ನಾನ್ಸೆನ್ಸ್ ಏಜಿನ ಭರ್ಜರಿ ಸಾಹಸ!

Team Udayavani, Dec 2, 2019, 7:13 PM IST

ಸುರೇಶ್ ಎಂ ಗಿಣಿ ನಿರ್ದೇಶನದ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಡಿಸೆಂಬರ್ 6ನೇ ತಾರೀಕಿನಂದು ತೆರೆಗಾಣುತ್ತಿದೆ. ಯಾವ ಸದ್ದು ಗದ್ದಲವೂ ಇಲ್ಲದೆ ಕೆಲಸ ಕಾರ್ಯ ಮುಗಿಸಿಕೊಂಡಿದ್ದ ಈ ಸಿನಿಮಾ ಪ್ರೇಕ್ಷಕರ ನಡುವೆ ಚರ್ಚೆ ಹುಟ್ಟು ಹಾಕಿದ್ದೇ ತನ್ನ ವಿಶೇಷವಾದ ಕಂಟೆಂಟಿನ ಸುಳಿವುಗಳ ಮೂಲಕ. ಈಗಂತೂ ಇದು ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಆರಂಭ ಕಾಲದಲ್ಲಿ ಈ ಸಿನಿಮಾದ ಕಥೆಯ ಬಗ್ಗೆ ಪ್ರೇಕ್ಷಕರು ಯಾವ್ಯಾವ ಕಲ್ಪನೆಗಳನ್ನಿಟ್ಟುಕೊಂಡಿದ್ದರೋ ಅದಕ್ಕೆ ಮಿಗಿಲಾದ ಕಥನದೊಂದಿಗೆ ಇದು ಪ್ರೇಕ್ಷಕರನ್ನು ಮುಖಾಮುಖಿಯಾಗ ಹೊರಟಿದೆ.

ಇದು ಲೋಕೇಶ್ ನಿರ್ಮಾಣ ಮಾಡಿರುವ ಚಿತ್ರ. ಅವರ ಪುತ್ರ ಮನುಷ್ ಇಲ್ಲಿ ನಾಯಕನಾಗಿ ನಟಿಸಿದ್ದಾರೆ. ಇದು ಹತ್ತೊಂಬತ್ತರ ಹುಡುಗನ ಸುತ್ತ ಸುತ್ತುವ ಕಥೆಯನ್ನೊಳಗೊಂಡಿರೋದರಿಂದ ಆ ಪಾತ್ರ ಸಹಜವಾಗಿ ಮೂಡಿ ಬರಲಿ ಅನ್ನೋ ಕಾರಣದಿಂದಲೇ ಮನುಷ್‌ನನ್ನು ಆಯ್ಕೆ ಮಾಡಿಕೊಳ್ಳಲಾಗದೆಯಂತೆ. ಅಷ್ಟಕ್ಕೂ ಇದು ಸಲೀಸಾದ ಪಾತ್ರವೇನಲ್ಲ. ಅದಕ್ಕೆಂದೇ ನಟನೆ, ಫೈಟಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಮನುಷ್ ತರಬೇತಿ ಪಡೆದುಕೊಂಡಿದ್ದಾರೆ. ವಿಶೇಷವಾಗಿ ಇಲ್ಲಿ ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳಿರೋದರಿಂದ ಅದು ಹೊಸಾ ಹುಡುಗ ಮನುಷ್ ಪಾಲಿಗೆ ಸವಾಲಾಗಿತ್ತಂತೆ.

ಆದರೆ ಮೊದಲ ಪ್ರಯತ್ನದಲ್ಲಿಯೇ ಅಂಥಾ ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳನ್ನು ಈತ ನಿರ್ವಹಿಸಿರುವ ರೀತಿ ಕಂಡು ಚಿತ್ರತಂಡ ಖುಷಿಗೊಂಡಿದೆ. ಮನುಷ್ ಸಾಹಸ ಸನ್ನಿವೇಶಗಳನ್ನು ಹೇಗೆ ನಿಭಾಯಿಸಿದ್ದಾರೆಂಬುದು ಟ್ರೇಲರ್‌ನಲ್ಲಿ ಸ್ಪಷ್ಟವಾಗಿಯೇ ಕಾಣಿಸಿದೆ. ಅದಕ್ಕೆ ವ್ಯಾಪಕ ಮೆಚ್ಚುಗೆಗಳೂ ಕೇಳಿ ಬರುತ್ತಿವೆ. ಅಂತೂ 19 ಏಜ್ ಈಸ್ ನಾನ್ಸೆನ್ಸ್ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಸಾಹಸವೂ ಒಂದಾಗಿ ಸೇರಿಕೊಂಡಿದೆ. ಈ ಮೂಲಕ ಫ್ಯಾಮಿಲಿ ಪ್ರೇಕ್ಷಕರೊಂದಿಗೆ ಮಾಸ್ ಆಡಿಯನ್ಸ್ಗೂ ಈ ಸಿನಿಮಾ ಇಷ್ಟವಾಗಲಿದೆ ಎಂಬ ನಂಬಿಕೆ ಚಿತ್ರ ತಂಡದಲ್ಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ