯಾತ್ರೆ ಮುಗಿಸುವ ಮುನ್ನ, ಅಂದರೆ ಡಿ. 19ರಂದು ಪೇಜಾವರ ಶ್ರೀಗಳು ಒಂದೇ ದಿನ ತೀವ್ರ ಜ್ವರದಲ್ಲಿ ಸುಮಾರು 150 ಕಿ.ಮೀ. ಪ್ರಯಾಣ, ಮೂರು ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಕೊನೆಯ ಕಾರ್ಯಕ್ರಮ ನಡೆದದ್ದು ಅವರೇ ನಿರ್ಮಿಸಿದ…

 • ಸೂರ್ಯ-ಚಂದ್ರ ಗ್ರಹಣವೆಂಬ ಖಗೋಳ ಶಿಕ್ಷಣ

  ಗಗನವೇ ಅಸದೃಶ. ಅನಂತತೆ, ನಿಗೂಢತೆಯೇ ಅದಕ್ಕೆ ಭೂಷಣ. ಎಂದ ಮೇಲೆ ಸೂರ್ಯಗ್ರಹಣ, ಚಂದ್ರಗ್ರಹಣಕ್ಕೂ ಮಿಗಿಲಾಗಿ ಸೂರ್ಯ, ಚಂದ್ರರೇ ನಮಗೆ ಅಚ್ಚರಿಯೆನ್ನಿಸಬೇಕಿದೆ. ನೆನಪಿಡೋಣ, ಗ್ರಹಣವೆಂದರೆ ಯಾರು ಯಾರನ್ನೂ ನುಂಗುವುದಿಲ್ಲ. ಮುಖ್ಯವಾಗಿ, ಅಂಧಶ್ರದ್ಧೆ ನಮ್ಮನ್ನು ನುಂಗಬಾರದಷ್ಟೆ! “ಸೂರ್ಯನಿಗೆ ಚಂದ್ರ ಅಡ್ಡವಾದರೆ ಸೂರ್ಯಗ್ರಹಣ….

 • ಕನಕರೆಂಬ ಹರಿಭಕ್ತಿ ವೈಶಿಷ್ಟ್ಯ ವಿಶ್ಲೇಷಕ

  ದಾಸ ಸಾಹಿತ್ಯದಲ್ಲಿ ಹೊಸ ಭಕ್ತಿ ಪರಂಪರೆಯೊಂದನ್ನು ಸೃಷ್ಟಿಸುವಲ್ಲಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ. ಕನಕದಾಸರು ಜಾತಿ ಧರ್ಮಗಳ ಸಂಕೋಲೆಗಳನ್ನು ತೊರೆದು ಸಮಾಜಕ್ಕೆ ದಾರ್ಶನಿಕನಾದುದು ಅವರ ಜೀವನದ ಒಂದು ಭಾಗ ಮಾತ್ರ, ಹರಿಭಕ್ತಿಸಾರದ…

 • ವಿಸ್ಮಯಗಳ ತೆರೆದಿಡುವ ತಾರಾಲಯಗಳು

  ಅಮೆರಿಕದ ರಾಸಾಯನ ತಂತ್ರಜ್ಞ ಮತ್ತು ಶ್ರೀಮಂತ ಉದ್ಯಮಿ ಜಾನ್‌ ಮೋಟಿÉ ಮೋರ್‌ಹೆಡ್‌ ಹೆಸರಾಂತ ಖಗೋಳ ವಿಜ್ಞಾನಿ ಹಾರ್ಲೋ ಶಾರ್ಪ್‌ಲಿ ಅವರನ್ನು ಭೇಟಿ ಮಾಡುತ್ತಾರೆ. ಮೋರ್‌ಹೆಡ್‌ಗೆ ತಮ್ಮಲ್ಲಿರುವ ಒಂದಷ್ಟು ಹಣದ ಸೂಕ್ತ ವಿನಿಯೋಗಕ್ಕೆ ಸಲಹೆ ಬೇಕಾಗಿತ್ತು. “”ಖಗೋಳ ವಿಜ್ಞಾನ ಚಟುವಟಿಕೆಗಳಿಗೆ…

 • ಕನ್ನಡದ ತೇರು: ಚಿಗುರಿಸೀತೇ ಹಳ್ಳಿಯ ಬೇರು?

  ಕನ್ನಡ ಪರಿಸರ ಎಂದಾಗ ಕೇವಲ ಕನ್ನಡ ಮಾತಾಡುವ ಒಂದು ವಾತಾವರಣ ಇರುವ ಜಾಗ ಎಂದು ಗ್ರಹಿಸುವುದೇ ದೊಡ್ಡ ತಪ್ಪಾಗುತ್ತದೆ. ಕನ್ನಡ ಪರಿಸರ ಭೌತಿಕವಾದ, ಆರ್ಥಿಕವಾದ, ಸಾಂಸ್ಕೃತಿಕವಾದ ಮತ್ತು ಈ ಎಲ್ಲದರ ಹಿಂದಿನ ಉಪಶಾಖೆಗಳನ್ನು ಒಳಗೊಂಡ ಒಂದು ಅಂತಃಪ್ರಜ್ಞೆ. ನಾವು…

 • ಮೆಸೇಜ್‌ ಮಹಾಪೂರದ ಐವತ್ತು ವರ್ಷ!

  ನಾವು ಕಳಿಸುವ ತನಕ ಬೇರೆ ಯಾರೂ ಅಂತರಜಾಲದಲ್ಲಿ ಸಂದೇಶಗಳನ್ನೇ ಕಳಿಸುತ್ತಿರಲಿಲ್ಲವೇ?ಖಂಡಿತಾ ಕಳಿಸುತ್ತಿದ್ದರು. ನಿನ್ನೆ ಮೊನ್ನೆಯ ಮಾತೆಲ್ಲ ಏಕೆ, ಇವತ್ತಿಗೆ ಐವತ್ತು ವರ್ಷಗಳ ಹಿಂದೆಯೇ ಅಂತರಜಾಲದ ಮೂಲಕ ಸಂದೇಶವೊಂದನ್ನು ಕಳಿಸಲಾಗಿತ್ತು! ಒಂದು ಕಾಲವಿತ್ತು, ಆಗ ಮೆಸೇಜ್‌ ಅಂದರೆ ನಮಗೆ ಗೊತ್ತಿದ್ದದ್ದು…

 • ಔಷಧೀಯ ಗುಣದ ಸ್ವಾತಿ ಮಳೆ

  “ಸ್ವಾತಿ ಮುತ್ತಿನ ಮಳೆ ಹನಿಯೆ| ಮೆಲ್ಲ ಮೆಲ್ಲನೆ ಧರೆಗಿಳಿಯೆ||…’ ಸಿನೇಮಾ ಹಾಡು ಈಗಲೂ ಗುನುಗುನಿಸುತ್ತಿರಬಹುದು, ಕೆ(ಹ)ಲವರ ಮನದಲ್ಲಿಯಾದರೂ… ಅ. 24ರ ಸಂಜೆಯಿಂದ ಸ್ವಾತಿ ನಕ್ಷತ್ರದ ಮಳೆ ಆರಂಭವಾಗಿದೆ. ನ. 6ರ ವರೆಗೆ ಈ ಮಳೆಯ ಕಾಲಾವಧಿ. ಸ್ವಾತಿ ನಕ್ಷತ್ರದ…

 • ನೊಬೆಲ್‌ ಪ್ರಶಸ್ತಿಗೂ ಗುಡ್‌ ಇನಫ್

  ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ ಕುಳಿತುಕೊಳ್ಳಲೇ? ನಗುವಿನ ಅಲೆ ಇನ್ನೊಮ್ಮೆ ಫೋನ್‌ ಮುಖಾಂತರವೂ ಹರಡಿತು. ರಸಾಯನ ಶಾಸ್ತ್ರದಲ್ಲಿ…

 • ಮಾನಸಿಕ ಆರೋಗ್ಯವೂ, ಆತ್ಮಹತ್ಯೆಯೂ…

  ಸಾಕು ಸಾಕಪ್ಪ ಬದುಕಿದ್ದು ಎನ್ನುವ ಇರಾದೆ ಜೀವನದಲ್ಲಿ ಎಲ್ಲರಿಗೂ ಒಮ್ಮೊಮ್ಮೆ ಇದ್ದಿದ್ದೆ. ಅದು ಬ್ರಾಂತಿಯೂ ಅಲ್ಲ, ದೋಷವೂ ಅಲ್ಲ. ಎರಗಿರುವ ಸಂಕಷ್ಟದಿಂದ ಹೊರಬರಲಾದೆಂಬ ತಕ್ಷಣದ ಮನಸ್ಥಿತಿಯಷ್ಟೆ. ಸಾವಧಾನ, ಹಿರಿಯರ ಮಾರ್ಗದರ್ಶನ ಅಂಥ ಗಳಿಗೆಯನ್ನು ದಾಟಲು ದಿವ್ಯ ಮದ್ದು. ಪ್ರತೀ…

 • ಬದುಕಿನ ಮುಸ್ಸಂಜೆಯಲ್ಲಿ ಮುದುಡದಿರಲಿ ಮನಸ್ಸು

  ಹಿರಿಯ ಜೀವಿಗಳೆಡೆಗೆ ತಾತ್ಸಾರ ಸರ್ವಥಾಸಲ್ಲ. ವೃದ್ಧರನ್ನು ಪ್ರೀತಿ- ಗೌರವಗಳಿಂದ ಕಾಣುವುದು ಹಾಗೂ ಅವರು ಸದಾ ಚಟುವಟಿಕೆಯಿಂದ ಇರುವಂತೆ ನೋಡಿ ಕೊಳ್ಳುವುದು, ಅವರ ಬೇಕು-ಬೇಡಗಳಿಗೆ ಕಿವಿಯಾಗುವುದು, ಅವರ ಅನುಭವದ ಮಾತುಗಳನ್ನು ಪಾಲಿಸುವುದು ಕಿರಿಯ ಪೀಳಿಗೆಯ ಕರ್ತವ್ಯವಾಗಿದೆ. ವೃದ್ಧಾಪ್ಯ ಮನುಷ್ಯನ ಜೀವನದ ಅಂತಿಮ…

 • ಮಾನವೀಯತೆಯ ಸಾಕಾರ ಮೂರ್ತಿ

  ಪಂಡಿತ್‌ ದೀನ ದಯಾಳ್‌ ಅವ ರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಒಬ್ಬ ಮಹಾನ್‌ ವ್ಯಕ್ತಿಯಾಗಿದ್ದರು. ಹೆಸರಿಗೆ ತಕ್ಕಂತೆ ಯೇ ಅವರ ಚಿಂತನೆಯೂ ಇತ್ತು. ವ್ಯಕ್ತಿ ಮತ್ತು ಸಮಷ್ಟಿಗಳ ಮನೋಭಾವದಲ್ಲಿ ಸಾಮರಸ್ಯ ಉಂಟಾದಾಗ ಸುಖೀ ಸಮಾಜ, ಸುಖೀ ರಾಷ್ಟ್ರ, ತನ್ಮೂಲಕ ಸುಖೀ…

 • ಕುಶಲಕರ್ಮಿಗಳ ದಿನವಾಗಬೇಕಾದ ವಿಶ್ವಕರ್ಮ ಜಯಂತಿ

  ಇದೇ ಕುಶಲಕರ್ಮಿಗಳ ದಿನ, ಕುಶಲ ಕಾರ್ಮಿಕರ ದಿನ, ಅಷ್ಟೇ ಏಕೆ ವಿಶ್ವದ ಎಲ್ಲ ಕಾರ್ಮಿಕರ ದಿನ ಆಗಬೇಕು. ಹೊರಗಿನಿಂದ ಎರವಲಾಗಿ ಬಂದ ಮೇ 1ರಂದು ಆಚರಿಸುವ ಕಾರ್ಮಿಕರ ದಿನ ಭಾರತೀಯರಿಗೆಷ್ಟು ಔಚಿತ್ಯಪೂರ್ಣ? ಇಂದು ವಿಶ್ವಕರ್ಮ ದಿನ. ವಿಶ್ವಕರ್ಮನು ಪಂಚಬ್ರಹ್ಮರ…

 • ಶೋಷಿತರ ಬೆಳಕಾಗಿ ಉದಯಿಸಿದ ಮಹಾಪುರುಷ

  ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಉದಿಸಿದ ಹಲವಾರು ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಒಬ್ಬರು. ಸಮಾಜದಲ್ಲಿ ಆಳವಾಗಿ ಬೇರೂರಿರುವ ಯಾವುದೇ ಅನಿಷ್ಟಗಳನ್ನು ತೊಡೆದು ಹಾಕುವುದು ಅಷ್ಟು ಸುಲಭವಲ್ಲ. ಒಬ್ಬ ಶೋಷಣೆಗೆ ಒಳಗಾದ ವ್ಯಕ್ತಿ ಮತ್ತು…

 • ಸೂಪರ್‌ಸ್ಟಾರ್‌ ಸಿಂಗರ್‌ ಆದ ಭಿಕ್ಷುಕಿ!

  ಪಶ್ಚಿಮ ಬಂಗಾಳದ ರಾನಾಘಾಟ್‌ ರೈಲ್ವೇ ಸ್ಟೇಶನ್‌ನ ಪ್ಲಾಟ್‌ಫಾರಂಗಳಲ್ಲಿ ಹಾಡುತ್ತಿದ್ದ ಈಕೆ ಇಂದು ಕೋಟ್ಯಂತರ ಮಂದಿಯ ಮೊಬೈಲುಗಳಲ್ಲಿ ಗುನುಗುತ್ತಿದ್ದಾರೆ. ಅಷ್ಟೇ ಅಲ್ಲ ಈಕೆಯಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿದ ಸಂಗೀತ ನಿರ್ದೇಶಕ ಹಿಮೇಶ್‌ ರೇಷಮಿಯಾ ಕರೆದೊಯ್ದು ತಮ್ಮ ಸ್ಟುಡಿಯೋದಲ್ಲಿ ಹಾಡಿಸಿ ತಮ್ಮ…

 • ಮೌಲ್ಯಾಧಾರಿತ ರಾಜಕಾರಣದ ಧ್ರು‌ತಾರೆ

  ಇಂದು ಮಾಜಿ ಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಅವರ 94ನೇ ಜನ್ಮದಿನ ತನ್ನಿಮಿತ್ತ ಈ ಲೇಖನ 80ರ ದಶಕದಲ್ಲಿ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿದ್ದ ಮುತ್ಸದ್ದಿ ನಾಯಕ, ಮಾಜಿ ಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಅವರು ಪ್ರತಿಪಾದಿಸಿದ್ದ ಹಾಗೂ ಪಾಲಿಸಿಕೊಂಡು ಬಂದಿದ್ದ…

ಹೊಸ ಸೇರ್ಪಡೆ