Udayavni Special

ಅಭಿನಂದನ್‌ ಆಗ್ತಾರಾ ದರ್ಶನ್‌?

ಪುಲ್ವಾಮಾ ಘಟನೆ ಕುರಿತ ಸಿನ್ಮಾ ಮಾಡ್ತಾರಂತೆ ಮುನಿರತ್ನ

Team Udayavani, Feb 23, 2020, 7:05 AM IST

darshan

ದರ್ಶನ್‌ ಈಗ “ಗಂಡುಗಲಿ ಮದಕರಿನಾಯಕ’ ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ “ಕುರುಕ್ಷೇತ್ರ’ ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ. ಅದೇ ವೇದಿಕೆಯಲ್ಲಿ ಮುನಿರತ್ನ ಮತ್ತೂಂದು ಬಿಗ್‌ ಬಜೆಟ್‌ ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. ಅದು ಮೇಜರ್‌ ಅಭಿನಂದನ್‌ ವರ್ಧಮಾನ್‌ ಅವರ ಜೀವನ ಆಧರಿಸಿದ ಚಿತ್ರ ಮಾಡಲು ಮುನಿರತ್ನ ಉತ್ಸಾಹದಲ್ಲಿದ್ದಾರೆ. ಆ ಚಿತ್ರದಲ್ಲಿ ದರ್ಶನ್‌ ಅವರು ಅಭಿನಂದನ್‌ ಪಾತ್ರ ನಿರ್ವಹಿಲಿದ್ದಾರಂತೆ!

ಹೌದು, “ಕುರುಕ್ಷೇತ್ರ’ ಚಿತ್ರದ ಶತದಿನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂಬರೀಷ್‌ ಪುತ್ರ ಅಭಿಷೇಕ್‌ ಅವರು ವೇದಿಕೆಯಲ್ಲಿ ತಮ್ಮೊಳಗಿನ ಆಸೆಯೊಂದನ್ನು ಹೊರಹಾಕಿದರು. ಆ ಆಸೆ, “ದರ್ಶನ್‌ ಜೊತೆ ತಾವೊಂದು ಸಿನಿಮಾ ಮಾಡಬೇಕು’ ಎಂಬುದೇ ಆ ಆಸೆ. ಅಭಿಷೇಕ್‌ ಮಾತಿಗೆ ಪ್ರತಿಕ್ರಿಯಿಸಿದ ಮುನಿರತ್ನ, “ಅಭಿಷೇಕ್‌ ಅವರ ಕೋರಿಕೆಯನ್ನು ಖಂಡಿತ ಈಡೇರಿಸುತ್ತೇನೆ. ಇದೇ ವರ್ಷದಲ್ಲಿ ಚಿತ್ರವೊಂದನ್ನು ಪ್ರಾರಂಭಿಸುತ್ತೇನೆ. ದರ್ಶನ್‌ ಜೊತೆ ಈಗಷ್ಟೇ ಮಾತಾಡಿದ್ದೇನೆ. ಅವರು ಎಲ್ಲ ಬಗೆಯ ಪಾತ್ರಗಳನ್ನೂ ಮಾಡಿದ್ದಾರೆ.

ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರನ್ನು ಒಬ್ಬ ಮೇಜರ್‌ ಪಾತ್ರದಲ್ಲಿ ನೋಡಬೇಕು ಎಂಬುದು ನನ್ನ ಆಸೆ ಕೂಡ. ಯುದ್ಧ ಭೂಮಿಯಲ್ಲಿ ಒಬ್ಬ ಸೈನಿಕನಾಗಿ ಅವರನ್ನು ನೋಡಬೇಕು ಎನಿಸುತ್ತಿದೆ. ಆ ಸೈನಿಕನ ಪಾತ್ರ ಯಾವುದು ಎಂದರೆ, ಕಳೆದ ವರ್ಷ ಪಾಕ್‌ ಉಗ್ರರ ಪುಲ್ವಾಮಾ ದಾಳಿಗೆ ತಕ್ಕ ಉತ್ತರ ನೀಡಿದ ಮೇಜರ್‌ ಅಭಿನಂದನ್‌ ಪಾತ್ರ. ದರ್ಶನ್‌ ಜೊತೆ ಅಭಿಷೇಕ್‌ ಕೂಡ ಇರುತ್ತಾರೆ’ ಎನ್ನುವ ಮೂಲಕ ನಿರ್ಮಾಪಕ ಮುನಿರತ್ನ ಹೀಗೊಂದು ಬ್ರೇಕಿಂಗ್‌ ನ್ಯೂಸ್‌ ಕೊಟ್ಟಿದ್ದಾರೆ.

ದರ್ಶನ್‌ ಮೌನ!: ವೇದಿಕೆಯಲ್ಲಿ ಮುನಿರತ್ನ ಅವರು ಈ ವಿಷಯ ಪ್ರಕಟಿಸಿದ ನಂತರ, ಮಾತಿಗಿಳಿದ ದರ್ಶನ್‌, ಮುನಿರತ್ನ ಅವರು ಪ್ರಕಟಿಸಿದ ಮೇಜರ್‌ ಅಭಿನಂದನ್‌ ಚಿತ್ರದ ಬಗ್ಗೆ ಮಾತನಾಡುತ್ತಾರೆ ಎಂಬ ಕಲ್ಪನೆ ಎಲ್ಲರಲ್ಲೂ ಇತ್ತು. ಆದರೆ, ಆ ಚಿತ್ರದ ಬಗ್ಗೆ ದರ್ಶನ್‌ ಮಾತಾಡಲಿಲ್ಲ. ಸಾಮಾನ್ಯವಾಗಿ ಒಂದು ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಬೇರೆ ಚಿತ್ರದ ವಿಷಯವನ್ನು ಮಾತನಾಡುವುದಿಲ್ಲ.

ಆ ಕಾರಣಕ್ಕಾಗಿಯೇ “ಮೇಜರ್‌ ಅಭಿನಂದನ್‌’ ಸಿನಿಮಾ ಬಗ್ಗೆ ಅವರು ಮಾತನಾಡಲಿಲ್ಲವೋ ಅಥವಾ ಈ ಚಿತ್ರದ ಬಗ್ಗೆ ಅವರ ನಿರ್ಧಾರ ಸ್ಪಷ್ಟವಾಗಿದೆಯೋ ಇಲ್ಲವೋ ಎಂಬ ಸಣ್ಣ ಅನುಮಾನ ಮೂಡುವುದು ಸಹಜ. ಇದಕ್ಕೆ ಮುಂದಿನ ದಿನಗಳಲ್ಲಿ ಅವರೇ ಉತ್ತರ ನೀಡಬೇಕು. ಇನ್ನು, ಈ ಸಿನಿಮಾಕ್ಕೆ ಯಾರು ನಿರ್ದೇಶನ ಮಾಡಲಿದ್ದಾರೆ? ಬೇರೆ ಕಲಾವಿದರು ಯಾರೆಲ್ಲ ಇರಲಿದ್ದಾರೆ? ಇತ್ಯಾದಿ ಮಾಹಿತಿ ಕೂಡ ಇಲ್ಲ.

ಇದು ಮುನಿರತ್ನ ಅವರ ಆಸೆ. ಅದ್ದೂರಿ ಸಿನಿಮಾಗಳನ್ನು ನಿರ್ಮಿಸುವಲ್ಲಿ ಸೈ ಎನಿಸಿಕೊಂಡಿರುವ ಮುನಿರತ್ನ, ಈ ಹಿಂದೆ “ಕುರುಕ್ಷೇತ್ರ’ ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ… ಸಿಟಿಯಲ್ಲಿ ನಡೆಯುತ್ತಿರುವಾಗಲೇ “ಚಾಣಾಕ್ಯ ಚಂದ್ರಗುಪ್ತ’ ಚಿತ್ರ ಮಾಡುವ ಆಸೆ ವ್ಯಕ್ತಪಡಿಸಿದ್ದರು. ಆ ಚಿತ್ರದಲ್ಲಿ ಸುದೀಪ್‌, ಉಪೇಂದ್ರ ಮತ್ತು ಪುನೀತ್‌ ಇರುತ್ತಾರೆ ಎಂಬುದಾಗಿಯೂ ಹೇಳಿಕೊಂಡಿದ್ದರು. ಆದರೆ ಸುಮಾರು ಎರಡು ವರ್ಷ ಕಳೆದರೂ “ಚಾಣಾಕ್ಯ ಚಂದ್ರಗುಪ್ತ’ ಚಿತ್ರದ ಸುದ್ದಿ ಇಲ್ಲ. ಆ ಸಿನಿಮಾ ಬಗ್ಗೆಯೂ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು.

ಈಗ ಅಂಥದ್ದೇ ಮತ್ತೂಂದು ಚಿತ್ರ ಮಾಡುವುದಾಗಿ ಹೇಳಿದ್ದಾರೆ. ಆದರೆ, ಇದಕ್ಕೆಲ್ಲಾ ಸರಿಯಾದ ಉತ್ತರ ಸಿಗೋದು ಯಾವಾಗ ಎಂಬುದನ್ನು ಕಾದು ನೋಡಬೇಕು. ಅಂದಹಾಗೆ, “ಕುರುಕ್ಷೇತ್ರ’ ಚಿತ್ರ ಶತದಿನ ಕಂಡ ಹಿನ್ನೆಲೆಯಲ್ಲಿ ಶಿವರಾತ್ರಿಯಂದು ಸಂಭ್ರಮ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಭೈರತಿ ಬಸವರಾಜು ಸೇರಿದಂತೆ ರಾಜಕೀಯ ರಂಗದ ಹಲವು ಗಣ್ಯರು, ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು, ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಮಿಸ್‌ ಇಂಗ್ಲೆಂಡ್‌ ಈಗ ವೈದ್ಯೆ

ಮಿಸ್‌ ಇಂಗ್ಲೆಂಡ್‌ ಈಗ ವೈದ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cinema-tdy-4

ಬುಲೆಟ್‌ ಪ್ರಕಾಶ್‌ ಕುಟುಂಬಕ್ಕೆ ದರ್ಶನ್‌ ಸಾಂತ್ವನ

ಅಭಿಮಾನಿಗಳ ಕಾರ್ಯಕ್ಕೆ ಥ್ಯಾಂಕ್ಸ್‌

ಅಭಿಮಾನಿಗಳ ಕಾರ್ಯಕ್ಕೆ ಥ್ಯಾಂಕ್ಸ್‌

100ಕ್ಕೆ ಸೆನ್ಸಾರ್‌ ಆದ್ರೂ ಸದ್ಯಬಿಡುಗಡೆ ಭಾಗ್ಯವಿಲ್ಲ

100ಕ್ಕೆ ಸೆನ್ಸಾರ್‌ ಆದ್ರೂ ಸದ್ಯ ಬಿಡುಗಡೆ ಭಾಗ್ಯವಿಲ್ಲ

cinema-tdy-1

ಚಿಂತಿಸುವ ‌ಸಮಯ ಅಲ್ಲ ಮೊದಲು ಜೀವ

ವಿಷ್ಣು ಪ್ರಿಯ ಫ‌ಸ್ಟ್‌ ಲುಕ್‌ ರಿಲೀಸ್‌

ವಿಷ್ಣು ಪ್ರಿಯ ಫ‌ಸ್ಟ್‌ ಲುಕ್‌ ರಿಲೀಸ್‌

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

“ಜಿಮ್‌” ಮೇಲೆ ಕೋವಿಡ್-19 ಕರಿನೆರಳು

“ಜಿಮ್‌” ಮೇಲೆ ಕೋವಿಡ್-19 ಕರಿನೆರಳು

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

08-April-25

ಕೊರೊನಾ ತಡೆಗೆ ಕಠಿಣ ಕ್ರಮ ಅನಿವಾರ್ಯ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

08-April-24

ಕೊರೊನಾ ತಡೆಗೆ ಶ್ರಮಿಸಿ: ಪಾಟೀಲ